ವಧು – ವರರಿಂದ ಮದುವೆಗೆ ಅರ್ಜಿ ಆಹ್ವಾನಿಸಿದ ಸರ್ಕಾರ..!

ಮದುವೆ ಎಂಬುದು ಅಪ್ಪಟ ಎರಡು ಮನಸ್ಸುಗಳನ್ನು ಒಂದು ಮಾಡುವ ವಿಚಾರ. ಮದುವೆ ಮೂಲಕ ಎರಡು ಮನಸ್ಸುಗಳನ್ನು ಒಂದು ಮಾಡಿ ಒಂದು ಸಂಸಾರವನ್ನು ಬೆಳಗಲು ಹೆಣ್ಣನ್ನು ಸ್ವಾಗತಿಸಲಾಗುತ್ತದೆ. ಇದೇ ಕಾರಣಕ್ಕೆ ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವ ಗಾಧೆ ಮಾತು ಚಾಲ್ತಿಯಲ್ಲಿದೆ. ಮದುವೆ ಮಾಡುವುದು ಅಷ್ಟೊಂದು ಸುಲಭವಾದ ಕೆಲಸವಲ್ಲ ಎನ್ನುವುದು ಈ ಗಾಧೆ ಮಾತಿನ ಅರ್ಥ. ಹೀಗಿನ ಪರಿಸ್ಥಿತಿಯಲ್ಲಿ ಗಂಡು ಮಗನಿಗೆ ಹೆಣ್ಣು ಹುಡುಕುವುದು ದೊಡ್ಡ ಸಮಸ್ಯೆಯೇ ಆಗಿದೆ. ಆದರೆ ಸರ್ಕಾರ ಮಾತ್ರ ಮದುವೆ ಮಾಡಿಕೊಳ್ಳಲು ಇಚ್ಛಿಸುವ ವದುವರರು ಅರ್ಜಿ ಹಾಕಬಹುದು ಎಂದು ಆಹ್ವಾನ ಕೊಟ್ಟಿದೆ. ಆದರೆ ಜೋಡಿಗಳು ತಮಗೆ ಬೇಕಾದವರನ್ನು ತಾವೇ ಆಯ್ಕೆ ಮಾಡಿಕೊಂಡಿರಬೇಕು.

ಅರ್ಜಿ ಆಹ್ವಾನ ಮಾಡಿದ್ದು ಯಾಕೆ..?

ಮದುವೆಗಾಗಿ ಅರ್ಜಿ ಆಹ್ವಾನ ಮಾಡಿರುವುದು ಸತ್ಯ. ಆದರೆ ಗಂಡು ಹೆಣ್ಣು ಹುಡುಕುವ ಕೆಲವನ್ನು ಸರ್ಕಾರ ಮಾಡುವುದಿಲ್ಲ. ಗಂಡು ಹಾಗೂ ಹೆಣ್ಣು ಪರಸ್ಪರ ಒಪ್ಪಿಗೆ ಮೇರೆಗೆ ಮದುವೆ ತಯಾರಿ ನಡೆಸಿದ್ದರೆ ಸರಳವಾಗಿ ಮದುವೆ ಮಾಡಿಕೊಳ್ಳಲು ಸರ್ಕಾರ ಸಹಾಯ ಹಸ್ತ ನೀಡಲಿದೆ. ಎಷ್ಟೊಂದು ಮಂದಿ ಮದುವೆ ಮಾಡಿಕೊಳ್ಳಲಾಗದ ದುಸ್ಥಿತಿಯಲ್ಲೂ ಇರುತ್ತಾರೆ. ಇನ್ನೂ ಕೆಲವರು ಸರಳವಾಗಿ ಮದುವೆಯಾಗಬೇಕು. ಆಡಂಬರ ಬೇಡ ಎನ್ನುವ ಮನಸ್ಥಿಯವರೂ ಇರುತ್ತಾರೆ. ಅಂತಹ ಜೋಡಿಗಳು ಸರ್ಕಾರದಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು.

ಘಾಟಿ ಸುಬ್ರಹ್ಮಣ್ಯದಲ್ಲಿ ನಡೆಯುತ್ತೆ ವಿವಾಹ..!

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಪ್ರಸಿದ್ದ ಘಾಟಿ ಸುಬ್ರಮಣ್ಯ ಕ್ಷೇತ್ರ ಅದೆಷ್ಟೋ ಜನರ ಆರಾಧ್ಯ ದೈವ. ಈ ಕ್ಷೇತ್ರದಲ್ಲಿ ಸರಳ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಸರಕಾರದಿಂದ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಲಾಕ್​ಡೌನ್ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಇದೀಗ ಮತ್ತೆ ಸಾಮೂಹಿಕ ಸರಳ ವಿವಾಹ ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 13 ಮತ್ತು ಸೆಪ್ಟೆಂಬರ್ 13 ರಂದು ಮದುವೆ ಕಾರ್ಯಕ್ರಮಗಳು ನೆರವೇರಲಿವೆ. ಇಚ್ಛೆ ಪಟ್ಟವರು ಅರ್ಜಿ ಹಾಕಬಹುದು.

ಒಂದು ಜೋಡಿಗೆ 55 ಸಾವಿರ ವೆಚ್ಚ..!

ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ಅರ್ಹರಿಂದ ಅರ್ಜಿ ಆಹ್ವಾನ ಮಾಡಿದೆ. ಈ ಮದುವೆಯಲ್ಲಿ ಒಂದು ಜೋಡಿಗೆ 55 ಸಾವಿರ ರೂಪಾಯಿ ಖರ್ಚು ಇಡಲಾಗಿದೆ. ವರನಿಗೆ 5 ಸಾವಿರ ರೂಪಾಯಿ ಮತ್ತು ವಧುವಿಗೆ 10 ಸಾವಿರ ರೂಪಾಯಿ ನಗದು ನೀಡಲಾಗುತ್ತದೆ. ಇನ್ನೂ ವಧುವಿಗೆ ತಾಳಿ ಹಾಗೂ ಎರಡು ಚಿನ್ನದ ಗುಂಡು ಕೊಡಲಾಗುತ್ತದೆ ವಧು ವರರ ಜೊತೆಗೆ ಬರುವ ಸಂಬಂಧಿಕರಿಗೆ ಊಟದ ವ್ಯವಸ್ಥೆಯನ್ನು ದೇವಸ್ಥಾನದ ಆಡಳಿತ ಮಂಡಳಿಯೇ ನೀಡಲಿದೆ ಎಂದು ತಿಳಿಸಲಾಗಿದೆ.

ನೋಂದಾಯಿಸುವುದು ಹೇಗೆ..?

ಮದುವೆ ಆಗಲು ಇಚ್ಛಿಸುವ ಜೋಡಿಗಳು ಆಗಸ್ಟ್​ 1ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಬೇಕು. ಅರ್ಜಿ ಹಾಕಿದ ಜೋಡಿಗಳು 13/08/2021 ಅಥವಾ 13/09/2021ರಲ್ಲಿ ಯಾವ ದಿನವಾದರೂ ಮದುವೆಯಾಗಲು ಸಿದ್ಧರಿರಬೇಕು. ಸಪ್ತಪಸಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಸಂಪರ್ಕಿಸಿ: 95903 00410 / 9241 97450 / 99453 66327

Related Posts

Don't Miss it !