ಕಡಲೇಕಾಯಿ ಪರಿಷೆಯಲ್ಲಿ ಸರ್ಕಾರಕ್ಕೆ ಭರ್ಜರಿ ಕಮಾಯಿ..! ಬೀಜ ತಿಂದ್ರೆ ಬೀಳುತ್ತೆ ದಂಡ..!!

ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನ ಭಕ್ತರಿಗೆ ಅಚ್ಚುಮೆಚ್ಚು. ಪ್ರತಿವರ್ಷ ಕಾರ್ತಿಕ ಮಾಸದಲ್ಲಿ‌ ನಡೆಯುವ ಕಡಲೆಕಾಯಿ ಪರಿಷೆ ಬೆಂಗಳೂರಿಗರ ಆಕರ್ಷಣೆ ಎಂದರೆ ಸುಳ್ಳಲ್ಲ. ಕಳೆದ ಎರಡು ವರ್ಷಗಳಿಂದ ಕೊರೊನಾ ಸಂಕಷ್ಟ ಎದುರಾಗಿದ್ದ ಪರಿಣಾಮ ಕಡಲೆಕಾಯಿ ಪರಿಷೆ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಕೊರೊನಾ ಸೋಂಕಿನ ಎರಡನೇ ಅಲೆ ಬಳಿಕ ಕೊರೊನಾ ಸ್ವಲ್ಪ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದ್ದು, ಈ ವರ್ಷ ಕಡಲೆಕಾಯಿ ಪರಿಷೆ ನಡೆಯುತ್ತಿದೆ. ಆದರೆ ಆದಾಯ ಹಂಚಿಕೆ ವಿಚಾರದಲ್ಲಿ ಸರ್ಕಾರದ ಎರಡು ಸಂಸ್ಥೆಗಳ ನಡುವೆ ಜಟಾಪಟಿಯೂ ನಡೆದಿದೆ.

ಆದಾಯ ಹಂಚಿಕೆ ವಿಚಾರದಲ್ಲಿ ಸರ್ಕಾರದೊಳಗೇ ಜಟಾಪಟಿ..!

ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರುತ್ತದೆ. ಹಾಗಾಗಿ ಕಡಲೇಕಾಯಿ ವ್ಯಾಪಾರಿಗಳಿಂದ ಸಂಗ್ರಹವಾಗುವ ತೆರಿಗೆ ಮುಜರಾಯಿ ಇಲಾಖೆಗೆ ಸೇರಬೇಕು ಎನ್ನುವುದು ಮುಜರಾಯಿ ಇಲಾಖೆ ಅಧಿಕಾರಿಗಳ ವಾದ. ಆದರೆ ಕಡಲೇಕಾಯಿ ವ್ಯಾಪಾರಿಗಳು ಕಡಲೇಕಾಯಿ ಮಾರಾಟ ಮಾಡಿದ ಬಳಿಕ ಜನರು ತಿಂದು ಬಿಸಾಕುವ ಕಡಲೇಕಾಯಿ ಸಿಪ್ಪೆಯನ್ನು ತೆರವು ಮಾಡುವುದು, ಸ್ವಚ್ಛತೆ ಕಾಪಾಡುವ ಕೆಲಸವನ್ನು ನಿರ್ವಹಿಸುವುದು ಬಿಬಿಎಂಪಿ ಸಿಬ್ಬಂದಿ, ಹೀಗಾಗಿ ವ್ಯಾಪಾರಿಗಳಿಂದ ಸಂಗ್ರಹ ಆಗುವ ತೆರಿಗೆ ಬಿಬಿಎಂಪಿಗೆ ಸೇರಬೇಕು ಎನ್ನುವ ವಾದ ಸೃಷ್ಟಿಯಾಗಿತ್ರು. ಆದರೆ ಮುಜರಾಯಿ ಇಲಾಖೆ ಒಪ್ಪದಿದ್ದಾಗ ಬಿಬಿಎಂಪಿ ಬೇರೊಂದು ಅಸ್ತ್ರ ಪ್ರಯೋಗ ಮಾಡಿದೆ.

ಆದಾಯ ಸಂಗ್ರಹಕ್ಕೆ ಬಿಬಿಎಂಪಿ ಹೊಸ ಅಸ್ತ್ರ..!

ಕೊರೊನಾ ಭೀತಿಯಿಂದ ಹೊರಬಂದಿದ್ದ ವಿಶ್ವದ ಜನರನ್ನು ಮತ್ತೆ ಆತಂಕಕ್ಕೆ ದೂಡಿರುವುದು ಒಮಿಕ್ರಾನ್ ವೈರಾಣು. ಈ ಆತಂಕದ ನಡುವೆಯೂ ಕಡಲೇಕಾಯಿ ಪರಿಷೆ ನಡೆಯುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಹೆಜ್ಜೆ ಹೆಜ್ಕೆಗೂ ಮಾರ್ಷಲ್‌ಗಳ ನೇಮಕ ಮಾಡಿದ್ದಾರೆ. ಸಂಭ್ರಮದ ಗುಂಗಿನಲ್ಲಿ ಕಡಲೇಕಾಯಿ ಕಾಯಿ ತಿನ್ನುತ್ತಾ ಗುಂಪಿನಲ್ಲಿ ಮೋಜು ಮಾಡುತ್ತಿದ್ದರೆ ದಂಡ ಕಟ್ಟಿಟ್ಟ ಬುತ್ತಿ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಅನಿವಾರ್ಯ ಆಗಿದೆ. ಆದರೆ ಕಡಲೇಕಾಯಿ ಪರಿಷೆಗೆ ಅನುಮತಿ ನೀಡಿ ಕಡಲೇಕಾಯಿ ತಿನ್ನಲು ಬಿಡುವುದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣ ಆಗಿದೆ ಎನ್ನಬಹುದು.

ಸಂಕಷ್ಟದಲ್ಲೂ ಸರ್ಕಾರದಿಂದಲ ಸುಲಿಗೆ ಆರೋಪ..!

ಮುಜರಾಯಿ ಇಲಾಖೆ ಎಲ್ಲಾ ಆದಾಯವನ್ನು ತನ್ನಲ್ಲೇ ಉಳಿಸಿಕೊಳ್ಳುವ ನಿರ್ಧಾರ ಮಾಡಿದ ಬಳಿಕ ಬಿಬಿಎಂಪಿ ಮಾರ್ಷಲ್‌ಗಳ ಮೂಲಕ ಆದಾಯ ಸಂಗ್ರಹಿಸಲು ಮುಂದಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಇನ್ನು ಮುಜರಾಯಿ ಇಲಾಖೆ ಕಡಲೇಕಾಯಿ ಪರಿಷೆಗೆ ಬಂದಿರುವ ಅಂಗಡಿ ಮಾಲೀಕರಿಂದ ತಲಾ ಎರಡು ಸಾವಿರ ರೂಪಾಯಿ ಸಂಗ್ರಹ ಮಾಡಿದ್ದು, ಈಗ ವ್ಯಾಪಾರವೂ ಕಡಿಮೆ ಆಗ್ತಿದೆ ಎನ್ನುವುದು ವ್ಯಾಪಾರಸ್ಥರ ಆರೋಪ. ಇನ್ನು ಕಡಲೆಕಾಯಿ ತೆಗೆದುಕೊಂಡು ಮನೆಯಲ್ಲಿ ಹೋಗಿ ತಿನ್ನಲು ಸಾಧ್ಯವೇ..? ಕಡಲೇಕಾಯಿ ಕೊಂಡು ತಿಂದರೆ ಬಿಬಿಎಂಪಿ ಮಾರ್ಷಲ್‌ಗಳು ದಂಡ ವಿಧಿಸುತ್ತಾರೆ ಎನ್ನುವುದು ಗ್ರಾಹಕರ ಆರೋಪ. ಕೊರೊನಾ ಸಂಕಷ್ಟದ ಸುಳಿಯಲ್ಲಿ ಆದಾಯ ಕೋತ ಆಗಿರುವ ಈ ಸಮಯದಲ್ಲಿ ಆಭಾಸವಾಗ್ತಿದೆ ಕ್ರೂಢೀಕರಿಸಲು ಮುಂದಾಗಿರುವುದು ಸುಲಿಗೆ ಮಾಡುವಂತೆ ಭಾಸವಾಗ್ತಿದೆ ಎನ್ನಬಹುದು.

Related Posts

Don't Miss it !