ಗುಜರಾತ್​ನಲ್ಲಿ ಬಿಜೆಪಿಗೆ ಕೇಡುಗಾಲ ಆರಂಭ.. 90 ಜನರನ್ನು ಬಲಿ ಪಡೆದ ತೂಗು ಸೇತುವೆ..!

ಗುಜರಾತ್​ನಲ್ಲಿ ಬರೋಬ್ಬರಿ 20 ವರ್ಷಗಳ ಕಾಲ ಅಧಿಕಾರ ನಡೆಸಿರುವ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ ಒದಗಿ ಬಂದಿದೆ. ಗುಜರಾತ್​ನ ಮೊರ್​ಬಿನಲ್ಲಿ ತೂಗು ಸೇತುವೆ ಕುಸಿದು ಬಿದ್ದಿದ್ರಿಂದ ಬರೋಬ್ಬರಿ 78 ಜನರು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಕೆಲವೇ ದಿನಗಳ ಹಿಂದೆ ತೂಗು ಸೇತುವೆ ನವೀಕರಣ ಕಾರ್ಯ ಮುಗಿದಿತ್ತು. 5 ದಿನಗಳಿಂದ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಸುಮಾರು 400 ಜನರು ನಿಂತಿದ್ದ ತೂಗು ಸೇತುವೆ ಕಳಚಿ ನದಿಗೆ ಬಿದ್ದಿದ್ರಿಂದ ಸುಮಾರು 200 ಜನರು ನಾಪತ್ತೆ ಆಗಿದ್ದಾರೆ. ಇನ್ನುಳಿದ 200 ಜನರು ನದಿಯಲ್ಲಿ ಈಜಿ ದಡ ಸೇರಿದ್ದಾರೆ ಎನ್ನಲಾಗಿತ್ತು.

ಬಿಜೆಪಿ ಸರ್ಕಾರ ಸಾವಿ ಸಂಖ್ಯೆಯನ್ನು ಗೌಪ್ಯವಾಗಿ ಇಟ್ಟು ಸಮಯ ಕಳೆದಂತೆ ಅಧಿಕೃತ ಮಾಡಲಾಯ್ತು. ಮೊದಲಿಗೆ 7 ಜನರು ಎಂದಿದ್ದ ಗುಜರಾತ್​ನ ಗೃಹ ಸಚಿವರು, ಆ ಬಳಿಕ 35 ಜನರು ಎಂದು ಘೋಷಣೆ ಮಾಡಲಾಯ್ತು. ಆ ನಂತರ 60 ಜನರು ಎಂದು ಹೇಳಲಾಯ್ತು. ಅಂತಿಮವಾಗಿ ಮಧ್ಯರಾತ್ರಿ ವೇಳೆಗೆ 78 ಜನರು ಸಾವನ್ನಪ್ಪಿದ್ದಾರೆ ಎಂದು ಘೋಷಣೆ ಮಾಡಲಾಯ್ತು. ಇದು ಅಂತಿಮವಾ..? ಅಥವಾ ಇನ್ನೂ ಸಾಕಷ್ಟು ಜನರು ಸಾವನ್ನಪ್ಪಿದ್ದಾರಾ..? ಅನ್ನೋ ಬಗ್ಗೆ ಅನುಮಾನಗಳು ಮೂಡುತ್ತಿವೆ. ಇದು ಆಮ್​ ಆದ್ಮಿ ಪಕ್ಷದ ರಾಜಕಾರಣಕ್ಕೆ ಸಿಕ್ಕ ರಾಜಕೀಯ ಅಸ್ತ್ರ ಎನ್ನುವಂತಾಗಿದೆ.

ಇದೇ ವರ್ಷಾಂತ್ಯಕ್ಕೆ ಗುಜರಾತ್​ನಲ್ಲಿ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. ಇಷ್ಟು ಹೊತ್ತಿಗೆ ಚುನಾವಣೆ ಘೋಷಣೆ ಆಗಬೇಕಿತ್ತು. ಆದರೆ ಪ್ರಧಾನಿ ಮೋದಿ ಪ್ರಚಾರ ಹಾಗೂ ಘೋಷಣೆಗಳಿಗೆ ಚುನಾವಣಾ ಆಯೋಗ ಅನುವು ಮಾಡಿಕೊಟ್ಟಿದೆ ಅನ್ನೋ ಆರೋಪ ಕೇಳಿ ಬಂದಿತ್ತು. ಇದೀಗ ಆಮ್​ ಆದ್ಮಿ ಸರ್ಕಾರ, ಈಗಾಗಲೇ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದು, ಇದು ಬಿಜೆಪಿ ಸರ್ಕಾರದ ವೈಫಲ್ಯ ಎಂದು ಟೀಕಿಸಿದೆ. ಇನ್ನು ಕಾಂಗ್ರೆಸ್​ ಕೂಡ ವಾಗ್ದಾಳಿ ಮಾಡಿದ್ದು, ಮಾನವ ಕೃತ್ಯ ಎಂದು ಟೀಕಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕಾಂಗ್ರೆಸ್​ ಕಾರ್ಯಕರ್ತರು ಸಾಧ್ಯವಾದಷ್ಟು ಜನರ ಸಹಾಯಕ್ಕೆ ನಿಲ್ಲಬೇಕು ಎಂದು ಕರೆ ಕೊಟ್ಟಿದ್ದಾರೆ.

ಇದೇ ವರ್ಷ ನಡೆಯುವ ಚುನಾವಣೆಯನ್ನು ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದ ಬಿಜೆಪಿಗೆ ಸೋಲಿನ ಇದು ಮೊದಲ ಮೆಟ್ಟಿಲು ಎನ್ನುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ನಿಗದಿಯಾಗಿದ್ದ ರೋಡ್​ ಶೋ ಸೇರಿದಂತೆ ಚುನಾವಣಾ ಱಲಿಯನ್ನು ರದ್ದು ಮಾಡಲಾಗಿದೆ. ಬ್ರಿಟೀಷ್​ ಕಾಲದ ಸೇತುವೆ ಕಳೆದ 7 ತಿಂಗಳಿಂದ ನವೀಕರಣ ಮಾಡಲಾಗ್ತಿತ್ತು. ಕೇವಲ 5 ದಿನಗಳ ಹಿಂದಷ್ಟೇ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಲಾಗಿತ್ತು. ಆದರೆ ಇದರಲ್ಲೂ ಭ್ರಷ್ಟಾಚಾರ ನಡೆದಿತ್ತಾ..? ಅನ್ನೋ ಕುಹುಕಗಳು ಶುರುವಾಗಿದೆ. ಆಕಸ್ಮಿಕ ಘಟನೆ, ಇದೊಂದು ಅಪಘಾತ ಎಂದು ಬಿಜೆಪಿ ಎಷ್ಟೇ ಸಮರ್ಥನೆ ಮಾಡಿದರೂ ಇದೊಂದು ಮಾನವ ನಿರ್ಮಿತ ಕೃತ್ಯ ಎನ್ನುವ ಮಾತುಗಳು ಕೇಳಿ ಬಂದಿವೆ.

ರಾಜ್ಯ ಸರ್ಕಾರ ಮೃತಪಟ್ಟ ಕುಟುಂಬಸ್ಥರಿಗೆ 4 ಲಕ್ಷ ಹಾಗು 50 ಸಾವಿರ ರೂಪಾಯಿ ಗಾಯಾಳುಗಳಿಗೆ ಪರಿಹಾರ ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಮೃತಪಟ್ಟ ಕುಟುಂಬಸ್ಥರಿಗೆ 2 ಲಕ್ಷ ರೂಪಾಯಿ ಹಾಗು ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ಗುಜರಾತ್​ ಸಿಎಂ ಭೂಪೇಂದ್ರ ಪಟೇಲ್​ ಸ್ಥಳಕ್ಕೆ ಭೇಟಿ ನೀಡಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಗಾಯಾಳುಗಳನ್ನು ಭೇಟಿ ಮಾಡಿ ಧೈರ್ಯ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಇಂದು ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತೀಯ ವಾಯುಪಡೆ, ನೌಕಪಡೆ, NDRF ಸೇರಿದಂತೆ ಇಡೀ ಸರ್ಕಾರವೇ ಸ್ಥಳದಲ್ಲೇ ಮೊಕ್ಕಾಂ ಹೂಡಿದೆ. ಆದರೆ ಗುಜರಾತ್​ ಸರ್ಕಾರ ಈ ಘಟನೆಗೆ ದೊಡ್ಡ ಮಟ್ಟದ ಬೆಲೆ ತೆರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

Related Posts

Don't Miss it !