ರಸ್ತೆಯಲ್ಲಿ ಪ್ರೇಮಿಗಳ ಸರಸ ಸಂಚಾರ..! ಎದುರಿಗೆ ಬಂದವರಿಗೆ ಕಾದಿತ್ತು ಸಂಚಕಾರ..

ರಸ್ತೆಯಲ್ಲಿ ವಾಹನ ಚಾಲನೆ ಮಾಡುವಾಗ ರಸ್ತೆ ನಿಯಮಗಳನ್ನು ಪಾಲಿಸಬೇಕು ಎನ್ನುವ ನಿಯಮವಿದೆ. ರಸ್ತೆ ಸುರಕ್ಷತಾ ಕಾಯ್ದೆಯಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಹೇಳಲಾಗಿದೆ. ಇದೇ ಕಾರಣಕ್ಕೆ ಚಾಲನೆ ಪರವಾನಗಿ ( Driving licence ) ನೀಡುವಾಗ ರಸ್ತೆ ಸುರಕ್ಷತೆ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ. ಆದರೆ ಚಾಮರಾಜನಗರದಲ್ಲಿ ಪ್ರೇಮಿಗಳು ಬೈಕ್ ಮೇಲೆ ಸರಸ ಸಲ್ಲಾಪ ನಡೆಸಿದ್ದಾರೆ. ಬೈಕ್ ಮೇಲೆ ಪ್ರೇಮಿಗಳ‌ ಲವ್ವಿ ಡವ್ವಿಯನ್ನು ಹಿಂದಿನಿಂದ ಬರುತ್ತಿದ್ದ ಕಾರಿನ ಪ್ರಯಾಣಿಕರು ಸೆರೆ ಹಿಡಿದ್ದಾರೆ. ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿ‌ಯನ್ನು ಕೂರಿಸಿಕೊಂಡ ಯುವಕ ಜಾಲಿ ರೈಡ್ ಮಾಡುತ್ತಿದ್ದನು. ವಿಶೇಷ ಅಂದ್ರೆ ಸಾಕಷ್ಟು ಕಿಲೋ ಮೀಟರ್ ಪ್ರೇಮಿಗಳು ಅದೇ ರೀತಿ‌ ಸಾಗಿದ್ದರು. ಎದುರಿಗೆ ಬರುವ ವಾಹನಗಳಿಗೆ ಭಯ ಆಗುವಂತೆ ಸಂಚಾರ ಮಾಡಿದ್ದರು. ವೀಡಿಯೋ ವೈರಲ್ ಆಗ್ತಿದ್ದ ಹಾಗೆ ಪೊಲೀಸರು ಸುಮೋಟೋ ದೂರು ದಾಖಲಿಸಿಕೊಂಡಿದ್ದಾರೆ.

ರರಸ್ತೆಯಲ್ಲೇ ಕಿಸ್ಸಿಂಗ್.. ಬೈಕ್ ಮೇಲೆ ಹಗ್ಗಿಂಗ್..!!

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ರಸ್ತೆಯಲ್ಲಿ ಸಾರ್ವಜನಿಕರು, ವಾಹನಗಳ ಸಂಚಾರವಿದ್ದರೂ ಡೋಂಟ್ ಕೇರ್ ಎನ್ನದೆ, ಯುವಕ‌ ಯುವತಿ ಅಸಹ್ಯ ಭಂಗಿಯಲ್ಲಿ ತಬ್ಬಿಕೊಂಡು ಕುಳಿತಿದ್ದ ವೀಡಿಯೋವನ್ನು ನೋಡಿದ ಚಾಮರಾಜನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿಯನ್ನು ತಬ್ಬಿಕೊಂಡೇ ಯುವಕನ ಬೈಕ್ ಓಡಿಸುತ್ತ ಜಾಲಿ ರೈಡ್ ಮಾಡಿದ್ದನು. ಈ ತುಂಟ ತರುಣ ತರುಣಿಯ ಹುಚ್ಚಾಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತುಕೊಂಡಿದ್ದ ಯುವತಿ ಹುಡುಗನನ್ನು ಅಪ್ಪಿಕೊಂಡು‌ ಹೋಗ್ತಿದ್ದರು. ಇದೆಲ್ಲಾ ಪೊಲೀಸರ ಗಮನಕ್ಕೆ ಬಂದ ಬಳಿಕ ಜಾಲಿ ರೈಡ್ ಮಾಡಿದ್ದ ಪ್ರೇಮಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಬೈಕ್ ಸವಾರನನ್ನು ಬಂಧನ ಮಾಡಿದ್ದು, ಬೈಕ್ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಟ್ರಾಫಿಕ್ ಠಾಣೆಯಲ್ಲಿ ಸುಮೋಟೋ ಕೇಸ್, ಯುವಕ ಅಂದರ್..!

ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಅಶ್ಲೀಲವಾಗಿ ಕೂರಿಸಿಕೊಂಡು ಸವಾರಿ ಮಾಡಿದ್ದ ಯುವಕನನ್ನು ಚಾಮರಾಜನಗರ ಟ್ರಾಫಿಕ್ ಪೊಲೀಸರು ದೂರು ದಾಖಲು ಮಾಡಿಕೊಂಡು ವಶಕ್ಕೆ ಪಡೆದಿದ್ದಾರೆ. ಹೆಚ್.ಡಿ.ಕೋಟೆ ತಾಲೂಕು ಶಿವಪುರ ಗ್ರಾಮದ ಎಸ್.ಸಿ.ಸ್ವಾಮಿ ಬಂಧಿತ ಯುವಕ ಎನ್ನಲಾಗಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ರಸ್ತೆ ಯಡಪುರದ ಬಳಿ ಬೈಕ್‌ನಲ್ಲಿ ಅಶ್ಲೀಲ ವರ್ತನೆ ತೋರಿದ ಬಗ್ಗೆ‌ ಯುವಕನನ್ನು ವಿಚಾರಣೆ ನಡೆಸಲಾಗ್ತಿದೆ. ಐಪಿಸಿ ಸೆಕ್ಷನ್ 279 ಹಾಗು ಐಎಂವಿ ಸೆಕ್ಷನ್184 ರೀತ್ಯಾ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಪ್ರೇಮಿ ಮಾಡಿರುವ ತಪ್ಪಿಗೆ ಶಿಕ್ಷೆ ಏನು ಗೊತ್ತಾ..?

ಪೊಲೀಸರು ಸೆಕ್ಷನ್ 279 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಈ ಸೆಕ್ಷನ್ ಪ್ರಕಾರ ರಸ್ತೆಯಲ್ಲಿ ನಿರ್ಲಕ್ಷ್ಯ ಅಥವಾ ರ‌್ಯಾಷ್ ಡ್ರೈವಿಂಗ್ ಮಾಡಿದ ಆರೋಪ ಹೊರಿಸಲಾಗಿದ್ದು, ಈ ತಪ್ಪಿಗೆ ಸುಮಾರು 6 ತಿಂಗಳ ಕಾಲ ಜೈಲು ಶಿಕ್ಷೆ ಹಾಗೂ ಒಂದು ಸಾವಿರದ ತನಕ ದಂಡ ವಿಧಿಸಬಹುದು. ಇನ್ನು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಆದರೆ ಗಾಂಜಾ ಮತ್ತಿನಲ್ಲೇ ಪ್ರೀತಿಯ ಪರಕಾಷ್ಟೇಯಲ್ಲೋ ಯುವಕ ಯುವತಿ ರಸ್ತೆಯಲ್ಲೇ‌ ಚೆಲ್ಲಾಟ ಆಡಿದ್ದರು. ರಸ್ತೆಯುದ್ಧಕ್ಕೂ ಯುವಕ ಯುವತಿ ಸರಸ ಕಂಡವರು ಛೀ.. ತೂ ಎಂದಿದ್ದಾರೆ‌. ಈ ರೀತಿಯ ಪುಡಾಟ ಆಗುವ ಜನರಿಗೆ ಪೊಲೀಸರು ಯಾವುದೇ ರೀತಿಯ ಕನಿಕರ ತೋರಿಸದೆ ಎಲ್ಲ ಸೆಕ್ಷನ್ ಅಡಿಯಲ್ಲೂ ಕೇಸ್ ಹಾಕಬೇಕಿದೆ. ಒಂದು ವೇಳೆ ಈತ ತಪ್ಪಿಸಿಡು ಹೊರಕ್ಕೆ‌ ಬಂದರೆ ಸಮಾಜಕ್ಕೆ ಕೆಟ್ಟ ಸಂದೇಶ ಕಳುಹಿಸಿದಂತೆ ಆಗುತ್ತದೆ.

Related Posts

Don't Miss it !