ಹ್ಯಾಕಿಂಗ್ ಮಾಸ್ಟರ್ ಶ್ರೀಕಿ ಬುದ್ಧಿವಂತಿಕೆ..? ಪೊಲೀಸರೇ ಮಾಡಿದ ಪ್ಲ್ಯಾನ್..!?

ರಾಜ್ಯದಲ್ಲಿ ಬಹು ಚರ್ಚಿತ ವಿಷಯ ಅಂದ್ರೆ ಬಿಟ್ ಕಾಯಿನ್ ಗೋಲ್ಮಾಲ್. ಆಡಳಿತ ಪಕ್ಷದ ನಾಯಕರು ಬಿಟ್​ ಕಾಯಿನ್​ ದಂಧೆ ಮಾಡ್ತಿದ್ದಾರೆ ಎನ್ನುವುದು ಕಾಂಗ್ರೆಸ್ ನಾಯಕರ ಆರೋಪ. ಅದೇ ರೀತಿ ಕಾಂಗ್ರೆಸ್ ನಾಯಕರ ಮಕ್ಕಳಿಗೂ ಈ ಬಿಟ್​ ಕಾಯಿನ್​ ದಂಧೆ ಕೇಸ್ಗೂ ಲಿಂಕ್ ಇದೆ ಎನ್ನುವುದು ಬಿಜೆಪಿ ನಾಯಕರ ಆರೋಪ. ಆದರೆ ತನಿಖೆ ಬಗ್ಗೆ ಸರ್ಕಾರ ಇಲ್ಲೀವರೆಗೂ ಖಚಿತ ಸ್ಪಷ್ಟ ಮಾಹಿತಿ ನೀಡಿಲ್ಲ ಎನ್ನುವುದು ಈ ರಾಜ್ಯದ ಜನತೆಯ ದುರದೃಷ್ಟ ಎನ್ನಬಹುದು. ಆದರೆ ಇಷ್ಟೆಲ್ಲಾ ರಂಪಾಟಕ್ಕೆ ಕಾರಣನಾದ ವ್ಯಕ್ತಿ ಅಂದ್ರೆ ಶ್ರೀಕಿ ಅಲಿಯಾಸ್​ ಶ್ರೀಕೃಷ್ಣ ಜಿ ರಮೇಶ್​ ಎನ್ನುವ ಎಂಜಿನಿಯರ್. ಕಂಪ್ಯೂಟರ್​ ಎಂಜಿನಿಯರಿಂಗ್​ ಓದಿರುವ ಶ್ರೀಕೃಷ್ಣ ಎಷ್ಟೊಂದು ಚಾಲಾಕಿ ಎಂದರೆ ಇಡೀ ಕರ್ನಾಟಕ ಪೊಲೀಸರೇ ಕಕ್ಕಾಬಿಕ್ಕಿ ಆಗಿದ್ದಾರೆ ಎಂದರೆ ನೀವು ನಂಬಲೇ ಬೇಕು. ಯಾಕೆ ಎನ್ನುವ ಕಂಪ್ಲೀಟ್​ ರಿಪೋರ್ಟ್​ ಇಲ್ಲಿದೆ ನೋಡಿ.

ಐಶಾರಾಮಿ ಹೋಟೆಲ್​ ವಾಸಿ ಬಳಿ ಮೊಬೈಲ್​ ಇಲ್ಲ..!

ಬುಧವಾರ ಜೈಲಿನಿಂದ ಬಿಡುಗಡೆ ಆದ ಶ್ರೀಕಿ ಅಲಿಯಾಸ್​ ಶ್ರೀಕೃಷ್ಣ ಬರೋಬ್ಬರಿ 90 ದಿನಗಳ ಕಾಲ ಐಶಾರಾಮಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದ ಎನ್ನುವುದು ಪೊಲೀಸರ ಮಾಹಿತಿ. ಆದರೆ ಮೊನ್ನೆ ಜೈಲಿನಿಂದ ಜಾಮೀನು ಪಡೆದು ಬಿಡುಗಡೆ ಆದ ಬಳಿಕ ಮನೆಗೆ ಹೋಗಲು ಆತನ ಬಳಿ ಕಾರು ಇರಲಿಲ್ಲ, ಮೊಬೈಲ್​ ಇಲ್ಲವೇ ಇಲ್ಲ. ಲ್ಯಾಪ್​ಟಾಪ್​ ಕೂಡ ಆತನ ಬಳಿ ಇಲ್ಲ ಎನ್ನಲಾಗಿದೆ. ಇನ್ನೂ ಈತ ಜಾಮೀನು ಕೇಳಿಲ್ಲ, ವಕೀಲರ ಭೇಟಿ ಮಾಡಿಲ್ಲ, ಜಾಮೀನು ಕೊಟ್ಟವರು ಯಾರೂ ಎನ್ನುವುದೂ ಆತನಿಗೆ ಗೊತ್ತಿಲ್ಲ. ಆದರೆ ಬಿಟ್​ ಕಾಯಿನ್​ ದಂಧೆ ಮಾಡುವ ಮಾಸ್ಟರ್​ ಮೈಂಡ್​ ಎಂದು ಗುರುತಿಸಿಕೊಂಡಿರುವ ಶ್ರೀಕಿ ಎಲ್ಲವನ್ನೂ ಬೇರೆಯವರ ಮೊಬೈಲ್​ನಲ್ಲೇ ಮಾಡುತ್ತಾನೆ. ಅವರಿಗೇ ವಾಪಸ್​ ಕೊಟ್ಟು ಬಿಡುತ್ತಾನೆ ಎನ್ನಲಾಗಿದೆ. ಇದೇ ಕಾರಣದಿಂದ ಇಲ್ಲೀವರೆಗೂ ಪೊಲೀಸರು ಕೇಳಿರುವ ಯಾವುದೇ ಪ್ರಶ್ನೆಗೆ ಶ್ರೀಕಿ ಸರಿಯಾದ ಉತ್ತರವನ್ನೇ ನೀಡಿಲ್ಲ ಎನ್ನಲಾಗಿದೆ. ಪೊಲೀಸರು ಏನನ್ನೇ ಕೇಳಿದರು ನನಗೆ ಗೊತ್ತಿಲ್ಲ ಎನ್ನುವ ಪದವನ್ನು ಬಿಟ್ಟು ಬೇರೆ ಏನನ್ನೂ ಹೇಳಿಲ್ಲ ಎನ್ನಲಾಗಿದೆ. ಎಲ್ಲಾ ಪಾಸ್​ವರ್ಡ್​ಗಳನ್ನು ತಲೆಯಲ್ಲೇ ಇಟ್ಟುಕೊಂಡಿರುವ ಶ್ರೀಕಿ ಬಲು ಚಾಣಕ್ಯ ಎನ್ನಲಾಗ್ತಿದೆ. ತಾಂತ್ರಿಕ ವಿಚಾರಗಳು ಸಿಕ್ಕಿಬಿದ್ದರೆ ಕಟು ಸಾಕ್ಷ್ಯಗಳಾಗಿ ಕೋರ್ಟ್​ನಲ್ಲಿ ಸಾಬೀತಾಗುವ ಕಾರಣಕ್ಕೆ ಬುದ್ಧಿವಂತ ಶ್ರೀಕಿ ಎಲ್ಲವನ್ನೂ ದೂರ ಇಟ್ಟಿದ್ದಾನೆ ಎನ್ನಲಾಗಿದೆ.

Read this:

ಹ್ಯಾಕರ್ ಶ್ರೀಕಿ

ಚಪ್ಪಲಿಯನ್ನೂ ಹಾಕದೆ ಜೈಲಿಂದ ಹೊರ ಬಂದಿದ್ದ ಶ್ರೀಕಿ..!

ಕಳೆದ ವಾರ ನಡೆದ ಗಲಾಟೆ ವಿಚಾರದಲ್ಲಿ ಶ್ರೀಕಿ ಬಂಧನ ಮಾಡಲಾಗಿತ್ತು. ಆದ್ರೆ ಜೈಲಿಂದ ಬಿಡುಗಡೆ ಆದೆ ವೇಳೆ ಕಾಲಲ್ಲಿ ಚಪ್ಪಲಿಯೂ ಇರಲಿಲ್ಲ. ಪೊಲೀಸರು ಈ ಮೊದಲು ಆತನ ಅಕೌಂಟ್ನಿಂದ 9.5 ಕೋಟಿ ರೂಪಾಯಿ ಜಪ್ತಿ ಮಾಡಿರುವ ಮಾಹಿತಿ ನೀಡಿದ್ದರು. ಪ್ರಯಾಣಕ್ಕೆ ಪ್ರೈವೇಟ್​ ಜೆಟ್​​ನಲ್ಲೇ ಹೋಗುವ ಹ್ಯಾಕರ್ ಶ್ರೀಕಿ, ಡ್ರಗ್ಸ್ ಪಾರ್ಟಿ ಮಾಡೋದು ಸಮುದ್ರದ ಮಧ್ಯೆ ಕ್ರೂಸ್​‌ನಲ್ಲಿ ಮಾಡ್ತಿದ್ದ ಎನ್ನುವುದು ತನಿಖಾ ಮೂಲಗಳ ಮಾಹಿತಿ. ಡಾರ್ಕ್ ವೆಬ್ ಮೂಲಕ ವ್ಯವಹಾರ ನಡೆಸ್ತಿದ್ದ ಹ್ಯಾಕರ್ ಶ್ರೀಕೃಷ್ಣ ಗೋಪಾಲ್ ರಮೇಶ್ ಬಳಿ ಪೊಲೀಸರು ವಶಕ್ಕೆ ಪಡೆದ ಲ್ಯಾಪ್‌ಟಾಪ್‌ನಲ್ಲಿ ಸಣ್ಣ ಸುಳಿವೂ ಸಿಕ್ಕಿಲ್ಲ ಎನ್ನಲಾಗಿದೆ. ಕೆಲಸ ಮುಗಿದ ಬಳಿಕ ಇಡೀ ಲ್ಯಾಪ್‌ಟಾಪ್ ಖಾಲಿ ಮಾಡಿದ್ದ, ರಿಟ್ರೈವ್ ಮಾಡಿದ್ರು ಏನೂ ಸಿಕ್ಲಿಲ್ವಂತೆ.

Also Read:

ಶ್ರೀಕಿ ವಿರುದ್ಧದ ಸಾಕ್ಷಿ ನಾಶ ಮಾಡಿದ್ದು ಪೊಲೀಸ್ರಾ..?

ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿರುದ್ಧ ಸಾಕಷ್ಟು ಆರೋಪಗಳಿವೆ. ಸಾಕಷ್ಟು ಜನರು ಈತನ ಕೈಚಳಕದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದ್ರೆ ಶ್ರೀಕಿ ವಿಚಾರವಾಗಿ ಯಾವುದೇ ತಾಂತ್ರಿಕ ಸಾಕ್ಷಿಗಳು ಇಲ್ಲ ಎನ್ನುವುದು ಪೊಲೀಸ್ ಇಲಾಖೆ ಮೂಲಗಳ ಮಾಹಿತಿ. ಆದರೆ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ನೀಡಿರುವ ಮಾಹಿತಿ ಪ್ರಕಾರ, ಶ್ರೀಕಿಗೆ ಡ್ರಗ್ಸ್ ಕೊಟ್ಟಿರುವುದೇ ಪೊಲೀಸರು. ಆ ಬಳಿಕ ಶ್ರೀಕಿ ತಂದೆ ಡ್ರಗ್ಸ್ ಕೊಡುತ್ತಿರುವ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದರು, ಸ್ಯಾಂಪಲ್ ತೆಗೆದು ತಪಾಸಣೆ ಮಾಡುವಂತೆ ಸೂಚನೆ ಕೊಟ್ಟಿತ್ತು. ಆದ್ರೆ ಮೂರು ದಿನಗಳ ನಂತರ ಬೆಂಗಳೂರು ಮೆಡುಕಲ್ ಕಾಲೇಜಿಗೆ ಕರೆದೊಯ್ಯುವ ಪೊಲೀಸರು ಶ್ರೀಯ ಹೊಟ್ಟೆಯನ್ನು ವಾಷ್ ಮಾಡಿಸಿದ್ದಾರೆ. ಆ ಬಳಿಕ ಆತನ ತಪಾಸಣೆ ನಡೆಸಿದ್ದಾರೆ. ಈ ವೇಳೆ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಸ್ವತಃ ಪೊಲೀಸರೇ ಸಾಕ್ಷಿ ಸಿಗದಂತೆ ಮಾಡಿರುವ ಅನುಮಾನವಿದೆ ಎಂದು ಆರೋಪ ಮಾಡಿದ್ದಾರೆ. ಈ ನಡುವೆ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿರುವುದು ಭಾರೀ ಕುತೂಹಲಕರ ಘಟ್ಟ ತಲುಪಿದೆ ಎನ್ನಲಾಗ್ತಿದೆ.

Related Posts

Don't Miss it !