ಮಳೆಗೆ ಮನೆ ಕುಸಿಯುತ್ತಿವೆ, ನಿಜವಾದ ಕಾರಣ ಮಳೆನಾ..? ಬೇರೆನಾ..?

ಬೆಂಗಳೂರಿನಲ್ಲಿ ವಾರಕ್ಕೊಂದಾದರೂ ಮನೆಗಳು ಕುಸಿದು ಬೀಳುತ್ತಿರುವ ಪ್ರಕರಣಗಳು ಸುದ್ದಿಯಾಗುತ್ತಲೇ ಇವೆ. ಬೆಂಗಳೂರಿನಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣ ಹಳೆಯ ಮನೆಗಳು ಕುಸಿಯುತ್ತಿವೆ ಎನ್ನುವುದು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ರೆಮಿಮೇಡ್​ ಉತ್ತರ. ಇನ್ನೂ ಈಗಾಗಲೇ ಬೆಂಗಳೂರಿನಲ್ಲಿ ಱಪಿಡ್​ ಸರ್ವೇ ಮುಕ್ತಾಯವಾಗಿದ್ದ ಬರೋಬ್ಬರಿ 300 ಕಟ್ಟಡಗಳು ಕುಸಿಯುವ ಹಂತದಲ್ಲಿವೆ ಎಂದು ಬಿಬಿಎಂಪಿ ವರದಿ ನೀಡಿದೆ. ಅಕ್ಟೋಬರ್​ ತಿಂಗಳಲ್ಲಿ ಇಲ್ಲೀವರೆಗೂ ಸರಾಸರಿಗಿಂತ ಹೆಚ್ಚು ಮಳೆ ಸುರಿದಿದ್ದು 181 ಮಿಲಿ ಮೀಟರ್​ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದೇ ಕಾರಣದಿಂದ ಮನೆಗಳು ಕುಸಿದು ಬೀಳುತ್ತಿವೆ ಎನ್ನುವುದು ಅಧಿಕಾರಿಗಳ ಮಾತು. ಭಾರೀ ಮಳೆಯಿಂದ ಮನೆಗಳು ಬೀಳುತ್ತಿರಬಹುದು. ಆದರೆ 15 ವರ್ಷದ ಕಟ್ಟಡ ಮಳೆಯ ಅಬ್ಬರಕ್ಕೆ ಬೀಳುತ್ತಾ..? ಎಂದು ಪ್ರಶ್ನಿಸಿದರೆ ತಜ್ಞರು ಹೇಳುವ ಕಥೆ ಬೇರೆಯದೇ ಇದೆ.

ಕಳಪೆ ಮರಳು ಪ್ರಭಾವ ಈಗ ಪರಿಣಾಮ ಬೀರುತ್ತಿದೆ..!

ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರ, ಪಟ್ಟಣಗಳಲ್ಲಿ ಮರಳು ಅಭಾವ ಸೃಷ್ಟಿಯಾಗಿತ್ತು. ಅದನ್ನು ರಾಜಕಾರಣಿಗಳು ಹಾಗು ರಾಜಕಾರಣಿಗಳ ಹಿಂಬಾಲಕರು ಅಕ್ರಮ ಮರಳುಗಾರಿಕೆ ಶುರು ಮಾಡಿಕೊಂಡರು. ಕೆರೆ, ನದಿಯಿಂದ ಮರಳು ತೆಗೆಯುವುದನ್ನು ರದ್ದು ಮಾಡಿದ್ದರು. ಆ ವೇಳೆ ಮಣ್ಣನ್ನು ತೊಳೆದು ಮರಳನ್ನು ಉತ್ಪಾದನೆ ಮಾಡುವ ದಂಧೆ ಶುರುವಾಗಿತ್ತು. ರಾಜ್ಯಾದ್ಯಂತ ಬಹುತೇಕ ಎಲ್ಲಾ ಗ್ರಾಮಗಳಲ್ಲೂ ಮರಳು ಮಿಶ್ರಿತ ಮಣ್ಣನ್ನು ವೇಗವಾದ ನೀರಿನ್ನು ಹಾಯಿಸುವ ಮೂಲಕ ಸಣ್ಣ ಮಣ್ಣಿನ ಕಣಗಳನ್ನು ಬೇರ್ಪಡಿಸಿ ಮರಳು ತಯಾರು ಮಾಡಲಾಗ್ತಿತ್ತು. ಇದರಿಂದ ಕೋಟಿ ಕೋಟಿ ಖಜಾನೆ ಸೇರಿಸಿಕೊಂಡಿದ್ದು ಆಯ್ತು. ಆ ಮಣ್ಣಿ ನಿಂದ ಬೇರ್ಪಡಿಸಿದ ಮರಳನ್ನು ಬೆಂಗಳೂರು ಸೇರಿದಂತೆ ಇತರೆ ಪಟ್ಟಣಗಳಿಗೆ ಮಾರಾಟ ಮಾಡಿದ್ದರು. ಅದರಿಂದ ಕಟ್ಟಿದ ಕಟ್ಟಡಗಳು ಕಳಪೆಗುಣಮಟ್ಟದಿಂದ ಕೂಡಿದ್ದು, ಮಳೆಯ ಅಬ್ಬರದಲ್ಲಿ ತನ್ನ ಗುಣಮಟ್ಟವನ್ನು ತೀವ್ರವಾಗಿ ಕಳೆದುಕೊಳ್ಳುತ್ತಿವೆ ಎನ್ನುತ್ತಾರೆ ತಜ್ಞರು.

Read this also;

ಅವೈಜ್ಞಾನಿಕ ಕಟ್ಟಡ ನಿರ್ಮಾಣಗಳ ಹಾವಳಿಗೆ ಬೇಕು ಬ್ರೇಕ್..!

ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಹತ್ತಾರು ಅಂತಸ್ತುಗಳ ಕಟ್ಟಡಗಳು ನಿರ್ಮಾಣ ಆಗುತ್ತಿವೆ. ನೂರಾರು ಅಡಿಗಳ ಆಳಕ್ಕೆ ಪಾಯ ತೋಡುತ್ತಾರೆ. ಆಗ ಅನಿವಾರ್ಯವಾಗಿ ಮಣ್ಣು ಜರುಗುತ್ತದೆ. ಅಕ್ಕಪಕ್ಕದ ಮನೆಗಳ ಪಾಯ ಸಡಿಲವಾಗುತ್ತದೆ. ಭೂಮಿ ಒಮ್ಮೆ ತನ್ನ ಸ್ಥಾನವನ್ನು ಬಿಟ್ಟ ಪಲ್ಲಟವಾದರೆ ಹಿಡಿತ ತಪ್ಪುತ್ತದೆ. ಎರಡುಮೂರು ಅಂತಸ್ತು ಮನೆಗಳು ಭೂಮಿಯ ಒಳಕ್ಕೆ ಇಳಿಯುತ್ತದೆ. ಆ ವೇಳೆ ಕಟ್ಟಡಗಳು ಬಿರು ಬಿಡುತ್ತದೆ ಅಥವಾ ವಾಲಿಕೊಳ್ಳುವುದು ಸರ್ವೇ ಸಾಮಾನ್ಯ ಎನ್ನುವುದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳ ಮಾತು. ಆದರೆ ಬಿಬಿಎಂಪಿ ಅಧಿಕಾರಿಗಳು ಕಟ್ಟಡ ಮಾಲೀಕರ ಮೇಲೆ ದಂಡ ಪ್ರಯೋಗ ಮಾಡುವ ಮನಸ್ಸು ಮಾಡಿದ್ದಾರೆ. ನಕಲಿ ಮರಳು ಎನ್ನುವುದನ್ನು ತಿಳಿಯದೆ ಸಾವಿರಾರು ರೂಪಾಯಿ ಹಣ ಕೊಟ್ಟು ಮರಳು ಖರೀದಿ ಮಾಡಿ ಕೋಟಿ ಕೋಟಿ ಸಾಲ ಮಾಡಿ ಕಟ್ಟಡ ನಿರ್ಮಾಣ ಮಾಡಿದ ಬಳಿಕ 10 ರಿಂದ 15 ವರ್ಷಗಳ ಕಾಲ ಬ್ಯಾಂಕ್​ ಲೋನ್​ ಕಟ್ಟಿದವರು ಕಟ್ಟಡಗಳನ್ನು ಕಳೆದುಕೊಳ್ತಿದ್ದಾರೆ. ಈ ವಿಚಾರ ಅಧಿಕಾರಿಗಳ ಗಮನದಲ್ಲೇ ಇಲ್ಲ.

Read this also;

ಕಟ್ಟಡ ನಿರ್ಮಾಣದ ವೇಳೆಯಲ್ಲೇ ಗುಣಮಟ್ಟ ಪರೀಕ್ಷೆ ಉತ್ತಮ..!

ಕಟ್ಟಡಗಳನ್ನು ನಿರ್ಮಾಣ ಮಾಡುವಾಗಲೇ ಸರ್ಕಾರದ ಅಧಿಕಾರಿಗಳು ಮಾಲೀಕರು ಹಾಗೂ ಕಾಂಟ್ರಾಕ್ಟರ್​ಗಳ ಸಮ್ಮುಖದಲ್ಲಿ ಗುಣಮಟ್ಟ ಪರೀಕ್ಷೆ ಮಾಡಿದರೆ ಇಂತಹ ಘಟನೆಗಳನ್ನು ತಡೆಯುವ ಕೆಲಸ ಮಾಡಬಹುದು. ಅದನ್ನು ಬಿಟ್ಟು ಅಕ್ರಮ ಮರಳು ದಂಧೆ ಜೊತೆಗೆ ಕೈಜೋಡಿಸಿ ಈಗ ಕಟ್ಟಡ ನಿರ್ಮಾಣದಲ್ಲೇ ಜೀವನ ಸವೆಸಿದವರ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ ಅಲ್ಲವೇ..? ಒಂದು ಕಟ್ಟಡ ನಿರ್ಮಾಣ ಮಾಡುವಾಗ ಅಕ್ಕಪಕ್ಕದ ಕಟ್ಟಡಗಳಿಗೆ ಸಮಸ್ಯೆ ಆಗದಂತೆ ತಡೆಯುವ ಕೆಲಸ ಮಾಡುಬೇಕಿದೆ. ಕಟ್ಟಡ ನಿರ್ಮಾಣ ಮಾಡುವ ಸಂಸ್ಥೆಗಳಿಗೆ ಈ ಬಗ್ಗೆ ಎಚ್ಚರಿಕೆ ಕೊಡುವ ಕೆಲಸ ಮಾಡಬೇಕಿದೆ. ಅದನ್ನು ಬಿಟ್ಟು ಮನೆ ಕುಸಿಯುವ ತನಕ ಕಾಯುತ್ತ ಕುಳಿತು ಬಿದ್ದ ಮೇಲೆ ಮಾಲಿಕನ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ಮುಚ್ಚಿ ಹಾಕುತ್ತಾ ಸಾಗಿದರೆ ಈ ವ್ಯವಸ್ಥೆ ಬದಲಾಗದು. ಅಧಿಕಾರಿಗಳು ಘಟನೆ ನಡೆದ ಬಳಿಕ ಬಂದು ಕಾನೂನು ಕ್ರಮ ತೆಗೆದುಕೊಳ್ಳುವುದು ಮಾತ್ರವಲ್ಲದೆ, ಸಮಸ್ಯೆಗೆ ಮೂಲ ಏನು ಎನ್ನುವುದನ್ನು ಪತ್ತೆ ಹಚ್ಚಿ, ಅದಕ್ಕೆ ಸೂಕ್ತ ಪರಿಹಾರ ನೀಡುವುದು ಸೇರಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಹಳ್ಳಿಗಳಲ್ಲಿ ನೂರು ವರ್ಷಗಳ ಹಿಂದೆ ಕಟ್ಟಿರಯವ ಮಣ್ಣಿನ ಗೋಡೆಗಳೇ ಇನ್ನೂ ಮಳೆ ನೀರಿನಿಂದ ಕುಸಿದು ಬಿದ್ದಿಲ್ಲ, ಪರಿಸ್ಥಿತಿ ಹೀಗಿರುವಾಗ 15 ವರ್ಷಕ್ಕೆ ಸೀಮೆಂಟ್​ ಗೋಡೆ ಕುಸಿಯುತ್ತೆ ಎನ್ನುವುದು ಸೋಜಿಗದ ವಿಚಾರ ಅಲ್ಲವೇ..?

Related Posts

Don't Miss it !