CD ಕೇಸ್​: ತನಿಖಾಧಿಕಾರಿ ಇಲ್ಲದೆ ತನಿಖೆ ಮಾಡಿದ್ದು ಯಾಕೆ..? ಹೈಕೋರ್ಟ್​ ಗರಂ..

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ಹೈಕೋರ್ಟ್​ ಗರಂ ಆಗಿದೆ. ತನಿಖೆ ಬಗ್ಗೆ ಆಕ್ಷೇಒ ವ್ಯಕ್ತಪಡಿಸಿದ ಹೈಕೋರ್ಟ್​ ಎಸ್ಐಟಿ ರಚನೆ ಕಾನೂನಾತ್ಮಕವಾಗಿ ಇದೀಯಾ..? ಎಫ್ಐಆರ್ ದಾಖಲು ಮಾಡುವ ಮುನ್ನವೇ ಎಸ್ಐಟಿ ರಚಿಸಬಹುದಾ..? ಎಂದು ಸರ್ಕಾರಿ ವಕೀಲರ ಬಳಿ ನ್ಯಾಯಾಧೀಶರು ಉತ್ತರ ಕೇಳಿದ್ದರು. ಮಧ್ಯಾಹ್ನ ನಡೆದ ವಿಚಾರಣೆ ವೇಳೆ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಉತ್ತರ ಸಲ್ಲಿಸಿದ ಸರ್ಕಾರಿ ಪರ ವಕೀಲ ಪ್ರಭುಲಿಂಗ ನಾವದಿ, SIT ರಚನೆಗೆ ಸರ್ಕಾರಕ್ಕೆ ಅಧಿಕಾರ ಇದೆ. ಸರ್ಕಾರ ಕಾನೂನಾತ್ಮಕವಾಗಿಯೇ ಎಸ್​ಐಟಿ ರಚಿಸಿದೆ. ಇದರಲ್ಲಿ ಯಾವುದೇ ಲೋಪವಾಗಿಲ್ಲ ಎಂದಿದ್ದರು.

SIT ನಡಾವಳಿಕೆ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಸ್​ಐಟಿ ಮುಖ್ಯಸ್ಥರು ಯಾವಾಗ ವಾಪಸ್ ಕೆಲಸಕ್ಕೆ ಬಂದರು..? ಅಂತಿಮ ವರದಿ ಸಲ್ಲಿಕೆ ಬಳಿಕ ಕೆಲಸಕ್ಕೆ ಬಂದರು ಅಲ್ಲವೇ..? ಹಾಗಾದರೆ  SIT ಮುಖ್ಯಸ್ಥನ್ನಾಗಿ ನೇಮಿಸುವುದು ಯಾಕೆ..? ಎಂದು ಹೈಕೋರ್ಟ್​ ಪ್ರಶ್ನೆ ಮಾಡಿದೆ. ಮುಖ್ಯಸ್ಥರನ್ನಾಗಿ ಮಾಡುವುದು ತನಿಖಾ ತಂಡ ಮಾಡುವ ಲೋಪದೋಷಗಳನ್ನು ಸರಿ ಮಾಡುವುದಕ್ಕಾಗಿ ಅಲ್ಲವೇ..? ಎಂದು ಪ್ರಶ್ನಿಸಿದ್ದಾರೆ. ಇಂಥಹ ಸೂಕ್ಷ್ಮ, ಗಂಭೀರ ಪ್ರಕರಣದಲ್ಲೂ ಈ ರೀತಿ ಮಾಡಿದ್ದು ಎಷ್ಟು ಸರಿ ಎಂದು SIT ನಡವಳಿಕೆ ಬಗ್ಗೆ ಹೈಕೋರ್ಟ್ ಸಿಜೆ ಅಸಮಾಧಾನ ತೋರ್ಪಡಿಸಿದ್ದಾರೆ.

ಇದನ್ನೂ ಓದಿ:

SIT ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರು ಇಲ್ಲದೇ ಇದ್ದರು. ಬೇರೆ ಐಪಿಎಸ್ ಅಧಿಕಾರಿಗಳು ತನಿಖೆ ಮಾಡಬಹುದು ಎಂದು ಸರ್ಕಾರಿ ಪರ ವಕೀಲರ ಹೇಳಿದ್ದರು. SIT ಮುಖ್ಯಸ್ಥರು ಯಾವ ದಿನ ವಾಪಸ್ ಆಗಿದ್ದಾರೆ..? ಮುಖ್ಯಸ್ಥರು ಬರುವ ಮುನ್ನ ನಡೆದ ತನಿಖೆಯನ್ನ ಪರಿಶೀಲನೆ ನಡೆಸಿದ್ದಾರೆಯೇ..?   ಮುಖ್ಯಸ್ಥರು ತನ್ನ ಅನುಪಸ್ಥಿತಿಯಲ್ಲಿ ನಡೆದ ತನಿಖೆಯ ಬಗ್ಗೆ ತಟಸ್ಥರಾಗಿ ಇದ್ದಾರಾ..? ಎಂದು ಪ್ರಶ್ನಿಸಿದ ಕೋರ್ಟ್​, ಎಸ್ಐಟಿ ಸರಿಯಾದ ದಾರಿಯಲ್ಲಿ ತನಿಖೆ ನಡೆಸಿದ್ಯಾ..? ಇಲ್ಲವೋ ಅನ್ನೋದು ಮುಖ್ಯ. ಈ ಬಗ್ಗೆ 20 ನಿಮಿಷದಲ್ಲಿ ಸರ್ಕಾರ ಉತ್ತರ ನೀಡಲಿ ಎಂದು ಕಾಲಾವಕಾಶ ಕೊಟ್ಟಿದ್ರು. ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠದಲ್ಲಿ ವಿಚಾರಣೆಯಲ್ಲಿ ಕೂಲಂಕಷವಾಗಿ ವಿಚಾರಣೆ ನಡೀತು.

ರಮೇಶ್ ಜಾರಕಿಹೊಳಿ ವಿರುದ್ಧದ ಸಿ.ಡಿ ಕೇಸ್​ನಲ್ಲಿ ಸೌಮೇಂದು ಮುಖರ್ಜಿ ಇಲ್ಲದೇ ಇದ್ದರು ಬೇರೆ ಐಪಿಎಸ್ ಅಧಿಕಾರಿಗಳು ತನಿಖೆ ಮಾಡಬಹುದು ಎಂದಿದ್ದ ಸರ್ಕಾರಿ ಪರ ವಕೀಲರ ಹೇಳಿಕೆ ಹೈಕೋರ್ಟ್​ ಛಾಟಿ ಬೀಸಿದೆ. ನೀವು ಏನು ಬೇಕಾದರೂ ಹೇಳಬಹುದು. ಹಾಗಾದರೆ ಎಸ್ಐಟಿ ಮುಖ್ಯಸ್ಥರ ಪಾತ್ರ ಏನು..? ಎಸ್ಐಟಿ ಮುಖ್ಯಸ್ಥರ ನೇಮಕ ಆಗೋದು ಯಾಕೆ..? ಎಸ್ಐಟಿ ಮುಖ್ಯಸ್ಥರ ಪಾತ್ರದ ಬಗ್ಗೆ ಸ್ಪಷ್ಟನೆ ಬೇಕು. ಬೇಕಾದರೆ ನಾಳೆ ವಿಚಾರಣೆ ಮಾಡೋಣ ಎಂದಿದ್ದರು. ನಮಗೆ ಎಸ್ಐಟಿ ಮುಖ್ಯಸ್ಥರ ನೇಮಕದ ಉದ್ದೇಶ ತಿಳಿಸಿ. ಇದು ನಮ್ಮ ಪ್ರಶ್ನೆ ಅಲ್ಲ ಎಲ್ಲರ ಪ್ರಶ್ನೆಯೂ ಇದೆ ಆಗಿದೆ ಎಂದು ಮುಖ್ಯ ನ್ಯಾಯಾಧೀಶರು ವಕೀಲರಿಗೆ ಪ್ರಶ್ನೆ ಮಾಡಿದ್ರು.

ಇದನ್ನೂ ಓದಿ:

ನ್ಯಾಯಾಲಯಕ್ಕೆ ಮುಂದಿನ ವಿಚಾರಣೆ ವೇಳೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸೂಚನೆ ನೀಡಿ ಸೆಪ್ಟೆಂಬರ್​ 3ಕ್ಕೆ ವಿಚಾರಣೆ ಮುಂದೂಡಲಾಗಿದೆ. ಸ್ಪಷ್ಟ ನಿಲುವು ತಿಳಿಸಲು ಎಸ್ಐಟಿ ಮುಖ್ಯಸ್ಥರಿಗೆ ಹೈಕೋರ್ಟ್ ಸೂಚನೆ ನೀಡಲಾಗಿದೆ. ಅಲ್ಲೀವರೆಗೂ ಸದ್ಯ ಪ್ರಕರಣದ ಅಂತಿಮ ವರದಿ ಸಲ್ಲಿಸದಂತೆ ಸೂಚನೆ ನೀಡಲಾಗಿದೆ. ತನಿಖೆ ಸರಿಯಾದ ಕ್ರಮದಲ್ಲಿ ನಡೆದಿದೆಯೇ ಇಲ್ಲವೋ ಎನ್ನುದನ್ನ ಖಾತ್ರಿ ಪಡಿಸಬೇಕು. ತನ್ನ ಅನುಪಸ್ಥಿತಿಯಲ್ಲಿ ಸೌಮೇಂದು ಮುಖರ್ಜಿ ತನಿಖೆ ಮೇಲ್ವೀಚಾರಣೆಗೆ ಅಧಿಕಾರ ನೀಡಿರಲಿಲ್ಲ. ಗೃಹ ಮಂತ್ರಿ ನೇಮಿಸಿದ್ದ ಎಸ್ಐಟಿ ಕಾನೂನಾತ್ಮಕವಾಗಿ ಇದೆಯೇ ಇಲ್ಲವೋ ಎನ್ನುವ ಪ್ರಶ್ನೆಯೂ ಇದೆ ಎಂದು ಹೈಕೋರ್ಟ್​ ಹೇಳಿದೆ. ಈ ಮೂಲಕ ತನಿಖೆಯಲ್ಲಿ ಎಲ್ಲವೂ ಸರಿಯಲ್ಲ ಎನ್ನುವುದನ್ನು ಸೂಚ್ಯವಾಗಿ ಹೇಳುವಂತಿದೆ.

Related Posts

Don't Miss it !