ಹಿಜಬ್ – ಕೇಸರಿ ಹೋರಾಟ, ನಿನ್ನೆ ನಡೆದ ತಲೆ ತಗ್ಗಿಸುವ ಸಂಗತಿಗಳು..!!

ಹಿಂದೂ ಮುಸಲ್ಮಾನ ಎಂಬುದು ರಾಜಕೀಯ ದಾಳವಾಗಿ ಬದಲಾಗಿದೆ. ಹಿಜಬ್ ಅಥವಾ ಕೇಸರಿ ಶಲ್ಯ ಒಂದು ಸಾಮಾನ್ಯ ವಸ್ತ್ರ.. ಆದರೆ ಇದೀಗ ರಾಜಕಾರಣಕ್ಕೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಇಂದು ಮಧ್ಯಾಹ್ನ 2.30 ಕ್ಕೆ‌ ಸಮಯ ನಿಗದಿ ಮಾಡಲಾಗಿದೆ. ಆದರೆ ಈ ನಡುವೆ ನಿನ್ನೆ ರಾಜ್ಯಾದ್ಯಂತ ಹಿಜಬ್ ಪರ ಹಾಗೂ ವಿರೋಧ ನಡೆದ ಪ್ರತಿಭಟನೆಯಲ್ಲಿ ಸಾಕಷ್ಟು ಘಟನೆಗಳು ಘಟಿಸಿವೆ. ಅದರಲ್ಲಿ‌ ಮಾನವ ಸಂಕುಲ ನಾಚಿಕೆ ಪಟ್ಟುಕೊಳ್ಳಬೇಕಾದ ಸಂಗತಿಗಳೂ ನಡೆದಿರುವುದು ಆತಂಕಕಾರಿ ಬೆಳವಣಿಗೆ ಎನ್ನಬಹುದು. ಅದರಲ್ಲಿ‌ ಕೆಲವೊಂದನ್ನು The Public Spot ಗುರುತು ಮಾಡಿ ತೋರಿಸುತ್ತಿದೆ.

ಮಂಡ್ಯದಲ್ಲಿ ಮುಸ್ಲಿಂ ಯುವತಿಯ ಬೆನ್ನು ಬಿದ್ದ ಹಿಂದೂ ಯುವಕರು..!

ಇಡೀ ರಾಜ್ಯದ ಜನತೆ ತಗ್ಗಿಸುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮುಸಲ್ಮಾನ ವಿದ್ಯಾರ್ಥಿನಿಯೊಬ್ಬಳು ಬುರ್ಕಾ ಹಾಗೂ ಹಿಜಬ್ ಧರಿಸಿ ಕಾಲೇಜಿನ ಒಳಕ್ಕೆ ಬರುವಾಗ ಕೇಸರಿ ಶಾಲು ಹಾಕಿಕೊಂಡಿದ್ದ ಹಿಂದೂಗಳು ಎಂದು ಹೇಳಿಕೊಳ್ಳುತ್ತಿದ್ದ ವಿರ್ಯಾರ್ಥಿಗಳು ಆಕೆಯನ್ನು ಹಿಂಬಾಲಿಸಿ ಹೊರಟರು. ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದರು. ಕೋಪಗೊಂಡ ಯುವತಿ ಅಲ್ಲಾವು ಅಕ್ಬರ್ ಎಂದು ಕೂಗುವ ಮೂಲಕ ತಿರುಗೇಟು‌ ನೀಡಿದಳು. ಆಕೆ ಧೈರ್ಯ ಮಾಡಿ ಘೋಷಣೆ ಕೂಗಿದ್ದಾಳೆ. ಆದರೆ ನಿಮ್ಮ ಅಕ್ಕ ತಂಗಿಯರನ್ನು ಮುಸಲ್ಮಾನ ಯುವಕರು ಅಡ್ಡಗಟ್ಟಿದ್ದರೆ ಏನು ಮಾಡುತ್ತಿದ್ದಿರಿ ಎಂಬುದನ್ನು ಅಲ್ಲಿದ್ದ ಯುವಕರು ಒಂದು ಕ್ಷಣ ಯೋಚಿಸಿದರೂ ತಾವು ಮಾಡಿದ್ದು ಎಷ್ಟು ಸರಿ‌ ಎಂಬುದು ಅರಿವಾಗುತ್ತದೆ.

ಇದನ್ನೂ ಓದಿ: 10ನೇ ತರಗತಿ.. 16 ವರ್ಷ 5ನೇ ಮಹಡಿಯಿಂದ ಹಾರಿದ ಏಕೈಕ ಪುತ್ರ..!

ಬಾಗಲಕೋಟೆಯಲ್ಲಿ ಶಿಕ್ಷನ ಮೇಲೆಯೇ ಹಲ್ಲೆ. ಕೋಮಾದಲ್ಲಿ ಶಿಕ್ಷಕ..

ಬಾಗಲಕೋಟೆ ಜಿಲ್ಲೆ ಬನಹಟ್ಟಿಯಲ್ಲಿ ಹಿಜಬ್ ಹಾಗೂ ಕೇಸರಿ ಹೋರಾಟ ಹಿಡಿತ ಮೀರಿ ನಡೆದಿದೆ. ಕಲ್ಲು ತೂರಾಟದ ನಂತರ ಖಾಸಗಿ ಶಾಲಾ ಶಿಕ್ಷಕನ ಮೇಲೆ ರಾಡ್‌ನಿಂದ ಹಲ್ಲೆ ಮಾಡಲಾಗಿದೆ. ಮಂಜುನಾಥ್ ನಾಯಕ್ ಎಂಬ ಖಾಸಗಿ ಶಾಲೆ ಶಿಕ್ಷಕನಿಗೆ ತೀವ್ರ ರಕ್ತಸ್ರಾವ ಆಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಮುಸಲ್ಮಾನ ಸಮುದಾಯದ ಯುವಕರು ಹಲ್ಲೆ ಮಾಡಿದ್ದಾರೆ ಎಂದು ಹಿಂದೂಪರ ಮುಖಂಡರು ಆರೋಪ ಮಾಡಲಾಗಿದೆ. ಪೊಲೀಸರು ತನಿಖೆ ನಡೆಸಿ ಸೂಕ್ತ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ಘಟನೆ ಖಂಡಿಸಿ ಇಂದು ಬನಹಟ್ಟಿ ಬಂದ್‌ಗೆ ಕರೆ ನೀಡಲಾಗಿದೆ. ಕಾನೂನು ಕೈಗೆ ತೆಗೆದುಕೊಂಡ ಪುಂಡರಿಗೆ ಕಾನೂನಿನ ಪಾಠ ಹೇಳಿಕೊಡಬೇಕಿದೆ.

ಕ್ರೈಸ್ತ ಧರ್ಮದ ಯುವಕನ ಮೇಲೆ ಮುಸಲ್ಮಾನರ ಹಲ್ಲೆ ಆರೋಪ..!

ಕೊಡಗಿನ ಅಲ್ಪಸಂಖ್ಯಾತರ ಕಾಲೇಜು ಹಾಸ್ಟೆಲ್‌‌ನಲ್ಲಿ ಗಲಾಟೆ ನಡೆದಿದ್ದು, ಕೇಸರಿ ಶಾಲು ಧರಿಸಿದ್ದ ವಿಷಯದಲ್ಲಿ ಹಾಸ್ಟೆಲ್ ಹುಡುಗರ ನಡುವೆ ಗಲಾಟೆ ಆಗಿದೆ. ಅಂಥೋಣಿ ಎಂಬ ವಿದ್ಯಾರ್ಥಿ ಮೇಲೆ ಮುಸಲ್ಮಾನ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಗುಂಪು ಹಲ್ಲೆ ಮಾಡಿದೆ ಎಂದು ಆರೋಪ ಮಾಡಲಾಗಿದೆ. ಕೇಸರಿ ಶಾಲು ಧರಿಸಿದ್ದ ಕಾರಣಕ್ಕೆ ಹಾಸ್ಟೆಲ್‌ನಲ್ಲಿ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕುಶಾಲನಗರ ಪೋಲೀಸರು ಹಾಸ್ಟೆಲ್‌ನ ಸಿಸಿಟಿವಿ ದೃಶ್ಯವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಮುಸ್ಲಿಂ ಯುವತಿಯರು ಪ್ರತಿಭಟನೆ ಬಳಿಕ ಸಾಲಾಗಿ ಹೋಗುತ್ತಿದ್ದರು. ಈ ವೇಳೆ ಹಿಂದೂ ಧರ್ಮದ ಸಾಂಕೇತಿಕ ಬಾವುಟ ಹಿಡಿದಿದ್ದ ಯುವಕರ ಗುಂಪು ಮುಸ್ಲಿಂ ಯುವಕ, ಯುವತಿಯರನ್ನು ಪ್ರಚೋದಿಸುವ ಕೆಲಸ ಮಾಡಿತ್ತು. ಆ ವೇಳೆ ಕಲ್ಲು ತೂರಾಟ ನಡೆದಿದೆ. ದಾವಣಗೆರೆಯಲ್ಲಿ ಗುಂಪೊಂದು ಯುವಕರು ಹಲ್ಲೆ ಮಾಡುತ್ತಿದ್ದಾಗ ಪೊಲೀಸರು ಲಾಠಿ ಬೀಸಿದ್ದಾರೆ. ಅಶ್ರುವಾಯು ಸಿಡಿಸಿ ಗುಂಪನ್ನು ಚದುರಿಸಿದ್ದಾರೆ.

ಇದನ್ನೂ ಓದಿ; ಐಶಾರಾಮಿ ಈಗಲ್​ಟನ್​ ರೆಸಾರ್ಟ್​ ಒಳಗೆ ನಡೆದ ಜೋಡಿ ಕೊಲೆ..!

ಕಾನೂನು ಸುವ್ಯವಸ್ಥೆ ಎಂದೂ ಸೋಲನ್ನು ಒಪ್ಪಿಕೊಳ್ಳಬಾರದು..!

ಹಿಜಬ್ ವರ್ಸಸ್ ಕೇಸರಿ ಶಲ್ಯ ಪ್ರಕರಣ ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ಕಾನೂನು ಅವಕಾಶದ ಬಗ್ಗೆ ಕೋರ್ಟ್​ ತನ್ನ ನಿಲುವನ್ನು ತಿಳಿಸಲಿದೆ. ಅಲ್ಲೀವರೆಗೂ ವಿದ್ಯಾರ್ಥಿಗಳು ಹಾಗೂ ಧರ್ಮಾಂಧತೆ ಹೊಂದಿರುವ ಪುಂಡರನ್ನು ಮಟ್ಟ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ. ಈಗಾಗಲೇ ಹಿಜಬ್​​ ಹಾಗೂ ಕೇಸರಿ ಶಲ್ಯ ಗಲಾಟೆ ಜನಾಂಗೀಯ ಗಲಭೆಯಾಗಿ ಮಾರ್ಪಾಡು ಆಗುತ್ತಿದೆ. ಸೂಕ್ತ ಕ್ರಮಕೈಗೊಂಡು ಕಾನೂನು ಸುವ್ಯವಸ್ಥೆ ಕೈಗೊಳ್ಳಬೇಕಾದ ರಾಜ್ಯ ಸರ್ಕಾರ ತಮಾಷೆ ನೋಡುತ್ತಿದೆ. ಗಲಭೆ ಆಗುವುದರಿಂದ ರಾಜಕೀಯವಾಗಿ ತಮಗೆ ಎಷ್ಟು ಲಾಭ ಎನ್ನುವ ಲೆಕ್ಕಾಚಾರದಲ್ಲಿ ಎಲ್ಲಾ ರಾಜಕೀಯ ನಾಯಕರು ತೊಡಗಿದ್ದಾರೆ. ಸರ್ಕಾರದ ಈ ರೀತಿಯ ಮೂಕ ಪ್ರೇಕ್ಷಕ ವರ್ತನೆ ಭವಿಷ್ಯದ ಭಾರತಕ್ಕೆ ಆತಂಕ ಎದುರಾಗಿದೆ.

Related Posts

Don't Miss it !