‘ವೀಕೆಂಡ್​ ಕರ್ಫ್ಯೂ’ ನಿಯಮ ಪಾಲಿಸದಿದ್ದರೂ ನಡೆಯುತ್ತಾ..? ಸರ್ಕಾರಕ್ಕೆ ಮುಜುಗರ..?

ಕೊರೊನಾ ಸೋಂಕು ಮಿತಿ ಮೀರಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ವಾರಾಂತ್ಯದಲ್ಲಿ ವೀಕೆಂಡ್​ ಕರ್ಫ್ಯೂ ಜಾರಿ ಮಾಡಿದೆ. ಈಗಾಗಲೇ ಕಳೆದ 2 ವಾರಗಳಿಂದ ವೀಕೆಂಡ್​ ಕರ್ಫ್ಯೂ ಜಾರಿ ಮಾಡಿದೆ. ಮೊದಲ ವಾರದಲ್ಲಿ ಪೊಲೀಸರು ಸಂಚಾರಕ್ಕೆ ಅಲ್ಲಲ್ಲಿ ಅವಕಾಶ ಕೊಟ್ಟಿದ್ದರು. ಆದರೆ 2ನೇ ವಾರದ ವೀಕೆಂಡ್​ ಕರ್ಫ್ಯೂ ಸಾಕಷ್ಟು ಕಟ್ಟು ನಿಟ್ಟಾಗಿ ಜಾರಿಯಾಗಿತ್ತು. ವೀಕೆಂಡ್​ ನಡುವೆಯೂ ರಸ್ತೆಗೆ ಇಳಿದಿದ್ದ ಸಾಕಷ್ಟು ವಾಹನಗಳನ್ನು ಪೊಲೀಸರು ಸೀಜ್​ ಮಾಡಿದ್ದಾರೆ. ಆದರೆ ಮುಂದಿನ ವಾರದಿಂದ ವೀಕೆಂಡ್​ ಕರ್ಫ್ಯೂ ಹಾಗೂ ನೈಟ್​ ಕರ್ಫ್ಯೂ ಯಾವುದನ್ನೂ ಫಾಲೋ ಮಾಡುವ ಅವಶ್ಯಕತೆ ಇರುವುದಿಲ್ಲವೇ ಎನ್ನುವುದನ್ನ ಸರ್ಕಾರವೇ ಪದೇ ಪದೇ ಸಾಬೀತು ಮಾಡಿಕೊಳ್ಳುತ್ತಿದೆ. ಇದೀಗ ಹೋಟೆಲ್​ ಮಾಲೀಕರು ಕೂಡ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ವೀಕೆಂಡ್​ ಕರ್ಫ್ಯೂ ತೆಗೆಯದಿದ್ದರೆ ನಾವೇ ಉಲ್ಲಂಘನೆ ಮಾಡ್ತೇವೆ ಎನ್ನುವ ಗಡುವು ನೀಡಿದ್ದಾರೆ.

ಸರ್ಕಾರದ ದ್ವಂದ್ವ ನಿಲುವಿನ ಬಗ್ಗೆ ಹೋಟೆಲ್​​ ಮಾಲೀಕರ ಕಿಡಿ..!

ಬೆಂಗಳೂರಲ್ಲಿ ವಾರಾಂತ್ಯ ಬಂದರೆ ವ್ಯಾಪಾರದ ಭರಾಟೆ ಜೋರು. ವಾರ ಪೂರ್ತಿ ಮಾಡುವ ವ್ಯಾಪಾರ ಶನಿವಾರ ಹಾಗೂ ಭಾನುವಾರ ಎರಡೇ ದಿನದಲ್ಲಿ ನಡೆಯುತ್ತದೆ. ಈಗಾಗಲೇ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆ ತನಕ ನೈಟ್​ ಕರ್ಫ್ಯೂ ಜಾರಿ ಮಾಡಿರುವುದರಿಂದ ವ್ಯಾಪಾರ ಕುಂಠಿತವಾಗಿದೆ. ಈ ನಡುವೆ ವೀಕೆಂಡ್​ ಕರ್ಫ್ಯೂ ಹೊಡೆತ. ಸರ್ಕಾರ ಮಾತ್ರ ಯಾವುದೇ ತೆರಿಗೆಯನ್ನೂ ಕಡಿಮೆ ಮಾಡುವುದಿಲ್ಲ, ಯಾವುದೇ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಬೆಸ್ಕಾಂ, BWSSB, BBMP ಕೂಡ ತಮ್ಮ ತೆರಿಗೆಯನಲ್ಲಿ ಇಂತಿಷ್ಟು ಹಣ ಕಡಿತ ಮಾಡುತ್ತೇವೆ ಎಂದು ಘೋಷಣೆ ಮಾಡುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ನಾವು ತೆರಿಗೆ ಕಟ್ಟುವುದು ಹೇಗೆ ಎನ್ನುವುದು ಹೋಟೆಲ್​, ರೆಸ್ಟೋರೆಂಟ್​ ಮಾಲೀಕರ ಪ್ರಶ್ನೆ. ಇನ್ನೂ ವೀಕೆಂಡ್​ ಕರ್ಫ್ಯೂ ಉಲ್ಲಂಘನೆ ಮಾಡಿ ಕಾಂಗ್ರೆಸ್​ ನಡೆಸಿದ ಪಾದಯಾತ್ರೆ, ಹೋಟೆಲ್​ ಮಾಲೀಕರ ಸವಾಲಿಗೆ ಧೈರ್ಯ ತಂದುಕೊಟ್ಟಿದೆ. ಮುಂದಿನ ವಾರದಿಂದ ವೀಕೆಂಡ್​ ಕರ್ಫ್ಯೂ ಉಲ್ಲಂಘನೆ ಮಾಡ್ತೇವೆ ಎಂದು ಸವಾಲು ಹಾಕಿದ್ದಾರೆ.

Read This;

ಸರ್ಕಾರದ ನಿಯಮಕ್ಕೆ ಮೂರು ಕಾಸಿನ ಬೆಲೆಯಿಲ್ಲ..!

ರಾಜ್ಯ ಸರ್ಕಾರ ಜಾರಿ ಮಾಡಿರುವ ನಿಯಮಗಳು ಕೇವಲ ಜನಸಾಮಾನ್ಯರು ಪಾಲಿಸುವುದಕ್ಕೆ ಮಾತ್ರ ಎನ್ನುವುದು ಸದಾಕಾಲದ ಸತ್ಯ. ಬಿಜೆಪಿ ಶಾಸಕ ರೇಣುಕಾಚಾರ್ಯ ನಿಮಯ ಉಲ್ಲಂಘಿಸಿ ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ಬಳಿಕ ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅನಿಲ್​ ಬೆನಕೆ ಅವರು ಎಮ್ಮೆ ಬೆದರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸರ್ಕಾರದ ನಿಯಮ ಉಲ್ಲಂಘನೆ ಮಾಡಿದ್ದರು. ಇನ್ನೂ ಭಾನುವಾರ ದಾವಣೆಗೆರೆಯಲ್ಲಿ ಜಗಳೂರು ಕ್ಷೇತ್ರದ ಬಿಜೆಪಿ ಶಾಸಕ ಎಸ್​.ವಿ ರಾಮಚಂದ್ರಪ್ಪ ನಿಯಮಗಳನ್ನು ಗಾಳಿಗೆ ತೂರಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ದಾವಣಗೆರೆಯ ಕೆ.ಬಿ ಬಡಾವಣೆಯಲ್ಲಿರುವ ಶಾಸಕರ ನಿವಾಸದ ಎದುರು ಬೃಹತ್ ಪೆಂಡಾಲ್ ಹಾಕಿ ಹುಟ್ಟುಹಬ್ಬ ಆಚರಿಸಿಕೊಂಡರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದರು. ಅಷ್ಟು ಮಾತ್ರವಲ್ಲದೆ ಕಾನೂನು ಪಾಲಿಸಬೇಕಾದ ಸಿಪಿಐ ಸಿಪಿಐ ಗುರುಬಸವರಾಜ್, ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭಾಶಯ ಕೋರಿದ್ದಾರೆ.

Also Read:

ಆಡಳಿತ ಸುವ್ಯವಸ್ಥೆ ನಿರ್ವಹಣೆಯಲ್ಲಿ ಸರ್ಕಾರ ಸೋತಿದ್ಯಾ..?

ಮೈಲಾರಪುರದಲ್ಲಿ ನಡೆಯುವ ಮೈಲಾರಲಿಂಗೇಶ್ವರ ಜಾತ್ರೆಯನ್ನು ನಿಲ್ಲಿಸುವ ಮೂಲಕ ಜಿಲ್ಲಾಡಳಿತ ಹೇಳಿಕೊಳ್ಳುವ ಸಾಧನೆ ಮಾಡಿದಂತೆ ಬೀಗಿತ್ತು. ಆದರೆ ಉಡುಪಿ ಮಠದಲ್ಲಿ ನಾಳೆ ನಡೆಯುವ ಪರ್ಯಾಯಕ್ಕೆ ಕೃಷ್ಣಮಠ ಸಿಂಗಾರಗೊಂಡಿದೆ. ಈಗಾಗಲೇ ವೀಕೆಂಡ್​ ಕರ್ಫ್ಯೂ ಮರೆತ ಭಕ್ತರು ನಿನ್ನೆಯಿಂಲೂ ಉಡುಪಿ ಮಠದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಸಾಮಾಜಿಕ ಅಂತರ ಸೇರಿದಂತೆ ಕೋವಿಡ್​ ನಿಯಮಗಳ ಪಾಲನೆ ಮಾಡಿಕೊಂಡೇ ಕಾರ್ಯಕ್ರಮ ನಡೆಯುತ್ತದೆ ಎಂದು ಆಯೋಜಕರು ಹೇಳಬಹುದು. ಕಾಂಗ್ರೆಸ್​ ಕೂಡ ಇದನ್ನೇ ಹೇಳಿತ್ತು. ಆದರೆ ಮಾಡುವುದಕ್ಕೆ ಸಾಧ್ಯವಾಯಿತೇ..? ಇಲ್ಲ. ಇನ್ನೂ ಹೈಕೋರ್ಟ್​ ಮಧ್ಯ ದಾರಿಯಲ್ಲಿ ತಡೆಯುವುದಕ್ಕೆ ಮಾತ್ರ ಸೀಮಿತವಾಯಿತೇ ಹೊರತು ತಪ್ಪು ಮಾಡಿದವರಿಗೆ ಕನಿಷ್ಠಪಕ್ಷ ದಂಡ ವಿಧಿಸುವ ಕೆಲಸ ಮಾಡಲಿಲ್ಲ. ಇನ್ನೂ ಹೋಟೆಲ್​ ಮಾಲೀಕರು ಕಾನೂನು ಉಲ್ಲಂಘಿಸಿದರೆ ದಂಡ ವಿಧಿಸಲು ಕೋರ್ಟ್​ಗೆ ಸಾಧ್ಯವೇ..?

Related Posts

Don't Miss it !