ಇದ್ದರೆ ಇರಬೇಕು ಇವಳಂಥಾ ಹೆಂಡ್ತಿ.. ಪೊಲೀಸರೇ ಆರೋಪಿಗಳು..

ಹುಬ್ಬಳ್ಳಿಯ ಕೋಟಿಲಿಂಗೇಶ್ವರ ನಗರದಲ್ಲಿ 28 ವರ್ಷದ ನಿಖಿಲ್ ಕುಂದಗೋಳ ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಮೊದಲಿಗೆ ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿತ್ತು. ಆದರೆ ಹೆಂಡತಿ ಜೊತೆಗೆ ಸೇರಿಕೊಂಡು ಪೊಲೀಸರ ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ನೇರ ಆರೋಪ ಮಾಡಿದ್ದಾರೆ.

ಗುರುವಾರ ಗಂಡನ ವಿರುದ್ಧ ದೂರು, ಖಾಕಿ ಟಾರ್ಚರ್..

ಆತ್ಮಹತ್ಯೆ ಮಾಡಿಕೊಂಡಿರುವ ನಿಖಿಲ್ ಕಿರುಕುಳ ನೀಡಿದ್ದಾನೆ ಎಂದು ಗಂಡನ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು. ಗಂಡ ನಿಖಿಲ್‌‌ನನ್ನು ಕರೆಸಿ ವಿಚಾರಣೆ ಮಾಡಿದ್ದ ಕೇಶ್ವಾಪುರ ಪೊಲೀಸರು ಸಂಧಾನದ ಹೆಸರಲ್ಲಿ ಡೀಲಿಂಗ್ ಮಾಡಿದ್ದಾರೆ. ಏಕಾಏಕಿ 2 ಲಕ್ಷ ರೂಪಾಯಿ ತಂದುಕೊಡುವಂತೆ ತಿಳಿಸಿದ್ರಿಂದ ಬೇಸತ್ತು ಗಂಡ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ.

11 ತಿಂಗಳ ಹಿಂದೆ ಮದ್ವೆ.. ಮೊದಲೇ ಅಕ್ರಮ ಸಂಬಂಧ..!?

ಮೃತ ನಿಖಲ್ ಪೋಷಕರು ಆರೋಪ ಮಾಡಿರುವಂತೆ 11 ತಿಂಗಳ ಹಿಂದೆ ನಿಖಿಲ್ ಹಾಗು ಯುವತಿ ಪ್ರೀತಿ ಜೊತೆ ಮದುವೆ ಮಾಡಲಾಗಿತ್ತು. ಆದರೆ ಆಕೆಗೆ ವಿವಾಹ ಪೂರ್ವದಲ್ಲೇ ಬೇರೊಬ್ಬ ವ್ಯಕ್ತಿಯ ಜೊತೆ ಸಂಬಂಧವಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ಅದಕ್ಕೆ ಪ್ರತಿಯಾಗಿ ಪ್ರೀತಿ ಮತ್ತು ಕುಟುಂಬಸ್ಥರು ನಿನ್ನೆ ಕೇಶ್ವಾಪುರ ಠಾಣೆಗೆ ನಮ್ಮನ್ನು ಕರೆಯಿಸಿದ್ದರು. ನಿಖಿಲ್ ಮತ್ತು ನಮ್ಮನ್ನು ಕರೆಸಿ ಬೆದರಿಕೆ ಹಾಕಿಸಿದ್ದರು. ಗಂಡನ ಬಿಟ್ಟು ತವರು ಸೇರಿದ್ದ ಪ್ರೀತಿ ಪೊಲೀಸರ ಮೂಲಕ ಕಿರುಕುಳ ಕೊಟ್ಟಿದ್ದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎಂದು ದೂರಿದ್ದಾರೆ.

ಮರಣೋತ್ತರ ಪರೀಕ್ಷೆ ಮುಗಿದರೂ ಶವ ಕೊಡದೆ ಕಳ್ಳಾಟ..

ಆತ್ಮಹತ್ಯೆ ಮಾಡಿಕೊಂಡ ನಿಖಿಲ್ ಮರಣೋತ್ತರ ಪರೀಕ್ಷೆ ಮುಕ್ತಾಯ ಆದರೂ ಶವ ಕೊಡದ ಕಿಮ್ಸ್ ಸಿಬ್ಬಂದಿ ಸಾಕಷ್ಟು ಕಾಡುವ ಕೆಲಸ ಮಾಡಿದ್ರು. ಕಿಮ್ಸ್ ಸಿಬ್ಬಂದಿ ಮೇಲೆ ಪೊಲೀಸರು ಒತ್ತಡ ಹಾಕಿ, ಕೇಸ್ ವಾಪಸ್ ತಗೆದುಕೊಳ್ಳಿ ಆ ಬಳಿಕ ಶವ ಕೊಡ್ತೀವಿ ಎಂದಿದ್ದ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಅಯ್ತು. ಮಗನ ಶವಕ್ಕಾಗಿ ಬೆಳಗ್ಗೆ 11 ಗಂಟೆಯಿಂದ ಕಾಯುತ್ತಿದ್ದ ನಿಖಿಲ್ ಪೋಷಕರು‌ ಕೇಸ್ ವಾಪಸ್ ತೆಗೆದುಕೊಳ್ಳಲು ನಿರಾಕರಿಸಿದರು. ಕೇಶ್ವಾಪೂರ ಠಾಣೆ CPI ಸಾತೇನಹಳ್ಳಿ, ASI ಜಯಶ್ರೀ ಚಲವಾದಿ ವಿರುದ್ದ ದೂರು ನೀಡಿದ್ದರಿಂದ ಶವ ಹಸ್ತಾಂತರ ಮಾಡದೆ ರಾತ್ರಿ ತನಕ ಕಾಯಿಸಲಾಯ್ತು.

8 ಜನರ ವಿರುದ್ಧ FIR, ಇಬ್ಬರು ಪೊಲೀಸರ ಹೆಸರು..

ಓರ್ವ CPI ಹಾಗು ಓರ್ವ ASI ಸೇರಿ 8 ಜನರ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ನಿ ಪ್ರೀತಿ, ಕೇಶ್ವಾಪೂರ ಠಾಣೆಯ CPI ಸಾತೇನಹಳ್ಳಿ ASI ಜಯಶ್ರೀ ಚಲವಾದಿ, ಪ್ರೀತಿ ತಂದೆ ಧನರಾಜ್, ತಾಯಿ ಮಂಜುಳಾ, ಆನಂದಪ್ಪ, ವಿರುದ್ಧ FIR ದಾಖಲಾಗಿದೆ. ಸೊಸೆ ಪ್ರೀತಿಯ ಬೆತ್ತಲೆ ಫೊಟೋ ತಗೆದು, ಅವಳೊಂದಿಗೆ ಅನೈತಿಕ ಸಂಬಂಧ ಹೊಂದಿದ ವ್ಯಕ್ತಿ ಕಾರಣ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಆ ಬಳಿಕ ರಾತ್ರಿ ಶವ ಹಸ್ತಾಂತರ ಆಗಿದೆ. ಈಗ ಮತ್ತೊಮ್ಮೆ ಹೆಡ್‌ಲೈನ್ ಮತ್ತೆ ಓದಿ.

Related Posts

Don't Miss it !