2ನೇ ಮದುವೆ ಆದರೂ ತೃಪ್ತಳಾಗದ ಈಕೆ..! ಕೊಂದೇ ಬಿಟ್ಟ ಗಂಡ..!

ಬೆಂಗಳೂರು ಎಂಬ ಮಾಯಾ ನಗರಿ ಇಲ್ಲಿನ ಬದುಕು ಬಣ್ಣದ ಬುದುಕು ಎನ್ನುವುದು ಎಲ್ಲರಿಗೂ ಗೊತ್ತಿರೋ ಸಂಗತಿ. ಸಂಬಂಧಗಳ ಮೌಲ್ಯ ಕಳೆದುಕೊಳ್ಳುತ್ತಿದ್ದು, ಒಂದಲ್ಲ, ಎರಡ್ಮೂರು ಮದುವೆಗಳೂ ಆಗುತ್ತಿದೆ. ಮದುವೆ ಆದ ಬಳಿಕ ಬೇರೊಂದು ಸಂಬಂಧ ಇರಿಸಿಕೊಳ್ಳುವುದು ಮಾಮೂಲಿ ಎನ್ನುವಂತಾಗಿದೆ. ಇದೇ ರೀತಿ 2ನೇ ಮದುವೆ ಆಗಿದ್ದ ಮಹಿಳೆಯೊಬ್ಬರು 3ನೇ ವ್ಯಕ್ತಿ ಜೊತೆಗೆ ಸ್ನೇಹ ಮಾಡಿ ಗಂಡನಿಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಳು. ಪತ್ನಿಯ ಅಕ್ರಮ ಸಂಬಂಧವನ್ನು ಸಹಿಸದ 2ನೇ ಗಂಡ ಕೊಲೆಗೆ ಸ್ಕೆಚ್​ ಹಾಕಿ ಸ್ನೇಹಿತನ ಜೊತೆಗೂಡಿ ಕೊಲೆ ಮಾಡಿದ್ದಾರೆ. ನಂತರ ಗುರುತು ಪತ್ತೆಯಾಗಬಾರದು ಅನ್ನೋ ಕಾರಣಕ್ಕೆ ಶವಕ್ಕೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಯಾರಿಗೂ ತಿಳಿಯದಂತೆ ಅಲ್ಲಿಂದ ಎಸ್ಕೇಪ್​ ಆಗಿದ್ದರು. ಕೊಲೆ ಮಾಡಲು ಸಂಚು ರೂಪಿಸಿದ್ದು ಹಾಗು ಕೊಲೆ ಮಾಡಿದ ಬಳಿಕ ಪೊಲೀಸರ ದಿಕ್ಕು ತಪ್ಪಿಸಿದ್ದನ್ನು ಕಂಡು ಪೊಲೀಸರೇ ಕಕ್ಕಾಬಿಕ್ಕಿ ಆಗಿದ್ದಾರೆ.

ಆರೋಪಿ ಗಂಡ ರಫೀಕ್

ಹೆಂಡತಿ ಕೊಲೆ ಮಾಡೋದಕ್ಕೆ ಆಹ್ವಾನ ಕೊಟ್ಟಿದ್ದು ಹೇಗೆ..?

ಬೆಂಗಳೂರಿನ ಕೆಂಗೇರಿ ಸಮೀಪದ ರಾಮಸಂದ್ರದಲ್ಲಿ ಜುಲೈ 3ರಂದು ಕೊಲೆ ನಡೆದಿತ್ತು. ಕೊಲೆ ಮಾಡಿದ್ದು 2ನೇ ಗಂಡ ಮೊಹ್ಮದ್ ರಫೀಕ್‌. ಕೊಲೆ ಆಗಿದ್ದು ನಗೀನಾ, ಇಬ್ಬರೂ ಮೂಲತ: ಯಾದಗಿರಿ ಜಿಲ್ಲೆಯವರಾಗಿದ್ದು, ಇಬ್ಬರಿಗೂ ಇದು 2ನೇ ಮದುವೆ ಆಗಿತ್ತು. ಆ ಬಳಿಕ 3ನೇ ವ್ಯಕ್ತಿ ಜೊತೆಗೆ ಸಂಬಂಧ ಇರಿಸಿಕೊಂಡಿದ್ದನ್ನು ಕಣ್ಣಾರೆ ಕಂಡ ರಫೀಕ್​, ತನ್ನ ಸ್ನೇಹಿತ ಪ್ರಜ್ವಲ್​ ಜೊತೆಗೆ ಎಲ್ಲಾ ವಿಚಾರಗಳನ್ನು ಹಂಚಿಕೊಂಡು ಕೊಲೆ ಮಾಡುವುದಕ್ಕೆ ನಿರ್ಧಾರ ಮಾಡಿದ್ದರು. ಆದರೆ ಮನೆಯಲ್ಲಿ ಕೊಲೆ ಮಾಡಿದಾಗ ಸಿಕ್ಕಿ ಬೀಳುವ ಸಾಧ್ಯತೆ ಇರುತ್ತದೆ ಎನ್ನುವ ಕಾರಣಕ್ಕೆ ಉಪಾಯ ಹುಡುಕಿದ್ದ ಆರೋಪಿಗಳು, ‘ತಾನು ರಾಮಸಂದ್ರದಲ್ಲಿ ಕುಡಿದು ಬಿದ್ದಿದ್ದೇನೆ, ನನಗೆ ಬರುವುದಕ್ಕೆ ದಾರಿ ಗೊತ್ತಾಗುತ್ತಿಲ್ಲ’ ಎಂದು ಫೋನ್​ ಮಾಡಿ ನಗೀನಾಗೆ ತಿಳಿಸಿದ್ದಾರೆ. ಗಂಡನನ್ನು ಕರೆದುಕೊಂಡು ಹೋಗಲು ಬಂದಾಗ ರಾಡ್​ನಿಂದ ಹೊಡೆದು ಕೊಂದಿದ್ದಾರೆ./ ಆ ನಂತರ ಶವಕ್ಕೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾರೆ. ಇನ್ನು ಕೊಂದ ಬಳಿಕವೂ ಸಾಕಷ್ಟು ಗೇಮ್​ ಮಾಡಿದ್ದಾರೆ.

ಇದನ್ನೂ ಓದಿ: ಮಳೆ ಹಾನಿಗೆ ಸರ್ಕಾರದಿಂದ ಪರಿಹಾರ ಘೋಷಣೆ..! ಒಂದೇ ದಿನಕ್ಕೆ ಸಿಎಂ ಸುಸ್ತು..

ಮೊಬೈಲ್​ ಸಿಗ್ನಲ್​ ಮೂಲಕ ಖಾಕಿ ಕಣ್ತಪ್ಪಿಸಿದ್ದ ಆರೋಪಿ..!

ಜುಲೈ 1 ರಂದು ರಾಮಸಂದ್ರದ ನಿರ್ಜನ ಪ್ರದೇಶದಲ್ಲಿ ಕೊಲೆ ನಡೆದಿತ್ತು. ಆದೆರೆ ಆ ಕೊಲೆ ಬೆಳಕಿಗೆ ಬಂದಿದ್ದು ಜುಲೈ 3ರಂದು. ಪ್ರಕರಣ ದಾಖಲಿಸಿಕೊಂಡು ಅರೆಬರೆ ಬೆಂದ ಶವದ ಗುರುತು ಪತ್ತೆ ಮಾಡಲು ಪೊಲೀಸರು ಸಾಕಷ್ಟು ಸರ್ಕಸ್​​ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ತಲೆ ಕೂದಲು, ಮೀಸೆ ಎಲ್ಲವನ್ನೂ ಬೊಳಿಸಿಕೊಂಡು ಊರೂರು ಸುತ್ತಲು ಹೊರಟ ರಫೀಕ್​, ಹೆಂಡತಿಯ ಮೊಬೈಲ್​​ ಕೂಡ ತೆಗೆದುಕೊಂಡು ಹೋಗಿದ್ದ. ಪತ್ನಿಯ ಮೊಬೈಲ್​ ಸಿಗ್ನಲ್​​ ಕೊಲೆಯಾದ ಸ್ಥಳದಲ್ಲಿ ಸಿಕ್ಕಿದ್ದರೆ, ಪೊಲೀಸರು ಶವದ ಗುರುತು ಪತ್ತೆ ಮಾಡುತ್ತಾರೆ. ಆದರೆ ಸತ್ತ ಬಳಿಕವೂ ಮೊಬೈಲ್​ ಸಿಗ್ನಲ್​​ ಬೇರೆ ಕಡೆ ಟ್ರೇಸ್​ ಆದಾಗ ಪೊಲೀಸರು ಹಾದಿ ತಪ್ಪುತ್ತಾರೆ ಎನ್ನುವುದು ಆರೋಪಿಗಳ ಲೆಕ್ಕಾಚಾರ. ಆದರೆ ಕರ್ನಾಟಕ ಖಾಕಿ ಪಡೆ ಅಷ್ಟು ಸುಲಭಕ್ಕೆ ಬಿಡುವುದಿಲ್ಲ ಎಂದು ಕೆಂಗೇರಿ ಪೊಲೀಸರು ಸಾಬೀತು ಮಾಡಿದ್ದಾರೆ. ಆನ್​ ಮಾಡಿ ಆಫ್​​ ಮಾಡ್ತಿದ್ದ ಕೊಲೆ ಆರೋಪಿ ಕೈಗೆ ಕೋಳ ಹಾಕುವಲ್ಲಿ ಯಶಸ್ಸು ಸಾಧಿಸಿದ್ದಾರೆ.

ಕೊಲೆಗೆ ಸಹಕರಿಸಿದ ಸ್ನೇಹಿತ

ಮೊಬೈಲ್​ ಮೂಲಕವೇ ಆರೋಪಿಗೆ ಬಿತ್ತು ಕಬ್ಬಿಣ ಕೋಳ..!

ಮೊಬೈಲ್​ ಆನ್​ ಮಾಡಿದಾಗ ನಗೀನಾ ಬದುಕಿದ್ದಾಳೆ ಎಂದು ಪೊಲೀಸರು ಭಾವಿಸುತ್ತಾರೆ ಎಂದು ನಂಬಿಕೊಂಡಿದ್ದ ಆರೋಪಿ ರಫೀಕ್​, ಆಕೆಯ ಮೊಬೈಲ್​ ಆನ್​ ಮಾಡುವುದು ಆಫ್​ ಮಾಡುವುದು ಮಾಡುತ್ತಿದ್ದ. ಆದರೆ ಅಷ್ಟರಲ್ಲಿ ಶವ ನಗೀನಾ ಎಂಬ ಮಹಿಳೆಯದ್ದು ಎನ್ನುವುದನ್ನು ಖಚಿತ ಮಾಡಿಕೊಂಡಿದ್ದ ಪೊಲೀಸರು, ಮೊಬೈಲ್​ ಎಲ್ಲಿ ಆನ್​ ಆಗ್ತಿದೆ..? ಎಲ್ಲಿ ಆಫ್​ ಆಗ್ತಿದೆ ಅನ್ನೋದನ್ನು ಅಧ್ಯಯನ ಮಾಡಿ ಆರೋಪಿಗಳ ಚಲನ ವಲನ ಯಾವ ಕಡೆಗೆ ಇದೆ ಎನ್ನುವುದನ್ನು ಮ್ಯಾಪ್​ ಮಾಡಿಕೊಂಡಿದ್ದರು. ಆ ಬಳಿಕ ವಿಜಯಪುರದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಕೆಂಗೇರಿ ಪೊಲೀಸ್ ಇನ್ಸ್​ಪೆಕ್ಟರ್ ವಂಸತ್ ಹಾಗೂ ತಂಡ ಯಶಸ್ವಿಯಾಗಿದೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಗಾಧೆ ಮಾತಿನಂತೆ, 2ನೇ ಮದುವೆ ಆಗಿದ್ದ ದಂಪತಿ ಜಗಳಲ್ಲಿ ಹೋಗಿ ಮೊಹಮದ್ ರಫೀಕ್​ ಸ್ನೇಹಿತ ಪ್ರಜ್ವಲ್​ ಕೂಡ ಕಂಬಿ ಎಣಿಸುವಂತಾಗಿದೆ ಎನ್ನುವುದು ವಿಶೇಷ.

Related Posts

Don't Miss it !