ಸರ್ಕಾರಿ ಕೆಲಸ ಬೇಡ ಅಂತಾ ಹೆಂಡತಿ ಬಲಗೈ ಕತ್ತರಿಸಿದ ಕಿರಾತಕ..!

ಖಾಸಗಿ ನೌಕರಿಗೆ ಹೆಂಡತಿಯನ್ನು ಕಳಿಸೋದಿಲ್ಲ ಎನ್ನುವ ಕುಟುಂಬಸ್ಥರು ಅಲ್ಲಲ್ಲಿ ಸಿಗುವುದು ಸಹಜ. ಅಲ್ಲಿ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುವುದು ಕಷ್ಟ. ಹೆಂಡತಿ ಮನೆ ಹಾಗೂ ಕಂಪನಿಗಳಲ್ಲಿ ದುಡಿಯುವುದು ಸಂಕಷ್ಟಗಳನ್ನು ತಂದೊಡ್ಡುತ್ತದೆ. ಮಕ್ಕಳ ಹಾರೈಕೆ ಸರಿಯಾದ ರೀತಿಯಲ್ಲಿ ಆಗುವುದಿಲ್ಲ ಎನ್ನುವ ಕಾರಣಕ್ಕೆ ಹೆಂಡತಿಯನ್ನು ಕೆಲಸಕ್ಕೆ ಹೋಗಬೇಡ ಎನ್ನುವುದು ರೂಢಿ. ಇತ್ತೀಚಿಗೆ ಹೆಂಡತಿಯನ್ನು ಕೆಲಸಕ್ಕೆ ಕಳಿಸುವುದಿಲ್ಲ ಎನ್ನುವ ಕಾರಣಕ್ಕೆ ಮದುವೆ ಸಮಯದಲ್ಲೇ ಕೆಲಸಕ್ಕೆ ಹೋಗಲು ಬಿಡಬೇಕು ಎನ್ನುವ ನಿಯಮ ಹಾಕಿಕೊಂಡು ಮದುವೆ ಆಗುವ ಪ್ರಕರಣಗಳೂ ಇದೆ. ಆದರೆ ಸರ್ಕಾರಿ ಕೆಲಸ ಸಿಕ್ಕರೆ ಯಾರೂ ಬೇಡ ಎನ್ನುವುದಿಲ್ಲ. ಸರ್ಕಾರಿ ಕೆಲಸ ಅಷ್ಟೊಂದು ಒತ್ತಡ ಇರುವುದಿಲ್ಲ. ಎರಡೂ ಕಡೆ ಕೆಲಸ ಮಾಡಿದರೂ ಶ್ರಮ ಎನಿಸುವುದಿಲ್ಲ ಎನ್ನುವ ಮಾತನ್ನು ನಾವು ನೀವು ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ಗಂಡ ಸರ್ಕಾರಿ ಕೆಲಸಕ್ಕೆ ಹೊರಟ ಪತ್ನಿಯ ಕೈಯ್ಯನ್ನೇ ಕತ್ತರಿಸಿದ್ದಾರೆ.

ಬಲಗೈ ಇದ್ದರೆ ತಾನೇ ನೀನು ಕೆಲಸಕ್ಕೆ ಹೋಗುವುದು..?

ಪಶ್ಚಿಮ ಬಂಗಾಳದ ಪೂರ್ವ ಬರ್ದ್​ವಾನ್​ಜಿಲ್ಲೆಯ ಕೆಟುಗ್ರಾಮದಲ್ಲಿ ಈ ಘಟನೆ ನಡೆದಿದೆ. ಖಾಸಗಿ ಸಂಸ್ಥೆಯಲ್ಲಿ ನರ್ಸ್​ ಆಗಿ ಕೆಲಸ ಮಾಡುತ್ತಿದ್ದ ರೇಣು ಖಟನ್​ ಸರ್ಕಾರಿ ನರ್ಸ್​ ವೃತ್ತಿಗೆ ಅರ್ಜಿ ಹಾಕಿದ್ದರು. ಇತ್ತೀಚಿಗೆ ಸರ್ಕಾರದಿಂದ ಕೆಲಸಕ್ಕೆ ಬರುವಂತೆ ಆಫರ್​ ಲೆಟರ್​ ಬಂದಿತ್ತು. ಆದರೆ ಸರ್ಕಾರಿ ಕೆಲಸಕ್ಕೆ ಹೆಂಡತಿಯನ್ನು ಕಳುಹಿಸುವುದಕ್ಕೆ ಇಷ್ಟವಿಲ್ಲದ ಗಂಡ ಸರ್ಕಾರಿ ಕೆಲಸಕ್ಕೆ ಹೋಗದಂತೆ ತಡೆ ಹಿಡಿದಿದ್ದ. ಖಾಸಗಿ ಕ್ಲಿನಿಕ್​ನಲ್ಲೇ ಕೆಲಸ ಮಾಡುವಂತೆ ಒತ್ತಡ ಹಾಕಿದ್ದ. ಆದರೆ ಗಂಡನ ಮಾತನ್ನು ಧಿಕ್ಕರಿಸಿದ್ದ ರೇಣು ಖಟನ್​, ಸರ್ಕಾರಿ ಕೆಲಸಕ್ಕೆ ಹೋಗುವುದಾಗಿ ಪಟ್ಟು ಹಿಡಿದಿದ್ದಳು. ಇದರಿಂದ ಗಂಡನ ಮನೆಯಲ್ಲಿ ವಿರೋಧ ಕಟ್ಟಿಕೊಂಡಿದ್ದಳು. ಕೊನೆಗೆ ಗಂಡನ ಮನೆ ತೊರೆದು ತವರು ಸೇರಿದ್ದ ರೇಣು ಖಟನ್​ಳನ್ನು, ಶನಿವಾರ ಮನವೊಲಿಸಿ ಮನೆಗೆ ವಾಪಸ್​ ಕರೆದುಕೊಂಡು ಬಂದು ಆಕೆಯ ಕೈ ಕತ್ತರಿಸಿದ್ದಾನೆ. ಕಾರಣ ಮಾತ್ರ ವಿಚಿತ್ರವಾಗಿದೆ.

ಇದನ್ನೂ ಓದಿ: ಮಗಳನ್ನು ಕೊಂದು‌ ಬಿಸಾಕಿದ್ದು ಯಾಕೆ..? ಹೆತ್ತವರು..?

ಹೆಂಡತಿ ಬಿಟ್ಟು ಹೋಗ್ತಾಳೆ ಎನ್ನುವ ಭೀತಿಯಲ್ಲೇ ಕೃತ್ಯ..!

ಸುಂದರವಾಗಿದ್ದ ಹೆಂಡತಿ ಇದ್ದರೆ ಗಂಡನಿಗೆ ಪೀಕಲಾಟ ಎನ್ನುವ ಮಾತೊಂದಿದೆ. ಅದೇ ರೀತಿಯ ಗಂಡಸರ ಪಂಗಡಕ್ಕೆ ಸೇರಿದ್ದ ಗಂಡ ಶೇರ್​ ಮಹಮದ್​, ಹೆಂಡತಿ ಸರ್ಕಾರಿ ಕೆಲಸಕ್ಕೆ ಸೇರಿದರೆ ನನ್ನನ್ನು ಎಲ್ಲಿ ತೊರೆದು ಹೋಗುತ್ತಾಳೋ ಎನ್ನುವ ಭೀತಿಯಲ್ಲಿದ್ದ. ಶೇರ್​ ಮಹಮದ್​ಗೆ ಯಾವುದೇ ಉದ್ಯೋಗ ಇರಲಿಲ್ಲ. ಮನೆಯ ಬಳಿ ಸಣ್ಣದೊಂದು ಕಿರಾಣಿ ಅಂಗಡಿ ನಡೆಸಿಕೊಂಡು ಕಾಲ ದೂಡುತ್ತಿದ್ದ. ಇದೀಗ ಹೆಂಡತಿ ಸರ್ಕಾರಿ ಕೆಲಸ ಎನ್ನುವ ಕಾರಣಕ್ಕೆ ನನ್ನನ್ನು ತೊರೆದು ಬೇರೆ ಕಡೆಗೆ ಹೋದರೆ ಎನ್ನುವ ಭೀತಿಯಲ್ಲೇ ಕೃತ್ಯ ಎಸಗಿದ್ದಾನೆ ಎನ್ನುವ ಮಾಹಿತಿ ಹೊರಬಿದ್ದಿದೆ. ಈತನ ದುಷ್ಕೃತ್ಯಕ್ಕೆ ಆತನ ಇಬ್ಬರು ಸ್ನೇಹಿತರು ಸಾಥ್​ ನೀಡಿದ್ದು, ಘಟನೆ ನಡೆದ ಬಳಿಕ ಇಡೀ ಆರೋಪಿಗಳು ಕಣ್ಮರೆ ಆಗಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಡುತ್ತಿದ್ದಾರೆ.

ಇದನ್ನೂ ಓದಿ: ದೇವೇಗೌಡರ ಮರಿ ಮಗನಿಗೆ‘ಆವ್ಯಾನ್​ ದೇವ್​’ ಎಂದು ಹೆಸರು..!! ಏನಿದರೆ ವಿಶೇಷ

ಕೈ ಜೋಡಿಸಲು ವಿಫಲವಾದ ವೈದ್ಯಕೀಯ ಲೋಕ..!

ಸೊಸೆ ಮನೆಯಿಂದ ದೂರ ಇದ್ದು ಸರ್ಕಾರಿ ಕೆಲಸ ಮಾಡುವುದು ಒಪ್ಪಿಗೆ ಇತ್ತೋ ಇಲ್ಲವೋ. ಆದರೆ ಸೊಸೆಯ ಕೈ ಕಡಿದು ಹಾಕಿದ ಬಳಿಕ ನಾಪತ್ತೆ ಆಗಿದ್ದು, ಪೊಲೀಸರು ಅತ್ತೆ ಮಾವನನ್ನು ಅರೆಸ್ಟ್​ ಮಾಡಿದ್ದಾರೆ. ಇನ್ನು ರೇಣು ಖಟನ್​ ಕೈ ತುಂಡರಿಸಿದ ಬಳಿಕ ಸ್ಥಳೀಯರು ಹಾಗೂ ಹೆತ್ತವರು ನಾಲ್ಕೈದು ಆಸ್ಪತ್ರೆಗೆ ಸುತ್ತಾಡಿ ಕೊನೆಗೆ ಕೊನೆಗೆ 115 ಕಿಲೋ ಮೀಟರ್​ ದೂರದ ದುರ್ಗಾಪುರದ ಆಸ್ಪತ್ರೆಗೆ ಸೇರುವಷ್ಟರಲ್ಲಿ 6 ಗಂಟೆಗಳ ಅವಧಿ ಮೀರಿ ಹೋಗಿತ್ತು. 6 ಗಂಟೆಯ ಒಳಗೆ ತುಂಡಾದ ದೇವನ್ನು ಮತ್ತೆ ಮರು ಜೋಡಣೆ ಮಾಡಲು ಅವಕಾಶವಿದೆ. ಆದರೆ ದುರಾದೃಷ್ಟವಶಾತ್​ ರೇಣು ಕಟನ್​ ಮುಂಗೈ ಮತ್ತೆ ಜೋಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಈಗಲೂ ಸರ್ಕಾರಿ ಕೆಲಸಕ್ಕೆ ಸೇರಿ ರೋಗಿಗಳನ್ನು ನೋಡಿಕೊಳ್ಳುವುದಾಗಿ ಹೇಳುತ್ತಾರೆ. ಆದರೆ ಕೈ ಇಲ್ಲದೆ ಇದ್ದಾಗ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೆ ಎನ್ನುವುದನ್ನು ಕಾದು ನೋಡ್ಬೇಕು.

Related Posts

Don't Miss it !