ಗಂಡನ ಎಡವಟ್ಟಿಗೆ ಹೆಂಡತಿ ಹೊಣೆ ಮಾಡಿದ ಪೊಲೀಸರು..!? ಈ ಸಾವಿಗೆ ಯಾರು ಹೊಣೆ..?

ನೆಲಮಂಗಲದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಗಂಡ ಮಾಡಿದ್ದ 1 ಲಕ್ಷ ರೂಪಾಯಿ ವ್ಯವಹಾರದಲ್ಲಿ ಆದ ಅವಮಾನಕ್ಕೆ ಹೆಂಡತಿ ತನ್ನ ಪ್ರಾಣವನ್ನೇ ಅರ್ಪಿಸಿರುವ ಘಟನೆ ನಡೆದಿದೆ. ಪೊಲೀಸರು ಮಾಡಿದ ಸಣ್ಣ ಎಡವಟ್ಟು ಮಹಿಳೆಯ ಪ್ರಾಣವನ್ನೇ ಕಸಿದುಕೊಂಡಿದೆ. 35 ವರ್ಷದ ಅಖಿಲಾ ಪೊಲೀಸರು ಮಾಡಿದ ಅವಮಾನ ತಾಳಲಾರದೆ, ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ, ನೆಲಮಂಗಲದ ಮಾರುತಿ ನಗರದಲ್ಲಿ ನಡೆದಿದೆ. ಇದೀಗ ನೆಲಮಂಗಲ ಪೊಲೀಸರ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರು ಹಾಗೂ ಈ ಸಾವಿಗೆ ಕಾರಣವಾದವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹ ಮಾಡಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ಮಾಡಿಕೊಂಡ ಸಣ್ಣ ವ್ಯವಹಾರ ಇಂದು ಈ ಮಹಿಳೆಯ ಸಾವಿಗೆ ಕಾರಣವಾಗಿದೆ.

ASI NaraSimhaiah

1 ಲಕ್ಷ ಹಣ ಪಡೆದು ಲೀಸ್​ಗೆ ನೀಡಿದ್ದ ವ್ಯವಹಾರದಲ್ಲಿ ಕಿರುಕುಳ..!

ಮಾರುತಿ ನಗರ ನಿವಾಸಿಗಳಾದ ಅಖಿಲಾ ಹಾಗೂ ಗಂಡ ಮಧುಕುಮಾರ್​ ಇತ್ತೀಚಿಗೆ ಪೇಪರ್​ ಪ್ಲೇಟ್​​ ಬ್ಯುಸಿನೆಸ್​ ಆರಂಭ ಮಾಡಿದ್ದರು. ಆದರೆ ಕೊರೊನಾ ಸೇರಿದಂತೆ ಹಲವಾರು ಕಾರಣಗಳಿಂದ ವ್ಯವಹಾರ ಲಾಭದತ್ತ ಹೋಗಲಿಲ್ಲ. ನಷ್ಟ ಆಗುವುದಕ್ಕೆ ಶುರುವಾದ ಮೇಲೆ ಸ್ನೇಹಿತನ ಬಳಿ 1 ಲಕ್ಷ ರೂಪಾಯಿ ಹಣ ಪಡೆದು ಲೀಸ್​ಗೆ ಕೊಟ್ಟಿದ್ದರು. ಆ ಲೀಸ್​ ಹಣವನ್ನು ಮೊದಲು ಬಂಡವಾಳ ಹೂಡಲು ಮಾಡಿದ್ದ ಸಾಲ ತೀರಿಸಲು ಬಳಸಿದ್ದರು. ಆದರೆ ಸ್ನೇಹಿತ ಚಂದನ್​ ಅಲಿಯಾಸ್​ ಚನ್ನಕೇಶವ್​​ಗೂ ಕೂಡ ಪೇಪರ್​ ಪ್ಲೇಟ್​ ಬ್ಯುಸಿನೆಸ್​ ಕೈಗೂಡದೆ ಇದ್ದಾಗ, ನನ್ನ ಹಣವನ್ನು ವಾಪಸ್​ ಕೊಡು, ನಿನ್ನ ಪೇಪರ್​ ಪ್ಲೇಟ್​​ ವ್ಯವಹಾರ ಬೇಡ ಎಂದು ಬೆನ್ನು ಬಿದ್ದಿದ್ದನು. ಆದರೆ ಹಣ ವಾಪಸ್​ ಕೊಡುವುದಕ್ಕೆ ಹಣವಿಲ್ಲದಿದ್ದಾಗ ನಾನಾ ಕಾರಣ ಹೇಳಿ ಮುಂದೂಡುತ್ತಿದ್ದರು. ಆಗ ಚನ್ನಕೇಶವ ಪೊಲೀಸ್​ ಠಾಣೆ ಮೆಟ್ಟಿಲು ಹತ್ತಿದ್ದರು. ಈ ವೇಳೆ ಖಾಕಿ ಮಾಡಿದ ಎಡವಟ್ಟು ಸಾವಿಗೆ ಕಾರಣವಾಗಿದೆ.

ಇದನ್ನೂ ಓದಿ: 3ನೇ ವಿಶ್ವಯುದ್ಧ ಘೋಷಣೆಗೆ ಕ್ಷಣಗಣನೆ ಆರಂಭ..! ಇಕ್ಕಟ್ಟಿಗೆ ಸಿಲುಕಿದ ಭಾರತ..!

ಗಂಡ ಮಾಡಿದ ವ್ಯವಹಾರ, ಪತ್ನಿ ಬಂಧಿಸಿ ಖಾಕಿ ಅವಮಾನ..!

ಚಂದನ್​ ಅಲಿಯಾಸ್​ ಚನ್ನಕೇಶವ್ ಬಳಿ 1 ಲಕ್ಷ ರೂಪಾಯಿ ಪಡೆದು ಪೇಪರ್​ ಪ್ಲೇಟ್​ ವ್ಯವಹಾರವನ್ನು ಬಿಟ್ಟುಕೊಟ್ಟಿದ್ದು, ಅಖಿಲಾ ಪತಿ ಮಧುಕುಮಾರ್. ಆದರೆ ಮಧುಕುಮಾರ್​ ಹಣ ಕೊಡಲಿಲ್ಲ ಎನ್ನುವ ಕಾರಣಕ್ಕೆ ಚಂದನ್​​ ಅಲಿಯಾಸ್​ ಚನ್ನಕೇಶವ್​​, ಪೊಲೀಸ್​ ಠಾಣೆ ಮೆಟ್ಟಿಲು ಹತ್ತಿದ್ದರು. ಇದು ಕೂಡ ಕಾನೂನು ಪ್ರಕಾರ ಸರಿಯಾಗಿದೆ. ಆದರೆ ಪೊಲೀಸರು ಎಫ್​ಐಆರ್​ ದಾಖಲಿಸಿದ್ದರೋ ಅಥವಾ ಅನಧಿಕೃತವಾಗಿ ಬೆದರಿಸಿ ಹಣ ಕೊಡಿಸುವುದಕ್ಕೆ ಮುಂದಾಗಿದ್ದರೋ ಎನ್ನುವ ಬಗ್ಗೆ ತನಿಖೆ ನಡೆಯಬೇಕಿದೆ. ಮಧುಕುಮಾರ್​ ವ್ಯವಹಾರ ಮಾಡಿ, ಲೀಸ್​ ಹಣ ವಾಪಸ್​ ಕೊಡ್ತಿಲ್ಲ ಎನ್ನುವ ದೂರು ಬಂದಿದ್ದರೆ..!? ಮಧುಕುಮಾರ್​ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಆದರೆ ನೆಲಮಂಗಲ ಪೊಲೀಸ್​ ಠಾಣೆ ಎ‌ಎಸ್​ಐ ನರಸಿಂಹಯ್ಯ, ಪೊಲೀಸ್​ ಜೀಪ್​ನಲ್ಲಿ ಹೋಗಿ ಮನೆಯಲ್ಲಿದ್ದ ಅಖಿಲಾರನ್ನು ಜೀಪ್​ ಹತ್ತಿಸಿಕೊಂಡು ಬಂದೇ ಬಿಟ್ಟಿದ್ದರು. ಅಕ್ಕಪಕ್ಕದ ಮನೆಯವರ ಎದುರು ಪೊಲೀಸರು ನಡೆದುಕೊಂಡ ರೀತಿ ಅಖಿಲಾ ಸಾವನ್ನು ಅಪ್ಪಿಕೊಳ್ಳುವ ನಿರ್ಧಾರ ಮಾಡುವಂತೆ ಮಾಡಿತ್ತು.

ಇದನ್ನೂ ಓದಿ: ರಷ್ಯಾ – ಉಕ್ರೇನ್​ ಯುದ್ಧ ನಿಲ್ಲೋದು ಯಾವಾಗ..? ಜನರ ರಕ್ಷಣೆಗೆ ಮೆಟ್ರೋ ಸುರಂಗ..!!

ಪೊಲೀಸರದ್ದೇ ತಪ್ಪು, ಈಗ್ಯಾಕೆ ಅರೆಸ್ಟ್ ಮಾಡುವ ನಾಟಕ..!?

ಅಖಿಲಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್​ನೋಟ್​ ಬರೆದಿಟ್ಟಿದ್ದು, ಅದರಲ್ಲಿ ಚಂದನ್​ ನಮ್ಮನ್ನು ಫ್ರಾಡ್​ ಫ್ರಾಡ್​ ಎಂದು ಯಾವಾಗಲು ಪದೇ ಪದೇ ಹೇಳಿ ಹಿಂಸೆ ಕೊಡುತ್ತಿದ್ದ, ಅದಕ್ಕೇ ನಾನು ಸಾಯುತ್ತಿದ್ದೇನೆ ಎಂದು ಬರೆದಿರುವ ಪತ್ರವೊಂದು ಸಿಕ್ಕಿದೆ. ಈ ಪತ್ರದಲ್ಲಿ ಪ್ರತಿ ಪದಗಳೂ ಕೂಡ ತಪ್ಪಿನಿಂದಲೇ ಕೂಡಿದ್ದು, ಇದನ್ನು ಅಖಿಲಾ ಸಾಯುವ ಮುನ್ನ ಬರೆದಿದ್ದು ನಿಜವೋ ಅಥವಾ ಬೇರೆಯವರು ಬರೆದು ಕಾನುನು ಕಣ್ಣಿಗೆ ಮಣ್ಣೆರಚಲು ಮಾಡಿರುವ ತಂತ್ರವೋ ಎನ್ನುವ ಬಗ್ಗೆ ತನಿಖೆ ನಡೆಯಬೇಕಿದೆ. ಇನ್ನೂ ಚಂದನ್​ ಅಲಿಯಾಸ್​ ಚನ್ನಕೇಶವ ಆ ರೀತಿ ನಿಂದನೆ ಮಾಡುವ ಉದ್ದೇಶ ಇದ್ದಿದ್ದರೆ, ಪೊಲೀಸ್​ ಠಾಣೆ ಮೆಟ್ಟಿಲು ಹತ್ತುವ ಪ್ರಮೇಯವೇ ಇರಲಿಲ್ಲ. ಇನ್ನೂ ಪೊಲೀಸರು ಗಂಡನ ವಿರುದ್ಧ ದೂರು ಬಂದರೆ, ಹೆಂಡತಿಯನ್ನು ಜೀಪ್​ನಲ್ಲಿ ಕೂರಿಸಿಕೊಂಡು ಹೋಗುವ ಅವಶ್ಯಕತೆಯೂ ಇರಲಿಲ್ಲ. ಚಂದನ್​​ ಹಾಗೂ ಆತನ ಪತ್ನಿ ಶಶಿ ಅವರನ್ನು ಪೊಲೀಸರು ಬಂಧಿಸುವ ನಾಟಕ ಮಾಡಿದ್ದಾರೆ. ಪೊಲೀಸ್​ ಠಾಣೆಗೆ ದೂರು ಕೊಟ್ಟಿರುವ ಚಂದನ್ ಕೊಟ್ಟ ಕಾಸನ್ನು ಕಾನೂನು ಮೂಲಕ ಕೇಳಿರುವುದರಲ್ಲಿ ತಪ್ಪೇನು ಇಲ್ಲ. ಆದರೆ ಗಂಡನ ಮೇಲಿನ ದೂರಿಗೆ ಹೆಂತಿಯನ್ನು ಕರೆತಂದು ಮಾನಸಿಕವಾಗಿ ಹಿಂಸೆ ಕೊಟ್ಟಿದ್ದು ಪೊಲೀಸರು ಎನ್ನುವುದು ಕುಟುಂಬಸ್ಥರ ಆರೋಪ. ಈ ಸಾವಿಗೆ ನ್ಯಾಯ ಸಿಗುತ್ತಾ..? ಗೊತ್ತಿಲ್ಲ.

Related Posts

Don't Miss it !