ಪದವಿಧರರೇ ಇಲ್ನೋಡಿ.. ಬ್ಯಾಂಕ್ ಉದ್ಯೋಗಕ್ಕೆ ಅರ್ಜಿ ಆಹ್ವಾನ..!

ಬ್ಯಾಂಕ್​ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ IBPS (Institute of Banking personnel selection) ಸಂಸ್ಥೆ ಬ್ಯಾಂಕ್​ನ ಕ್ಲರ್ಕ್​​ ಉದ್ಯೋಗ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ಜುಲೈ 12 ರಿಂದ ಅರ್ಜಿ ಸಲ್ಲಿಸಲು ಅವಕಾಶವಿದ್ದು ಆಗಸ್ಟ್​ 1ರ ತನಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಮುಖ್ಯಪರೀಕ್ಷೆಗೂ ಮುನ್ನ ನಡೆಯುವ ಪೂರ್ವಭಾವಿ ಪರೀಕ್ಷೆ ಆಗಸ್ಟ್​ 28,29 ಹಾಗೂ ಸೆಪ್ಟೆಂಬರ್​ 4ರಂದು ನಡೆಯಲಿದೆ. ಮುಖ್ಯ ಪರೀಕ್ಷೆ ಅಕ್ಟೋಬರ್​ 31ರಂದು ನಡಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಭ್ಯರ್ಥಿಯ ಅರ್ಹತೆ ಮಾನದಂಡ..!?

ಅಭ್ಯರ್ಥಿಗೆ ಕನಿಷ್ಠ 20 ವರ್ಷ ಗರಿಷ್ಠ 28 ವರ್ಷದ ಆಗಿರಬೇಕು. ಅಭ್ಯರ್ಥಿಯು 02.07.1993ಕ್ಕೂ ಮುನ್ನ ಜನಿಸಿರಬಾರದು ಹಾಗೂ 01.07.2001 ನಂತರವೂ ಜನಿಸಿರಬಾರದು. ಇವುಗಳ ನಡುವೆ ಜನಿಸಿದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಎಸ್​ಸಿ, ಎಸ್​ಟಿ, ಒಬಿಸಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ. ಇನ್ನು ಯಾವುದಾದರೂ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಕಂಪ್ಯೂಟರ್​ನಲ್ಲಿ ಕೆಲಸ ಮಾಡುವುದು ಕಡ್ಡಾಯವಾಗಿ ಗೊತ್ತಿರಬೇಕು. ಕಂಪ್ಯೂಟರ್​ ಕಲಿಕೆ ಬಗ್ಗೆ ಸರ್ಟಿಫಿಕೇಟ್​ ಹೊಂದಿರಬೇಕು.

ಎಲ್ಲೆಲ್ಲಿ ಕೆಲಸ ಸಿಗಲಿದೆ..?

ಬ್ಯಾಂಕ್​ ಆಫ್​​ ಬರೋಡಾ, ಬ್ಯಾಂಕ್​ ಆಫ್​ ಇಂಡಿಯಾ, ಬ್ಯಾಂಕ್​ ಆಫ್​ ಮಹಾರಾಷ್ಟ್ರ, ಕೆನರಾ ಬ್ಯಾಂಕ್​, ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾ, ಇಂಡಿಯನ್​ ಬ್ಯಾಂಕ್​, ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​, ಪಂಜಾಬ್​ ನ್ಯಾಷನಲ್​ ಬ್ಯಾಂಕ್​, ಪಂಜಾಬ್​ & ಸಿಂಧ್ ಬ್ಯಾಂಕ್​, ಯುಕೋ ಬ್ಯಾಂಕ್​, ಯೂನಿಯನ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಕ್ಲಕ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇಷ್ಟೂ ಬ್ಯಾಂಕ್​ಗಳು ಕರ್ನಾಟಕದಲ್ಲೂ ಕಾರ್ಯ ನಿರ್ವಹಿಸುತ್ತಿದ್ದು ಕನ್ನಡಿಗ ಸಿಬ್ಬಂದಿಗಳ ಅವಶ್ಯಕತೆ ಇದೆ.

Related Posts

Don't Miss it !