ಚಾಮರಾಜನಗರದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ..! ಸರ್ಕಾರದ ಮೇಲಿದೆ ಯಶಸ್ಸಿನ ಭಾರ..

ಬೆಂಗಳಳೂರಿನ ಚಾಮರಾಜ ಪೇಟೆ ಈದ್ಗಾ ಮೈದಾನ ವಕ್ಫ್​ ಮಂಡಳಿಗೆ ಸೇರಿದ್ದು ಎನ್ನುವ ಕಾರಣಕ್ಕ4ಎ ಇಲ್ಲೀವರೆಗೂ ಯಾವುದೇ ಕಾರ್ಯಕ್ರಮಗಳನ್ನುನಡೆಸುತ್ತಿರಲಿಲ್ಲ. ಕೇವಲ ಮುಸಲ್ಮಾನರ ಪ್ರಾರ್ಥನೆಗೆ ಮೀಸಲಾಗಿ ಬಿಡಲಾಗಿತ್ತು. ಆದರೆ ಇತ್ತೀಚಿಗೆ ಕಂದಾಯ ಇಲಾಖೆಗೆ ಸೇರಿದ ಆಸ್ತಿ ಎಂದು ಬಿಬಿಎಂಪಿ ಘೋಷಣೆ ಮಾಡಿತ್ತು. ಆದರೆ ಅದನ್ನು ಪ್ರಶ್ನಿಸಿ ವಕ್ಫ್​ ಬೋರ್ಡ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ಏಕಸದಸ್ಯ ಪೀಠದಲ್ಲಿ ನಡೆದು, ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ಕೊಡುವಂತಿಲ್ಲ. ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚನೆ ನೀಡಿತ್ತು. ಒಂದು ದಿನ ಕಳೆಯುವ ಮುನ್ನ ವಿಭಾಗೀಯ ಪೀಠ ವಿಚಾರಣೆ ನಡೆಸಿ, ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಲು ಸ್ವತಂತ್ರವಾಗಿದೆ ಎನ್ನುವ ಮೂಲಕ ಹೈಕೋರ್ಟ್​ ಅಂಗಳದಿಂದ ಸರ್ಕಾರದ ಕಡೆಗೆ ಎಸೆದು ಬಿಟ್ಟಿದೆ. ಇಂದು ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿ ಅಂತಿಮ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ. ಆದರೆ ಹಿಂದೂಗಳ ಭಾವನೆ ಅನುಮತಿ ಸಿಕ್ಕಂತೆ ಎನ್ನುವಂತಿದೆ.

ಬಿಜೆಪಿ ಹಿಂದೂಗಳ ಪರವಾಗಿಯೇ ನಿರ್ಧಾರ ಕೊಡುತ್ತಾ..?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿ ಪಕ್ಷದಿಂದ ಮುಖ್ಯಮಂತ್ರಿ ಆಗಿದ್ದು, ಬಿಜೆಪಿ ಹಿಂದೂಗಳ ಪರವಾಗಿರುವ ಪಕ್ಷ ಎಂದು ಹೇಳಿಕೊಳ್ಳುವುದರಿಂದ ಗಣೇಶೋತ್ಸವಕ್ಕೆ ಅನುಮತಿ ಸಿಗುತ್ತೆ ಎಂದು ಸಾಕಷ್ಟು ಜನರು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಬಿಜೆಪಿ ನಾಯಕರೂ ಕೂಡ ಸಿಎಂ ಅನುಮತಿ ಕೊಡುತ್ತಾರೆ ಎಂದೇ ಹೇಳಿದ್ದಾರೆ. ಆದರೆ ಸರ್ಕಾರದ ಮೇಲೆ ಹಿಂದೂಗಳನ್ನು ಓಲೈಸುವ ಜೊತೆಗೆ ರಕ್ಷಣೆ ನೀಡಬೇಕಾದ ದೊಡ್ಡ ಜಬಾಬ್ದಾರಿ ಸೃಷ್ಟಿಯಾಗಿದೆ. ಹೈಕೋರ್ಟ್​ ವಿಚಾರಣೆ ಬಳಿಕ ಯಾವ ನಿರ್ಧಾರ ಮಾಡುತ್ತೆ ಅನ್ನೋದು ಬೇರೆ ವಿಚಾರ. ಆದರೆ ಒಂದು ವೇಳೆ ಸರ್ಕಾರ ಅನುಮತಿ ಕೊಟ್ಟ ಬಳಿಕ ಗಣೇಶೋತ್ಸವದಲ್ಲಿ ಏನಾದರೂ ದುರ್ಘಟನೆಗಳು ನಡೆದಿದ್ದೇ ಆದಲ್ಲಿ ಅದರ ಜವಾಬ್ದಾರಿಯನ್ನು ಸರ್ಕಾರದ ತಲೆಗೆ ಕಟ್ಟುವುದು ಶತಸಿದ್ದ. ಅದೇ ಕಾರಣದಿಂದ ಸಿಎಂ ಎಲ್ಲಾ ಆಯಾಮಗಳಿಂದ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ, ಅಂತಿಮ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಅನುಮತಿ ಸಿಕ್ಕರೆ ಹುಬ್ಬಳ್ಳಿಯಲ್ಲೂ ವಿವಾದ..!

ಈದ್ಗಾ ಮೈದಾನ ಅಂತಾನೇ ಕರೆಸಿಕೊಳ್ಳುವ ಆಟದ ಮೈದಾನಗಳನ್ನು ಮಕ್ಕಳ ಆಟ ಹಾಗು ರಾಷ್ಟ್ರೀಯ ಹಬ್ಬಗಳಿಗೆ ಬಳಸುವುದರಲ್ಲಿ ತಪ್ಪೇನು ಇಲ್ಲ. ಆದರೆ ಜಮೀನು ಮಾಲೀಕತ್ವದ ವಿಚಾರವೇ ಇನ್ನೂ ಅತಂತ್ರವಾಗಿರುವಾಗ ಗಣೇಶೋತ್ಸವ ಮಾಡುವುದು ಬೇಡ ಎನ್ನುವ ಸಲಹೆಗಳೂ ಸರ್ಕಾರವನ್ನು ಮುಟ್ಟಿವೆ ಎನ್ನಲಾಗ್ತಿದೆ. ಸುಖಾಸುಮ್ಮನೆ ಸಮಸ್ಯೆಯನಹ್ನು ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ ಎನ್ನುವ ಸಲಹಗೆಗಳು ಸರ್ಕಾರದ ಅಂಗಳದಲ್ಲಿ ಸುಳಿದಾಡಿದ್ದು, ಸರ್ಕಾರ ತೆಗೆದುಕೊಳ್ಳುವ ವಿಚಾರ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಯೋಜನೆ ಮಾಡುವ ನಿರ್ಧಾರದ ಮೇಲೂ ಪರಿಣಾಮ ಬೀರಲಿದೆ. ಈಗಾಗಲೇ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ‘ನಾವು ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಯೋಜನೆ ಮಾಡಿಯೇ ತೀರುತ್ತೇವೆ, ನೀವು ನಮ್ಮನ್ನು ಅರೆಸ್ಟ್​ ಮಾಡುವುದಿದ್ದರೆ ಮಾಡಿ’ ಎನ್ನುವ ಮಾತನ್ನು ಹೇಳಿದ್ದಾರೆ. ಈಗ ಇಲ್ಲಿ ಅನುಮತಿ ಕೊಟ್ಟು ಅಲ್ಲಿ ಅನುಮತಿ ನಿರಾಕರಿಸಲಾಗದು ಎನ್ನುವ ಚರ್ಚೆಯೂ ನಡೆದಿದೆ.

ಇದನ್ನು ಓದಿ: ಗಣೇಶೋತ್ಸವ ಕನಸಿಗೆ ಬ್ರೇಕ್​.. ಹೈಕೋರ್ಟ್​ ಆದೇಶಕ್ಕೆ ಕಾರಣ ಏನು..?

ಧರ್ಮವನ್ನು ಪಾಲಿಸಬೇಕು, ಅದರಿಂದ ಇತರರಿಗೆ ಹಿಂಸೆ ಆಗಬಾರದು..!

ಈ ಮಾತನ್ನು ಯಾರೋ ಹೇಳಿರುವುದಲ್ಲ. ಇದನ್ನು ಧಾರ್ಮಿಕ ಸ್ವಾತಂತ್ರ್ಯ ನೀಡಿರುವ ಸಂವಿಧಾನದಲ್ಲೇ ಸ್ಪಷ್ಟವಾಗಿ ಹೇಳಲಾಗಿದೆ. ಧಾರ್ಮಿಕ ಸ್ವಾತಂತ್ರ್ಯ ಎಂದರೆ ನಮ್ಮ ಧಾರ್ಮಿಕ ಭಾವನೆಗಳು ಬೇರೊಬ್ಬರನ್ನು ನೋಯಿಸಬಾರದು ಎಂದು. ಇಂದು ಗಣೇಶೋತ್ಸವ ಮಾಡುತ್ತೇವೆ ಎಂದು ಈದ್ಗಾ ಮೈದಾನವನ್ನೇ ಕೇಳುತ್ತಿರುವುದು ಕೇವಲ ರಾಜಕೀಯ ಎನ್ನುವ ಮಾತುಗಳು ಸರ್ವೇ ಸಾಮಾನ್ಯವಾಗಿವೆ. ಗಣೇಶನನ್ನು ಪೂಜಿಸುವ ಭಕ್ತಿ ಇದ್ದವರು ಆಡಂಬರದ ಗಣೇಶ ಪೂಜೆ ಮಾಡಲು ಹೋಗುವುದೇ ಇಲ್ಲ. ಏನಿದ್ದರು ಮನೆಯಲ್ಲಿ ಭಕ್ತಿ ಭಾವದಿಂದ ಪೂಜೆ ಮಾಡುತ್ತಾರೆ. ಆದರೆ ಗಣೇಶೋತ್ಸವದಲ್ಲಿ ಚಂದಾ ವಸೂಲಿ ಮಾಡಿ ಒಂದಿಷ್ಟು ಹಣ ಮಾಡಿಕೊಳ್ಳಬೇಕು, ಗಣೇಶೋತ್ಸವ ಹೆಸರಲ್ಲಿ ಒಂದಷ್ಟು ಮೋಜು ಮಸ್ತಿ ಮಾಡಬೇಕು, ಅಥವಾ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡುವ ಮೂಲಕ ಒಂದಷ್ಟು ಹೆಸರು ಮಾಡಬೇಕು ಎನ್ನುವ ಉದ್ದೇಶ ಮನೆ ಮಾಡಿರುತ್ತದೆ. ಹೀಗಾಗಿ ಸರ್ಕಾರ ಅಳೆದೂ ತೂಗಿ ನಿರ್ಧಾರ ಮಾಡಲು ಮುಂದಾಗಿದ್ದು, ಅನುಮತಿ ಕೊಟ್ಟರೆ ಎಷ್ಟು ದಿನ ಕೊಡಬೇಕು..? ಹೇಗೆ ಭದ್ರತೆ ಕೈಗೊಳ್ಳಬೇಕು, ಸಾಂಕೇತಿಕವಾಗಿ ಅನುಮತಿ ಕೊಟ್ಟು ಹಿಂದೂಗಳನ್ನು ಓಲೈಸಬೇಕಾ..? ಎನ್ನುವ ಬಗ್ಗೆ ಎಲ್ಲಾ ಆಯಾಮದಲ್ಲೂ ಚರ್ಚೆ ನಡೆಸಿ, ಅನುಮತಿ ನೀಡುವ ಸಾಧ್ಯತೆ ಇದೆ.

Related Posts

Don't Miss it !