ಇಲಿಯನ್ನು ಬೇಟೆಯಾಡಿ ಹುಲಿಯನ್ನು ಬಂಧಿಸುವ ತಂತ್ರಗಾರಿಕೆ..!

ರಾಜಾಹುಲಿ ಎಂದು ಕಾರ್ಯಕರ್ತರಿಂದ ಬಿತುದು ಪಡೆದುಕೊಂಡಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಕೇಂದ್ರ ಸರ್ಕಾರ ಶಾಕ್ ಕೊಟ್ಟಿದೆ. ಯಡಿಯೂರಪ್ಪ ಅವರ ಆಪ್ತ ಬಳಗವನ್ನು ಸುತ್ತುವರಿದಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂಚಿಂಚು ಶೋಧ ಕಾರ್ಯ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ತೆರಿಗೆ ವಂಚನೆ ಬಗ್ಗೆ ತನಿಖೆ ನಡೆಸುವುದು ಅವರ ಜವಾಬ್ದಾರಿ. ರಾಜಕೀಯ ಉದ್ದೇಶಕ್ಕೆ ನಡೆದಿರುವ ದಾಳಿಯಲ್ಲ ಎಂದು ತಿಳಿಸಿದ್ದಾರೆ. ಆದರೆ ಈ ದಾಳಿ ಹಿಂದೆ ಎರಡು ಪ್ರಮುಖ ಕಾರಗಳು ಇವೆ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ. ಅವುಗಳಲ್ಲಿ ಮೊದಲನೆಯದು ಹುಲಿಯನ್ನು ಬಂಧನದಲ್ಲಿ ಇಡುವುದು.

ಯಡಿಯೂರಪ್ಪ ಪಕ್ಷಕ್ಕೆ ಬೇಕು, ನಿಶಕ್ತರಾಗಿ ಇರಬೇಕು..!

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಿಜೆಪಿ ಪಕ್ಷದಲ್ಲೇ ಇರಬೇಕು. ಆದರೆ ಒಂದು ಶಕ್ತಿಯಾಗಿ ಇರಕೂಡದು ಎನ್ನುವುದು ಬಿಜೆಪಿ ಲೆಕ್ಕಾಚಾರ. ಇದೇ ಕಾರಣದಿಂದ ರಾಜ್ಯ ಪ್ರವಾಸಕ್ಕೆ ಅಡ್ಡಗಾಲು ಹಾಕುತ್ತಲೇ ಬಂದಿರುವ ಬಿಜೆಪಿ, ಎಲ್ಲಾ ಪ್ರಕಾರಗಳಿಂದಲೂ ಯಡಿಯೂರಪ್ಪ ಅವರನ್ನು ಬಿಡುಗಡೆ ಮಾಡುವ ಇಚ್ಛೆ ಹೊಂದಿದೆ. ಆದರೆ ಯಡಿಯೂರಪ್ಪ ಒಮ್ಮೆ ಬಿಜೆಪಿ ಪಕ್ಷದಿಂದ ದೂರವಾದರೂ ಬಿಜೆಪಿಗೆ ಹಿನ್ನಡೆ ಆಗುವುದು ಖಚಿತ. ಇದೇ ಕಾರಣದಿಂದ ಯಡಿಯೂರಪ್ಪ ಅವರನ್ನು ಒಂದು ಶಕ್ತಿಯಾಗಿ ಉಳಿಸಿಕೊಳ್ಳದೆ ಒಂದು ವ್ಯಕ್ತಿಯಾಗಿ ಉಳಿಸಿಕೊಳ್ಳುವ ಬಯಕೆಯನ್ನು ಈ ಮೂಲಕ ಸಾಧಿಸುವ ಸಂಚು ಮಾಡಲಾಗಿದೆ ಎನ್ನುವುದು ರಾಜಕೀಯ ಒಳೇಟು ಬಲ್ಲವರ ಮಾತಾಗಿದೆ.

Read this Also

8 ಸಾವಿರ ಕೋಟಿ ಕಿಕ್​ಬ್ಯಾಕ್​ ಆರೋಪ..!

ಬಿಎಸ್​ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಪುತ್ರ ಬಿ.ವೈ ವಿಜಯೇಂದ್ರ ಎಲ್ಲಾ ಇಲಾಖೆಗಳಲ್ಲೂ ಮೂಗು ತೂರಿಸುತ್ತಾರೆ ಎನ್ನುವ ಆರೋಪ ಎಲ್ಲೆಡೆಯಿಂದ ಕೇಳಿಬಂದಿತ್ತು. ಇದರ ಜೊತೆಗೆ ಆಪರೇಷನ್​ ಕಮಲದ ಮೂಲಕ ಬಿಜೆಪಿ ಸೇರಿದ್ದ ಹೆಚ್​. ವಿಶ್ವನಾಥ್​ 21 ಸಾವಿರ ಕೋಟಿ ನೀರಾವರಿ ಇಲಾಖೆಯ ಟೆಂಡರ್​ ಬಗ್ಗೆ ಪ್ರಸ್ತಾಪ ಮಾಡಿ ಅದರಲ್ಲಿ 8 ಸಾವಿರ ಕೋಟಿ ರೂಪಾಯಿ ಕಿಕ್​ಬ್ಯಾಕ್​ ಪಡೆಯಲಾಗಿದೆ ಎಂದು ಆರೋಪ ಮಾಡಿದ್ದರು. ಆ ನಂತರ ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಕೂಡ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಮುಂದಿನ ದಿನಗಳಲ್ಲಿ ಏನಾಗಲಿದೆ ಎನ್ನುವುದನ್ನು ಕಾದು ನೋಡಿ ಎಂದೂ ಸೂಚ್ಯವಾಗಿ ಹೇಳಿದ್ದರು.

ವಿಜಯೇಂದ್ರ ಉಸ್ತುವಾರಿ ನೀಡದ ವಿಚಾರ ಪಕ್ಷದೊಳಗೆ ಕಿರಿಕಿರಿ ಉಂಟು ಮಾಡಿತ್ತು. ಬಿ.ಎಲ್​ ಸಂತೋಷ್​​ ಕಾರಣ ಎಂದು ಅಭಿಮಾನಿ ಬಳಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಆಕ್ರೋಶ ಹೊರಹಾಕಿತ್ತು. ಆ ನಂತರ ಯಡಿಯೂರಪ್ಪ ಕೂಡ ಪ್ರಚಾರಕ್ಕೆ ಬರುವುದು ಅನುಮಾನ ಎನ್ನಲಾಗ್ತಿತ್ತು. ಇದೆಲ್ಲಾ ಅಂಶಗಳನ್ನು ಆಧರಿಸಿ, ಕಳೆದ ಬಾರಿ ಅಧಿಕಾರವಧಿಯಲ್ಲಿ ಆಗಿರುವ ಭ್ರಷ್ಟಚಾರಗಳ ಎಳೆಯನ್ನು ಹಿಡಿದುಕೊಂಡು ಯಡಿಯೂರಪ್ಪ ಅವರನ್ನು ಬಗ್ಗುಬಡಿಯುವುದು. ಪಕ್ಷ ಬಿಟ್ಟು ಹೋಗಲೂ ಬಾರದು. ಲಿಂಗಾಯತ ಮತಗಳು ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಬೀಳಲೂ ಬಾರದು ಎನ್ನುವ ಅಂಶವನ್ನು ತಲೆಯಲ್ಲಿ ಇಟ್ಟುಕೊಳ್ಳಲಾಗಿದೆ. ಯಡಿಯೂರಪ್ಪ ಬಹಿರಂಗವಾಗಿ ಬಿಜೆಪಿ ವಿರುದ್ಧ ಮಾತನಾಡಿದರೆ ಎಲ್ಲವೂ ತಲೆಕೆಳಗಾಗುವ ಸಂಭವ ಇರುವುದರಿಂದ ಆದಾಯ ತೆರಿಗೆ ಮೂಲಕ ನಿಯಂತ್ರಿಸುವ ಉದ್ದೇಶ ಎದ್ದು ಕಾಣುತ್ತಿದೆ.

Read this also;

ಉಪಚುನಾವಣೆ ಸಮಯದಲ್ಲಿ ಐಟಿ ದಾಳಿ..!

ಇನ್ನೂ ಈಗ ಉಪಚುನಾವಣೆ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್​, ಜೆಡಿಎಸ್​ ನಾಯಕರ ಮನೆ ಮೇಲೆ ದಾಳಿ ನಡೆಸಿದ್ರೆ ಕೆಟ್ಟ ಸಂದೇಶ ಹೋಗುವ ಸಾಧ್ಯತೆ ಇರುತ್ತದೆ. ಹೇಗಿದ್ದರೂ ಯಡಿಯೂರಪ್ಪ ಅವರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಐಟಿ ದಾಳಿ ಅನಿವಾರ್ಯ. ಚುನಾವಣೆ ವೇಳೆ ಕಾಂಗ್ರೆಸ್​ , ಬಿಜೆಪಿ ನಾಯಕರ ಮನೆ ಮೇಲೆ ದಾಳಿ ನಡೆದಾಗ ಬಿಜೆಪಿ ನಾಯಕರ ಆಪ್ತರ ಮನೆಯಲ್ಲೇ ಆದಾಯ ತೆರಿಗೆ ದಾಳಿ ನಡೆದಿದೆ. ಇದೆಲ್ಲವೂ ಕಾನೂನು ಚೌಕಟ್ಟಿನಲ್ಲಿ ನಡೆಯುತ್ತದೆ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಸಾಧ್ಯ ಎನ್ನುವ ಮತ್ತೊಂದು ಲೆಕ್ಕಾಚಾರವೂ ನಡೆದಿದೆ ಎನ್ನಲಾಗ್ತಿದೆ. ಈಗ ಯಾವ ಯಾವ ನಾಯಕರ ಮನೆ ಮೇಲೆ ದಾಳಿ ಆಗುತ್ತೆ ಎನ್ನುವುದಷ್ಟೇ ಈಗಿರುವ ಕುತೂಹಲ.

Related Posts

Don't Miss it !