ಭಾರತದ ದೀಪಾವಳಿಗೆ ಅಫ್ಘನ್​ ಎಫೆಕ್ಟ್​..! ಮಾರುಕಟ್ಟೆಯಲ್ಲಿ ದರ ದರ್ಬಾರ್​

ಭಾರತದಲ್ಲಿ ಹಬ್ಬಗಳ ಆಚರಣೆಯೇ ಒಂದು ವಿಶೇಷ. ಭಾರತ ಹಲವು ವೈವಿಧ್ಯಮಯ ಸಂಪ್ರದಾಯ ಪಾಲಿಸುತ್ತಿರುವ ರಾಷ್ಟ್ರ. ಆದರೇ ದೀಪಾವಳಿ ಹಬ್ಬವನ್ನು ದೇಶಾದ್ಯಂತ ಆಚರಣೆ ಮಾಡುವುದು ರೂಢಿ. ಈಗಾಗಲೇ ಕೊರೊನಾ ಸೋಂಕಿನಿಂದ ಕೆಲಸ ಕಳೆದುಕೊಂಡಿರುವ ಜನ, ಹಬ್ಬಗಳ ಆಚರಣೆಯಿಂದ ವಿಮುಖ ಆಗುವಂತಾಗಿದೆ. ಇದೀಗ ಮತ್ತೊಂದು ಬರೆ ಬೀಳುವ ದಿನಗಳು ಕಣ್ಣಮುಂದಿವೆ ಎನ್ನುತ್ತಿವೆ ವರದಿಗಳು. ಇದಕ್ಕೆ ಕಾರಣ ಅಫ್ಘಾನಿಸ್ತಾನದಲ್ಲಿ ಶುರುವಾಗಿರುವ ರಾಜಕೀಯ ಅರಾಜಕತೆ. ಅಫ್ಘಾನಿಸ್ತಾನ ದೇಶವನ್ನು ತಾಲಿಬಾನಿ ಉಗ್ರರು ವಶಕ್ಕೆ ಪಡೆದಿದ್ದಾರೆ. ಇದೀಗ ಅಫ್ಘಾನಿಸ್ತಾನಕ್ಕೆ ಹೊಸದಾಗಿ ಮರು ನಾಮಕರಣ ಮಾಡಿರುವ ತಾಲಿಬಾನಿ ಉಗ್ರರು, ಇಸ್ಲಾಮಿಕ್​ ಎಮಿರೇಟ್ಸ್​ ಅಫ್​ ಅಫ್ಘಾನಿಸ್ತಾನ್ ಎಂದಿದ್ದಾರೆ. ಅಫ್ಘಾನಿಸ್ತಾನದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದಿದ್ದು, ಮುಂದಿನ ಅಧ್ಯಕ್ಷ ಯಾರು..? ಆಡಳಿತ ನಡೆಸುವುದು ಹೇಗೆ ಎನ್ನುವುದನ್ನು ಉಗ್ರರ ಪಡೆ ಇನ್ನೂ ತೀರ್ಮಾನ ಮಾಡಿಲ್ಲ. ಈ ಪರಿಸ್ಥಿತಿಯಲ್ಲಿ ಭಾರತದ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.

ಗಗನದತ್ತ ಮುಖಮಾಡಿದ ಡ್ರೈ ಫ್ರೂಟ್ಸ್​ ಬೆಲೆ..!


ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮೆರೆಯುತ್ತಿರುವ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ದೇಶಾದ್ಯಂತ ಅಫ್ಘಾನ್ ಡ್ರೈ ಫ್ರೂಟ್ಸ್​ಗಳ ಬೆಲೆ ಏರಿಕೆ ಆಗಿದೆ.
ಫೈನ್ ನಟ್ಸ್ ಬೆಲೆ 6,400 ರಿಂದ 8,800ಕ್ಕೆ ಏರಿಕೆಯಾಗಿದೆ. ಸ್ಪೆಷಲ್ ಅಂಜೂರ್ ದರ 1,400 ರೂ 2,400ಕ್ಕೆ ಏರಿಕೆ ಆಗಿದೆ. ಅಫ್ಘಾನ್ ಕೇಸರಿ ಬೆಲೆ 2 ಗ್ರಾಂಗೆ 400 ರಿಂದ 900ಕ್ಕೆ ಏರಿಕೆ ಆಗಿದೆ. ಇನ್ನೂ ಅಫ್ಘಾನ್ ಒಣ ದ್ರಾಕ್ಷಿ 1ಕೆಜಿಗೆ 640 ರಿಂದ 920ಕ್ಕೆ ಏರಿಕೆ ಆಗಿದ್ರೆ, ಅಫ್ಘಾನ್ ಮಾಮ್ರಾ ಬಾದಾಮ್ 1ಕೆಜಿ ಬೆಲೆ 2,140 ರಿಂದ 3,960ಕ್ಕೆ ಏರಿಕೆ ಕಂಡಿದೆ. ಬೆಂಗಳೂರಿನ ಡ್ರೈ ಫ್ರೂಟ್ಸ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಹಮ್ಮದ್ ಇದ್ರೀಸ್ ಚೌಧರಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಅಫ್ಘಾನ್​ನಿಂದ ಬರುವ ಒಣ ಹಣ್ಣುಗಳ ಬೆಲೆಯಲ್ಲಿ‌ ಶೇಕಡ 80ರಷ್ಟು ಬೆಲೆ ಏರಿಕೆ ಆಗಿದೆ. ಡ್ರೈ ಫ್ರೂಟ್​ ಕಿಂಗ್ ಎಂದೇ ಖ್ಯಾತಿಯಾಗಿರುವ ಫೈನ್ ನಟ್ಸ್ ಬೆಲೆಯಲ್ಲಿ ದಾಖಲೆಯ ಏರಿಕೆ ಆಗಿದೆ ಎಂದಿದ್ದಾರೆ. ಅಪ್ಘಾನ್ ದೇಶದಿಂದ ಡ್ರೈ ಫ್ರೂಟ್ಸ್ ಆಮದು ಸದ್ಯ ಸ್ಥಗಿತವಾಗಿದೆ ಎಂದಿದ್ದಾರೆ.

ಇದನ್ನೂ ಓದಿ;

ಡ್ರೈ ಫ್ರೂಟ್ಸ್ ಸ್ವೀಟ್ಸ್

ದೀಪಾವಳಿ ಹಬ್ಬಕ್ಕೆ ಪೆಟ್ಟು ಬೀಳುವುದು ಖಾತರಿ..!

ದೀಪಾವಳಿ ಹಬ್ಬದ ಸಮಯದಲ್ಲಿ ಸಾಕಷ್ಟು ಸಂಪನಿಗಳಲ್ಲಿ ತನ್ನ ಉದ್ಯೋಗಿಗಳಿಗೆ ಹಲವಾರು ರೀತಿಯ ಗಿಫ್ಟ್​ ನೀಡುವುದು ಸಾಮಾನ್ಯ. ಅದೇ ರೀತಿ ಸಾಕಷ್ಟು ಪ್ರೀತಿ ಪಾತ್ರರಿಗೆ ಡ್ರೈಫ್ರೂಟ್ಸ್​​ ಕೊಡುವುದು ನಡೆದುಕೊಂಡು ಬಂದಿದೆ. ಇದೀಗ ಡ್ರೈ ಫ್ರೂಟ್ಸ್​ ಬೆಲೆ ಗಗನಕ್ಕೆ ಏರಿರುವ ಕಾರಣ ಈ ಬಾರಿ ಹಬ್ಬದ ಸಂಭ್ರಮ ಕಡಿಮೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಅಷ್ಟೂ ಮಾತ್ರವಲ್ಲದೆ ಸಿಹಿ ತಿನಿಸು ತಯಾರಿಕೆಗೆ ಡ್ರೈ ಫ್ರೂಟ್ಸ್​ ಹೆಚ್ಚಾಗಿ ಬಳಸುವ ಕಾರಣ ಸಿಹಿ ತಿನಿಸುವಗಳ ದರ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ತನ್ನ ಉದ್ಯೋಗಿಗಳಿಗೆ ಸಿಹಿತಿನಿಸು, ಡ್ರೈ ಫ್ರೂಟ್ಸ್​ ಕೊಡಲು ಸಂಸ್ಥೆಗಳಿಗೆ ಸಾಧ್ಯವಾಗದಿದ್ದರೆ ಬೇರೆ ಮಾರ್ಗವನ್ನು ಹುಡುಕಬೇಕಾದ ಅವಶ್ಯಕತೆ ಎದುರಾಗಿದೆ. ಸಿಹಿತಿನಿಸು, ಡ್ರೈ ಫ್ರೂಟ್ಸ್​ ದರ ಹೆಚ್ಚಾಗಿರುವ ಕಾರಣ, ದೀಪಾವಳಿ ಹಬ್ಬದ ಸಂಭ್ರಮಕ್ಕೆ ಕೊಕ್ಕೆ ಹಾಕುವ ಬಗ್ಗೆ ಈಗಾಗಲೇ ಮಾರುಕಟ್ಟೆಯಲ್ಲಿ ಚರ್ಚೆ ಶುರುವಾಗಿದೆ.

ಇದನ್ನೂ ಓದಿ;

ಡ್ರೈ ಫ್ರೂಟ್ಸ್ ಗಿಫ್ಟ್ ಕಿಟ್

ದೇಶದಲ್ಲಿ ಡ್ರೈ ಫ್ರೂಟ್ ಮಾಫಿಯಾ ಕೆಲಸ..!

ದೇಶದಲ್ಲಿ ಯಾವುದೇ ಸಂಧರ್ಭ ಬಂದಾಗ ಅದನ್ನು ಬಳಸಿಕೊಳ್ಳುವ ಜನರು ಇದ್ದೇ ಇರುತ್ತಾರೆ. ಹಾಗೆಯೇ ಇದೀಗ ಅಫ್ಘಾನಿಸ್ತಾನದಲ್ಲಿ ಉಗ್ರ ಸಂಘಟನೆ ತಾಲಿಬಾನಿಗಳು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕಾರಣ ಡ್ರೈ ಫ್ರೂಟ್ಸ್​ ರಫ್ತು ಮೇಲೆ ಹೊಡೆತ ಬಿದ್ದಿದೆ ಎನ್ನುವುದು ಗೊತ್ತಿರುವ ಸಂಗತಿಯೇ ಆಗಿದೆ. ಆದರೆ ಈಗಾಗಲೇ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಆದರೆ ರಫ್ತು ನಿಂತಿರುವುದನ್ನೇ ಅವಕಾಶವನ್ನಾಗಿ ಮಾಡಿಕೊಂಡಿರುವ ಮಧ್ಯವರ್ತಿಗಳು ಈಗಿನಿಂದಲೇ ದರ ಏರಿಕೆ ಮಾಡಿಕೊಂಡು ಹಣ ಮಾಡುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಕೇಂದ್ರ ಸರ್ಕಾರ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸದೆ ಇದ್ದರೆ ಮತ್ತಷ್ಟು ದರ ಏರುಪೇರು ಆಗುವ ಸಾಧ್ಯತೆ ಇದೆ.

Related Posts

Don't Miss it !