ಮಹಾರಾಷ್ಟ್ರದ ಜೊತೆ ಗುದ್ದಾಡಿದ್ದ ನಟಿ ಕಂಗನಾ ಏನ್ಮಾಡ್ತಿದ್ದಾರೆ..?

ಬಾಲಿವುಡ್​ ನಟಿ ಕಂಗನಾ ರಣಾವತ್​ ಇತ್ತೀಚಿಗಷ್ಟೇ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಬ್ಬರ ಸೃಷ್ಟಿಸಿ ಸುದ್ದಿ ಮಾಡಿದ್ದರು. ಇದೀಗ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಆದರೆ ಈ ವಿಚಾರದಲ್ಲೂ ಸಾಕಷ್ಟು ಪರ ವಿರೋಧಗಳಿಗೆ ಸಾಕ್ಷಿಯಾಗಿದ್ದಾರೆ. 33 ವರ್ಷದ ನಟಿ ಕಂಗನಾ ರಣಾವತ್​ ಹಾಟ್​ ಹಾಟ್​ ಫೋಟೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕುವ ಮೂಲಕ ಪಡ್ಡೆ ಹುಡುಗರ ಮನಸಿಗೆ ಕಿಚ್ಚು ಹೊತ್ತಿಸಿದ್ದಾರೆ.

ಬಾಲಿವುಡ್​ನಲ್ಲಿ ತಯಾರಾಗುತ್ತಿರುವ ಬಹು ನಿರೀಕ್ಷೆಯ ಧಾಕಡ್​ ಚಿತ್ರದಲ್ಲಿ ಸ್ಪೈ ಏಜೆಂಟ್​ ಆಗಿ ಆ್ಯಕ್ಟ್​ ಮಾಡಿರುವ ಕಂಗನಾ ರಣಾವತ್​​, ಬೋಲ್ಡ್​ ಡ್ರೆಸ್​​ನಲ್ಲಿ ಕಾಣೀಸಿಕೊಂಡು ಮತ್ತೊಂದು ವಿವಾದ ಸೃಷ್ಟಿ ಮಾಡಿದ್ದಾರೆ. ಚಿತ್ರತಂಡ ನೀಡಿದ ಪಾರ್ಟಿಯಲ್ಲಿ ಕೋರ್ಸೆಟ್​ ಬ್ಯಾಲೆಟ್​ ನ್ಯೂಡ್​ ಲೆಸಿ ಬಾಡಿಸೂಟ್​ನಲ್ಲಿ ಮಿಂಚಿದ್ದಾರೆ. ಇದು ಸಂಪ್ರದಾಯವಾದಿಗಳ ಕಣ್ಣು ಕೆಂಪಾಗುವಂತೆ ಮಾಡಿದೆ.

ಕೃಪೆ: ಕಂಗಾನಾ ಇನ್ಸ್​​ಸ್ಟಾಗ್ರಾಂ

ಇದನ್ನೂ ಓದಿ

ಸಖತ್​ ಸೆಕ್ಸಿ ಲುಕ್​ನಲ್ಲಿ ಕಾಣಿಸಿಕೊಂಡಿರುವ ಕಂಗನಾ ರಣಾವತ್​, ನೂತನ ಶೈಲಿಯ ಫೋಟೋವನ್ನು ತನ್ನ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿಕೊಂಡಿದ್ದು, ಪ್ರೀತಿಯಲ್ಲಿ ಹುಟ್ಟು ಸಾವು ಇಲ್ಲ ಎಂದು ಬರೆದುಕೊಂಡಿದ್ದಾರೆ. ಸಂಪ್ರದಾಯವಾದಿ ಮಹಿಳೆಯ ರೀತಿ ಮಾತನಾಡುತ್ತಿದ್ದ ಕಂಗನಾ ರಣಾವತ್​ ವೇಷ ಭೂಷಣ ನೋಡಿದವರು ಶಾಕ್​ ಆಗುತ್ತಿದ್ದಾರೆ. ಪಡ್ಡೆ ಹೈಕಳು ಮಾತ್ರ ಕಣ್ಣು ಮಿಟುಕಿಸಿದೆ ನೋಡುವಂತಿದೆ ಫೋಟೋಗಳು.

ಕೃಪೆ: ಕಂಗಾನಾ ಇನ್ಸ್​​ಸ್ಟಾಗ್ರಾಂ

ಈ ಹಿಂದೆಯೂ ಸಾಕಷ್ಟು ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು ನಟಿ ಕಂಗನಾ ರಣಾವತ್​. ಆದರೆ ಮಹಾರಾಷ್ಟ್ರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಕಾಣಿಸುತ್ತಿದೆ. ಸುರಕ್ಷೆ ಇಲ್ಲದಂತೆ ಆಗಿದೆ ಎಂದು ಹೇಳಿಕೆ ಕೊಟ್ಟ ಬಳಿಕ ಬಾರೀ ವಿವಾದಕ್ಕೆ ಕಾರಣರಾಗಿದ್ದರು. ಆ ನಂತರ ಮಹಾರಾಷ್ಟ್ರ ಗೃಹ ಸಚಿವ ದೇಶ್​ಮುಖ್​ ಮಾತನಾಡಿ ಮಹಾರಾಷ್ಟ್ರ ಸೇಫ್​ ಅಲ್ಲ ಎನ್ನುವುದಾದರೆ ಮುಂಬೈ ಅಥವಾ ಮಹಾರಾಷ್ಟ್ರ ಬದುವ ಅಧಿಕಾರ ಇಲ್ಲ ಎಂದಿದ್ದರು.

ಕೃಪೆ: ಕಂಗಾನಾ ಇನ್ಸ್​​ಸ್ಟಾಗ್ರಾಂ

ಇದನ್ನೂ ಓದಿ:

ನಾನು ಡ್ರಗ್ಸ್​ ಮಾಫಿಯಾ ವಿರುದ್ಧ ಮಾತನಾಡಿದ್ದಕ್ಕೆ ಸಾಕಷ್ಟು ಪ್ರಾಣ ಬೆದರಿಕೆಗಳು ಬಂದಿವೆ. ನಾನು ದೇವರ ನಾಡು ಹಿಮಾಚಲ ಪ್ರದೇಶದಿಂದ ಬಂದಿದ್ದೇನೆ. ಮುಂಬೈಗೆ ಕಾಲಿಡದಂತೆ ಬೆದರಿಕೆ ಹಾಕುತ್ತಿದ್ದಾರೆ. ನಿಮಗೆ ತಾಕತ್​ ಇದ್ದರೆ ನನ್ನನ್ನು ತಡೆಯಿರಿ ಎಂದೆಲ್ಲಾ ಸವಾಲು ಹಾಕಿದ್ದರು. ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಕಂಗನಾ ರಣಾವತ್​ ವೇಷ ನೋಡಿ ಅಂದು ಶಹಬ್ಬಾಸ್​ ಗಿರಿ ಕೊಟ್ಟವರೇ ಖಾರ ಮಂಡಕ್ಕಿ ತಿಂದವರ ರೀತಿ ಮಾತನಾಡುತ್ತಿದ್ದಾರೆ.

ಕೃಪೆ: ಕಂಗಾನಾ ಇನ್ಸ್​​ಸ್ಟಾಗ್ರಾಂ

ಧಾಡಕ್​ ಚಿತ್ರ ಯೂರೋಪ್​ನಲ್ಲಿ ಚಿತ್ರೀಕರಣ ಮುಕ್ತಾಯ ಮಾಡಿದ್ದು, ಅಕ್ಟೋಬರ್​ನಲ್ಲಿ ರಿಲೀಸ್​ ಆಗಲಿದೆ ಎನ್ನಲಾಗ್ತಿದೆ. ಕಂಗನಾ ರಣಾವತ್​ ಈ ರೀತಿಯ ಬೋಲ್ಡ್​ ಡ್ರೆಸ್​ ಹಾಕುವ ಮೂಲಕ ಒಂದೇ ರಾತ್ರಿಯಲ್ಲಿ ವಿಶ್ವದ ಗಮನ ಸೆಳೆದಿದ್ದಾರೆ. ಚಿತ್ರದ ಪ್ರಮೋಷನ್​ಗಾಗಿಯೇ ಹೀಗೆ ಮಾಡಿರುವುದು ಎನ್ನುವ ಮಾತುಗಳೂ ಕೇಳಿ ಬರುತ್ತಿದೆ. ಧಾಡಲ್​ ಚಿತ್ರ ಹೇಗೆ ಜನಮನ ಗೆಲ್ಲುತ್ತದೆ ಎಂಬುದನ್ನು ಚಿತ್ರ ಬಿಡುಗಡೆ ಆದ ಬಳಿಕವಷ್ಟೇ ಹೇಳಬಹುದು. ಆದರೆ ಕಂಗನಾ ರಣಾವತ್​ ಚಿತ್ರಗಳು ಸೋಷಿಯಲ್​ ಮೀಡಿಯಾದಲ್ಲಿ ಅಬ್ಬರ ಸೃಷ್ಟಿಸಿವೆ.

ಕೃಪೆ: ಕಂಗಾನಾ ಇನ್ಸ್​​ಸ್ಟಾಗ್ರಾಂ

ಈ ಹಿಂದೆಯೂ ಡ್ರೆಸ್​ಗಳಿಂದಲೇ ವಿವಾದ ಸೃಷ್ಟಿಸಿದ್ದ ಕಂಗನಾ ರಣಾವತ್​ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ಇದು ಚಿತ್ರದ ಪ್ರಚಾರದೋ ಹುಚ್ಚೋ ಅಥವಾ ಆನೆ ನಡೆದಿದ್ದೇ ದಾರಿ ಎನ್ನುವ ಹುಂಬತನವೋ. ಆದರೆ ಹುಡುಗರ ಎದೆಯಲ್ಲಿ ಬೀಟ್​ ರೇಟ್​ ಜಾಸ್ತಿ ಮಾಡಿರುವುದು ಸತ್ಯ,

ಕೃಪೆ: ಕಂಗಾನಾ ಇನ್ಸ್​​ಸ್ಟಾಗ್ರಾಂ

Related Posts

Don't Miss it !