ದೇಶದ 5 ರಾಜ್ಯಗಳಿಗೆ ಚುನಾವಣಾ ದಿನಾಂಕ ಘೋಷಣೆ, ಇತಿಹಾಸದಲ್ಲೇ ವಿಭಿನ್ನ ಚುನಾವಣೆ..!

ದೇಶದ 5 ರಾಜ್ಯಗಳಿಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಫೆಬ್ರವರಿ 10 ರಿಂದ ಶುರುವಾಗಲಿರುವ ಮತದಾನ ಮಾರ್ಚ್​ 7 ರಂದು ನಡೆಯುವ 7ನೇ ಹಂತದ ಚುನಾವಣೆ ಮೂಲಕ ಮುಕ್ತಾಯವಾಗಲಿದೆ. ಮಾರ್ಚ್​ 10 ರಂದು ಎಲ್ಲಾ 5 ರಾಜ್ಯಗಳ ಮತ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ಬಹಿರಂಗ ಆಗಲಿದೆ. ಉತ್ತರ ಪ್ರದೇಶದ 403, ಪಂಜಾಬ್​ನ​ 117, ಉತ್ತರಾಖಂಡ್​ನ 70 ಕ್ಷೇತ್ರ, ಮಣಿಪುರದ 60, ಗೋವಾದ 40 ಕ್ಷೇತ್ರಗಳಿಗೆ ಚುನಾವಣೆ ನಿಗದಿಯಾಗಿದೆ. ಆದರೆ ಈ ಬಾರಿಯ ಪಂಚರಾಜ್ಯ ಚುನಾವಣೆ ಇತಿಹಾಸದ ಪುಟಗಳನ್ನು ಸೇರಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಚುನಾವಣಾ ಸುಧಾರಣೆಗಳು ಆಗುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಮೊದಲ ಹೆಜ್ಜೆ ಇಟ್ಟಿದೆ.

ಮೊದಲ ಬಾರಿಗೆ ಪೋಸ್ಟಲ್​ ಮತದಾನಕ್ಕೆ ಅವಕಾಶ..!

ಚುನಾವಣಾ ಕಾರ್ಯದಲ್ಲಿ ಭಾಗಿಯಾಗುವ ಸರ್ಕಾರಿ ಸಿಬ್ಬಂದಿಗೆ ಪೋಸ್ಟಲ್​ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಚುನಾವಣಾ ಸಿಬ್ಬಂದಿ ಜೊತೆಗೆ ಸಾರ್ವಜನಿಕರಿಗೂ ಪೋಸ್ಟಲ್​ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕೊರೊನಾ ಸೋಂಕಿತರಿಗೆ ಮಾತ್ರ ಈ ಅವಕಾಶ ಕೊಡಲಾಗಿದೆ. ಆದರೆ ಪೋಸ್ಟಲ್​ ಮತಗಳು ಖರೀದಿಯಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಯಾಕೆಂದರೆ ಕೊರೊನಾ ಸೋಂಕಿತರ ಲೆಕ್ಕ ಎಲ್ಲಾ ರಾಜಕೀಯ ಪಕ್ಷಗಳಿಗೂ ಸರಳವಾಗಿ ತಿಳಿಯಲಿದ್ದು, ಪೋಸ್ಟಲ್​ ಮತಗಳಿಗೆ ಹಣ ಕೊಟ್ಟು ಸಹಿ ಮಾಡಿಸಿಕೊಂಡು ಖರೀದಿ ಮಾಡುತ್ತಾರಾ..? ತಮಗೆ ಬೇಕಾದವರಿಗೆ ಆ ಮತಗಳನ್ನು ಹಾಕುವ ಮೂಲಕ ಮತ ಹಕ್ಕು ಅಧಿಕೃತವಾಗಿಯೇ ಮಾರಾಟ ಆಗುತ್ತಾ ಎನ್ನುವ ಭೀತಿ ಸೃಷ್ಟಿಸಿದೆ.

Read This

ಚುನಾವಣಾ ಸಮಾವೇಶ, ಪಾದಯಾತ್ರೆಗೆ ಬ್ರೇಕ್​..!

ಚುನಾವಣಾ ರಾಜಕೀಯ ಎಂದಾಗ ಸಭೆ, ಸಮಾರಂಭಗಳು, ರೋಡ್​ ಶೋ, ಜಾಥಾಗಳನ್ನು ಆಯೋಜಿಸುವುದು ಸಾಮಾನ್ಯ. ಜನರನ್ನು ಸೇರಿಸಿ ಪ್ರಚಾರ ಮಾಡುವುದು, ಮತಭಿಕ್ಷೆ ಕೇಳುವುದು, ಜನರನ್ನೇ ಸೇರಿಕೊಂಡು ಬೃಹತ್​ ಸಮಾವೇಶ, ಸಮಾರಂಭ ಮಾಡುವುದು ಮತಯಾಚನೆಯ ತಂತ್ರಗಾರಿಕೆಯಲ್ಲಿ ಒಂದು. ಆದರೆ ಈ ಬಾರಿ ಜನವರಿ 15ರ ತನಕ ಯಾವುದೇ ಸಮಾವೇಶ, ಜಾಥಾ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೂ ಅವಕಾಶವಿಲ್ಲ ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಜನವರಿ 15ರ ಬಳಿಕ ಮತ್ತೊಮ್ಮೆ ಈ ಬಗ್ಗೆ ತಿಳಿಸುತ್ತೇವೆ ಎಂದು ಚುನಾವಣಾ ಆಯೋಗ ಹೇಳಿದೆ. ಕೊರೊನಾ ಸೋಂಕು ಆಧರಿಸಿ ಮುಂದಿನ ದಿನಗಳ ಪ್ರಚಾರದ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ.

ಚುನಾವಣಾ ಆಯೋಗದ ವಿಶೇಷ ಪ್ರಕಟಣೆಗಳು ಏನೇನು..?

ಮಹಿಳಾ ಬೂತ್​ಗಳ ನಿರ್ಮಾಣ ಮಾಡಲು ಚುನಾವಣಾ ಆಯೋಗ ನಿರ್ಧಾರ ಮಾಡಿದೆ. ಚುನಾವಣಾ ಬೂತ್​ಗಳಲ್ಲಿ ಸ್ಯಾನಿಟೈಸೇಷನ್, ಮಾಸ್ಕ್​ ವಿತರಣೆಗೆ ಕ್ರಮಕೈಗೊಳ್ಳಲು ನಿರ್ಧಾರ ಮಾಡಲಾಗಿದೆ. ಗೆಲುವು ಸಾಧಿಸಿದ ಬಳಿಕ ಯಾವುದೇ ಸಂಭ್ರಮಾಚರಣೆ ಮಾಡುವಂತಿಲ್ಲ, ಇಬ್ಬರು ಮಾತ್ರ ಅಭ್ಯರ್ಥಿ ಜೊತೆಗೆ ಬಂದು ಪ್ರಮಾಣ ಪತ್ರ ಪಡೆಯಬೇಕು. ನಾಮಪತ್ರ ಸಲ್ಲಿಕೆಗೆ ಆನ್​ಲೈನ್​ ಮೂಲಕವೂ ಅವಕಾಶ ಕಲ್ಪಿಸಲಾಗಿದೆ. ಮನೆ ಮನೆ ಪ್ರಚಾರ ಮಾಡುವಾಗ ಕೇವಲ 5 ಜನರು ಮಾತ್ರ ಇರಬೇಕು ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇನ್ನೂ ಮತದಾನದ ಅವಧಿಯನ್ನು ಒಂದು ಗಂಟೆ ಸಮಯವನ್ನೂ ಹೆಚ್ಚಳ ಮಾಡುವ ನಿರ್ಧಾರವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಇನ್ನೂ ಕೋವಿಡ್​ ನಿಯಮ ಪಾಲಿಸಲು ಅನುಕೂಲ ಆಗುವಂತೆ ಎಲ್ಲಾ ಬೂತ್​ಗಳನ್ನೂ ನೆಲ ಮಾಳಿಗೆಯಲ್ಲೇ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ.

ವಿರೋಧ ಪಕ್ಷದ ನಾಯಕರನ್ನು ಸರ್ಕಾರಗಳು ನಿಯಂತ್ರಣ ಮಾಡುತ್ತವೆಯೋ..?

ಕೋವಿಡ್​ ರೂಲ್ಸ್​ ಜಾರಿ ಮಾಡಿಕೊಂಡು ಚುನಾವಣೆ ನಡೆಸುವ ಬಗ್ಗೆ ಕೇಂದ್ರ ಚುನಾವಣಾ ಆಯುಕ್ತ ಸುಶೀಲ್​ ಚಂದ್ರ ಹೇಳಿದ್ದಾರೆ. ಆದರೆ ಇದೀಗ ರಾಜಕೀಯ ಪಕ್ಷಗಳಿಗೆ ಎದುರಾಗಿರುವ ಆತಂಕ ಎಂದರೆ ಕೇವಲ ವಿರೋಧ ಪಕ್ಷಗಳಿಗೆ ಈ ನಿಯಮ ಅನ್ವಯ ಆಗುತ್ತಾ..? ಅಥವಾ ಆಡಳಿತ ಪಕ್ಷವೂ ಈ ನಿಯಮಗಳನ್ನು ಪಾಲನೆ ಮಾಡ್ತಾರಾ..? ಅತವಾ ಎಲ್ಲಾ ನಿಯಮಗಳನ್ನು ತನಗೆ ಬೇಕಾದ ಹಾಗೆ ಬದಲಾಯಿಸಿಕೊಂಡು ವಿರೋಧ ಪಕ್ಷಗಳನ್ನು ನಿಯಂತ್ರಣ ಮಾಡಲಾಗುತ್ತಾ..? ಎನ್ನುವ ಭಯ ಕಾಡುತ್ತಿದೆ. ಇನ್ನೂ ವರ್ಚುವಲ್​ ಮೂಲಕ ಚುನಾವಣಾ ಪ್ರಚಾರಕ್ಕೆ ಚುನಾವಣಾ ಆಯೋಗ ಸೂಚಿಸಿದೆ. ಜನವರಿ 15ರ ಬಳಿಕ ಕೊರೊನಾ ಸೋಂಕಿನ ಪ್ರಮಾಣವನ್ನು ನೋಡಿಕೊಂಡು ಮುಂದಿನ ನಿರ್ಧಾರ ಹೊರ ಬೀಳಲಿದೆ.

Related Posts

Don't Miss it !