ನಟ ದರ್ಶನ್​ ವಿರುದ್ಧ ಡೈರೆಕ್ಟರ್​ ಇಂದ್ರಜಿತ್​ ಆಕ್ರೋಶ..! ಕ್ರಮಕ್ಕೆ ಒತ್ತಾಯ..!

ನಟ ದರ್ಶನ್​ಗೆ 25 ಕೋಟಿ ರೂಪಾಯಿ ವಂಚನೆ ಮಾಡಲು ನಿರ್ಮಾಪಕ ಉಮಾಪತಿ ಯತ್ನಿಸಿದ್ದರು ಎನ್ನುವ ರೀತಿ ಆರೋಪಗಳು ಕೇಳಿಬಂದಿದ್ದವು. ಆ ಬಳಿಕ ನಾನು ದರ್ಶನ್​ಗೆ ವಂಚಿಸಲು ಯತ್ನಿಸಿಲ್ಲ, ಅವರ ಜೊತೆಯಲ್ಲಿದ್ದವರೇ ದ್ರೋಹ ಬಗೆಯಲು ಯತ್ನಿಸಿದ್ರು. ಈ ವಿಚಾರ ಗೊತ್ತಾಗಿ ದರ್ಶನ್​ ಮೇಲಿನ ಪ್ರೀತಿಯಿಂದ ನಾನು. ಅವರ ಬಳಿಕ ಅರುಣ ಕುಮಾರಿಯನ್ನು ಕರೆದುಕೊಂಡು ಹೋಗಿದ್ದು ಎಂದಿದ್ದಾರೆ. ಇನ್ನು ಅರುಣಕುಮಾರಿ ಮೊದಲಿಗೆ ಹರ್ಷ ಮಲೆಂಟಾ ಇದನ್ನೆಲ್ಲಾ ಮಾಡಿಸಿದ್ರು ಎಂದಿದ್ದು, ಆ ಬಳಿಕ ನಿರ್ಮಾಪಕ ಉಮಾಪತಿಯೇ ಇದನ್ನೆಲ್ಲಾ ಮಾಡಿಸಿದರು ಎಂದಿದ್ದರು. ಕಾನೂನು ಮೂಲಕವೇ ಎಲ್ಲವೂ ಇತ್ಯರ್ಥವಾಗಲಿ ಎಂದಿದ್ದ ಉಮಾಪತಿ ಹಾಗೂ ದರ್ಶನ್​ ಗೌಪ್ಯ ಸ್ಥಳದಲ್ಲಿ ಭೇಟಿಯಾಗಿ ರಾಜಿ ಸಂಧಾನ ಮಾಡಿಕೊಂಡಿದ್ದರು.

ಇಂದ್ರಜಿತ್​ ಲಂಕೇಶ್​ ಆರೋಪಗಳು ಏನು..?

ನಟ, ನಿರ್ಮಾಪಕ, ನಿರ್ದೇಶಕನೂ ಆಗಿರುವ ಇಂದ್ರಜಿತ್​ ಲಂಕೇಶ್​ ನಟ ದರ್ಶನ್​ ವಿರುದ್ಧ ನೇರ ಆರೋಪ ಮಾಡಿದ್ದಾರೆ. ನಟ ದರ್ಶನ್‌ಗೆ 25 ಕೋಟಿ ವಂಚನೆ ಯತ್ನ ಪ್ರಕರಣದಲ್ಲಿ ಇಲ್ಲೀವರೆಗೂ ಕ್ರಮ ಯಾಕೆ ಆಗಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಮೈಸೂರು ಪೊಲೀಸರು ಎಫ್​ಐಆರ್​ ದಾಖಲು ಮಾಡಿಕೊಂಡ ಬಳಿಕ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು. ಆದರೆ ರಾಜಿ ಪಂಚಾಯ್ತಿ ಮಾಡುವ ಅವಶ್ಯಕತೆ ಏನಿತ್ತು..? ಮೈಸೂರು ಪೊಲೀಸರು ಬಳೆ ತೊಟ್ಟೀದ್ದೀರಾ..? ಅಥವಾ ಒಬ್ಬ ನಟನ ಕೈಯಲ್ಲಿದ್ದೀರಾ..? ಎಂದು ಪೊಲೀಸ್​ ಇಲಾಖೆಯನ್ನು ಪ್ರಶ್ನಿಸಿದ್ದಾರೆ. ನಾನು ಹಲವಾರು ದೊಡ್ಡ ದೊಡ್ಡ ನಟರ ವಿಚಾರ ಮಾತನಾಡಿದ್ದೇನೆ. ನನಗೆ ಜೀವಭಯ ಇಲ್ಲ. ಪೊಲೀಸ್ ರಕ್ಷಣೆ ಕೇಳಿಲ್ಲ. ಗೃಹ ಸಚಿವರು ಆಕ್ಷನ್ ತೆಗೆದುಕೊಳ್ತಾರೆ. ರೈತರ ಬ್ರ್ಯಾಂಡ್ ಅಂಬಾಸೀಡರ್ ಆಗಿದ್ದಾರೆ. ಇವರ ಭಾಷೆ ಬಳಕೆ ಸರಿಯಾಗಿಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ.

ಹೋಟೆಲ್​ನಲ್ಲಿ ವೇಟರ್​ಗೆ ದರ್ಶನ್​ ಹಲ್ಲೆ..!

ಇತ್ತೀಚೆಗಷ್ಟೇ ಮೈಸೂರಿನ ಸಂದೇಶ್ ನಾಗರಾಜ್ ಹೋಟೆಲ್​ನಲ್ಲಿ ದಲಿತ ಸಮುದಾಯದ ವೇಟರ್ ಮೇಲೆ ಸ್ಟಾರ್ ನಟ ದರ್ಶನ್​ ಹಲ್ಲೆ ನಡೆಸಿದ್ದು ಆತನ ಕಣ್ಣಿಗೆ ಹಾನಿಯಾಗಿದೆ. ಈ ವಿಚಾರದಲ್ಲಿ ಹೊಟೇಲ್​ನ ಸಿಸಿಟಿವಿ ದೃಶ್ಯಗಳನ್ನು ಪರೀಕ್ಷಿಸಿ, ವೇಟರ್​ಗಳನ್ನು ವಿಚಾರಣೆ ನಡೆಸಿ, ತನಿಖೆಗೆ ಆದೇಶಿಸಬೇಕಿದೆ. ಮೈಸೂರು ಜಿಲ್ಲೆಯಲ್ಲಿ ಸೆಲೆಬ್ರೆಟಿಗಳ ನಡವಳಿಕೆ ಭಾಷೆ ಮಾತು ಮಿತಿ ಮೀರುತ್ತಿದೆ. ಮೈಸೂರಿನ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ನಟ ದರ್ಶನ್, ರಾಕೇಶ್ ಪಾಪಣ್ಣ, ಹರ್ಷ ಇದನ್ನೆಲ್ಲಾ ಮಾಡುತ್ತಿದ್ದಾರೆ. ಮೈಸೂರಿನ ಪೊಲೀಸ್ ಠಾಣೆಗಳು ಸೆಟಲ್ ಮೆಂಟ್ ಕೇಂದ್ರಗಳಾಗಿವೆ. ಸಂದೇಶ್ ನಾಗರಾಜ್ ಹೊಟೆಲ್ ಕೆಲಸ ಮಾಡೋ ಹುಡುಗನಿಗೆ ಹೊಡೆದಿದ್ದಾರೆ. ಸಪ್ಲೆಯರ್ ಹೆಂಡತಿ ಪೊರಕೆ ಹಿಡಿದುಕೊಂಡು ಬಂದಿದ್ರು. ಆ ಬಳಿಕ ಆ ಯುವಕನಿಗೆ ಸೆಟಲ್​ಮೆಂಟ್​ ಮಾಡಿ ಸುಮ್ಮನಿರಿಸಿದ್ದಾರೆ. ತಲೆ ಸೀಳುತ್ತಿನಿ ಅನ್ನೋ ಮಾತುಗಳನ್ನ ದರ್ಶನ್ ಹೇಳ್ತಿದ್ದಾರೆ. ಇನ್ನೂ ಬುದ್ದಿ ಕಲಿತಿಲ್ವಾ.. ? ಎಂದು ದರ್ಶನ್​ಗೆ ನೇರವಾಗಿ ಪ್ರಶ್ನೆ ಮಾಡಿದ್ದಾರೆ.

ಅರುಣಾ ಕುಮಾರಿಗೂ ಅನ್ಯಾಯವಾಗಿದೆ..?

25 ಕೋಟಿ ವಂಚನೆ ಯತ್ನ ಪ್ರಕರಣದಲ್ಲಿ ಅರುಣಾಕುಮಾರಿ ಸಿಲುಕಿಸಲಾಗಿದೆ. ಮಾಧ್ಯಮದಲ್ಲಿ ಆ ಹುಡುಗಿ ಬಿಟ್ ಬಿಡಿ ಅಂತ ಹೇಳ್ತಿದ್ದಾರೆ. ಹುಡುಗಿಗೆ ಅನ್ಯಾಯ ಆಗಿದೆ, ನ್ಯಾಯದ ಬಗ್ಗೆ ತನಿಖೆ ಆಗಬೇಕು..? ಸೆಲೆಬ್ರೆಟಿಗಳೆಲ್ಲಾ ಅವಿದ್ಯಾವಂತರಾ.? ಅರುಣಾ ಕುಮಾರಿಯನ್ನ ಯಾಕೆ ನಿಮ್ಮ ತೋಟಕ್ಕೆ ಕರೆಸಿಕೊಂಡ್ರಿ..? 25 ಕೋಟಿ ವಂಚನೆ ಕೇಸ್​ನಲ್ಲಿ ಈಗ ಕಾಂಪ್ರಮೈಸ್ ಆಗುತ್ತೆ ಅಂತಿದ್ದಾರೆ. ಆರ್ ಆರ್ ನಗರ ಆರ್ಚ್ ಬಳಿ ಅರುಣಾ ಕುಮಾರಿಯನ್ನ ಕರೆಸಿಕೊಂಡು ಹೆದರಿಸಿದ್ದಾರೆ ಎನ್ನುವ ಮೂಲಕ ಮುಗಿದು ಹೋದ ವಿಚಾರಕ್ಕೆ ಇಂದ್ರಜಿತ್​ ಲಂಕೇಶ್​ ತುಪ್ಪ ಸುರಿದು ಮತ್ತೆ ಬೆಂಕಿ ಹೊತ್ತಿಸಿದ್ದಾರೆ.

ದೂರಿನ ಬಗ್ಗೆ ಗೃಹ ಸಚಿವರು ಏನಂದ್ರು..?

ಇಂದ್ರಜಿತ್ ಲಂಕೇಶ್ ದೂರಿನ ಬಗ್ಗೆ ಮಾತನಾಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಇಂದ್ರಜಿತ್​ ಲಂಕೇಶ್​ ಮನವಿ ಪತ್ರದ ಆಧಾರದ ಮೇಲೆ ತನಿಖೆ ಮಾಡುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಇಂದ್ರಜಿತ್ ಆರೋಪದ ಬಗ್ಗೆ ನನಗೆ ಮಾಹಿತಿ ಇಲ್ಲ. ಇಂದ್ರಜಿತ್​ ಲಂಕೇಶ್​ ಮನವಿ ಪತ್ರದ ಮೇಲೆ ತನಿಖೆ ಮಾಡಲು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಮನವಿ ಪತ್ರದಲ್ಲಿ ಸ್ಪಷ್ಟವಾಗಿ ಏನು ಹೇಳಿಲ್ಲ. ಯಾವುದೇ ಸಾಕ್ಷಿಗಳನ್ನು ಅವ್ರು ನಮಗೆ ನೀಡಿಲ್ಲ. ಇಂದ್ರಜಿತ್ ಏನಾದ್ರು ಆರೋಪ ಮಾಡೋದಾದ್ರೆ ದೂರು ಕೊಟ್ಟು ಆರೋಪಗಳನ್ನ ಮಾಡಲಿ. ನನಗೆ ಕೊಟ್ಟ ಮನವಿ ಮೇಲೆ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ನಾಲ್ಕೈದು ದಿನಗಳಲ್ಲಿ ಕಂಪ್ಲೀಟ್​ ರಿಪೋರ್ಟ್​..!

ದರ್ಶನ್ ನಡವಳಿಕೆಯ ವಿರುದ್ಧ ಇಂದ್ರಜಿತ್ ಲಂಕೇಶ್ ಗುಡುಗಿದ್ದಾರೆ. ಮುಂದಿನ ನಾಲ್ಕೈದು ದಿನಗಳಲ್ಲಿ ಫುಲ್ ಡಿಟೇಲ್ಸ್ ಕೊಡ್ತೀನಿ. ಹಲ್ಲೆ ಪ್ರಕರಣವನ್ನ ಮುಚ್ಚಿಹಾಕೋ ಪ್ರಯತ್ನ ನಡೀತಿದೆ. ದರ್ಶನ್ ಫ್ಯಾನ್ಸ್​ಗೂ ಭಯಪಡಲ್ಲ. ಅರುಣಾ ಕುಮಾರಿಯ ವಿಷಯದಲ್ಲೂ ಅನ್ಯಾಯ ನಡಿತಿದೆ. ಸಂದೇಶ್ ನಾಗರಾಜ್ ಮೇಲೂ ಇಂದ್ರಜಿತ್ ಅನುಮಾನವಿದೆ ಎಂದಿದ್ದಾರೆ. ಈಗಾಗಲೇ ಸಿಸಿಟಿವಿ ಫುಟೇಜ್ ಡಿಲೀಟ್ ಆಗಿರೋ ಮಾಹಿತಿ ಸಿಕ್ಕಿದೆ. ಆದರೆ ಅವುಗಳನ್ನ ರಿ-ಟ್ರಿವ್ ಮಾಡಬಹುದು. ನಾನು ಯಾವುದಕ್ಕೂ ಹೆದರಲ್ಲ. ಎವಿಡೆನ್ಸ್ ಇಲ್ಲದೇ ನಾನು ಮಾತನಾಡಲ್ಲ ಎಂದಿದ್ದಾರೆ.

Related Posts

Don't Miss it !