ಸತ್ತು ಹೋಗಿರುವ ಅಧಿಕಾರಿ ಜೊತೆ IPS​ ಅಧಿಕಾರಿ ಸಂಬಂಧ – IFS ಗಂಡನ ಆರೋಪ..

ಐಎಎಸ್​, ಐಪಿಎಸ್​ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ಸರ್ವೇ ಸಾಮಾನ್ಯ. ಅದೇ ರೀತಿ ಅದೇಷ್ಟೋ ಜನ ಐಎಎಸ್​, ಐಪಿಎಸ್​ ಅಧಿಕಾರಿಗಳು ಜೋಡಿಗಳಾಗಿರುವುದನ್ನೂ ನಾವು ನೋಡಬಹುದು. ಆದರೆ ಇದೀಗ ಐಪಿಎಸ್​ ಅಧಿಕಾರಿ ಹಾಗೂ ಐಎಫ್​ಎಸ್​ ಅಧಿಕಾರಿ ನಡುವೆ ಅಕ್ರಮ ಸಂಬಂಧದ ವಾಗ್ದಾಳಿ ಪ್ರತಿದಾಳಿ ನಡೆದಿದೆ. ಅದರಲ್ಲೂ ಸತ್ತು ಹೋಗಿರುವ ಐಎಎಸ್​ ಅಧಿಕಾರಿ ಜೊತೆ ನನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದರು ಎಂದು IFS (ಭಾರತೀಯ ವಿದೇಶಾಂಗ ಸೇವೆ ) ಅಧಿಕಾರಿ ಆರೋಪಿಸಿದ್ದಾರೆ. ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿಗೂ ಪತ್ರ ಬರೆದಿದ್ದಾರೆ. ಐಎಎಸ್​ ಅಧಿಕಾರಿ ಅನುರಾಗ್ ತಿವಾರಿ ಜೊತೆ ವರ್ತಿಕಾ ಕಟಿಯಾರ್ ಅನೈತಿಕ ಸಂಬಂಧ ಹೊಂದಿದ್ದರು ಎಂದು ಐಪಿಎಸ್​ ಅಧಿಕಾರಿ ಆಗಿರುವ ಪತಿ ನಿತೀನ್ ಆರೋಪ ಮಾಡಿದ್ದಾರೆ.

ನನ್ನ ಪತ್ನಿ ಮತ್ತು ಅನುರಾಗ್ ತಿವಾರಿ ತುಂಬಾ ಆತ್ಮೀಯರಾಗಿದ್ದರು. ಇಬ್ಬರ ನಡುವೆ ಅಕ್ರಮ ಸಂಬಂಧ ಅಂತಾನೂ ನಿತೀನ್ ಆರೋಪ ಮಾಡಿದ್ದು, ಸೂಕ್ತ ತನಿಖೆಗೆ ಒತ್ತಾಯಿಸಿ ಮುಖ್ಯ ಕಾರ್ಯದರ್ಶಿಗೆ ನಿತೀನ್ ಪತ್ರ ಬರೆದಿದ್ದಾರೆ. ಅನುರಾಗ್​ ತಿವಾರಿ ಸಾವಿನ ಕೇಸ್‌ನಲ್ಲಿ ನನ್ನ ಪತ್ನಿ ವರ್ತಿಕಾ ಕಟಿಯಾರ್​ ಅವರನ್ನ ಸಿಬಿಐ ವಿಚಾರಣೆ ನಡೆಸಿದೆ. ಬೆಂಗಳೂರು ಹಾಗೂ ದೆಹಲಿಯಲ್ಲಿ 2 ಬಾರಿ ವರ್ತಿಕಾ ವಿಚಾರಣೆ ನಡೆದಿದೆ ಎಂದು ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ನಿತೀನ್ ಸುಭಾಷ್ ಉಲ್ಲೇಖ ಮಾಡಿದ್ದಾರೆ. 2014 ರಿಂದ 2019ರ ತನಕ 10 ಬಾರಿ ವಿದೇಶ ಪ್ರವಾಸ ಮಾಡಿದ್ದು, ಸರ್ಕಾರ ಅನುಮತಿ ನೀಡಿದ್ದಕ್ಕಿಂತಲೂ ಅಧಿಕ ದಿನಗಳ ಕಾಲ ವಿದೇಶದಲ್ಲೇ ವಾಸ್ತವ್ಯ ಹೂಡಿದ್ದಾರೆ ಎಂದು ದೂರಿದ್ದಾರೆ. ಆದರೆ ವರ್ತಿಕಾ ಕಟೀಯಾರ್​ ಮಾತ್ರ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾರೆ. ನಾನು ಎಲ್ಲಾ ಪ್ರವಾಸವನ್ನೂ ಸರ್ಕಾರದ ಅನುಮತಿಯಿಂದಲೇ ಹೋಗಿದ್ದೇನೆ. ಈ ಬಗ್ಗೆ ತನಿಖೆಯಾಗಲಿ ಎಂದಿದ್ದಾರೆ.

Read this also;

ನಿತೀನ್ ಸುಭಾಷ್, IFS ಅಧಿಕಾರಿ

ದೆಹಲಿಯಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲು ಮಾಡಿದ್ದೇನೆ. ಶೀಘ್ರದಲ್ಲೇ ಅವರ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ ಆಗುವುದರಲ್ಲಿದೆ. ಮೇ, ಜೂನ್​ ತಿಂಗಳಲ್ಲಿ ನನ್ನ ಮೇಲೆ ಆಸಿಡ್​ ಹಾಕುವ ಉದ್ದೇಶದಿಂದ ಕೊರೊನಾ ರೂಲ್ಸ್​ ಉಲ್ಲಂಘನೆ ಮಾಡಿಕೊಂಡು ಇಲ್ಲಿಗೆ ಬಂದಿದ್ದರು. ನಾವು ಫೋಟೋ ತೆಗೆದುಕೊಂಡು ಅದರ ಮೇಲೆ ಕೋರ್ಟ್​ನಲ್ಲಿ ದೂರು ನೀಡಿದ್ದೆವು. ಕೋರ್ಟ್​ ಸೂಚನೆ ಮೇರೆಗೆ ವಿಧಾನಸೌಧ ಪೊಲೀಸ್​ ಠಾಣೆಯಲ್ಲೂ ತನಿಖೆ ನಡೆಯುತ್ತಿದೆ. ಕಳೆದ 5 ದಿನಗಳ ಹಿಂದೆ ಮಾನಹಾನಿ ಕೇಸ್​ ಕೂಡ ಹಾಕಿದ್ದೇನೆ. ಇದೇ ಕೋಪದಲ್ಲಿ ಈ ರೀತಿ ನನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದಿದ್ದಾರೆ ಎಸ್​ಪಿ ವರ್ತಿಕಾ ಕಟಿಯಾರ್. ದಿವಂಗತ ಐಎಎಸ್​ ಅಧಿಕಾರಿ ಅನುರಾಗ್​ ತಿವಾರಿ ಕೊಡಗು ಡಿಸಿ ಆಗಿದ್ದಾಗ ನಾನು ಎಸ್​ಪಿ ಆಗಿ ಕೆಲಸ ಮಾಡಿದ್ದೇನೆ ಎನ್ನುವ ಕಾರಣಕ್ಕೆ ನನ್ನ ಬಳಿ ಸಿಬಿಐ ಮಾಹಿತಿ ಪಡೆದಿತ್ತು. ಬೀದರ್​ನಲ್ಲಿ ಕೆಲಸ ಮಾಡಿದ ಕಾರಣದಿಂದ ಅಲ್ಲಿನ ಅಧಿಕಾರಿಗಳನ್ನೂ ವಿಚಾರಣೆ ಮಾಡಿದ್ದಾರೆ. ನನ್ನನ್ನು ಮಾತ್ರವಲ್ಲ ಸುಮಾರು 50ಕ್ಕೂ ಹೆಚ್ಚು ಅಧಿಕಾರಿಗಳ ಬಳಿ ಸಿಬಿಐ ಹೇಳಿಕೆ ಪಡೆದಿದೆ. ಅದರಲ್ಲಿ ನಾನೂ ಕೂಡ ಒಬ್ಬಳು ಎಂದಿದ್ದಾರೆ. ಇನ್ನೂ ಇಂಟೆಲಿಜೆನ್ಸ್ ಬ್ಯೂರೋಗೆ ನನಗೆ ವರ್ಗಾವಣೆ ಆದರೂ ನಾನು ಐಎಫ್​ಎಸ್​ ಅಧಿಕಾರಿ ನಿತೀನ್​ ಸುಭಾಷ್​ ಅವರ ಭಯದಿಂದಲೇ ಕೇಂದ್ರ ಸೇವೆಗೆ ತೆರಳಲು ಸಾಧ್ಯವಾಗಲಿಲ್ಲ ಎಂದು ದೂರಿದ್ದಾರೆ.

ಅನುರಾಗ್ ತಿವಾರಿ, ದಿವಂಗತ IAS

Read this also;

ಸತ್ತವರ ಮೇಲೆ ಆರೋಪ ಮಾಡುವುದು ಸೂಕ್ತವೇ..?

ಉತ್ತರ ಪ್ರದೇಶದ ಲಕ್ನೌ ಮೂಲದ ಅನುರಾಗ್​ ತಿವಾರಿ 2007ರಲ್ಲಿ ಕರ್ನಾಟಕ ಕೇಡರ್​ ಅಧಿಕಾರಿಯಾಗಿ ಆಗಮಿಸಿದ್ದರು. ಕೊಡಗು, ಬೀದರ್​ ಸೇರಿದಂತೆ ಸಾಕಷ್ಟು ಕಡೆ ಕೆಲಸ ಮಾಡಿದ ಅನುರಾಗ್​ ತಿವಾರಿ, 2017ರ ಮೇ 17 ರಂದು ಲಕ್ನೌನ ಹಜರತ್​ ಗಂಜ್​ನ ಮೀರಾಬಾಯಿ ಗೆಸ್ಟ್​ ಹೌಸ್​ ರಸ್ತೆಬದಿ ಶವವಾಗಿ ಪತ್ತೆಯಾಗಿದ್ದರು. ಆ ಬಳಿಕ ಉತ್ತರ ಪ್ರದೇಶ ಸರ್ಕಾರ IAS ಅಧಿಕಾರಿ ಸಾವಿನ ತನಿಖೆ ಮಾಡಲು ವಿಶೇಷ ತನಿಖಾ ತಂಡ ನಿಯೋಜಿಸಿತ್ತು. ಆ ನಂತರ ಸಿಬಿಐ ತನಿಖೆ ಕೂಡ ನಡೆದಿತ್ತು. ವಿಶೇಷ ಕೋರ್ಟ್​ಗೆ ಅಂತಿಮ ವರದಿ ಸಲ್ಲಿಸಿತ್ತು. ಆದರೆ ವಿಶೇಷ ಕೋರ್ಟ್​ ವರದಿಯನ್ನು ತಿರಸ್ಕರಿಸಿ, ಮರುವಿಚಾರಣೆಗೆ ಸೂಚನೆ ಕೊಟ್ಟಿತ್ತು. ಸ್ವಾಭಾವಿಕ ಸಾವು ಎಂದಿದ್ದನ್ನು ಕೋರ್ಟ್​ ಒಪ್ಪಿರಲಿಲ್ಲ. ಇದೀಗ ಅನುರಾಗ್​ ತಿವಾರಿ ಸಾವಿನ ವಿಚಾರದಲ್ಲಿ ವರ್ತಿಕಾ ಕಟಿಯಾರ್​ ಹೆಸರು ಚಾಲ್ತಿಗೆ ಬಂದಿದೆ. ಇದೀಗ ಮತ್ತೊಂದು ತಿರುವುದು ಪಡೆಯುತ್ತಾ ಎನ್ನುವ ಕುತೂಹಲ ಸೃಷ್ಟಿಯಾಗಿದೆ. ಅಥವಾ ಕೌಟುಂಬಿಕ ಕಲಹ ಈ ರೀತಿ ಬೀದಿಗೆ ಬಂದಿದ್ಯಾ ಎನ್ನುವುದು ಮುಂದಿನ ದಿನಗಳಲ್ಲಿ ಬಹಿರಂಗ ಆಗಬೇಕಿದೆ.

Related Posts

Don't Miss it !