ಸಿಂದಗಿ ಅಖಾಡದಲ್ಲಿ ದೇವೇಗೌಡರ ಸರ್ಕಸ್​, ಜೆಡಿಎಸ್​ ಗೆಲುವಿನ ಲೆಕ್ಕಾಚಾರ..!

ವಿಜಯಪುರ ಸಿಂದಗಿ ವಿಧಾನಸಭಾ ಕ್ಷೇತ್ರವನ್ನು ಜೆಡಿಎಸ್​ ತನ್ನಲ್ಲೇ ಉಳಿಸಿಕೊಳ್ಳಲು ಭಾರೀ ಕಸರತ್ತು ನಡೆಸಿದೆ. ಆದರೆ ಜೆಡಿಎಸ್​ ಮುಖಂಡ ಅಶೋಕ್​ ಮನಗೂಳಿ ಅವರನ್ನು ಕಾಂಗ್ರೆಸ್​​ಗೆ ಸೆಳೆದು ಜೆಡಿಎಸ್​ ಶಕ್ತಿಯನ್ನು ಬಗ್ಗುಬಡಿಯುವ ಪ್ರಯತ್ನ ಮಾಡಿದೆ. ಇವರಿಬ್ಬರ ನಡುವೆ ಗೆಲುವಿನ ಕೇಕೆ ಹಾಕುವುದಕ್ಕೆ ಬಿಜೆಪಿ ಸಕಲ ತಯಾರಿ ನಡೆಸಿದೆ. ಆದರೆ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ಮಾತ್ರ ಶತಾಯಗತಾಯ ಗೆಲುವು ಕಾಣಲೇ ಬೇಕು. ಅಭ್ಯರ್ಥಿಗಾಗಿ ಆಪರೇಷನ್​ ಹಸ್ತ ಮಾಡಿದ ಕಾಂಗ್ರೆಸ್​​ಗೆ ಸೋಲುಣಿಸಬೇಕು ಎನ್ನುವ ದೃಢ ನಿರ್ಧಾರ ಮಾಡಿಕೊಂಡು ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿದ್ದಾರೆ. ಪ್ರತಿಯೊಂದು ಭಾಗಗಳಿಗೂ ಹೋಗಿ ಜನರಲ್ಲಿ ಮತಯಾಚನೆ ಮಾಡಿದ್ದಾರೆ. ನನ್ನ ಕೊಡುಗೆ ಈ ಕ್ಷೇತ್ರದಲ್ಲಿ ಕಾಣಿಸುತ್ತಿದೆ ಎಂದರೆ ಮಾತ್ರ ನನಗೆ ಮತ ನೀಡಿ ಎಂದು ಇಳಿವಯಸ್ಸಿನಲ್ಲೂ ಮನವಿ ಮಾಡುತ್ತಿದ್ದಾರೆ. ಗೌಡರು ಅಖಾಡದಲ್ಲೇ ಬೀಡುಬಿಟ್ಟಿರುವ ವಿಚಾರ ಕಾಂಗ್ರೆಸ್​ ಹಾಗೂ ಬಿಜೆಪಿ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಸೃಷ್ಟಿಸಿದೆ.

ಅಲ್ಪಸಂಖ್ಯಾತ ಅಭ್ಯರ್ಥಿ ಆಯ್ಕೆಯಲ್ಲೇ ಜೆಡಿಎಸ್​ ಜಾಣ್ಮೆ..!

ಬಿಜೆಪಿ ಹಿಂದುತ್ವದ ಮೇಲೆ ಮತಬ್ಯಾಂಕ್​ ಹಿಡಿದುಕೊಳ್ಳುವುದು ಬಹುತೇಕ ಖಚಿತ. ಅದರಲ್ಲಿ ಕಾಂಗ್ರೆಸ್​ನ ಅಶೋಕ್​ ಮನಗೂಳಿಗೂ ಪಾಲು ಇದ್ದೇ ಇರುತ್ತದೆ. ಜೆಡಿಎಸ್​ ಪಕ್ಷವನ್ನು ಬೆಂಬಲಿಸುವ ಕೆಲವು ಪ್ರಮಾಣವೂ ಇರಲಿದೆ ಎನ್ನುವುದೂ ಅಷ್ಟೇ ಸತ್ಯ. ಈ ಮಧ್ಯೆ ಜೆಡಿಎಸ್​ ಅಲ್ಪ ಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಸಿ ರಾಜಕೀಯ ಚತುರತೆ ಪ್ರದರ್ಶನ ಮಾಡಿದೆ. ಮುಸ್ಲಿಂ ಸಮುದಾಯ ತಮ್ಮದೇ ಅಭ್ಯರ್ಥಿಗೆ ಒಗ್ಗಟ್ಟಿನಿಂದ ಮತ ಚಲಾಯಿಸಿದರೆ, ಹಿಂದೂಗಳ ಮತವೂ ಒಂದಿಷ್ಟು ಪ್ರಮಾಣದಲ್ಲಿ ಜೆಡಿಎಸ್​​ ಬುಟ್ಟಿ ಸೇರುವುದು ನಿಶ್ಚಿತ, ಈ ಸೂತ್ರದಂತೆಯೇ ಜೆಡಿಎಸ್​ ನಾಯಕರು ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್​​ ತನ್ನ ಮುಜುಗರವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಅಶೋಕ್​ ಮನಗೂಳಿ ಗೆಲ್ಲದಿದ್ದರೂ ಪರವಾಗಿಲ್ಲ, ಜೆಡಿಎಸ್​ ಗೆಲ್ಲಬಾರದು ಎನ್ನುವ ಜಿದ್ದಿಗೆ ಬಿದ್ದಿದೆ ಎನ್ನುತ್ತಾರೆ ಜೆಡಿಎಸ್​ ಕಾರ್ಯಕರ್ತರು.

Read this;

ಅಶೋಕ್​ ಮನಗೂಳಿ ಕ್ಷೇತ್ರದಲ್ಲಿ ಉತ್ತಮ ಹೆಸರು ಇಲ್ಲ..!

ದಿವಂಗತ ನಾಯಕ ಮನಗೂಳಿ ಮಾಮು ಕ್ಷೇತ್ರದಲ್ಲಿ ತನ್ನದೇ ಆದ ಪ್ರಭಾವ ಹೊಂದಿದ್ದರು. ಮಾಮು ನಿಧನರಾದ ಬಳಿಕ ಆದೇ ಅನುಕಂಪದ ಆಧಾರದಲ್ಲಿ ಮತ ಪಡೆದುಕೊಳ್ಳುವ ಕಾರಣದಿಂದ ಕಾಂಗ್ರೆಸ್​ ಓಡೋಡಿ ಬಂದು ಅಶೋಕ್​ ಮನಗೂಳಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಯ್ತು. ಕಾಂಗ್ರೆಸ್​ ಪಕ್ಷದಿಂದ ಟಿಕೆಟ್​ ಘೋಷಣೆ ಕೂಡ ಮಾಡಲಾಯ್ತು. ಆದರೆ ಬುದ್ಧಿವಂತ ನಡೆ ಅನುಸರಿಸಿದ ಸರ್ಕಾರ, ಆಗ ಚುನಾವಣೆಯನ್ನೇ ಘೋಷಣೆ ಮಾಡಲಿಲ್ಲ. ಇದೀಗ ಅಶೋಕ್​ ಮನಗೂಳಿ ಪರವಾಗಿ ಯಾವುದೇ ಅನುಕಂಪ ಕಾಣಿಸುತ್ತಿಲ್ಲ. ಅಷ್ಟು ಮಾತ್ರವಲ್ಲದೆ ಅಶೋಕ್​ ಮನಗೂಳಿ ಕ್ಷೆತ್ರದಲ್ಲಿ ಅಷ್ಟು ಪ್ರಬಾವ ಹೊಂದಿಲ್ಲ, ಉತ್ತಮ ಹೆಸರನ್ನೂ ಗಳಿಸಿಲ್ಲ ಎನ್ನಲಾಗ್ತಿದೆ. ಕೇವಲ ಎಂ.ಸಿ ಮನಗೂಳಿ ಅವರಿಗೆ ದೇವೇಗೌಡರ ಸಹಕಾರದಿಂದ ಕ್ಷೇತ್ರದಲ್ಲಿ ಮಾಡಿಸಿರುವ ಅಭಿವೃದ್ಧಿ ಕೆಲಸವೇ ಗೆಲುವಿಗೆ ಶ್ರೀರಕ್ಷೆಯಾಗಿತ್ತು. ದೇವೇಗೌಡರ ಸಹಕಾರದಿಂದಲೇ ಅಭಿವೃದ್ಧಿ ಮಾಡಿದ ಹಿನ್ನಲೆಯಲ್ಲಿ ದೇವೇಗೌಡರ ಪ್ರತಿಮೆಯನ್ನೇ ಮಾಡಿಸಿದ್ದರು. ದೇವೇಗೌಡರೇ ನೀರಾವರಿ ಯೋಜನೆ ಜಾರಿ ಮಾಡಿದ್ದರಿಂದ ಜೆಡಿಎಸ್​ ಪಕ್ಷಕ್ಕೆ ಬೆಂಬಲ ಸಿಗಲಿದೆ ಎನ್ನಲಾಗಿದೆ.

Also Read;

ಬಿಜೆಪಿ, ಕಾಂಗ್ರೆಸ್​ ಹಣ ಹಂಚಿಕೆ ವರ್ಕ್​ ಆಗುತ್ತಾ..?

ಬಿಜೆಪಿ ಪಕ್ಷದಿಂದ ಸಾಕಷ್ಟು ಸಚಿವರುಗಳು ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. ಇನ್ನೂ ಕಾಂಗ್ರೆಸ್​ನ ಘಟಾನುಘಟಿ ನಾಯಕರೂ ಅಖಾಡದಲ್ಲಿ ಇದ್ದಾರೆ. ಜೆಡಿಎಸ್​ ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರೂ ಹಣ ಹಂಚಿಕೆ ಮಾಡ್ತಾರೆ ಎಂದು ಎದುರಾಳಿ ಪಕ್ಷದ ಕಡೆಗೆ ಕೈ ತೋರಿಸುತ್ತಾರೆ. ಆದರೆ ಅಂತಿಮವಾಗಿ ಎಲ್ಲರೂ ಹಣ ಹಂಚುತ್ತಾರೆ. ತಮ್ಮ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹಂಚಲಾಗುತ್ತದೆ. ಯಾರು ಎಷ್ಟು ಹಣ ಕೊಟ್ಟು ತಮ್ಮ ಪರವಾಗಿ ಜನರ ಮನವೊಲಿಕೆ ಮಾಡಿಕೊಳ್ತಾರೆ ಎನ್ನುವುದರ ಮೇಲೆ ಚುನಾವಣಾ ಭವಿಷ್ಯ ನಿಂತಿದೆ ಎನ್ನುತ್ತಾರೆ ಸ್ಥಳೀಯರು. ಆದರೆ ಯಾರು ಹಣ ಕೊಟ್ಟರೂ ಜನರು ನಿರಾವರಿ ಯೋಜನೆ ಮಾಡಿಕೊಟ್ಟು ರೈತರ ಸಂಕಷ್ಟಕ್ಕೆ ಸಹಾಯ ಮಾಡಿರುವ ವಿಚಾರದ ಮೇಲೆ ಮತ ಚಲಾವಣೆ ಆದರೆ ದೇವೇಗೌಡರ ಮುಂದಾಳತ್ವದ ಜೆಡಿಎಸ್​ ಗೆಲುವು ಸಾಧಿಸುವುದು ಶತಸಿದ್ಧ. ಒಂದು ವೇಳೆ ಮುಸ್ಲಿಂ ಸಮುದಾಯದ ಮತಗಳನ್ನು ವಿಭಜನೆ ಮಾಡುವಲ್ಲಿ ಕಾಂಗ್ರೆಸ್​ ಯಶಸ್ಸು ಸಾಧಿಸಿದ್ರೆ ಜೆಡಿಎಸ್​ ಸೋಲಬಹುದು. ಆದರೆ ಕಾಂಗ್ರೆಸ್​ ಗೆಲ್ಲುವುದು ತೀರ ಕಠಿಣ ಎನ್ನುತ್ತಾರೆ ಮತದಾರರು. ಒಂದು ವೇಳೆ ಮುಸ್ಲಿಂ ಸಮುದಾಯದ ಅಭ್ಯರ್ಥಿ ಪರವಾಗಿ ಇಡೀ ಮುಸ್ಲಿಂ ಸಮುದಾಯ ನಿಂತರೆ, ಜೆಡಿಎಸ್​ ಜಯಭೇರಿ ಬಾರಿಸಲಿದೆ. ಇಲ್ಲದಿದ್ದರೆ ಬಿಜೆಪಿ ಗೆಲುವು ಖಚಿತ ಎನ್ನಲಾಗ್ತಿದೆ.

Related Posts

Don't Miss it !