2023ರ ವಿಧಾನಸಭಾ ಚುನಾವಣೆಗೆ JDS ಮುಹೂರ್ತ..! 123 ಟಾರ್ಗೆಟ್​..

ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿಯುವ ಕನಸು ಕಟ್ಟಿಕೊಂಡಿರುವ ಜಾತ್ಯಾತಿತ ಜನತಾದಳ ಮಿಷನ್​ – 123 ಕಾರ್ಯಗಾರ ಹಮ್ಮಿಕೊಂಡಿದೆ. ಇಂದಿನಿಂದ 4 ದಿನಗಳ ಕಾಲ ನಡೆಯುತ್ತಿರುವ ಮಿಷನ್ – 123 ಕಾರ್ಯಗಾರ ಮುಂದಿನ ಚುನಾವಣೆ ದಿಕ್ಸೂಚಿ ಎನ್ನಲಾಗುತ್ತಿದೆ. ಬಿಡದಿ ಬಳಿಯ ಕೇತಗಾನಹಳ್ಳಿಯ ಹೆಚ್.ಡಿ ಕುಮಾರಸ್ವಾಮಿ ಅವರ ತೋಟದ ಮನೆಯ ಕಾರ್ಯಗಾರದಲ್ಲಿ 123 ಜನ ಜೆಡಿಎಸ್ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗುತ್ತದೆ. 123 ಜನರಿಗೆ ಗ್ರೀನ್ ಕಾರ್ಡ್ ವಿತರಣೆ ಕೂಡ ಮಾಡಲಾಗುತ್ತದೆ. ಮುಂದಿನ ಜನವರಿ ತನಕ ಇ ಅಭ್ಯರ್ಥಿಗಳ ಕೆಲಸವನ್ನ ವೀಕ್ಷಣೆ ಮಾಡಲಾಗುತ್ತೆ. ಅವರ ಕೆಲಸ, ಪಕ್ಷ ಸಂಘಟನೆ ನೋಡಿಕೊಂಡು ಎಲ್ಲೋ ಹಾಗೂ ರೆಡ್ ಕಾರ್ಡ್ ವಿತರಣೆ ಮಾಡುವ ಕೆಲಸ ಆಗುತ್ತದೆ.

123 ಜನರಿಗೆ ಸಿಗಲಿದೆ ಗ್ರೀನ್​ ಕಾರ್ಡ್​..!

ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಗಾರ ನಡೆಯುತ್ತಿದ್ದು, ಗ್ರೀನ್​ ಕಾರ್ಡ್​ ಪಡೆಯುವ ಅಭ್ಯರ್ಥಿಗಳು ಇಂದಿನಿಂದಲೇ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇರುವಾಗಲೇ ಅಭ್ಯರ್ಥಿಗಳ ಆಯ್ಕೆ ನಡೆಸುತ್ತಿರುವುದು ಚುನಾವಣೆ ಗೆಲ್ಲಲು ವೇದಿಕೆ ಕೊಟ್ಟಂತೆ ಆಗುತ್ತದೆ. ಪಕ್ಷ ಸಂಘಟನೆಗೆ ಅವಕಾಶವೂ ಸಿಗುತ್ತದೆ ಎನ್ನುವ ಯೋಜನೆ ರೂಪಿಸಲಾಗಿದೆ. ಒಂದು ವೇಳೆ ಟಿಕೆಟ್​ ಘೋಷಣೆ ಆಗಿದೆ ಎನ್ನುವ ಕಾರಣಕ್ಕೆ ಮನೆಯಲ್ಲಿ ಇದ್ದರೆ ಆಗಲ್ಲ, ಕೆಲಸ ಮಾಡಬೇಕು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

Read this also;

ಪ್ರಾದೇಶಿಕ ಪಕ್ಷಗಳ ಮಹತ್ವದ ಬಗ್ಗೆ ಮನವರಿಕೆ..!

ರಾಜ್ಯದ ಎಲ್ಲಾ ಕ್ಷೇತ್ರದ ಅಧ್ಯಕ್ಷರು, ಪ್ರಮುಖ ಮುಖಂಡರು ಕಾರ್ಯಗಾರದಲ್ಲಿ ಭಾಗಿಯಾಗಲಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕೂಡ ಉಪಸ್ಥಿತಿ ಇರಲಿದ್ದಾರೆ. ಪ್ರಾದೇಶಿಕ ಪಕ್ಷಗಳ ಮಹತ್ವ ಹಾಗೂ ಬೆಳವಣಿಗೆ ಬಗ್ಗೆ ಹಿರಿಯ ಪತ್ರಕರ್ತ ಸುಗುತ ಶ್ರೀನಿವಾಸ್ ಮಾತನಾಡಲಿದ್ದಾರೆ. ಪಕ್ಷದ ಅಭ್ಯರ್ಥಿಗಳ ಬೆಳವಣಿಗೆ ಬಗ್ಗೆ ಕರ್ಜಗಿರವರು ಮಾತನಾಡಲಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

Read this also;

ಜೆಡಿಎಸ್​ ಕಾರ್ಯಗಾರ ಕೈ ಹಿಡಿಯುವ ಭರವಸೆ..!

ಈಗಾಗಲೇ ಕೆಲವು ಶಾಸಕರು ತೆನೆ ಇಳಿಸಿ ಕೈ ಹಿಡಿಯುವ ಮನಸ್ಸು ಮಾಡಿದ್ದಾರೆ. ಜೆಡಿಎಸ್​ ತೊರೆಯುವುದು ಬಹುತೇಕ ಖಚಿತ ಎನ್ನುವ ನಾಯಕರು ಇಂದಿನ ಕಾರ್ಯಗಾರ ಸಭೆಗೆ ಗೈರು ಹಾಜರಾಗುವ ಮೂಲಕ ಮತ್ತೊಮ್ಮೆ ಬಹಿರಂಗ ಆಗಲಿದ್ದಾರೆ. ಇಷ್ಟೂ ದಿನಗಳ ಕಾಲ ಬೇರೊಂದು ಪಕ್ಷದ ಆಶ್ರಯದಲ್ಲಿ ಮುಖ್ಯಮಂತ್ರಿ ಆಗಿ ಜನಮೆಚ್ಚುವ ಕೆಲಸ ಮಾಡಿರುವ ಕುಮಾರಸ್ವಾಮಿ, ಈ ಬಾರಿ ಟಾರ್ಗೆಟ್​ 123 ಹಾಕಿಕೊಂಡಿದ್ದಾರೆ. ಒಂದೂವರೆ ವರ್ಷದ ಮುನ್ನವೇ ಟಿಕೆಟ್​ ಘೋಷಣೆ ಆಗ್ತಿರೋದು ಅಧಿಕಾರದ ಕನಸು ನನಸು ಮಾಡಲು ಅವಕಾಶ ಸಿಕ್ಕಂತಾಗಿದೆ. ಒಟ್ಟು 123 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದ್ದು, ಅದರಲ್ಲಿ ಚುನಾವಣೆ ವೇಳೆ ಎಷ್ಟು ಜನ ನಾಯಕರ ಗಮನ ಸೆಳೆಯುವ ಕೆಲಸ ಮಾಡಲಿದ್ದಾರೆ ಎನ್ನುವುದರ ಮೇಲೆ ಮುಂದಿನ ಸರ್ಕಾರದ ನಿರೀಕ್ಷೆ ಶುರುವಾಗಲಿದೆ.

Related Posts

Don't Miss it !