NEWS18 ಪತ್ರಕರ್ತ ಸತೀಶ್​. A ಕಾರಿಗೆ ನಡುರಸ್ತೆಯಲ್ಲೇ ಬೆಂಕಿ..! ಕಾರಣ ಏನು ಗೊತ್ತಾ..?

ಇತ್ತೀಚಿನ ದಿನಗಳಲ್ಲಿ ರಸ್ತೆಯಲ್ಲಿ ವಾಹನಗಳು ಬೆಂಕಿಗಾಹುತಿ ಆಗುವ ಪ್ರಕರಣಗಳು ಹೆಚ್ಚಾಗುತ್ತಿದೆ. ನಿನ್ನೆ ರಾತ್ರಿ 8.30ರ ಸುಮಾರಿ ಬೆಂಗಳೂರಿನ ನಾಗವಾರ ಬಳಿ ನೀಲಿ ಬಣ್ಣದ ಬಲೆನೋ ಕಾರು (KA-05 MV 5864) ಹೊತ್ತಿ ಉರಿದಿದೆ. ಕುಟುಂಬ ಸಮೇತ ಹೊಸಕೋಟೆ ಬಳಿಕ ಪೂಜಾರಮ್ಮನಹಳ್ಳಿಗೆ ಕೌಟುಂಬಿಕ ಕಾರ್ಯದ ನಿಮಿತ್ತ ತೆರಳುತ್ತಿದ್ದ ಸತೀಶ್​ ಆಂಜಿನಪ್ಪ ಹಾಗು ಪತ್ನಿ, ಇಬ್ಬರು ಮಕ್ಕಳು ಅದೃಷ್ಟವಷಾತ್​ ಯಾವುದೇ ಸಮಸ್ಯೆ ಆಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಬೆಂಕಿಯನ್ನು ನಂದಿಸಲು ದಾರಿಹೋಕರು ಸೇರಿದಂತೆ ಸಾಕಷ್ಟು ಪ್ರಯತ್ನದ ನಡುವೆಯೂ ಕಾರು ಸುಟ್ಟು ಕರಕಲಾಗಿದೆ. ಬೆಂಕಿಯ ಜ್ವಾಲೆ ಹೆಚ್ಚಾಗುತ್ತಿದ್ದ ಹಾಗೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.

ನಡು ರಸ್ತೆಯಲ್ಲಿ ಕಾರಿಗೆ ಬೆಂಕಿ ಬಿದ್ದಿದ್ದು ಹೇಗೆ..? ಕಾರಣ ಏನು..?

ಸುವರ್ಣ ಟಿವಿಯಲ್ಲಿ ಪತ್ರಕರ್ತನಾಗಿ ವೃತ್ತಿ ಜೀವನ ಆರಂಭ ಮಾಡಿದ್ದ ಸತೀಶ್ ಆಂಜಿನಪ್ಪ​, ನಂತರ ಪಬ್ಲಿಕ್​ ಟಿವಿ, ಈ-ಟಿವಿ ಕನ್ನಡ, ಟಿವಿ-5, ಬಿ-ಟಿವಿ ಹಾಗು ಇದೀಗ ನ್ಯೂಸ್​18 ಕನ್ನಡ (ಈ-ಟಿವಿ ಕನ್ನಡ ಬದಲಾದ ಹೆಸರು) ದಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಶುಕ್ರವಾರ ಕಚೇರಿಗೆ ತೆರಳಿದ್ದ ಸತೀಶ್​ ಆಂಜಿನಪ್ಪ, ಕೆಲಸ ಮುಗಿಸಿಕೊಂಡು ಸ್ವಂತ ಗ್ರಾಮದಲ್ಲಿ ಕೌಟುಂಬಿಕ ಕಾರ್ಯಕ್ರಮವಿದೆ ಎನ್ನುವ ಕಾರಣಕ್ಕೆ ಕುಟುಂಬಸ್ಥರನ್ನು ಕರೆದುಕೊಂಡು ತೆರಳುತ್ತಿದ್ದರು ಎನ್ನಲಾಗಿದೆ. ಕುರುಬರಹಳ್ಳಿಯ ನಿವಾಸದಿಂದ ಹೆಬ್ಬಾಳ ಮಾರ್ಗವಾಗಿ ತೆರಳುತ್ತಿದ್ದಾಗ ನಾಗವಾರ ಬಳಿಕ ಕಾರಿನ ಬಾನೆಟ್​ ಮೇಲೆ ಬೆಂಕಿಯ ಸಣ್ಣ ಕಿಡಿಯೊಂದು ಕಾಣಿಸಿಕೊಳಡಿದೆ. ಕೂಡಲೇ ಕಾರನ್ನು ಬದಿಗೆ ನಿಲ್ಲಿಸಿ ನೋಡೋಣ ಎನ್ನುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಆವರಿಸಿತ್ತು ಎನ್ನಲಾಗಿದೆ.

ಕಾರು ಕೊಂಡಿದ್ದು ಯಾವಾಗ..? ಬೊಲೆನೋ ಕಂಪನಿಗೆ ಕಪ್ಪು ಚುಕ್ಕೆ..!

2015ರಲ್ಲಿ ಮಾರುಕಟ್ಟೆಗೆ ಬಂದಿದ್ದ ಸಿಜುಕಿ ಕಂಪನಿಯ ಬಲೆನೋ ಕಾರು, ಬಡ ಮತ್ತು ಮಧ್ಯಮ ವರ್ಗದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಮಾರುತಿ ಕಂಪನಿಯ ಸ್ವಿಫ್ಟ್​ಗೆ ಬದಲಾಗಿ ಬಲೆನೋ ಕಾರು ಖರೀದಿ ಮಾಡಬಹುದು ಎನ್ನುವ ಚರ್ಚೆಗಳು ಆರಂಭದಲ್ಲಿ ನಡೆದಿದ್ದವು. ಸ್ಥಳಾವಕಾಶ ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ಜನರನ್ನು ಆಕರ್ಷಣೆ ಮಾಡಿತ್ತು. ಅದೇ ಕಾರಣದಿಂದ 2017ರಲ್ಲಿ ಸತೀಶ್​ ಆಂಜಿನಪ್ಪ ಬಲೆನೋ ಟಾಪ್​ ಎಂಡ್​ ಕಾರು ಖರೀದಿ ಮಾಡಿದ್ದರು. ಬೆಂಗಳೂರಿನ ಟ್ರಾಫಿಕ್​​ ನಡುವೆ ಹೆಚ್ಚಾಗಿ ಕಾರು ಬಳಸದ ಸತೀಶ್​, ಊರಿಗೆ ತೆರಳುತ್ತಿದ್ದ ಕಾರಣಕ್ಕೆ ಮಕ್ಕಳ ಸಮೇತ ಕಾರಿನಲ್ಲಿ ಹೊರಟಿದ್ದರು. ಜಿಟಿಜಿಟಿ ಮಳೆಯ ನಡುವೆಯೂ ಕಾರು ಹೊತ್ತಿ ಉರಿದಿರುವುದು ಅಚ್ಚರಿಗೆ ಕಾರಣವಾಗಿದೆ. ತಾಂತ್ರಿಕ ಸಮಸ್ಯೆ ಬಗ್ಗೆ ಅಧಿಕಾರಿಗಳು ಪರಿಶೀಲಿಸಿದ ಬಳಿಕ ಘಟನೆಗೆ ನಿಖರ ಕಾರಣ ತಿಳಿಯಬೇಕಿದೆ.

Related Posts

Don't Miss it !