ವಿಶ್ವವಿದ್ಯಾಲಯ ಗೆಸ್ಟ್‌ಹೌಸಲ್ಲಿ ಮಧುಮಂಚ ಏರಿದ ನವ ದಂಪತಿ..! ವಿಡಿಯೋ ವೈರಲ್..

ವಿಶ್ವವಿದ್ಯಾಲಯಗಳಲ್ಲಿ ಅತಿಥಿ ನಿವಾಸ ನಿರ್ಮಾಣ ಮಾಡಲಾಗಿರುತ್ತದೆ. ಅಂದರೆ ವಿಶ್ವವಿದ್ಯಾಲಯಗಳ ಕೆಲಸದ ಮೇಲೆ ಬರುವ ಅಧಿಕಾರಿಗಳಿಗಾಗಿ ಅಥವಾ ವಿಶ್ವವಿದ್ಯಾಲಯದ ಕಾರ್ಯಗಳಿಗಾಗಿ ಬರುವ ಅಧಿಕಾರಿಗಳ ಬಳಕೆಗೆ ಮೀಸಲಿಡುವುದು ಸಾಮಾನ್ಯ. ಇನ್ನೂ ವಿಶ್ವವಿದ್ಯಾಲಯದ ಪ್ರೊಫೆಸರ್​ಗಳು ಕೆಲಸಗಳ ಒತ್ತಡದಲ್ಲಿದ್ದಾಗಲೂ ಅತಿಥಿ ಗೃಹ ಬಳಕೆ ಮಾಡಿಕೊಳ್ಳುವುದು ಸಾಮಾನ್ಯ. ಜೊತೆಗೆ ತನಗೆ ಬೇಕಾದವರು ಬಂದಾಗಲೂ ಕೊಠಡಿ ಕಾಯ್ದಿರಿಸುವ ಪರಿಪಾಠ ಬೆಳೆದುಕೊಂಡು ಬಂದಿದೆ. ಇದರಿಂದ ಯಾವುದೇ ಸಮಸ್ಯೆಯೂ ಆಗುವುದಿಲ್ಲ. ಆದರೆ ಇನ್ಮುಂದೆ ವಿಶ್ವವಿದ್ಯಾಲಯಗಳಲ್ಲಿ ಕೊಠಡಿ ಕಾಯ್ದಿರಿಸಿವುದು ಕಠಿಣ ಆಗುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಹನಿಮೂನ್​ ಮಾಡಿಕೊಂಡಿರುವುದು.

ಗೆಸ್ಟ್​ಹೌಸ್​ನಲ್ಲಿ ಹನಿಮೂನ್​ ಮಾಡಿದ್ದು ಎಲ್ಲಿ..?

ಆಂಧ್ರಪ್ರದೇಶದ ಕಾಕಿನಾಡದ ಜವಾಹರಲಾಲ್​ ನೆಹರು ತಾಂತ್ರಿಕ ವಿಶ್ವವಿದ್ಯಾಲಯದ ಗೆಸ್ಟ್​ಹೌಸ್​ನಲ್ಲಿ ಹನಿಮೂನ್​​ ವಿಡಿಯೋ ವೈರಲ್​ ಆಗಿದೆ. ನೂತನ ಜೋಡಿ ವಿಶ್ವವಿದ್ಯಾಲಯ ಗೆಸ್ಟ್​ಹೌಸ್​ನಲ್ಲಿ ಮೊದಲ ರಾತ್ರಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೆ ಗುಲಾಬಿಯಿಂದ ಅಲಂಕೃತವಾದ ಮಧುಮಂಚವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಸಾಕಷ್ಟು ಟೀಕೆಗಳು ಬಂದ ಬಳಿಕ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಐವರ ನೇತೃತ್ವದ ಆಂತರಿಕ ತನಿಖಾ ಸಮಿತಿಯನ್ನು ನೇಮಿಸಿತ್ತು. ಜಿವಿಆರ್​ ಪ್ರಸಾದ್​ ರಾಜು ಅವರ ನೇತೃತ್ವದ ಸಮಿತಿ ವರದಿ ಕೊಟ್ಟಿದೆ. ರಾಜ್ಯ ಸರ್ಕಾರ ಕೂಡ ವರದಿ ಕೇಳಿದೆ.

ಇದನ್ನೂ ಓದಿ;

ರೂಮ್​ ಬುಕ್​ ಮಾಡಿದ್ಯಾರು ಗೊತ್ತಾ..?

ಮಹಿಳಾ ಸಬಲೀಕರಣ ವಿಭಾಗದ ನಿರ್ದೇಶಕಿ ಎ ಸ್ವರ್ಣ ಕುಮಾರಿ ರೂಮ್​ ಬುಕ್​ ಮಾಡಿದ್ದರು ಎನ್ನುವುದು ಗೊತ್ತಾಗಿದೆ. ಆಗಸ್ಟ್​ 18 ಮತ್ತು 19 ರಂದು ರೂಮ್​ ಬುಕ್​ ಆಗಿತ್ತು. ಆಗಸ್ಟ್​ 20ರಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ತನಿಖೆಯಲ್ಲಿ ನೂತನವಾಗಿ ಮದುವೆಯಾಗಿದ್ದ ದಂಪತಿಗಳಿಗೆ ರೂಮ್​ ಬುಕ್​ ಆಗಿತ್ತು. ಸಾಕಷ್ಟು ಸಂಬಂಧಿಕರಿಗೂ ಕೂಡ ರೂಮ್​ ಬುಕ್​ ಆಗಿತ್ತು ಎನ್ನಲಾಗಿದೆ. ಈ ಹಿಂದೆ ಇದ್ದ ರಿಜಿಸ್ಟಾರ್​ ಸತ್ಯನಾರಾಯಣ ಜುಲೈ 12ರಂದೇ ರೂಮ್​ ಬುಕ್​ ಮಾಡಿದ್ದರು. ಅದರಂತೆ ಆಗಸ್ಟ್​ 18, 19ರಂದು ರೂಮ್​ ಬಳಸಿದ್ದಾರೆ ಎಂದಿದ್ದಾರೆ. ನಾವು ಶೈಕ್ಷಣಿಕ ವಿಚಾರಗಳಿಗೆ ಅಲ್ಲದೆ ಬೇರೆ ಅನ್ಯ ಕಾರ್ಯಗಳಿಗೆ ರೂಮ್​ ನೀಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ;

ವಿದ್ಯಾರ್ಥಿ ಸಂಘಟನೆಗಳಿಂದ ಖಂಡನೆ..!

ವಿಶ್ವವಿದ್ಯಾನಿಲಯ ಅತಿಥಿ ಗೃಹವನ್ನು ಮಧುಚಂದ್ರಕ್ಕೆ ಬಳಸಿರುವುದನ್ನು ವಿದ್ಯಾರ್ಥಿ ಸಂಘಟನೆಗಳು ಖಂಡಿಸಿವೆ. ಯೂನಿವರ್ಸಿಟಿ ಗೆಸ್ಟ್​ಹೌಸ್​ ದುರ್ಬಳಕೆ ಮಾಡಿಕೊಂಡವರ ಮೇಲೆ ಕಠಿಣ ಕ್ರಮ ಕೈಗೊಲ್ಳುವಂತೆ ಆಗ್ರಹ ಮಾಡಿದ್ದಾರೆ. ಈಗಾಗಲೇ ರಿಜಿಸ್ಟರ್​ ಎತ್ತಂಗಡಿ ಮಾಡಿದ್ದು ಶ್ರೀನಿವಾಸ್​ ರಾವ್​ ಅವರನ್ನು ನೂತನ ರಿಜಿಸ್ಟರ್​ ಆಗಿ ನೇಮಕ ಮಾಡಲಾಗಿದೆ. ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳೂ ಸಹ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆದ್ರೆ ರೂಮ್​ ಬುಕ್​ ಆಗಿದ್ದರ ಬಗ್ಗೆ ಈ ತನಕ ಪ್ರೊಫೆಸರ್​ ಸ್ವರ್ಣ ಕುಮಾರಿ ಮಾತ್ರ ಯಾವುದೇ ಪ್ರತಿಕ್ರಿಯೆಗೆ ಸಿಕ್ಕಿಲ್ಲ. ಆದರೂ ವಿದ್ಯಾದೇಗುಲವನ್ನು ಸಂತಾನ ದೇಗುಲ ಮಾಡಿಕೊಂಡವರಿಗೆ ತಕ್ಕಶಾಸ್ತಿ ಆಗಲೇಬೇಕಿದೆ.

Related Posts

Don't Miss it !