ರಾಜಸ್ಥಾನದಲ್ಲಿ ಕೊಲೆಯಾದ ಕನ್ಹಯ್ಯ ಲಾಲ್​ ಕುಟುಂಬಸ್ಥರ ಕೊನೆ ಆಸೆ ಏನು..?

ರಾಜ್ಯಸ್ಥಾನದಲ್ಲಿ 47 ವರ್ಷದ ಟೈಲರ್​ ಕನ್ಹಯ್ಯ ಲಾಲ್​ನನ್ನು ಕೊಲೆ ಮಾಡಿದ ಬಳಿಕ ಇಡೀ ದೇಶದಲ್ಲಿ ಆಕ್ರೋಶ ಭುಗಿಲೆದ್ದಿದೆ. ಕಾಂಗ್ರೆಸ್​ ಹಾಗು ಬಿಜೆಪಿ ನಾಯಕರು ಒಬ್ಬರ ಮೇಲೊಬ್ಬರು ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಬಿಜೆಪಿ ವಕ್ತಾರೆ ಆಗಿದ್ದ ನೂಪುರ್​ ಶರ್ಮಾ ಹೇಳಿಕೆ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದಕ್ಕೆ ಕುರ್ತಾಗೆ ಅಳತೆ ಕೊಡುವ ನೆಪದಲ್ಲಿ ಬಂದ ಇಬ್ಬರು ಮುಸಲ್ಮಾನ್​ ಸಮುದಾಯಕ್ಕೆ ಸೇರಿದ ಮೊಹಮದ್​ ರಿಯಾಜ್​ ಅಖ್ತಾರಿ ಹಾಗು ಗೌಸ್ ಮೊಹಮದ್ ಎಂಬುವರು ಕತ್ತು ಕೊಯ್ದು ಕೊಲೆ ಮಾಡಿದ್ದರು. ಅಂತಿಮ ಶವಯಾತ್ರೆ ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ರಾಜಸ್ಥಾನ ಸರ್ಕಾರ ಕನ್ಹಯ್ಯ ಲಾಲ್​ ಅವರ ಅಂತ್ಯಕ್ರಿಯೆ ಮಾಡಿ ಮುಗಿಸಿದೆ. ಅಂತ್ಯಕ್ರಿಯೆ ವೇಳೆ ಇಡೀ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿತ್ತು. ಈ ವೇಳೆ ಮೃತ ಕನ್ಹಯ್ಯ ಪತ್ನಿ ಹಾಗು ಪುತ್ರ ಸರ್ಕಾರದ ಬಳಿ ಕೇಳಿಕೊಂಡಿದ್ದು ಇಷ್ಟೆ.

ಕನ್ಹಯ್ಯ ಕೊಲೆ ಪ್ರಕರಣದ ತನಿಖೆ NIA ಹೆಗಲಿಗೆ..!

ರಾಜಸ್ಥಾನ ಸರ್ಕಾರ ಕನ್ಹಯ್ಯ ಕುಟುಂಬಸ್ಥರಿಗೆ 31 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಜೊತೆಗೆ ಕುಟುಂಬದ ಇಬ್ಬರಿಗೆ ಸರ್ಕಾರಿ ಕೆಲಸ ನೀಡುವುದಾಗಿ ಭರವಸೆ ನೀಡಿದೆ. ಕನ್ಹಯ್ಯ ಹತ್ಯೆ ಬಳಿಕ ಆಗಂತುಕರು ಪ್ರಧಾನಿ ನರೇಂದ್ರ ಮೋದಿಗೂ ಜೀವ ಬೆದರಿಕೆ ಹಾಕಿದ್ದರಿಂದ NIA ಟೀಂ ತನಿಖೆಯ ಜವಾಬ್ದಾರಿ ತೆಗೆದುಕೊಂಡಿದೆ. ಶವಯಾತ್ರೆ ವೇಳೆ ಕನ್ಹಯ್ಯ ಅಮರ್​ ರಹೇ ಹೈ ಎನ್ನುವ ಘೋಷಣೆಗಳು ಮೊಳಗಿದ್ದು, ಕೆಲವು ಭಾಗಗಳಲ್ಲಿ ಕಲ್ಲು ತೂರಾಟ ಸೇರಿದಂತೆ ಸಣ್ಣ ಪುಟ್ಟ ಘಟನೆಗಳು ನಡೆದಿವೆ. ರಾಜಸ್ಥಾನದಲ್ಲಿ ಒಂದು ತಿಂಗಳ ಕಾಲ 144 ಸೆಕ್ಷನ್​ ಜಾರಿ ಮಾಡಿದ್ದು, ಇಂಟರ್​ನೆಟ್​ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ರಾಜಸ್ಥಾನ ATS ಕೂಡ NIA ಜೊತೆಗೆ ಸಾಥ್​ ನೀಡಿದ್ದು, ವಿದೇಶಿ ಸಂಘಟನೆಗಳ ಕೈವಾಡ ಇರಬಹುದು ಎಂದು ಸ್ವತಃ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ಮಾಹಿತಿ ನೀಡಿದ್ದಾರೆ.

9 ವರ್ಷದ ಹಿಂದೆ ಪಾಕಿಸ್ತಾನ ಸಂಘಟನೆ ಸೇರಿದ್ದ ಹಂತಕ..!

ಕನ್ಹಯ್ಯ ಲಾಲ್​ ಕೊಲೆಗೂ ಮುನ್ನ ಆರೋಪಿಗಳು ನಮ್ಮ ಮೊಹಮದ್​ ಪ್ರೊಫೆಟ್​ ಬಗ್ಗೆ ಅವಹೇಳನ ಮಾಡಿ ಬರಿತ್ತೀಯಾ..? ಎಂದು ಪ್ರಶ್ನೆ ಮಾಡಿದ್ದಾರೆ. ಕೊಲೆ ನಡೆದಾಗ ಅಂಗಡಿಯಲ್ಲಿ ಕೇವಲ ಕನ್ಹಯ್ಯ ಮಾತ್ರವಲ್ಲದೆ ಇನ್ನಿಬ್ಬರು ಟೈಲರ್​​ಗಳೂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನುವುದು ಗೊತ್ತಾಗಿದೆ. ಕನ್ಹಯ್ಯನ ರಕ್ಷಣೆಗೆ ಧಾವಿಸಿದ ಮತ್ತೋರ್ವ ಟೈಲರ್​ಗೂ ತೀವ್ರ ಗಾಯಗಳಾಗಿವೆ. ಇಬ್ಬೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದರ ನಡುವೆ ಕನ್ಹಯ್ಯ ಕೊಲೆ ಆರೋಪಿಗಳು 2013ರಲ್ಲೇ ಪಾಕಿಸ್ತಾನ ಮೂಲದ ಕಟ್ಟರ್ ಮುಸ್ಲಿಂ​ ಧರ್ಮ ಸಂಘಟನೆ ಆದ ದವತ್​ ಇ ಇಸ್ಲಾಮಿ ಎಂಬ ಸಂಘಟನೆ ಸೇರಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬರೋಬ್ಬರಿ 45 ದಿನಗಳ ಕಾಲ ಪಾಕಿಸ್ತಾನದಲ್ಲೇ ವಾಸ್ತವ್ಯ ಹೂಡಿದ್ದ 30 ಜನರ ತಂಡದಲ್ಲಿ ಮೊಹಮದ್​​ ಇದ್ದ ಎನ್ನುವುದು ಬಹಿರಂಗ ಆಗಿದೆ. ಇನ್ನೂ ಜೂನ್​ 20 ರಂದು ಕೊಲೆ ಆರೋಪಿಗಳು ಮೌಲಾನಾ ಹಾಗೂ ವಕೀಲರ ಜೊತೆಗೆ ಚರ್ಚೆ ನಡೆಸಿರುವ ವಿವಾರವೂ ಬಯಲಾಗಿದೆ.

ಗಲ್ಲು ಶಿಕ್ಷೆ ಕೊಡಿ ಇಲ್ಲವೇ ಈಗಲೇ ಎನ್​ಕೌಂಟರ್​ ಮಾಡಿ..!

ಕನ್ಹಯ್ಯ ಲಾಲ್​ ಕೊಲೆ ಮಾಡುವ ಮೊದಲೇ ವಕೀಲರನ್ನು ಭೇಟಿ ಮಾಡಿರುವುದು ಕೊಲೆ ಪೂರ್ವ ನಿಯೋಜಿತ ಎನ್ನುವುದು ಮೇಲ್ನೋಟಕ್ಕೆ ಅನಿಸುತ್ತಿದೆ. ಆದರೆ ಕನ್ಹಯ್ಯ ಕುಟುಂಬಸ್ಥರು ಮಾತ್ರ ಈ ಆರೋಪಿಗಳು ಒಂದು ಪೋಸ್ಟ್​ ಹಾಕಿದ್ದಾರೆ ಎನ್ನುವ ಕಾರಣಕ್ಕೆ ಕೊಲೆ ಮಾಡುವ ಹಂತಕ್ಕೆ ಹೋಗಿದ್ದಾರೆ. ಎನ್​ಕೌಂಟರ್​ ಮಾಡಿದರೆ ಮಾತ್ರ ಕನ್ಹಯ್ಯ ಲಾಲ್​ ಆತ್ಮಕ್ಕೆ ಮುಕ್ತಿ ಸಿಗಲಿದೆ. ಇಲ್ಲದಿದ್ದರೆ ಇಲ್ಲ ಎಂದಿದ್ದಾರೆ. ಗಲ್ಲು ಶಿಕ್ಷೆಗಿಂತಲೂ ಎನ್​ಕೌಂಟರ್​ ಮಾಡಿದರೆ ಈ ರೀತಿಯ ಮನಸ್ಥಿತಿ ಇರುವ ಜನರಿಗೂ ಎಚ್ಚರಿಕೆ ಸಂದೇಶ ರವಾನೆ ಆಗುತ್ತೆ ಎಂದು ಒತ್ತಾಯಿಸಿದ್ದಾರೆ. ಇನ್ನೂ ಕರ್ನಾಟಕದಲ್ಲಿ ಕನ್ಹಯ್ಯ ಕಿಚ್ಚು ಜೋರಾಗಿದ್ದು, ಕಾಂಗ್ರೆಸ್​ ಮೌನ ಆಗಿರುವುದು ಯಾಕೆ ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ಕಾಂಗ್ರೆಸ್​ ಸರ್ಕಾರವನ್ನು ಕೂಡಲೇ ವಜಾ ಮಾಡ್ಬೇಕು ಅಂತಾನೂ ಆಗ್ರಹ ಮಾಡಿದ್ದಾರೆ. ಆದರೆ ದಿನೇಶ್​ ಗುಂಡೂರಾವ್​ ಟ್ವೀಟ್​ ಮಾಡಿ ಹರ್ಷ ಕೊಲೆ ಆದಾಗ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇತ್ತು. ಆದರೂ ಘಟನೆ ಯಾಕೆ ನಡೀತು..? ಎಂದು ಮರು ಪ್ರಶ್ನೆ ಹಾಕಿದ್ದಾರೆ.

Related Posts

Don't Miss it !