Shapoorji Pallonji : ಬಾಂಬೆ ಮೂಲದ ಬಿಲ್ಡರ್​​ ಕೈಗೆ ಸಿಕ್ಕ ಕನ್ನಡಿಗರ ಆರ್ತನಾದ..!

ಬೆಂಗಳೂರಿನಲ್ಲಿ ಕುಟುಂಬಕ್ಕೆ ಒಂದು ಮನೆ ಮಾಡಬೇಕು ಎನ್ನುವುದು ಎಲ್ಲರೂ ಬಯಸುವ ಸಂಗತಿ. ಸ್ವಂತಕ್ಕೊಂದು ಮನೆ ತನ್ನ ಜೀವನದಲ್ಲಿ ಒಂದು ಮನೆ ಎಂದು ಮಾಡಬೇಕು ಎನ್ನುವುದು ದುಡಿಯುವ ಜೀವಗಳ ಕನಸು. ಇದೇ ರೀತಿ ಬೆಂಗಳೂರಿನಲ್ಲಿ ಒಂದು ಕೊಳ್ಳುವ ಉದ್ದೇಶದಿಂದ ಬಿಲ್ಡರ್​​ ಕೊಟ್ಟ ಒಪ್ಪಂದಕ್ಕೆ ಒಪ್ಪಿಕೊಂಡು ಹಣ ಪಾವತಿ ಮಾಡಿದ ನೂರಾರು ಜನರು ಇಂದು ದಿಕ್ಕು ಕಾಣದಂತಾಗಿದ್ದಾರೆ. 2015ರಲ್ಲಿ ಬಿಲ್ಡರ್​ ಜೊತೆ ಒಪ್ಪಂದ ಮಾಡಿಕೊಂಡಿದ್ದರೂ ಇಲ್ಲೀವರೆಗೂ ಮನೆಯೂ ಇಲ್ಲ. ಕೊಟ್ಟ ಹಣಕ್ಕೆ ಬಡ್ಡಿಯೂ ಇಲ್ಲ, ಮುಂದೇನು..? ಎನ್ನುವ ಆಲೋಚನೆಯಲ್ಲಿ ಇದ್ದಾರೆ. ನೂರಾರು ಜನರು ಕೆಲಸ ಮಾಡಬೇಕಿದ್ದ ಕಟ್ಟದಲ್ಲಿ ಕೆಲವೇ ಕೆಲವು ಜನರು ಕೆಲಸ ಮಾಡುತ್ತಿರುವುದು ಗ್ರಾಹಕರ ಆತಂಕವನ್ನು ಹೆಚ್ಚಾಗುವಂತೆ ಮಾಡಿದೆ.

ಕೋಟಿ ಕೋಟಿ ಹಣ ಕೊಟ್ಟು ಸಿಕ್ಕಿಬಿದ್ದಿರುವ ಗ್ರಾಹಕರು..!

ಮೆಜೆಸ್ಟಿಕ್​​ನ ಬಿನ್ನಿಪೇಟೆಯ 60 ಎಕರೆ ಪ್ರದೇಶದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಮುಂಬೈ ಮೂಲದ Shapoorji Pallonji ಎಂಬ ನಿರ್ಮಾಣ ಕಂಪನಿ ಗ್ರಾಹಕರ ಜೊತೆಗೆ ಒಪ್ಪಂದ ಮಾಡಿಕೊಂಡು ಫ್ಲಾಟ್​ಗಳ ನಿರ್ಮಾಣ ಮಾಡುತ್ತಿದೆ. ಕಂಪನಿ ಒಪ್ಪಂದದ ಪ್ರಕಾರ 2015ರಲ್ಲಿ ಕಾಮಗಾರಿ ಶುರುವಾಗಿದ್ದು, 2019ರಲ್ಲಿ ಕಟ್ಟಡ ಹಸ್ತಾಂತರ ಮಾಡಬೇಕಿತ್ತು. ಈಗಾಗಲೇ ಶೇಕಡ 90 ರಿಂದ 95ರಷ್ಟು ಹಣವನ್ನೂ ಪಡೆದುಕೊಳ್ಳಲಾಗಿದೆ. 1.20 ಕೋಟಿ ತನಕ ಗ್ರಾಹಕರು ಪಾವತಿ ಮಾಡಿದ್ದಾರೆ. ಆದರೂ ಕಟ್ಟಡ ಅಂತಿಮ ಸ್ವರೂಪ ಪಡೆದುಕೊಂಡಿಲ್ಲ. ಕೇವಲ ಗೋಡೆ ನಿರ್ಮಾಣ ಮಾಡಲಾಗಿದ್ದು, ಬೇರೆ ಯಾವುದೇ ಕೆಲಸವೂ ನಡೆಯುತ್ತಿಲ್ಲ. ಕಂಪನಿ ಕೊಟ್ಟಿದ್ದ ಅಂತಿಮ ಗಡುವು ಮುಕ್ತಾಯವಾಗಿ ಮೂರು ವರ್ಷವಾದರೂ ಕಟ್ಟಡ ಹಸ್ತಾಂತರ ಮಾಡಿಲ್ಲ. ಕನಿಷ್ಟ ಪಕ್ಷ ಕಟ್ಟಡವನ್ನೂ ನೋಡುವುದಕ್ಕೂ ಅವಕಾಶ ಕೊಡ್ತಿಲ್ಲ ಎನ್ನುವುದು ಕೂಡಿಟ್ಟ ಹಣವನ್ನು ಕೊಟ್ಟ ಕಂಗಾಲಾಗಿರುವ ಗ್ರಾಹಕರ ನೋವು.

Read This: ರಾಜ್ಯ ರಾಜಕಾರಣದಲ್ಲಿ ದಿಢೀರ್​ ಬೆಳವಣಿಗೆ..!! ಸರ್ಕಾರದ ವಿರುದ್ಧ ಸ್ವಪಕ್ಷೀಯರ ದಾಳಿ..!

ಗ್ರಾಹಕರಿಂದ ಪಡೆದ ಹಣವನ್ನು ಕಂಪನಿ ಏನು ಮಾಡಿತು..?

Shapoorji Pallonji ಸಂಸ್ಥೆ ಮೂರು ಹಂತದ ಯೋಜನೆ ಹಮ್ಮಿಕೊಂಡಿದ್ದು,​ ಫೇಸ್​ ಒಂದರಲ್ಲಿ ಮಲ್ಬೇರಿ, ಆಲೀವ್​ ಕಟ್ಟಡ ನಿರ್ಮಾಣ ಮಾಡಲಾಗಿದೆ. 2018 ಗ್ರಾಹಕರಿಗೆ ಫ್ಲಾಟ್​ಗಳ ಹಸ್ತಾಂತರವೂ ಆಗಿದೆ. ಇನ್ನೂ ಫೇಸ್​ 2 ಯೋಜನೆಯಲ್ಲಿ ಮೆಪ್ಲೆ​​ ಹಾಗೂ ಸಫಾಯರ್​ ಕಟ್ಟಡಗಳ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಕುಂಠಿತವಾಗಿದೆ.ಇನ್ನೂ ಫೇಸ್​ 3 ಯೋಜನೆಗೆ ಹೈನ್ಸ್​ ಗ್ರೂಪ್​ನಿಂದ ಫಂಡ್​ ಬರುತ್ತಿರುವ ಕಾರಣ ಯೋಜನೆ ಈಗಾಗಲೇ ಮುಗಿಯುವ ಹಂತಕ್ಕೆ ಬಂದಿದೆ. ಆದರೆ 2ನೇ ಹಂತದ ಯೋಜನೆಯ ಹಣವನ್ನು ಬಿಲ್ಡರ್​​​ ಸಂಸ್ಥೆ ಆಗಿರುವ Shapoorji Pallonji ಬೇರೆ ಕಡೆಗೆ ಹೂಡಿಕೆ ಮಾಡಿರುವ ಅನುಮಾನ ಗ್ರಾಹಕರನ್ನು ಕಾಡುತ್ತಿದೆ. ಅದೂ ಅಲ್ಲದೆ 30ಕ್ಕೂ ಹೆಚ್ಚು ಮಂದಿ ರೇರಾಗೆ ದೂರು ನೀಡಿದ್ದಾರೆ. ಆದರೆ ರೇರಾದಲ್ಲಿ ಬಿಲ್ಡರ್​​​ಗೆ ಅವಧಿ ವಿಸ್ತರಣೆ ಮಾಡುತ್ತಾ ಅನುಕೂಲ ಮಾಡಿಕೊಡಲಾಗ್ತಿದೆ. ಗ್ರಾಹಕರ ಹಿತವನ್ನು ಗಮನಕ್ಕೆ ತೆಗೆದುಕೊಂಡಿಲ್ಲ ಎಂದು ದೂರುತ್ತಾರೆ. ಇನ್ನೊಂದು ವಿಚಾರ ಎಂದರೆ ಮೊದಲ ಹಂತದ ಮಲ್ಪೇರಿ ಹಾಗೂ ಆಲೀವ್​ ಯೋಜನೆಯಲ್ಲಿ ಬಯೋ ಡೈವರ್ಸಿಟಿ ಪಾರ್ಕ್​ ನಿರ್ಮಾಣ ಮಾಡಿಕೊಡುವ ಭರವಸೆ ಇಲ್ಲೀವರೆಗೂ ಈಡೇರಿಲ್ಲ ಎನ್ನುವ ಆಕ್ರೋಶವೂ ಜೊತೆಯಾಗಿದೆ.

Also Read: ದೂರು ಕೊಡಲು ಹೋದ ಮಹಿಳೆಯನ್ನು ಮಂಚಕ್ಕೆ ಕರೆದ ಖಾಕಿ..! ಆಯುಕ್ತರ ಬಳಿ ಅಬಲೆ ಅಳಲು..

ಫ್ಲಾಟ್​ ಹಸ್ತಾಂತರ ವಿಳಂಬಕ್ಕೆ ಹೊಣೆ ಯಾರು..?

2015ರಲ್ಲಿ ಒಪ್ಪಂದ ಮಾಡಿಕೊಂಡಂತೆ 2019ರಲ್ಲಿ ಫ್ಲಾಟ್​ ಹಸ್ತಾಂತರ ಕಾರ್ಯ ನಡೆಯಬೇಕಿತ್ತು. ಈಗಾಗಲೇ ಹಣವನ್ನೂ ಪಾವತಿ ಮಾಡಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಹಣ ಪಾವತಿಯಲ್ಲಿ ಸಮಸ್ಯೆ ಆಗಿದ್ದರೆ ಗ್ರಾಹಕರು ಹೊಣೆಯಾಗುತ್ತಿದ್ದರು. ಆದರೆ ರೇರಾ ಪ್ರಕಾರ ಶೇಕಡ 63ರಷ್ಟು ಹಣ ಪಾವತಿಸಿಕೊಳ್ಳಬೇಕು ಎಂದು ಹೇಳಲಾಗಿದೆ. ಇನ್ನುಳಿದ ಹೆಚ್ಚುವರಿ ಹಣಕ್ಕೆ Shapoorji Pallonji ಸಂಸ್ಥೆ ಸರ್ಕಾರಿ ಬಡ್ಡಿಯನ್ನಾದರೂ ಪಾವತಿ ಮಾಡಬೇಕು ಅಲ್ಲವೇ ಎಂದು ಗ್ರಾಹಕರು ಪ್ರಶ್ನಿಸುತ್ತಾರೆ. 31 ಅಂತಸ್ತಿನ​​ ಕಟ್ಟಡದ ನಿರ್ಮಾಣ ತಡವಾಗುತ್ತಿರುವುದಕ್ಕೆ ಕೋವಿಡ್​ ಮಾರ್ಗಸೂಚಿ ಕಾರಣ ಎಂದು ಕಂಪನಿ ರೇರಾ ಗಮನಕ್ಕೆ ತಂದು ಮೊದಲು 8 ತಿಂಗಳು, ಆ ನಂತರ ಇದೀಗ 12 ತಿಂಗಳ ಕಾಲ ಅವಧಿ ವಿಸ್ತರಣೆ ಮಾಡಿಕೊಂಡಿದೆ. ಆದರೆ ಪರಿಹಾರ ನೀಡುವ ಬಗ್ಗೆ ಯಾವುದೇ ಭರವಸೆ ನೀಡಿಲ್ಲ. ಕೂಡಲೇ ಹೆಚ್ಚುವರಿ ಹಣಕ್ಕೆ ಬಡ್ಡಿ ನೀಡುವುದು ಹಾಗೂ ಕಟ್ಟಡ ಹಸ್ತಾಂತರ ಮಾಡುವ ಬಗ್ಗೆ ದಾಖಲೆ ಮೂಲಕ ತಿಳಿಸಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ. ಬಿಲ್ಡರ್​ ಸಂಸ್ಥೆ ಆಗಿರುವ Shapoorji Pallonji ಈ ಬಗ್ಗೆ ಗಮನಹರಿಸಿ ಗ್ರಾಹಕರ ಆತಂಕ ದೂರ ಮಾಡಬೇಕಿದೆ.

ಕಮೆಂಟ್ ಮಾಡಿ, ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಓದುಗರೇ ನಮ್ಮ ಗುರುಗಳು

Related Posts

Don't Miss it !