‘‘ಕರ್ನಾಟಕ ಬಂದ್’​’ ವಾಪಸ್​ ಹಿಂದಿನ ರಹಸ್ಯಗಳು.. ಲಾಲ್​ಬಾಗ್​​ನಲ್ಲಿ ಹೈಡ್ರಾಮ..!!

ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಸದಸ್ಯರು ಪುಂಡಾಟ ನಡೆಸಿದ್ದಕ್ಕೆ ಕೆರಳಿ ಕೆಂಡವಾಗಿದ್ದ ಕನ್ನಡಿಗರು, ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಡಿಸೆಂಬರ್​ 30ರ ಒಳಗಾಗಿ ಎಂಇಎಸ್​ ನಿಷೇಧ ಮಾಡಬೇಕು. ಇಲ್ಲದಿದ್ರೆ ಡಿಸೆಂಬರ್​ 31ರಂದು ಕರ್ನಾಟಕ ಬಂದ್​ ಮಾಡಿ ಕನ್ನಡಿಗರ ಶಕ್ತಿ ಏನೆಂದು ತೋರಿಸ್ತೀವಿ ಎಂದು ವಾಟಾಳ್​ ನಾಗರಾಜ್ ನೇತೃತ್ವದಲ್ಲಿ ಗುಡುಗಿದ್ದರು. ಕರವೇ ನಾರಾಯಣಗೌಡ ಬಣ ಮಾತ್ರ ಮೊದಲ ದಿನವೇ ಕರ್ನಾಟಕ ಬಂದ್​ಗೆ ನಮ್ಮ ಬೆಂಬಲವಿಲ್ಲ, ಹೋರಾಟಕ್ಕೆ ಮಾತ್ರ ಸೀಮಿತ ಎಂದಿತ್ತು. ಆ ನಂತರ ಹೋಟೆಲ್​ ಮಾಲೀಕರ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ, ಕರವೇ ಪ್ರವೀಣ್ ಶೆಟ್ಟಿ ಬಣ, ಓಲಾ ಊಬರ್​ ಚಾಲಕರ ಸಂಘ ಸೇರಿದಂತೆ ಬಹುತೇಕ ಸಂಘಟನೆಗಳು ಬಂದ್​ನಿಂದ ಹಿಂದೆ ಸರಿಯುವ ಮನಸು ಮಾಡಿದ್ದವು. ಆದರೆ ಬುಧವಾರ ಬೆಳಗಾವಿಯಲ್ಲಿ ಪ್ರತಿಭಟನೆ ಮಾಡಿ ಮಾತನಾಡಿದ್ದ ವಾಟಾಳ್​ ನಾಗರಾಜ್ ಮಾತ್ರ ಸೂರ್ಯ ಚಂದ್ರರೇ ಅದಲು ಬದಲಾದರೂ ಬಂದ್​ ನಿರ್ಧಾರ ವಾಪಸ್​ ಪಡೆಯಲ್ಲ ಎಂದಿದ್ದರು. ಆದರೆ ಇದೀಗ ಕರ್ನಾಟಕ ಬಂದ್​ ತಣ್ಣಗಾಗಿದೆ. ಇದಕ್ಕೆ ಕಾರಣಗಳು ಮಾತ್ರ ನಿಗೂಢವಾಗಿವೆ.

ಬಂದ್​ ನಡೆಸದಂತೆ ಸರ್ಕಾರದಿಂದ ತಂತ್ರಗಾರಿಕೆ..!

The Public Spot ಆಶಯ ಕೂಡ ಕರ್ನಾಟಕ ಬಂದ್​ ಮಾಡುವುದು ಬೇಕಿರಲಿಲ್ಲ ಎನ್ನುವುದೇ ಆಗಿದೆ. ಯಾಕೆಂದರೆ ಬಂದ್​ ಮಾಡಿದಾಕ್ಷಣ ಎಂಇಎಸ್​ ನಿಷೇಧ ಮಾಡುವುದು ಸಾಧ್ಯವಿಲ್ಲದ ಮಾತು. ಆದರೆ ಕರ್ನಾಟಕ ಬಂದ್​ ವಾಪಸ್​ ಪಡೆದ ಬೆಳವಣಿಗೆಗಳು ಮಾತ್ರ ನಿಜಕ್ಕೂ ಕಣ್ಣು ಕೆಂಪಗಾಗುವಂತೆ ಮಾಡಿದೆ. ಕರ್ನಾಟಕ ಬಂದ್​ ಘೋಷಣೆ ಮಾಡುವ ದಿನ ಕರವೇ ಪ್ರವೀಣ್​ ಶೆಟ್ಟಿ ಹಾಗೂ ವಾಟಾಳ್​ ನಾಗರಾಜ್​ ಜೊತೆಯಲ್ಲೇ ಇದ್ದರು. ಆದರೆ ಡಿಸೆಂಬರ್​ 29ರಂದು ಬಂದ್​ಗೆ ನಮ್ಮದು ನೈತಿಕ ಬೆಂಬಲ ಎಂದಿದ್ದರು. ಈ ಬಗ್ಗೆ ವಾಟಾಳ್​ ನಾಗರಾಜ್​ಗೆ ಬಹಿರಂಗ ಪತ್ರ ಕೂಡ ಬರೆದಿದ್ದರು. ಆದರೂ ವಾಟಾಳ್​ ನಾಗರಾಜ್​ ಮಾತ್ರ ಬಂದ್​ ಮಾಡಿಯೇ ತೀರುತ್ತೇವೆ. ರಾಜ್ಯದ ಕನ್ನಡಿಗರ ಮರ್ಯಾದೆ ಪ್ರಶ್ನೆ ಎಂದಿದ್ದರು. ನಾನು ಕನ್ನಡಿಗ ಮುಂದೆ ಅವಮಾನಿತ ಆಗಲಾರೆ ಎಂದಿದ್ದರು. ಆದರೆ ಬಂದ್​ ನಿರ್ಧಾರ ಹಿಂಪಡೆಯುವ ಮುನ್ನ ನಡೆದ ಭಾರೀ ಹೈಡ್ರಾಮ ಕನ್ನಡ ಸಂಘಟನೆಗಳ ಮೇಲಿದ್ದ ಅನುಮಾನ ಹೆಚ್ಚಾಗುವಂತೆ ಮಾಡಿತು.

Read This:

ಬಂದ್​ ವಾಪಸ್​ಗೆ ಬೀದಿಯಲ್ಲೇ ಚರ್ಚೆ, ಅಲ್ಲೇ ನಿರ್ಧಾರ..!

ಕನ್ನಡ ಹೋರಾಟಗಾರ ವಾಟಾಳ್​ ನಾಗರಾಜ್​, ಜಯನಗರ ಕಡೆಗೆಯಿಂದ ಬರುತ್ತಿದ್ದಾಗ ಪ್ರವೀಣ್​ ಶೆಟ್ಟಿ ಸೇರಿದಂತೆ ಕೆಲವು ಆಪ್ತರು ವಾಟಾಳ್ ನಾಗರಾಜ್​​ ಹಿಂಬಾಲಿಸಿದ್ದರು. ಮಾಧವನ್​ ಪಾರ್ಕ್​ನಲ್ಲಿ ವಾಟಾಳ್​ ನಾಗರಾಜ್​ ಜೊತೆಗೆ ಚರ್ಚೆ ನಡೆಸಿದ್ರು. ನಾವು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದೇವೆ. ಡಿಸೆಂಬರ್​ 31ರಂದು ಬಂದ್​ ಮಾಡದಂತೆ ಸೂಚಿಸಿದ್ದಾರೆ. ಆ ಬಳಿಕ ನಾವೆಲ್ಲರೂ ನಿಮ್ಮ ನೇತೃತ್ವದಲ್ಲೇ ಕರ್ನಾಟಕ ಬಂದ್​ ಯಶಸ್ವಿ ಮಾಡೋಣ ಎಂದು ಪರಿಪರಿಯಾಗಿ ಮನವಿ ಮಾಡಿದ್ರು. ಆದರೆ ವಾಟಾಳ್​ ನಾಗರಾಜ್​ ಮಾತ್ರ ಬಿಲ್​ಕುಲ್​ ಒಪ್ಪೋದಿಲ್ಲ. ಬಂದ್​ ಮಾಡೇ ಮಾಡ್ತೀವಿ ಎಂದರು. ವಾಟಾಳ್​ ನಾಗರಾಜ್​ ಕಾಲಿಗೂ ಬಿದ್ದ ಪ್ರವೀಣ್​ ಶೆಟ್ಟಿ, ಬಂದ್​ ಮಾಡುವುದು ಬೇಡ ಎಂದರು. ವಾಟಾಳ್​ ನಾಗರಾಜ್​ ಕೂಡ ಪ್ರವೀಣ್​ ಶೆಟ್ಟಿ ಕಾಲಿಗೂ ಮರು ನಮಸ್ಕಾರಕ್ಕೆ ಮುಂದಾದ್ರ. ಆ ಬಳಿಕ ಎಲ್ಲವೂ ತಿಳಿಯಾಯ್ತು. ಅಲ್ಲಿಂದ ಹೊರಡಲು ಶುರು ಮಾಡಿದ್ರು. ಆಗ ಈ ಸುದ್ದಿಯನ್ನು ಈಗಲೇ ಪಬ್ಲಿಷ್ ಮಾಡಬೇಡ ಎಂದು ಯಾರೋ ಒಬ್ಬರು ಹೇಳಿದ್ರು. ಆದರೂ ಕರ್ನಾಟಕ ಬಂದ್​ ನಿರ್ಧಾರ ವಾಪಸ್​. ಜನವರಿ 22ರಂದು ಕರ್ನಾಟಕ ಬಂದ್​ ನಡೆಯುತ್ತೆ ಎನ್ನುವುದು ಮಾಧ್ಯಮಗಳಲ್ಲಿ ಬಹಿರಂಗ ಆಯ್ತು. ಅಂದರೆ ಸಿಎಂ ಭೇಟಿ ಮಾಡುವ ಮೊದಲೇ ಬಂದ್​ ವಾಪಸ್​ ಪಡೆಯುವ ನಿರ್ಧಾರ ಆಗಿತ್ತು ಎನ್ನುವುದನ್ನು ಆ ವಿಡಿಯೋ ಸಾರಿ ಸಾರಿ ಹೇಳಿತ್ತು.

Also Read;

ಸರ್ಕಾರದ ಮೇಲೆ ಒತ್ತಡ ತಂತ್ರ..! ಸಿಎಂ ಭೇಟಿ ಉದ್ದೇಶ..?

ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದಲೇ ಕರ್ನಾಟಕ ಬಂದ್​ಗೆ ಸಂಘಟನೆಗಳು ಬಂದ್​ ಕರೆ ನೀಡಿದ್ದರೆ..!! ಸರ್ಕಾರದ ಮುಖ್ಯಸ್ಥನಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡುವ ಅವಶ್ಯಕತೆ ಏನಿತ್ತು..? ಕನ್ನಡಿಗರಿಗೆ ಸಮಸ್ಯೆ ಆಗುತ್ತೆ ಎನ್ನುವ ಕಾರಣದಿಂದಲೇ ಬಂದ್​ ಮುಂದೂಡಿಕೆ ಮಾಡುವ ನಿರ್ಧಾರ ಮಾಡುವುದಾಗಿದ್ದರೆ..!! ಇಷ್ಟು ದಿನಗಳ ಕಾಲ ಎಲ್ಲಾ ಮಾಧ್ಯಮಗಳಲ್ಲೂ ಅದನ್ನೇ ಹೇಳಿದ್ದವು. ಆದರೂ ಜ್ಞಾನೋದಯ ಆಗಿದ್ದು ಸಿಎಂ ಭೇಟಿ ಆದ ಬಳಿಕವೋ..? ಎನ್ನುವ ಅನುಮಾನ ಮೂಡುತ್ತಿದೆ.​​ ಸಂಜೆ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ ವಾಟಾಳ್​ ನಾಗರಾಜ್, ಬಂದ್​ ಹಿಂಪಡೆದಿದ್ದೇವೆ ಎಂದರು. ಒಂದು ಅಕ್ರಮದ ಬಗ್ಗೆ ಕನ್ನಡ ಹೋರಾಟಗಾರರು ಪ್ರತಿಭಟನೆ ಹಮ್ಮಿಕೊಂಡಾಗ ಆರೋಪಿತ ವ್ಯಕ್ತಿ ಸಂಧಾನಕ್ಕೆ ಕರೆದರೆ, ಹೋಗಿ ಮಾತನಾಡಿಕೊಂಡು ಬರುತ್ತಾರೆಯೇ..? ಇಲ್ಲ ಎನ್ನುವುದಾದರೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಉದ್ದೇಶವಾದರೂ ಏನು..? ವಾಟಾಳ್​ ನಾಗರಾಜ್​ ಭೇಟಿಗೂ ಮುನ್ನವೇ ಬಂದ್​ ಇಲ್ಲ ಎನ್ನುವ ಚರ್ಚೆ ಶುರುವಾಗಿತ್ತು. ಕರವೇ ಪ್ರವೀಣ್​ ಶೆಟ್ಟಿ ಬಣದ ಮೂಲಕ ಸರ್ಕಾರ ಕರ್ನಾಟಕ ಬಂದ್​ ನಡೆಯುವುದನ್ನು ತಡೆಗಟ್ಟಿತ್ತು. ಆದರೆ ವಾಟಾಳ್​ ನಾಗರಾಜ್​ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಕರೆದು ಮಾತನಾಡುವ ಸೌಜನ್ಯದ ಕೆಲಸ ಆಯ್ತು ಅಷ್ಟೆ ಎನ್ನಲಾಗ್ತಿದೆ.

CM ಜೊತೆಗೆ ವಾಟಾಳ್​ & ಟೀಂ

ಇನ್ಮುಂದೆ ಕನ್ನಡ ಪರ ಸಂಘಟನೆಗಳು ನೀಡುವ ಬಂದ್​ ಕರೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಇವತ್ತು ಸರ್ಕಾರ, ನಾಳೆ ಮತ್ತೊಂದು ಸಂಸ್ಥೆ, ನಾಡಿದ್ದು ರೌಡಿಯೊಬ್ಬ ಕರೆದು ಸಂಧಾನ ಮಾಡಿದರೂ ಕನ್ನಡಪರ ಸಂಘಟನೆಗಳು ಮಣಿಯುತ್ತವೆ ಎನ್ನುವುದನ್ನು ಸಾಬೀತು ಮಾಡಿಕೊಂಡಂತೆ ಆಗಿದೆ. ಅದರಲ್ಲೂ ವಾಟಾಳ್​ ನಾಗರಾಜ್​ ಕರೆ ನೀಡಿದ್ದ ಕರ್ನಾಟಕ ಬಂದ್​, ಪ್ರವೀಣ್​ ಶೆಟ್ಟಿ ಮೂಲಕ ಹೈಜಾಕ್​ ಆಯ್ತು. ಅಂದರೆ ವಾಟಾಳ್​ ನಾಗರಾಜ್​ ಹಿಡಿತ ಕಳೆದುಕೊಂಡಿದ್ದ ಸತ್ಯ ಎನ್ನುವುದು ಸಂಘಟನೆಗಳಿಗೂ ಅರ್ಥವಾಯ್ತು. ಕನ್ನಡದ ವಿಚಾರದಲ್ಲೂ ಈ ರೀತಿಯ ಸಂಧಾನ ಆಗಿದ್ದು ವಿಪರ್ಯಾಸವೇ ಸರಿ. ಆದರೂ ಸರ್ಕಾರ ಬಂದ್​ ತಡೆಯುವಲ್ಲಿ ಯಶಸ್ವಿಯಾಯ್ತು ಎನ್ನುವುದು ಸತ್ಯ.

Related Posts

Don't Miss it !