ಕೊರೊನಾ ವಿಚಾರದಲ್ಲಿ ಪ್ರಧಾನಿ ಮೋದಿಯನ್ನೇ ಹಿಂಬಾಲಿಸಿದ ಸಿಎಂ..!

ಪ್ರಧಾನಿ ನರೇಂದ್ರ ಮೋದಿ ಕೊರೊನಾ ಸೋಂಕು ವಿಚಾರದಲ್ಲಿ ತೆಗೆದುಕೊಂಡಿದ್ದ ನಿಲುವನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆಗೆದುಕೊಂಡಿದ್ದಾರೆ. ಮೊದಲ ಅಲೆ ಆರಂಭ ಆಗುವ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶಕ್ಕೆ ಲಾಕ್​ಡೌನ್​ ಘೋಷಣೆ ಮಾಡಿದ್ದರು. ಮಾರ್ಚ್​ 23ರ ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 12 ಗಂಟೆಯಿಂದ 21 ದಿನಗಳ ಕಾಲ ದೇಶವನ್ನು ಬಂದ್​ ಮಾಡಲಾಗ್ತಿದೆ ಎಂದು ಘೋಷಣೆ ಮಾಡಿದ್ದರು. ಈ ವೇಳೆ ಅತ್ಯವಶ್ಯಕ ವಸ್ತುಗಳನ್ನು ಕೊಳ್ಳು ಗಾಬರಿ ಆಗುವುದು ಬೇಡ. ಯಾವುದೇ ವಹಿವಾಟು ಇರುವುದಿಲ್ಲ ಅಗತ್ಯ ವಸ್ತುಗಳು ಸಿಗಲಿವೆ ಎಂದಿ್ರು. ಆ ಬಳಿಕ ಮತ್ತೆ ಲಾಕ್​ಡೌನ್​ ವಿಸ್ತರಣೆ ಕೂಡ ಆಯ್ತು. ಸಾವಿರಾರು ಮಂದಿ ಹಿಂಸೆಯನ್ನೂ ಅನುಭವಿಸಿದ್ರು. ಆದರೆ ಅದೇ ಎರಡನೇ ಅಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯಾವುದೇ ಲಾಕ್​ಡೌನ್​ ಮಾಡಲಿಲ್ಲ. ರಾಜ್ಯಗಳ ನಿರ್ಧಾರಕ್ಕೆ ಬಿಟ್ಟುಬಿಟ್ಟರು. ಇದೀಗ ಅದೇ ಮಾರ್ಗವನ್ನು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅನುಸರಿಸಿದ್ದಾರೆ.

ಕೊರೊನಾ ಲಾಕ್​ಡೌನ್​ ನಿರ್ಧಾರ ಜಿಲ್ಲೆಗಳಿಗೆ ಬಿಟ್ಟಿದ್ದು..!

ಕೊರೊನಾ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವ ಕಾರಣ ಸಿಎಂ ಬಸವರಾಜ ಬೊಮ್ಮಾಯಿ ತಜ್ಞರ ಸಭೆ ನಡೆಸಿದ್ರು. ಕೋವಿಡ್​ ನಿಯಂತ್ರಣ, ಮೂರನೇ ಅಲೆ ಎದುರಿಸಲು ಬೇಕಿರುವ ಸಿದ್ಧತೆ, ತೆಗೆದುಕೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆಸಿದ್ರು. ಚರ್ಚೆ ಬಳಿಕ ಮಾಧ್ಯಮಗಳ ಕೂಡೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇನ್ಮುಂದೆ ರಾಜ್ಯಕ್ಕೆಲ್ಲಾ ಒಂದೇ ಮಾರ್ಗಸೂಚಿ ಬಿಡುಗಡೆ ಮಾಡುವುದಿಲ್ಲ. ಜಿಲ್ಲೆಗಳ ಕೊರೊನಾ ಸ್ಥಿತಿಗತಿಯನ್ನು ನೋಡಿಕೊಂಡು ಜಿಲ್ಲಾಧಿಕಾರಿಗಳೇ ಇನ್ಮುಂದೆ ಮಾರ್ಗಸೂಚಿ ಹೊರಡಿಸುತ್ತಾರೆ. ರಾಜ್ಯ ಸರ್ಕಾರ ಇನ್ಮುಂದೆ ಕೊರೊನಾ ನಿಯಂತ್ರಣದ ಬಗ್ಗೆ ಯಾವುದೇ ಮಾರ್ಗಸೂಚಿ ಹೊರಡಿಸುವುದಿಲ್ಲ. ಈಗಿರುವ ನಿಯಮಗಳೇ ಮುಂದಿನ 2 ವಾರಗಳ ಕಾಲ ಮುಂದುವರಿಯಲಿದೆ ಎನ್ನುವ ಮೂಲಕ ರಾಜ್ಯ ಸರ್ಕಾರ ಕೊರೊನಾ ಲಾಕ್​ಡೌನ್​ನಿಂದ ಹಿಂದೆ ಸರಿದಿದೆ. ಕೊರೊನಾ ಹೆಚ್ಚಾಗಿದ್ದ ಜಿಲ್ಲೆಗಳಲ್ಲಿ ಯಾವ ನಿಲುವು ತೆಗೆದುಕೊಳ್ಳಬೇಕು ಎನ್ನುವ ನಿರ್ಧಾರವನ್ನು ಜಿಲ್ಲಾಧಿಕಾರಿಗಳೇ ತೆಗೆದುಕೊಳ್ಳಲಿದ್ದಾರೆ.

ಕೊರೊನಾ ಇಲ್ಲದ ಕಡೆ ಶಾಲಾ ಕಾಲೇಜು ಆರಂಭ..!


ತಜ್ಞರ ಸಮಿತಿ ಕೊಟ್ಟಿರುವ ಸಲಹೆ ಆಧರಿಸಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ತಜ್ಞರು ಅಂಕಿಅಂಶಗಳ ಸಮೇತ ವರದಿ ಕೊಟ್ಟಿದ್ದಾರೆ, ಅಂತಾರಾಜ್ಯ ಹಾಗೂ ವಿದೇಶಗಳ ಟ್ರೆಂಡ್​ನ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಪಕ್ಕದ ಕೇರಳ, ಮಹಾರಾಷ್ಟ್ರದ ಕೊರೊನಾ ಚಿತ್ರಣವೂ ನಮಗೆ ಸಿಕ್ಕಿದೆ. ರಾಜ್ಯದಲ್ಲೂ ಕೊರೊನಾ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಜನರು ಜಾಗೃತರಾಗಿ ಇರಬೇಕು. ಕೋವಿಡ್​ 19 ಹೆಚ್ಚಾಗಿರುವ ಗಡಿ ಜಿಲ್ಲೆಗಳಲ್ಲಿ ಶಾಲೆ ಓಪನ್ ಮಾಡುವುದಿಲ್ಲ. ಪಾಸಿಟಿವಿಟಿ ರೇಟ್​ ಶೇಕಡ 2ಕ್ಕಿಂತ ಕಡಿಮೆ ಇದ್ದರೆ ಮಾತ್ರ ಶಾಲೆ ಓಪನ್​ ಎಂದಿದ್ದಾರೆ. 9ನೇ ತರಗತಿಯಿಂದ 12ನೇ ತರಗತಿ ಕ್ಲಾಸ್ ಆರಂಭ ಆಗಲಿದೆ. ಪೋಷಕರು, ಶಿಕ್ಷಕರು, ಸಿಬ್ಬಂದಿಗೂ ವ್ಯಾಕ್ಸಿನ್ ಕಡ್ಡಾಯ. ಒಂದು ವೇಳೆ ಶಾಲೆಯಲ್ಲಿ ಸೋಂಕು ಕಂಡರೆ ಶಾಲೆ ಬಂದ್​ ಮಾಡಬೇಕು ಎಂದು ಸೂಚಿಸಿದ್ದಾರೆ. ಇಡೀ ರಾಜ್ಯದ ಬದಲು ಜಿಲ್ಲಾವಾರು ಮಾರ್ಗಸೂಚಿ ಬಿಡುಗಡೆ ಮಾಡಲಿದ್ದು, ಸಾವಿನ ಸಂಖ್ಯೆ, ಪಾಸಿಟಿವಿಟಿ ರೇಟ್​ ನೋಡಿ ನಿರ್ಧಾರ ಮಾಡಲಾಗುತ್ತದೆ. ಜಿಲ್ಲಾವಾರು ಸಮಿತಿ, ಅಧಿಕಾರಿಗಳು ನಿರ್ಧಾರ ಮಾಡಲಿದ್ದಾರೆ ಎಂದಿದ್ದಾರೆ.

ರಾಜ್ಯದ ಗಡಿ ಜಿಲ್ಲೆಗಳ ವಿಚಾರದಲ್ಲಿ ಸೂಕ್ತ ಕ್ರಮ..!

ರಾಜ್ಯದಲ್ಲಿ ಕೊರೊನಾ ಹೆಚ್ಚಾಗಿರುವ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಹಾಸನ, ಕೊಡಗು, ಬೆಂಗಳೂರು ಗ್ರಾ. ಚಿಕ್ಕಮಗಳೂರು, ಚಾಮರಾಜನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ವ್ಯಾಕ್ಸಿನ್​ಗೆ ಆದ್ಯತೆ ನೀಡಲಾಗಿದ್ದು, ಟೆಸ್ಟಿಂಗ್​, ವ್ಯಾಕ್ಸಿನೇಶನ್ ಪ್ರಮಾಣ ಹೆಚ್ಚಳ ಮಾಡಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ. ರಾಯಚೂರು, ಕಲಬುರಗಿ, ಬೀದರ್, ಬಳ್ಳಾರಿ, ಕೊಪ್ಪಳ, ಹಾವೇರಿ, ವಿಜಯಪುರ, ತುಮಕೂರು, ಬೆಂಗಳೂರು ಗ್ರಾಮಾಂತರದಲ್ಲಿ ಟೆಸ್ಟ್​ ಹೆಚ್ಚಳ ಮಾಡಲಾಗ್ತಿದೆ. ಹೊಸ ರೂಪಾಂತರಿ ಡೆಲ್ಟಾ+ ಸೋಂಕಿನ ಟೆಸ್ಟ್​ಗೂ ಕ್ರಮ ಕೈಗೊಳ್ಳಲಾಗಿದ್ದು, ಒಟ್ಟು 6 ಡೆಲ್ಟಾ ಲ್ಯಾಬ್​ಗಳನ್ನು 3 ವಾರದಲ್ಲಿ ಸ್ಥಾಪನೆ ಮಾಡುವುದಾಗಿ ತಿಳಿಸಿದ್ದಾರೆ. ಮಕ್ಕಳ ಆರೋಗ್ಯ ಕೇಂದ್ರ, ICU ಬೆಡ್​​ ಸ್ಥಾಪನೆಗೂ ಸೂಚನೆ ನೀಡಲಾಗಿದೆ. ಪಾಸಿಟಿವಿಟಿ ರೇಟ್​ ಶೇಕಡ 2ಕ್ಕಿಂತ ಹೆಚ್ಚಾಗಿದ್ದರೆ ಕಠಿಣ ಕ್ರಮ ಅನಿವಾರ್ಯ ಎಂದಿದ್ದಾರೆ. ಬೆಂಗಳೂರಿನಲ್ಲೂ ಕೊರೊನಾ ವಿಚಾರವಾಗಿ ಬಿಬಿಎಂಪಿ ಕಮಿಷನರ್​ಗೆ ಸಂಪೂರ್ಣ ಅಧಿಕಾರ ಕೊಡಲಾಗಿದೆ. ಕೊರೊನಾ ಇನ್ನೂ ಮೂರನೇ ಅಲೆ ಆರಂಭ ಆಗಿಲ್ಲ 2ನೇ ಅಲೆ ಮುಗಿದಿಲ್ಲ ಎಂದಿದ್ದಾರೆ. ಅಂತಿಮವಾಗಿ ಮುಂದಿನ ದಿನಗಳಲ್ಲಿ ಕೊರೊನಾ ಹೆಚ್ಚಳ ಆದರೆ ಲಾಕ್​ಡೌನ್​ ಮಾಡೋದಿಲ್ಲ. ಜಿಲ್ಲೆಗಳ ಸೋಂಕಿನ ಪ್ರಮಾಣದಲ್ಲಿ ಜಿಲ್ಲಾಡಳಿತವೇ ನಿರ್ಧಾರ ಮಾಡಲಿದೆ ಎನ್ನುವುದನ್ನು ಖಚಿತ ಮಾಡಿದ್ದಾರೆ

Related Posts

Don't Miss it !