ಸಿಎಂ ಬಿ.ಎಸ್​ ಯಡಿಯೂರಪ್ಪ ದೆಹಲಿಗೆ 6 ಬ್ಯಾಗ್​ ಜೊತೆ ಹೋಗಿದ್ಯಾಕೆ..!?

ಕರ್ನಾಟಕ ಸಿಎಂ ಬಿಎಸ್​ ಯಡಿಯೂರಪ್ಪ ಶುಕ್ರವಾರ ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದ್ರು. ಸಿಎಂ ಬಿ.ಎಸ್​ ಯಡಿಯೂರಪ್ಪ ಜೊತೆಯಲ್ಲಿ ಪುತ್ರ ಬಿ.ವೈ ವಿಜಯೇಂದ್ರ ಕೂಡ ಇದ್ದರು. ಸಿಎಂ ಪ್ರವಾಸದ ಸಮಗ್ರ ವಿವರ ಮಾಧ್ಯಮಗಳಿಗೆ ನೀಡಿರಲಿಲ್ಲ. ಕೇವಲ ರಾಜ್ಯದ ಅಭಿವೃದ್ಧಿ ವಿಚಾರಗಳ ಬಗ್ಗೆ ಸಿಎಂ ಪ್ರಧಾನಿ ಸೇರಿದಂತೆ ಹಲವು ಸಚಿವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದಷ್ಟೇ ಸಿಎಂ ಕಚೇರಿ ಮೂಲಗಳಿಂದ ಮಾಹಿತಿ ಸಿಕ್ಕಿತ್ತು. ಶನಿವಾರ ಮಧ್ಯಾಹ್ನದ ಒಳಗಾಗಿ ಎಲ್ಲಾ ಚರ್ಚೆಗಳನ್ನೂ ಮುಗಿಸಿ ಸಿಎಂ ಬಿ.ಎಸ್​ ಯಡಿಯೂರಪ್ಪ ಬೆಂಗಳೂರಿಗೆ ವಾಪಸ್​ ಆಗಿದ್ದಾರೆ. ಆದರೆ ಯಾವ ಯಾವ ಯೋಜನೆಗಳ ಬಗ್ಗೆ ಸಿಎಂ ಚರ್ಚೆ ನಡೆಸಿದ್ರು..? ಕೇಂದ್ರದಿಂದ ಸಿಎಂಗೆ ಸಿಕ್ಕಿರುವ ಭರವಸೆ ಏನು..? ಕರ್ನಾಟಕಕ್ಕೆ ಬರಬೇಕಿದ್ದ ಜಿಎಸ್​ಟಿ ಪಾಲು ಕೊಡುವ ಬಗ್ಗೆ ಏನಾದರೂ ಭರವಸೆ ಸಿಕ್ಕಿದೆಯಾ..? ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ವಿಶೇಷ ವಿಮಾನದಲ್ಲಿ 6 ಬ್ಯಾಗ್​ ಹೋಗಿತ್ತು..!

ಸಿಎಂ ಬಿಎಸ್​ ಯಡಿಯೂರಪ್ಪ ದೆಹಲಿ ಪ್ರವಾಸದ ಬಗ್ಗೆ ಮಹತ್ವದ ವಿಚಾರ ಬಯಲಿಗೆ ಎಳೆದಿರುವ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ, ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ದೆಹಲಿ ಪ್ರವಾಸದ ವೇಳೆ 6 ಬ್ಯಾಗ್​​ ತೆಗೆದುಕೊಂಡು ಹೋಗಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಕುಮಾರಸ್ವಾಮಿ, ನಿನ್ನೆ ಸಿಎಂ ದೆಹಲಿಗೆ ಹೋಗುವಾಗ ಆರು ಬ್ಯಾಗ್​ಗಳನ್ನು ಜೊತೆಯಲ್ಲಿ ತಗೊಂಡು ಹೋಗಿದ್ದಾರೆ . ಹೈಕಮಾಂಡ್​ಗೆ ಕೊಡುವ ಉದ್ದೇಶದಿಂದ. ಆ ಬ್ಯಾಗ್​ಗಳಲ್ಲಿ ಉಡುಗೊರೆ ತೆಗೆದುಕೊಂಡು ಹೋಗಿದ್ದಾರಾ ಅಥವಾ ಬೇರೆ ಏನಾದರೂ ತೆಗೆದುಕೊಂಡು ಹೋಗಿದ್ದಾರೆ ಎಂಬುದನ್ನು ಅವರೇ ಹೇಳಬೇಕು ಎಂದು ಒತ್ತಾಯ ಮಾಡಿದ್ದಾರೆ.

ಬ್ಯಾಗ್​ಗಳಲ್ಲಿ ರಾಜ್ಯದ ಸಮಸ್ಯೆ ತುಂಬಿಕೊಂಡಿದ್ರಾ..?

ಪ್ರಧಾನಿ ನರೇಂದ್ರ ಮೋದಿ ಬಳಿ ರಾಜ್ಯದ ಯೋಜನೆಗಳ ಬಗ್ಗೆ ಚರ್ಚೆ ಮಾಡಲು ತೆರಳುತ್ತಿದ್ದೇನೆ ಎಂದಿದ್ದಿರಿ. ಪ್ರಧಾನಿ ಭೇಟಿ ಮಾಡೋಕೆ ಸಿಎಂ ಒಬ್ಬರೇ ಹೋಗಿದ್ರಾ.! ಅಥವಾ ಬ್ಯಾಗ್ ಗಳನ್ನು ತಗೊಂಡು ಹೋಗಿ ಭೇಟಿ ಮಾಡಿದ್ರಾ..? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದಿದ್ದಾರೆ. ರಾಜ್ಯದಲ್ಲಿ ಕನ್ನಡಿಗರಿಂದ ಆಡಳಿತ ನಡೆಯಬೇಕೇ ಹೊರತು, ದೆಹಲಿ ಬಿಜೆಪಿ ಹೈಕಮಾಂಡ್ ನಿಂದ ಅಲ್ಲ ಎಂದಿರುವ ಕುಮಾರಸ್ವಾಮಿ, ಸ್ಪೆಷಲ್ ಫ್ಲೈಟ್​ನಲ್ಲಿ ಹೋಗುವಾಗ ಆರು ಬ್ಯಾಗ್​ಗಳಲ್ಲಿ ಕರ್ನಾಟಕದ ವಿಷಯಗಳನ್ನು ತುಂಬಿದ್ರಾ..? ಅಥವಾ ಬೇರೆ ಏನಾದರೂ ಬ್ಯಾಗ್​ಗಳನ್ನು ತುಂಬಿಕೊಂಡಿದ್ರಾ ಎಂಬುದನ್ನು ರಾಜ್ಯದ ಜನರಿಗೆ ಹೇಳಬೇಕು ಎಂದಿದ್ದಾರೆ. ಜೊತೆಗೆ ಮುಖ್ಯಮಂತ್ರಿಗಳು ಪ್ರಧಾನಿಯನ್ನು ಭೇಟಿ ಮಾಡಿ, ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಎಷ್ಟರಮಟ್ಟಿಗೆ ಅವರನ್ನು ಗೌರವಿಸಿ, ರಾಜ್ಯದ ಸಮಸ್ಯೆಗಳ ಬಗ್ಗೆ ಸ್ಪಂದಿಸುತ್ತೆ ಎಂಬುದನ್ನು ನೋಡೋಣ‌ ಎಂದಿದ್ದಾರೆ.

ಅನುಮಾನಕ್ಕೆ ಕಾರಣವಾದ ಸಿಎಂ ನಡೆ..!

ಸರ್ಕಾರದ ಯೋಜನೆಗಳ ಬಗ್ಗೆ ಚರ್ಚೆ ಮಾಡುವ ಉದ್ದೇಶದಿಂದ ಸಿಎಂ ಹೋಗಿರಬಹುದು. ಆದರೆ ಯೋಜನೆಗಳ ಬಗ್ಗೆ ಕೇಂದ್ರಕ್ಕೆ ಮನದಟ್ಟು ಮಾಡಲು ಅಧಿಕಾರಿಗಳಾದರೂ ಇರಬೇಕು. ದೆಹಲಿಗೆ ತೆರಳುವ ಮುನ್ನ ಸಚಿವ ಸಂಪುಟದ ಸಹೋದ್ಯೋಗಿಗಳಿಗಾದರೂ ಕೆಲಸದ ಬಗ್ಗೆ ಮಾಹಿತಿ ನೀಡುವುದು ವಾಡಿಕೆ. ಆದರೆ ಸಿಎಂ ಯಾವುದೇ ಸುಳಿವನ್ನು ಸಚಿವರಿಗೆ ಕೊಟ್ಟಿಲ್ಲ. ಹೆಚ್​. ವಿಶ್ವನಾಥ್​ ಹೇಳಿರುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ ಸಿಎಂ ಬಿ.ಎಸ್​ ಯಡಿಯೂರಪ್ಪ ಸೌಜನ್ಯಕ್ಕಾದರೂ ಭೇಟಿ ಮಾಡಿ, ಕೇಂದ್ರದಿಂದ ಬರಬೇಕಿರುವ ಬಾಕಿ ಹಣಕ್ಕಾಗಿ ಒತ್ತಾಯ ಮಾಡಲಿಲ್ಲ. ನಿನ್ನೆ ದೆಹಲಿಗೆ ಹೋಗಿದ್ದ ಯಡಿಯೂರಪ್ಪ, ಮದುವೆ ಆಹ್ವಾನ ಪತ್ರ ಕೊಟ್ಟಂತೆ ಹೋಗಿ ಒಂದೊಂದು ಫೋಟೋ ತೆಗೆಸಿಕೊಂಡು ವಾಪಸ್​ ಆಗಿದ್ದಾರೆ. ಏನೇನು ಚರ್ಚೆ ಮಾಡಿದ್ದಾರೋ ಆ ದೇವರಿಗೇ ಗೊತ್ತು.

ಯಾರು ಯಾರನ್ನು ಭೇಟಿ ಮಾಡಿದ್ದಾರೆ ಸಿಎಂ..?

thepublicspot.com ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಸಿಎಂ ಬಿಎಸ್​ ಯಡಿಯೂರಪ್ಪ ಹೇಳಿದ ಅಭಿವೃದ್ಧಿ ಯೋಜನೆಗಳ ಚರ್ಚೆಯೂ ನಡೆದಿಲ್ಲ ಎನ್ನಲಾಗಿದೆ. ಇದೊಂದು ಬಿಜೆಪಿ ಪಕ್ಷದೊಳಗೆ ನಡೆದಿರುವ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸಿಎಂ ಬಿಎಸ್​ ಯಡಿಯೂರಪ್ಪ ಬ್ಯಾಗ್​ಗಳನ್ನು ತೆಗೆದುಕೊಂಡು ಹೋಗಿದ್ದು ನಿಜ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಅವರನ್ನು ಭೇಟಿ ಮಾಡಿದ್ದಾರೆ. ಇವರು ಭೇಟಿ ಮಾಡಿದಾಗ ಅವರನ್ನು ಸನ್ಮಾನಿಸುವ ಉದ್ದೇಶದಿಂದ ನೆನಪಿನ ಕಾಣಿಕೆಗಳನ್ನು ಕೊಂಡೊಯ್ಯಲಾಗಿತ್ತು ಎನ್ನುವುದು ಮಾಹಿತಿ. ಆದರೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿರುವ ಅರ್ಥ ಬೇರೆ ಇದೆ. ಇದಕ್ಕೆ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರೇ ಉತ್ತರಿಸಬೇಕಿದೆ.

Related Posts

Don't Miss it !