CM ವಿರುದ್ಧದ ಖಾಸಗಿ ಕೇಸ್​ ವಜಾ..! ತೂಗುಗತ್ತಿಯಿಂದ ಪಾರಾದ್ರಾ ..?

ಜಡ್ಜ್​ ವಿರುದ್ಧವೇ ಟಿ.ಜೆ ಅಬ್ರಹಾಂ ಅಬ್ಬರ..!? - ಸಿಎಂ ಯಡಿಯೂರಪ್ಪ ಒತ್ತಡ ಹಾಕಿದ್ರಾ..? - ಬೀಸುವ ದೊಣ್ಣೆಯಿಂದ ಪಾರಾಗುವ ತಂತ್ರಗಾರಿಕೆಯೋ..!?

ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಿದೆ ಎಂದು ಸ್ವತಃ ಬಿಜೆಪಿ ಶಾಸಕ ಬಸನಗೌಡಪಾಟೀಲ್​ ಯತ್ನಾಳ್​ ಆರೋಪ ಮಾಡಿದ್ದರು. ಇಷ್ಟೇ ಅಲ್ಲದೆ ಸಾಮಾಜಿಕ ಹೋರಾಟಗಾರ ಟಿ.ಜೆ ಅಬ್ರಹಾಂ, ಬಿಎಸ್​ ಯಡಿಯೂರಪ್ಪ ಕುಟುಂಬದ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಮಾಡಿದ್ದರು. ಕೋರ್ಟ್​ನಲ್ಲಿ ಖಾಸಗಿ ದೂರನ್ನೂ ಸಲ್ಲಿಕೆ ಮಾಡಿದ್ದರು. ಎಫ್​ಐಆರ್​ ಮಾಡಿ ಪ್ರಾಷಿಕ್ಯೂಷನ್​ಗೆ ಅನುಮತಿ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು. ಆದರೆ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯ ವಜಾ ಮಾಡಿದೆ. ಈ ಕೇಸ್​ ಯಡಿಯೂರಪ್ಪ ಭವಿಷ್ಯ ನಿರ್ಧಾರ ಮಾಡಲಿದೆ ಎನ್ನುವ ಚರ್ಚೆಗಳು ಸಹ ನಡೆದಿದ್ದವು. ಇದೀಗ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಖಾಸಗಿ ಕಂಪನಿಯೊಂದರಿಂದ ಸಿಎಂ ಬಿ.ಎಸ್​ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಹಾಗೂ ಅಳಿಯ ಸಂಜಯ್​ ಎಂಬುವರು 12 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಸಿಎಂ ಪುತ್ರ ವಿಜಯೇಂದ್ರ ಹಾಗೂ ಅಳಿಯ ಸಂಜಯ್​ ಸೇರಿ ಒಟ್ಟು 9 ಮಂದಿ ಮೇಲೆ ದೂರು ನೀಡಲಾಗಿತ್ತು. ಮೊದಲಿಗೆ ರಾಜ್ಯಪಾಲ ವಿ.ಆರ್​ ವಾಲಾ ಅವರಿಗೆ ದೂರು ನೀಡಲಾಗಿತ್ತು. ಆದರೆ ಮನವಿ ತಿರಸ್ಕಾರ ಆದ ಬಳಿಕ ಜನಪ್ರತಿನಿಧಿಗಳ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಜನಪ್ರತಿನಿಧಿಗಳ ಕೋರ್ಟ್ ನ್ಯಾ. ನ್ಯಾ.ಜಯಂತ್ ಕುಮಾರ್ ಅರ್ಜಿ ವಜಾ ಮಾಡಿದ್ದಾರೆ.

ಜಡ್ಜ್​ ವಿರುದ್ಧವೇ ಟಿ.ಜೆ ಅಬ್ರಹಾಂ ಅಬ್ಬರ..!?

ಸಿಎಂ ಬಿ.ಎಸ್​ ಯಡಿಯೂರಪ್ಪ ವಿರುದ್ಧದ ಖಾಸಗಿ ದೂರು ಕೋರ್ಟ್​ನಲ್ಲಿ ವಜಾ ಆಗ್ತಿದ್ದ ಹಾಗೆ ದೂರುದಾರ ಟಿ.ಜೆ ಅಬ್ರಹಾಂ ದೆಹಲಿಯಲ್ಲಿ ಸಿಡಿಮಿಡಿಗೊಂಡಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧವೇ ಗುಡುಗಿದ್ದಾರೆ. ಅರ್ಜಿ ವಜಾ ಮಾಡಿದ ನ್ಯಾಯಾಧೀಶರ ಮೇಲೆ ಅಬ್ರಾಹಂ ಅನುಮಾನ ವ್ಯಕ್ತಪಡಿಸಿದ್ದು, ಸಿಎಂ ಪರವಾಗಿ ಉದ್ದೇಶಪೂರಿತವಾಗಿಯೇ ಆದೇಶ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ನಾನು ಈ ಕೇಸ್ ಅನ್ನು ಕೈಬಿಡುವುದಿಲ್ಲ. ಹೈಕೋರ್ಟ್, ಸುಪ್ರೀಂಕೋರ್ಟ್​ನಲ್ಲೂ ಮೇಲ್ಮನವಿ ಸಲ್ಲಿಸುತ್ತೇನೆ. ಈ ಕೇಸ್​ನಲ್ಲಿ ನ್ಯಾಯಾಧೀಶರು ತಪ್ಪು ಆದೇಶ ನೀಡಿದ್ದಾರೆ. ಸುಪ್ರೀಂಕೋರ್ಟ್ ಆದೇಶವನ್ನೇ ನ್ಯಾಯಾಧೀಶರು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿಎಂ ಯಡಿಯೂರಪ್ಪ ಒತ್ತಡ ಹಾಕಿದ್ರಾ..?


ಭ್ರಷ್ಟಾಚಾರ ಪ್ರಕರಣದವನ್ನು ಪ್ರಾಸಿಕ್ಯೂಷನ್​ಗೆ ನೀಡುವ ಬಗ್ಗೆ ಮಾನ್ಯ ರಾಜ್ಯಪಾಲರು ಮೂರು ತಿಂಗಳ ಒಳಗೆ ನಿರ್ಧಾರ ಮಾಡಬೇಕಿತ್ತು. ಆದರೆ ಅಷ್ಟರೊಳಗಾಗಿ ಸಿಎಂ ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿ ಮಾಡಿದ್ದು ಯಾಕೆ ಎಂದು ಟಿ.ಜೆ ಅಬ್ರಹಾಂ ಪ್ರಶ್ನಿಸಿದ್ದಾರೆ. ಇನ್ನೂ ಸಿಎಂ ಯಡಿಯೂರಪ್ಪ ಗನ್ ಮ್ಯಾನ್ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ನ್ಯಾಯಾಧೀಶರ ಮನೆ ಬಳಿ ತೆರಳಿದ್ದು ಯಾವ ಉದ್ದೇಶಕ್ಕೆ ಎಂದಿದ್ದಾರೆ. ಲೋಕೆಷನ್ ಟ್ರೇಸ್ ಮಾಡಿದ್ರೆ ಇವರ ಬಂಡವಾಳ ಬಯಲಾಗುತ್ತೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು. ಅರ್ಜಿ ವಜಾ ಮಾಡಿರುವುದು ನ್ಯಾಯ ವ್ಯವಸ್ಥೆಗೆ ನಾಚಿಕೆಯಾಗುವ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬೀಸುವ ದೊಣ್ಣೆಯಿಂದ ಪಾರಾಗುವ ತಂತ್ರಗಾರಿಕೆಯೋ..!?

ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಹೇಳಿರುವ ಪ್ರಕಾರ ಸಿಎಂ ಬಿ.ಎಸ್​ ಯಡಿಯೂರಪ್ಪ ಒತ್ತಡ ಹೇರಿ ಅರ್ಜಿ ವಜಾ ಆಗುವಂತೆ ಮಾಡಿದ್ದರೆ..! ಅದು ತಾತ್ಕಾಲಿಕ ಮಾತ್ರ. ಮುಂದಿನ ಹೈಕೋರ್ಟ್​ ಹಾಗೂ ಸುಪ್ರೀಂಕೋರ್ಟ್​ನಲ್ಲಿ ಮತ್ತೆ ತೂಗುಗತ್ತಿ ಬೀಸುವುದು ಸರ್ವೇ ಸಾಮಾನ್ಯ. ಆದರೆ, ಅಲ್ಲೀವರೆಗೂ ಸಿಎಂ ಕುರ್ಚಿ ಮೇಲೆ ಯಾವುದೇ ಸಂಕಷ್ಟ ಎದುರಾಗುವುದಿಲ್ಲ ಎನ್ನುವುದೇ ಸಮಾಧಾನಕರ ಸಂಗತಿ. ಟಿ.ಜೆ ಅಬ್ರಹಾಂ ಹೇಳಿರುವಂತೆ ಹೈಕೋರ್ಟ್​ನಲ್ಲಿ ಮmೇಲ್ಮನವಿ ಸಲ್ಲಿಸಿದ್ರೆ ಮತ್ತೆ ಸಂಕಷ್ಟದ ಸುಳಿಯಲ್ಲಿ ಸಿಲುಕಲೇಬೇಕಾದ ಅನಿವಾರ್ಯತೆ ಎದುರಾಗಲಿದೆ.

Related Posts

Don't Miss it !