ರಾಜ್ಯದಲ್ಲಿ ದಲಿತ ಸಿಎಂ ಘೋಷಣೆ ಕಾಂಗ್ರೆಸ್​ಗೆ ಸಹಾಯ ಆಗಲ್ವಾ..?

ರಾಜ್ಯದಲ್ಲಿ ಮುಂದಿನ ಬಾರಿ ಅಧಿಕಾರಕ್ಕೆ ಬರುವ ನಿರೀಕ್ಷೆ ಕಾಂಗ್ರೆಸ್ ನಾಯಕರದ್ದಾಗಿದೆ. ಅದರಲ್ಲೂ ಕಾಂಗ್ರೆಸ್​ ಪಕ್ಷದ ಅಧ್ಯಕ್ಷನಾಗಿರುವ ಡಿ.ಕೆ ಶಿವಕುಮಾರ್​ ಮುಂದಿನ ಬಾರಿ ಮುಖ್ಯಮಂತ್ರಿ ಆಗುವ ಹುಮ್ಮಸ್ಸಿನಲ್ಲಿದ್ದಾರೆ. ಇದೇ ಕಾರಣದಿಂದ ರಾಜ್ಯಾದ್ಯಂತ ಜಾತಿ ಲೆಕ್ಕಾಚಾರ ಮಾಡುತ್ತಾ, ಎಲ್ಲಾ ಸಮುದಾಯಗಳ ಸಭೆ ಮಾಡಿ, ಸಮಸ್ಯೆಗಳನ್ನು ಆಲಿಸುತ್ತಾ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯಾದ್ಯಂತ ಸುತ್ತುತ್ತಿರುವ ಡಿ.ಕೆ ಶಿವಕುಮಾರ್​ಗೆ ಸುರುಳಿ ಸುತ್ತುತ್ತಿರುವುದು ಮಾಜಿ ಸಿಎಂ ಸಿದ್ದರಾಮಯ್ಯ. ಇದೀಗ ಡಾ ಜಿ. ಪರಮೇಶ್ವರ್​​ ಕೂಡ ಡಿ.ಕೆ ಶಿವಕುಮಾರ್​ಗೆ ಸುರುಳಿ ಸುತ್ತುವ ಕೆಲಸ ಮಾಡುತ್ತಿರುವುದು ನುಂಗಲಾರದ ತುತ್ತಾಗಿದೆ.

ಅಧಿಕಾರದ ಆಸೆಯಲ್ಲಿ ಮತ್ತೆ ಅಖಾಡಕ್ಕೆ ಸಿದ್ದರಾಮಯ್ಯ ..!

ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ ಬಾರಿ ಚುನಾವಣೆ ವೇಳೆಯಲ್ಲೇ ಕೊನೆಯ ಚುನಾವಣೆ ಎಂದು ಘೋಷಣೆ ಮಾಡಿದ್ದರು. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೊನೆಯ ಚುನಾವಣೆ ಎಂದರೂ ಸಿದ್ದರಾಮಯ್ಯ ಗೆಲುವುದು ಸಾಧ್ಯವಾಗಲಿಲ್ಲ. ಆದರೆ ಬಾದಾಮಿ ಕ್ಷೇತ್ರದಲ್ಲಿ ಒಂದೂವರೆ ಸಾವಿರ ಮತಗಳ ಅಂತರದಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇದೀಗ ಬಿಜೆಪಿ ಸರ್ಕಾರದ ವಿರುದ್ಧ ಜನಾಕ್ರೋಶ ಸೃಷ್ಟಿಯಾಗುತ್ತಿದೆ. ಕಾಂಗ್ರೆಸ್​ ಮುಂದಿನ ಬಾರಿ ಅಧಿಕಾರಕ್ಕೆ ಬರುವುದು ಖಚಿತ ಎನ್ನುವ ಆಶಾಭಾವನೆಯಲ್ಲಿ ಮತ್ತೆ ಸ್ಪರ್ಧಿಸುವ ಮನಸ್ಸು ಮಾಡಿದ್ದಾರೆ. ಎಲ್ಲಾ ಕಡೆಯಲ್ಲೂ ನಾನೇ ಸಿಎಂ ಎನ್ನುವಂತೆ ಭಾಷಣ ಮಾಡುತ್ತಿರುವ ಸಿದ್ದರಾಮಯ್ಯ, ನಾವು ಅಧಿಕಾರಕ್ಕೆ ಬಂದ ಬಳಿಕ 10 ಕೆಜಿ ಪಡಿತರ ಅಕ್ಕಿ ಕೊಡುತ್ತೇವೆ ಎನ್ನುವ ಭರವಸೆ ನೀಡುತ್ತಿದ್ದಾರೆ. ನಾವೇ ಅಧಿಕಾರಕ್ಕೆ ಬರುತ್ತೇವೆ ಎನ್ನುತ್ತ ಆತ್ಮವಿಶ್ವಾಸ ಪ್ರದರ್ಶನ ಮಾಡುತ್ತಿದ್ದಾರೆ. ಇದೀಗ ಪರಮೇಶ್ವರ್​ ಕೂಡ ಸಿಎಂ ಸ್ಥಾನಕ್ಕೆ ಟವೆಲ್​ ಹಾಕಿದ್ದಾರೆ.

Read This Also;

ಪಂಜಾಬ್​ನಲ್ಲಿ ಸಾಕಾರ ಆಯ್ತು, ಇಲ್ಲಿ ಯಾವಾಗ..?

ಕಾಂಗ್ರೆಸ್​ ಪಕ್ಷವೇ ಅಧಿಕಾರದಲ್ಲಿ ಇರುವ ಪಂಜಾಬ್​ನಲ್ಲಿ ದಲಿತ ಸಮುದಾಯಕ್ಕೆ ಸೇರಿದ ಚರಣ್​ಜಿತ್​ ಸಿಂಗ್​ ಚೆನ್ನಿ ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್​ ಪಕ್ಷ ಪಂಜಾಬ್​ನಲ್ಲಿ ದಲಿತ ಸಿಎಂ ಮಾಡಿದ್ದಾರೆ. ನಮ್ಮಲ್ಲೂ ಕೇಳುವಂತೆ ಆಗಬಹುದು. ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ಇಲ್ಲೂ ದಲಿತ ಸಿಎಂ ಕೊಡಬೇಕು ಎಂದು ಕೇಳುವಂತೆ ಆಗಬಹುದು. ಆದರೆ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮೊದಲ ಆದ್ಯತೆ ಎಂದಿದ್ದಾರೆ ಡಾ. ಜಿ ಪರಮೇಶ್ವರ್​. ಪರಮೇಶ್ವರ್​ ಮಾತಿಗೆ ಮನಸ್ಸಲ್ಲೇ ಮಂಡಿಗೆ ತಿಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಅದನ್ನು ಹೈಕಮಾಂಡ್​ ಹೇಳುತ್ತೆ ಎನ್ನುವ ಮೂಲಕ ಜಾರಿಕೊಳ್ಳುವ ಕೆಲಸ ಮಾಡಿದ್ದಾರೆ. ಇನ್ನೂ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​​, ಎಲ್ಲರೂ ಆಸೆ ಪಡಬಹುದು. ಅಂತಿಮವಾಗಿ ಪಾರ್ಟಿ ತೀರ್ಮಾನ ಮಾಡುತ್ತೆ ಎಂದಿದ್ದಾರೆ. ಜೊತೆಗೆ ಏನು ಮಾತನಾಡಬೇಕು, ಮಾತನಾಡಬಾರದು ಎನ್ನುವುದು ಮಾಜಿ ಅಧ್ಯಕ್ಷರಿಗೆ ಗೊತ್ತಿದೆ ಎಂದಿದ್ದಾರೆ.

Read This Also;

‘ದಲಿತ ಸಿಎಂ’ ಘೋಷಣೆ ಮಾಡಿದ್ರೆ ಸಹಾಯ..!

ಬಿಜೆಪಿ ಪಕ್ಷ ಈಗಾಗಲೇ ದಲಿತ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಕೆಲಸ ಮಾಡಿದೆ. ರಾಜ್ಯಪಾಲ ಹುದ್ದೆ, ಕೇಂದ್ರದಲ್ಲಿ ಹಲವು ಸಮುದಾಯಗಳ ನಾಯಕರನ್ನು ಮಂತ್ರಿಗಳನ್ನಾಗಿ ಮಾಡುವ ಮೂಲಕ ಮುಂದಿನ ಚುನಾವಣೆಯಲ್ಲಿ ಗಲಿತ ಸಮುದಾಯಗಳ ಮತಗಳ ಮೇಲೆ ಕಣ್ಣಿಟ್ಟಿದೆ ಎನ್ನುವುದು ರಾಜಕೀಯ ಪರಿಣಿತರ ಮಾತಾಗಿದೆ. ಇನ್ನೂ ಕಾಂಗ್ರೆಸ್​ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದೆ. ದಲಿತ ಮತಗಳು ಕಾಂಗ್ರೆಸ್​ ಪಕ್ಷದಿಂದ ದೂರ ಸರಿಯದಂತೆ ಮಾಡುವ ಉದ್ದೇಶವಿದ್ದರೆ ‘ದಲಿತ ಸಿಎಂ’ ಘೋಷಣೆ ಮಾಡುವುದು ಸೂಕ್ತ. ಈ ಮೂಲಕ ಬಿಜೆಪಿ ಕಟ್ಟಿಕೊಳ್ಳುತ್ತಿರುವ ದಲಿತ ಸಮುದಾಯದ ಮತಗಳ ಕೋಟೆಯನ್ನು ಛಿದ್ರ ಮಾಡಬಹುದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಈ ಮೂಲಕ ಇಷ್ಟು ವರ್ಷಗಳಿಂದ ಕಾಂಗ್ರೆಸ್​ನಿಂದ ಆಗಿರುವ ಅನ್ಯಾಯವನ್ನು ಸರಿ ಮಾಡಿಕೊಳ್ಳುವ ಕೆಲಸ ಮಾಡಬಹುದು ಎನ್ನುತ್ತಾರೆ ದಲಿತ ಸಮುದಾಯದ ಕಾಂಗ್ರೆಸ್​ ನಾಯಕರು. ಕಾಂಗ್ರೆಸ್​ ಮನಸ್ಸು ಮಾಡುತ್ತಾ..? ಗೊತ್ತಿಲ್ಲ.

Related Posts

Don't Miss it !