ಕೊರೊನಾ ಇನ್ನೂ ಜಾಸ್ತಿ ಆಗುತ್ತೆ, ಆದ್ರೆ ಲಾಕ್​ಡೌನ್​ ಮಾಡಲ್ಲ..!! ಯಾಕೆ ಗೊತ್ತಾ..?

ಕೊರೊನಾ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಕರ್ನಾಟಕದಲ್ಲಿ ಇಂದು 14,473 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಬೆಂಗಳೂರಿನಲ್ಲಿ 10,800 ಜನರಲ್ಲಿ ಪಾಸಿಟಿವ್​ ಕಂಡು ಬಂದಿದೆ. ಇನ್ನೂ 5 ಜನರು ಸಾವನ್ನಪ್ಪಿದ್ದು, ಪಾಸಿಟಿವಿಟಿ ದರ ಶೇಕಡ 10.30ರಷ್ಟು ಆಗಿದೆ. ಸಾವಿನ ಪ್ರಮಾಣ ಕಡಿಮೆ ಇದ್ದರೂ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಜಾಸ್ತಿಯಾಗುವ ಭೀತಿ ಎದುರಾಗಿದೆ. ಈಗಾಗಲೇ ವಯಸ್ಕರಿಗೆ ಲಸಿಕೆ ಹಾಕಿರುವ ಪರಿಣಾಮ ಸಾವಿನ ದರ ಕಡಿಮೆ ಆಗಿದೆ. ಆದರೆ 15 ವರ್ಷ ಒಳಪಟ್ಟ ಮಕ್ಕಳಿಗೆ ಇನ್ನೂ ಲಸಿಕೆ ಹಾಕದ ಕಾರಣಕ್ಕೆ ಮಕ್ಕಳಲ್ಲಿ ಸೋಂಕು ಹೆಚ್ಚಳ ಆಗುವ ಸಾಧ್ಯತೆ ಇದೆ. ಒಂದು ವೇಳೆ ಸಾವು ನೋವಿನ ಸಂಖ್ಯೆ ಉಲ್ಬಣ ಆಗುತ್ತಾ ಎನ್ನುವ ಆತಂಕ ಜನರನ್ನು ಕಾಡುವುದಕ್ಕೆ ಶುರುಮಾಡಿದೆ.

ಸಂಕ್ರಾಂತಿ, ವೈಕುಂಠ ಏಕಾದಶಿಗೂ ಕೊರೊನಾ ಅಡ್ಡಿ..!

ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಳ ಆಗುತ್ತಿರುವುದರಿಂದ ಸಿಎಂ ತಾಂತ್ರಿಕಾ ಸಲಾ ಸಮಿತಿ ಸಭೆ ನಡೆಸಿದ್ದಾರೆ. ಆ ಬಳಿಕ ಕೆಲವೊಂದು ನಿಯಮಗಳನ್ನು ಜಾರಿ‌ ಮಾಡಿದ್ದು, ಸಂಕ್ರಾಂತಿ ಹಬ್ಬ ಆಚರಣೆ ವೇಳೆ ಮೆರವಣಿಗೆ ನಡೆಸಲು ಅವಕಾಶವಿಲ್ಲ ಎನ್ನಲಾಗಿದೆ. ಇನ್ನೂ ವೈಕುಂಠ ಏಕಾದಶಿಗೆ ಸರ್ಕಾರ ಹೊಸದಾಗಿ ನಿಯಮ ಮಾಡಿದ್ದು, ಶೇಕಡ 50 ರ ಮಿತಿಯಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಒಮ್ಮೆಗೆ 50 ಜನರಿಗೆ ಅವಕಾಶ ಎಂದು ಹೇಳಲಾಗಿದೆ. ಆದರೆ ಜನರು ಸರ್ಕಾರದ ನಿಯಮ ಪಾಲನೆ ಮಾಡ್ತಾರಾ..? ಎನ್ನುವುದೇ ಈಗಿರುವ ಪ್ರಶ್ನೆ. ಇನ್ನೂ ಸರ್ಕಾರ ಮಕ್ಕಳಿಗೆ ಕೊರೊನಾ ಬಂದೇ ಬರುವ ನಿರೀಕ್ಷೆಯಲ್ಲಿದ್ದು, ಔಷಧಿ, ವಾರ್ಡ್, ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ತಿದೆ. ಸೋಂಕಿನ ಅಬ್ಬರ ನೋಡಿಕೊಂಡು ಶಾಲೆಗಳಿಗೆ ರಜೆ ನೀಡುವ ಅಧಿಕಾರವನ್ನು ಸ್ಥಳೀಯ ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಬೆಂಗಳೂರು ಬಳಿಕ ಮೈಸೂರು ಜಿಲ್ಲಾಧಿಕಾರಿ ಈಗಾಗಲೇ ರಜೆ ಘೋಷಣೆ ಮಾಡಿದ್ದಾರೆ.

Read This;

ಬೆಂಗಳೂರಿನಲ್ಲಿ ಕೋವಿಡ್ ಕೇರ್ ಸೆಂಟರ್ ಕಾರ್ಯ ಶುರು..!

ಬೆಂಗಳೂರು ಕೊರೊನಾ ಸೋಂಕಿತರ ಹಾಟ್ ಸ್ಪಾಟ್ ಆಗಿದೆ. ಕರ್ನಾಟಕದ ಸುಮಾರು 80 ರಷ್ಟು ಕೊರೊನಾ ಸೋಂಕಿತರು ಬೆಂಗಳೂರಿನಲ್ಲೇ ಇದ್ದಾರೆ. ಇನ್ನೂ ಆರೋಗ್ಯ ವ್ಯವಸ್ಥೆ ಸಾಕಷ್ಟು ಸುಸ್ಥಿತಿಯಲ್ಲಿದೆ. ವ್ಯವಸ್ಥೆ ಹದಗೆಡುವ ಮುನ್ನವೇ ಮುಂಜಾಗ್ರತೆ ವಹಿಸಿರುವ ರಾಜ್ಯ ಸರ್ಕಾರ, ಹೋಟೆಲ್‌ ಹಾಗೂ ಪಿಜಿಗಳಲ್ಲಿ ಕೋವಿಡ್ ಕೇರ್ ಸೆಂಟರ್ ನಡೆಸುವುದಕ್ಕೆ ಅನುಮತಿ ನೀಡಿದೆ. ಆದರೆ ದಿನದ 24 ಗಂಟೆಗಳ ಕಾಲ ಆ್ಯಂಬುಲೆನ್ಸ್ ವ್ಯವಸ್ಥೆ ಇರಬೇಕು, ಕೋವಿಡ್ ಕೇರ್ ಸೆಂಟರ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ ತರಬೇತಿ ಪಡೆದಿರಬೇಕು, ಆಸ್ಪತ್ರೆಗಳ ಮೇಲುಸ್ತುವಾರಿಯಲ್ಲಿ ಕೋವಿಡ್ ಕೇರ್ ನಡೆಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮೇಕೆದಾಟು ಪಾದಯಾತ್ರೆ: ನಲಪಾಡ್​ ಕುತ್ತಿಗೆ ಪಟ್ಟಿ ಹಿಡಿದು ಎಳೆದು ಹಾಕಿದ ಸಂಸದ ಡಿ.ಕೆ ಸುರೇಶ್​

ಮಾರುಕಟ್ಟೆಗಳು ಶಿಫ್ಟ್​, ರಾಜಕೀಯಕ್ಕೆ ಇಲ್ಲ ಬ್ರೇಕ್​..!

ಮಾಕುಕಟ್ಟೆಯಲ್ಲಿ ಪ್ರತಿದಿನ ಸಾವಿರಾರು ಜನರು ಒಂದೇ ಕಡೆ ಸೇರುವುದರಿಂದ ಸೋಂಕು ಉಲ್ಬಣ ಆಗುತ್ತಿದೆ ಎನ್ನುವ ನಿರ್ಧಾರಕ್ಕೆ ಬಂದಿರುವ ರಾಜ್ಯ ಸರ್ಕಾರ, ಹೆಚ್ಚಿನ ಮಾರುಕಟ್ಟೆಗಳನ್ನು ಭಾಗ ಮಾಡಿ ಸ್ಥಳಾವಕಾಶ ಇರುವ ಕಡೆಗೆ ಶಿಫ್ಟ್ ಮಾಡಲು ನಿರ್ಧಾರ ಮಾಡಿದೆ. ಇನ್ನೂ ರಾಜಕೀಯ ಸೇರಿದಂತೆ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಇನ್ನೂ ಶಕ್ತಿ ಬಂದಿಲ್ಲ. ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದಷ್ಟೇ ತಿಳಿಸಿದ್ದಾರೆ ಗೃಹ ಸಚಿವ ಆರಗ ಜ್ಞಾನೇಂದ್ರ. ಇನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಸಿಎಂಗಳ ಸಭೆ ಕರೆದಿದ್ದು, ಕೇಂದ್ರದ ಸಲಹೆ ಸೂಚನೆಗಳ ಆಧಾರದಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡುವ ಸಾಧ್ಯತೆ ಇದೆ.

Also Read;

ಸರ್ಕಾರ ಲಾಕ್​ಡೌನ್​ ನಿರ್ಧಾರ ಮಾಡ್ತಿಲ್ಲ ಯಾಕೆ..?

ಲಾಕ್​ಡೌನ್​ ಮಾಡುವುದರಿಂದ ಕೊರೊನಾ ಸೋಂಕು ಹರಡುವುದನ್ನು ತಾತ್ಕಾಲಿಕವಾಗಿ ತಡೆ ಒಡ್ಡಬಹುದು. ಇದರಿಂದ ಆರೋಗ್ಯ ವ್ಯವಸ್ಥೆ ತೀರಾ ಹದಗೆಡದಂತೆ ನೋಡಿಕೊಳ್ಳಬಹುದು. ಒಮ್ಮೆ ಒಂದು ವೈರಸ್​​ ಬಂದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಜೊತೆಗೆ ಹೋರಾಟ ನಡೆಸಿದ ಬಳಿಕ ನಮ್ಮ ದೇಹದಲ್ಲಿ ಕೊರೊನಾ ವೈರಸ್​​ ಸೋಂಕು ಹೊಡೆದೋಡಿಸಬಲ್ಲ ಪ್ರತಿಕಾಯಗಳು ಜನ್ಮ ತಾಳುತ್ತವೆ. ಅಲ್ಲೀವರೆಗೂ ಎಷ್ಟೇ ದಿನಗಳ ಕಾಲ ಲಾಕ್​ಡೌನ್​ ಮಾಡಿದರೂ ಲಾಕ್​ಡೌನ್​ ತೆರವು ಬಳಿಕ ಕೊರೊನಾ ಹರುತ್ತೆ ಎನ್ನುವುದು ಈಗಾಗಲೇ ಬಯಲಾಗಿರುವ ರಹಸ್ಯ. ಇನ್ನೂ ಲಾಕ್​ಡೌನ್​ ಮಾಡಿದ್ರೆ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕುತ್ತಾರೆ. ಸರ್ಕಾರ ಅವರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡದಿದ್ದರೆ ಆಕ್ರೋಶಗೊಳ್ಳುತ್ತಾರೆ ಎನ್ನುವ ಕಾರಣದಿಂದ ಲಾಕ್​ಡೌನ್​ ನಿರ್ಧಾರ ಕೈಗೊಳ್ಳದೆ ಕೆಲವು ಪರ್ಯಾಯ ಮಾರ್ಗಗಳನ್ನು ಮಾತ್ರ ಹುಡುಕುತ್ತಿದೆ. ಒಂದು ವೇಳೆ ಮಕ್ಕಳ ಮೇಲೆ ತೀವ್ರ ಪರಿಣಾಮ ಉಂಟಾಗುವ ಸ್ಥಿತಿಗೆ ಬಂದರೆ ಮಾತ್ರ ಲಾಕ್​ಡೌನ್​ ಮಾಡಲಾಗುತ್ತದೆ ಎನ್ನುತ್ತಿದೆ ಸರ್ಕಾರದ ಆಪ್ತ ಮೂಲಗಳು.

Related Posts

Don't Miss it !