Hubli Muslim: ಕರ್ನಾಟಕದಲ್ಲಿ ಧರ್ಮ ಸಂಘರ್ಷ.. ಮುಸಲ್ಮಾನರ ರಾತ್ರಿ ರಹಸ್ಯ..!!

ಕರ್ನಾಟಕದಲ್ಲಿ ಹಿಂದೂ ಸಂಘಟನೆಗಳು ಮುಸ್ಲಿಂ ಸಮುದಾಯದ ವಿರುದ್ಧ ಒಂದೊಂದೇ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಇದು ರಾಜಕೀಯ ಪ್ರೇರಿತ ಘಟನೆಗಳು. ಮುಂದಿನ ವರ್ಷ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ನಡೆಯುತ್ತಿರುವ ತಾಲೀಮು ಎಂದು ಬಣ್ಣಿಸಲಾಗ್ತಿದೆ. ಈ ಎಲ್ಲಾ ಬೆಳವಣಿಗೆ ಹಿಂದೆ ಆಡಳಿತರೂಢ ಭಾರತೀಯ ಜನತಾ ಪಾರ್ಟಿ ಬೆಂಬಲ ಇದೆ ಎನ್ನುವ ಆರೋಪವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ವಿಪಕ್ಷಗಳ ಮಾತಿಗೆ ಅನುಗುಣವಾಗಿ ಆಡಳಿತದಲ್ಲಿರುವ ನಾಯಕರು ನೀಡುತ್ತಿರುವ ಹೇಳಿಕೆಗೆಗಳು ಹೌದು ಎನ್ನುವಂತಿವೆ. ಧರ್ಮ ಸಂಘರ್ಷದಿಂದ ಲಾಭ ಮಾಡಿಕೊಳ್ಳಲು ಕೆಲವರು ಮುಂದಾಗಿದ್ದಾರೆ. ಇನ್ನೂ ಕೆಲವರು ಧರ್ಮ ಸಂಘರ್ಷದ ವಿರೋಧವಾಗಿ ನಿಲುವು ವ್ಯಕ್ತಪಡಿಸುವ ಮೂಲಕ ವಿರೋಧಿ ಬಲ ಪಡೆಯುವ ಚಿಂತನೆಯಲ್ಲಿದ್ದಾರೆ. ರಾಜಕೀಯ ಲಾಭ ನಷ್ಟದ ಬಗ್ಗೆ ಚರ್ಚೆ ಆಗುತ್ತಿದೆ. ಆದರೆ ಸಮಾಜದಲ್ಲಿ ದುಷ್ಪರಿಣಾಮ ಬೀರುವ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ. ಮಾತನಾಡಿದರೆ ಎಲ್ಲಿ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆಯೋ ಎನ್ನುವ ಭಾವನೆ ರಾಜಕಾರಣಿಗಳನ್ನು ಕಾಡುತ್ತಿದೆ. ಆದರೆ ಈ ಧರ್ಮ ಸಂಘರ್ಷಕ್ಕೆ ಮುಸ್ಲಿಂ ಸಮುದಾಯದ ತಾಳ್ಮೆ ಕಳೆದುಕೊಳ್ಳುವುದು ಪರಿಣಾಮ ಬೀರಿದೆ.

ಹುಬ್ಬಳ್ಳಿಯಲ್ಲಿ ಆಗಿದ್ದೇನು..? ಮುಸ್ಲಿಮರು ಮಾಡಿದ್ದೇನು..?

ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಪೋಸ್ಟ್ ಒಂದನ್ನು ಹಾಕಲಾಗಿತ್ತು ಎಂದು ಆರೋಪಿ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಸುಮಾರು ಮೂರ್ನಾಲ್ಕು ಸಾವಿರ ಜನ ಜಮಾಯಿಸಿದ್ದರು. ಪ್ರತಿಭಟನಾಕಾರರನ್ನು ತಡೆಯುವ ಉದ್ದೇಶದಿಂದ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಬೇಕಾಯ್ತು. ಅಶ್ರುವಾಯು ಸಿಡಿಸಬೇಕಾಯ್ತು. ಪೊಲೀಸರ ಮೇಲೆ ಉದ್ರಿಕ್ತರಾದ ಪ್ರತಿಭಟನಾ ನಿರತ ಗುಂಪು ಪೊಲೀಸ್ ಜೀಪ್ಗಳಿಗೆ ಕಲ್ಲು ತೂರಿದ್ರು. ಸಿಕ್ಕ ಸಿಕ್ಕವರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ರು. ಆಂಜನೇಯ ದೇವಸ್ಥಾನದ ಮೇಲೆ ದಾಂಧಲೆ ಮಾಡಿದ್ರು. ಬೆಳಗ್ಗೆ ಸಿಸಿಟಿವಿ ಸೇರಿದಂತೆ ಮೊಬೈಲ್ ದೃಶ್ಯಾವಳಿಗಳನ್ನು ನೋಡಿ ಎಲ್ಲರಿಗೂ ಹೆಡೆಮುರಿ ಕಟ್ಟಿದ್ದಾರೆ. ಆದರೆ ನಮ್ಮ ಮನೆಯವರು, ಅಣ್ಣ ತಮ್ಮಂದಿರು ಯಾವುದೇ ತಪ್ಪು ಮಾಡಿಲ್ಲ, ಆದರೂ ಪೊಲೀಸರು ಸುಖಾಸುಮ್ಮನೆ ಅರೆಸ್ಟ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಇದೇ ರೀತಿ ಈ ಹಿಂದೆ ಕೂಡ ಆಗಿತ್ತು. ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆ ವೇಳೆಯೂ ಇದೇ ರೀತಿ ಸಮರ್ಥನೆ ಮಾಡಿಕೊಂಡಿದ್ದರು.

ಕೆಜಿ ಹಳ್ಳಿ ಡಿಜೆ ಹಳ್ಳಿ ಗಲಾಟೆಗೆ ಸಾಮ್ಯತೆ ಹೇಗೆ..?

ಎರಡು ವರ್ಷಗಳ ಹಿಂದೆ ಡಿಜೆ ಹಳ್ಳಿ, ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಅವರ ಭಾಮೈದ ಹಾಕಿದ್ದ ಪೋಸ್ಟ್ಗೆ ಮುಸ್ಲಿಂ ಸಮುದಾಯ ರೊಚ್ಚಿಗೆದ್ದಿತ್ತು. ರಾತ್ರೋ ರಾತ್ರೋ ಠಾಣೆಗೆ ಮುತ್ತಿಗೆ ಹಾಕಿತ್ತು. ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು. ಪೊಲೀಸ್ ಠಾಣೆಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನ ಕೂಡ ಬೆಂಕಿಯ ಕೆನ್ನಾಲಿಗೆಯಲ್ಲಿ ಸುಟ್ಟು ಕರಕಲಾಗಿತ್ತು. ಆ ಬಳಿಕ ತನಿಖೆ ನಡೆಸಿ ಆರೋಪಿಗಳಿಂದಲೇ ನಷ್ಟ ಭರ್ತಿ ಮಾಡಿಸುವ ಮಾತುಗಳು ಕೇಳಿಬಂದವು. ಕಾಂಗ್ರೆಸ್ ಶಾಸಕರ ವಿರುದ್ಧ ಕಾಂಗ್ರೆಸ್ ನಾಯಕರೇ ಕೆಲಸ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿಬಂದವು. ಇದೀಗ ಎಲ್ಲವೂ ತಣ್ಣಗಾಗಿದ್ದು, ಡಿ.ಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ ಇತಿಹಾಸದ ಪುಟ ಸೇರಿದೆ. ಹುಬ್ಬಳ್ಳಿ ಹಾಗೂ ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣದಲ್ಲಿ ಒಂದೇ ರೀತಿಯ ಸಾಮ್ಯತೆ ಎಂದರೆ ರಾತ್ರಿ ವೇಳೆ ಮುಸ್ಲಿಂ ಸಮುದಾಯದ ಯುವಕರು ಜಮಾವಣೆ ಆಗಿದ್ದು, ವಿದ್ಯುತ್ ಸಂಪರ್ಕ ಬಂದ್ ಮಾಡಿ ದಾಂಧಲೆ ಮಾಡಿದ್ದು. ಅದರ ಜೊತೆಗೆ ಕಿಡಿಗೇಡಿ ಕೃತ್ಯ ಮಾಡಿದವರ ಬಂಧನ ಆದ ಬಳಿಕ ಆಕ್ರೋಶ ಹೊರ ಹಾಕಿದ್ದು.

ಪ್ರತಿಭಟನೆ ಮಾಡುವುದು ಕಾನೂನು ರೀತಿಯ ಹಕ್ಕು ಅಲ್ಲವೇ..?

ಮುಸ್ಲಿಂ ಸಮುದಾಯದ ಯುವಕರು ಪ್ರತಿಭಟನೆ ಮಾಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ಈ ಎರಡೂ ಪ್ರಕರಣಗಳಲ್ಲಿ ಯಾವುದೇ ರೀತಿಯ ಪ್ರತಿಭಟನೆ ಮಾಡಿಲ್ಲ. ಸುಖಾಸುಮ್ಮನೆ ಗಲಾಟೆ ಸೃಷ್ಟಿಸಿರುವುದು ಕಂಡು ಬರುತ್ತದೆ. ಯಾಕೆಂದ್ರೆ ಯಾರೋ ಒಬ್ಬ ಪುಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾನೆ ಎನ್ನುವ ಕಾರಣಕ್ಕೆ ದಾಂಧಲೆ ಮಾಡುವುದು ಸಂವಿಧಾನಕ್ಕೆ ಮಾಡಿದ ಅಪಚಾರ ಆಗುತ್ತದೆ. ಒಂದು ವೇಳೆ ಯಾರಾದರೂ ಕಿಡಿಗೇಡಿ ಕೃತ್ಯ ಮಾಡಿದ್ದರೆ ಕಾನೂನು ರೀತ್ಯ ದೂರು ದಾಖಲಿಸಬೇಕು. ಬಂಧನ ಮಾಡದಿದ್ದರೆ ಪ್ರತಿಭಟನೆ ಮಾಡುವ ಮಾರ್ಗ ಹಿಡಿಯಬೇಕು. ಅದೂ ಕೂಡ ಪ್ರತಿಭಟನೆ ಎಲ್ಲಿ..? ಯಾವಾಗ..? ಹೇಗೆ..? ಮಾಡಬೇಕು ಎನ್ನುವುದನ್ನ ಆಯೋಜಕರು ನಿರ್ಧಾರ ಮಾಡಬೇಕು. ಅದನ್ನು ಬಿಟ್ಟು ರಾತ್ರೋ ರಾತ್ರಿ ಮಸೀದಿ ಜಮಾವಣೆ ಆಗುವುದು, ವಿದ್ಯುತ್ ಸಂಪರ್ಕ ಬಂದ್ ಮಾಡಿ ದಾಂಧಲೆ ಮಾಡುವುದು ಪ್ರತಿಭಟನೆ ಅಲ್ಲ, ದರೋಡೆ. ಇದೆಲ್ಲವನ್ನೂ ಮುಸ್ಲಿಂ ಸಮುದಾಯವನ್ನು ದಾಳವಾಗಿ ಬಳಸಿಕೊಂಡು ಯಾರಾದರೂ ಮಾಡಿಸುತ್ತಿದ್ದಾರೆಯೋ ಎನ್ನುವ ಅನುಮಾನ ಮೂಡಿಸುತ್ತದೆ. ಇನ್ನೂ ಇದೇ ರೀತಿ ಗಂಗೊಳ್ಳಿ ಮೀನು ಮಾರುಕಟ್ಟೆಯ ಮಹಿಳೆಯರ ವಿರುದ್ಧ ತೆಗೆದುಕೊಂಡ ವ್ಯಾಪಾರ ನಿರ್ಬಂಧ ಇಡೀ ರಾಜ್ಯದಲ್ಲಿ ಅಶಾಂತಿ ಮೂಡಿಸುವ ಮಟ್ಟಕ್ಕೆ ಬಂದು ನಿಂತಿದೆ. ಮುಸ್ಲಿಂ ಸಮುದಾಯ ತಾಳ್ಮೆ ಕಳೆದುಕೊಂಡು ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ರಾಜ್ಯ ಉತ್ತರ ಭಾರತದ ಹಿಂಸಾಚಾರಗಳ ಪ್ರತಿಬಿಂಬ ಎನ್ನುವಂತಾಗಲಿದೆ. ಕೆಲವರು ಬಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಕೆಲಸ ಮಾಡುತ್ತಿದ್ದಾರೆ.

Related Posts

Don't Miss it !