ಕೊರೊನಾ​ ಬೇಸರ ತಂದಿದ್ಯಾ..? ಹಕ್ಕಿಯಂತೆ ಹಾರಬೇಕಾ..? ಬನ್ನಿ ಗದಗಕ್ಕೆ..

ಕೊರೊನಾ ಲಾಕ್​ಡೌನ್​ನಲ್ಲಿ ಸಾಕಷ್ಟು ಜನರು ಬೆಂಗಳೂರಿನಲ್ಲೇ ಬಂಧಿಯಾಗಿದ್ದರು. ಇದೀಗ ಲಾಕ್​ಡೌನ್​ ಓಪನ್​ ಆಗಿದೆ. ಪ್ರವಾಸಿ ಸ್ಥಳಗಳು ಜನರನ್ನು ಕೈ ಬೀಸಿ ಕರೆಯುತ್ತಿವೆ. ಇದೀಗ the public spot ನಮ್ಮ ಓದುಗರನ್ನು ಆಗಸದಲ್ಲಿ ಹಾರಾಡುವಂತೆ ಮಾಡುತ್ತಿದೆ. ಎರಡು ಬೆಟ್ಟಗಳ ನಡುವೆ ಜಿಪ್​ಲೈನ್​ ಹಾಕಲಾಗಿದ್ದು, ಪ್ರವಾಸಿಗರ ಸ್ವರ್ಗ ಎನ್ನುವಂತಾಗಿದೆ. ಎದೆ ಝಲ್​ ಎನ್ನುವಂತೆ ಒಂದು ಬೆಟ್ಟದಿಂದ ಮತ್ತೊಂದು ಬೆಟ್ಟಕ್ಕೆ ಒಂದು ಕಿಲೋ ಮೀಟರ್​ ದೂರ ಪುಷ್ಪಕ ವಿಮಾನದಲ್ಲಿ ಸಂಚಾರ ಮಾಡಿದ ಅನುಭವ ನಿಮ್ಮದಾಗಲಿದೆ.

ಏನಿದು ಗದಗದಲ್ಲಿ ಜಿಪ್​ ಲೈನ್​ ಸಂಚಾರ..!?

ಕರ್ನಾಟಕದ ಔಷಧಿ ಸಸ್ಯಗಳನ್ನು ಹೊಂದಿರುವ ಕಪ್ಪತ್ತಗುಡ್ಡದ ಎರಡು ಬೆಟ್ಟಗಳ ನಡುವೆ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲಾಗಿದೆ. ಗದಗ ಜಿಲ್ಲಾ ಫಾರೆಸ್ಟ್​ ಆಫೀಸರ್​ ಸೂರ್ಯಸೇನಾ ಆಸಕ್ತಿ ವಹಿಸಿ ಉತ್ತರ ಕರ್ನಾಟಕ ಭಾಗದಲ್ಲಿ ಮೊಟ್ಟ ಮೊದಲ ಬಾರಿಗೆ ಜನರಿಗೆ ಜಿಪ್​ಲೈನ್​ ಸಂಚಾರದ ಅನುಭವ ನೀಡುವ ವ್ಯವಸ್ಥೆ ಮಾಡಿದ್ದಾರೆ. 40 ಅಡಿ ಎತ್ತರದಲ್ಲಿ 370 ಮೀಟರ್​ ಉದ್ದ ಅಂದರೆ ಸುಮಾರು ಅರ್ಧ ಕಿಲೋ ಮೀಟರ್​ ದೂರ ಸೊಗಸಾದ ಸಂಚಾರ ಮಾಡಬಹುದಾಗಿದೆ.

ಕರ್ನಾಟಕದ ಇರುವ ಏಕೈಕ ಜಿಪ್​ಲೈನ್​..!

ಕರ್ನಾಟಕದಲ್ಲಿ ಈಗಾಗಲೇ ಹಲವಾರು ಕಡೆ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಜಿಪ್​ಲೈನ್​ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗದ ಜೋಗದಲ್ಲಿ ಜಿಪ್​ಲೈನ್​ ಮಾಡಲಾಗಿದೆ ಆದರೆ ಇನ್ನೂ ಪ್ರವಾಸಿಗರಿಗೆ ಮುಕ್ತವಾಗಿಲ್ಲ. ಇದನ್ನು ಹೊರತುಪಡಿಸಿ ಬೇರೆಲ್ಲೂ ಜಿಪ್​ಲೈನ್​ ಇರಲಿಲ್ಲ. ಇದೀಗ ಗದಗದಲ್ಲಿ ಜಿಪ್​ಲೈನ್​ ಮಾಡಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಸುತ್ತಲೂ ಅಚ್ಚ ಹರಿಸಿನ ಪರಿಸರದಲ್ಲಿ ಆಕಾಶ ಮಾರ್ಗದ ಮೂಲಕ ಒಂದು ಬೆಟ್ಟದಿಂದ ಮತ್ತೊಂದು ಬೆಟ್ಟಕ್ಕೆ ಹೋಗುವುದೇ ಸೊಗಸು. ಸಕಲ ಸುರಕ್ಷತಾ ಕ್ರಮಗಳನ್ನು ಮಾಡಿಕೊಳ್ಳಲಾಗಿದೆ. ನುರಿತ ತರಬೇತುದಾರರು ಸ್ಥಳದಲ್ಲಿದ್ದು ಪ್ರವಾಸಿಗರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಸಾಲುಮರದ ತಿಮ್ಮಕ್ಕ ಪಾರ್ಕ್​ ವಿಶೇಷ..!

ಕಪ್ಪತ್ತಗುಡ್ಡದಲ್ಲಿ ಸುಮಾರು 67 ಎಕರೆ ಪ್ರದೇಶದಲ್ಲಿ ಸಾಲುಮರದ ತಿಮ್ಮಕ್ಕ ಹೆಸರಿನ ಪಾರ್ಕ್​ ನಿರ್ಮಿಸಲಾಗಿದೆ. ಕೊರೊನಾ ಲಾಕ್​ಡೌನ್​ ಕಾರಣ ಉದ್ಯಾನವನಕ್ಕೆ​ ಪ್ರವಾಸಿಗರು ಇಲ್ಲದೆ ಬಿಕೋ ಎನ್ನುತ್ತಿತ್ತು. ಇದೀಗ ಜಿಪ್​ಲೈನ್​ ವ್ಯವಸ್ಥೆ ಮಾಡಿರುವ ಕಾರಣ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. 32 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಜಿಪ್​ಲೈನ್​ ಸಂಚಾರ ಹೊಸ ಅನುಭವ ನೀಡಲಿದೆ. ಕಪ್ಪತ್ತಗುಡ್ಡ ಮಲೆನಾಡಿನ ಸೆರಗಿನಲ್ಲಿದ್ದು, ಮೋಡಕ್ಕೆ ಮುತ್ತಿಡುವ ಅನುಭವ ನೀಡಲಿದೆ. ತಂತಿ ಮೇಲಿನ ಸಂಚಾರ ಮನಸ್ಸಿಗೆ ಮುದ ನೀಡಲಿದೆ.

ಕಪ್ಪತ್ತಗುಡ್ಡಕ್ಕೆ ಮಾರ್ಗ ಯಾವುದು..?

ಬೆಂಗಳೂರಿನಿಂದ ರೈಲು ಮಾರ್ಗದಲ್ಲಿ ಗದಗ ತಲುಪಬಹುದು. ಗೋಲ್​ಗುಂಬಜ್​ ಎಕ್ಸ್​ಪ್ರೆಸ್​​, ಹಂಪಿ ಎಕ್ಸ್​​ಪ್ರೆಸ್​ ರೈಲು ವ್ಯವಸ್ಥೆ ಇದೆ. ಸಂಜೆ ಬೆಂಗಳೂರಿನಿಂದ ರೈಲು ಹತ್ತಿದ್ರೆ ಬೆಳಗ್ಗೆ 5 ಗಂಟೆ ವೇಳೆಗೆ ಗದಗ ತಲುಪಬಹುದು. ಒಂದು ದಿನದ ಪಿಕ್​ನಿಕ್​ ರೀತಿ ಕಪತ್ತಗುಡ್ಡವನ್ನು ಸುತ್ತಾಡಿ ಸಂಜೆ ಬೆಂಗಳೂರು ಟ್ರೈನ್​ ಹತ್ತಬಹುದು. ಇನ್ನೂ ಸ್ವಂತ ವಾಹದಲ್ಲಿ ಬರುವುದಾದರೆ ಬಂಕಾಪುಕ್ರಾಸ್​ನಿಂದ ಬಲಕ್ಕೆ ತಿರುವು ಪಡೆದುಕೊಂಡು ಗದಗ ತಲುಪಬಹುದು. ಗದಗದಿಂದ ಹುಬ್ಬಳ್ಳಿ ಮಾರ್ಗವಾಗಿ ಬಿಂಕದಕಟ್ಟೆ ತಲುಪಬಹುದಾಗಿದೆ.

ಗದಗ ಸುತ್ತಮುತ್ತ ಮತ್ತಷ್ಟು ರೋಚಕ ತಾಣ..!

ಕಪ್ಪತ್ತಗುಡ್ಡದಲ್ಲಿ ಏಷ್ಯಾದಲ್ಲೇ ಅತಿಹೆಚ್ಚು ಗಾಳಿ ಬೀಸುವ ಸ್ಥಳವಿದ್ದು, ಗಾಳಿಗುಂಡಿ ಬಸವಣ್ಣ ದೇವಸ್ಥಾನವಿದೆ. ಬಿಂಕದಕಟ್ಟಿ ಕಿರು ಮೃಗಾಲಯವಿದ್ದು, ಸಾಕಷ್ಟು ವನ್ಯಜೀವಿಗಳ ತಾಣವಾಗಿದೆ. ಬ್ಯಾಟರಿ ಚಾಲಿತ ವಾಹನ ವ್ಯವಸ್ಥೆ ಮೂಲಕ ಸಫಾರಿ ಕೈಗೊಳ್ಳಬಹುದು. ಗದಗದಲ್ಲಿ ತ್ರಿಕೂಟೇಶ್ವರ, ಸೋಮೇಶ್ವರ, ದೇವಸ್ಥಾನಗಳಿವೆ. ವ್ಯಾಸರ ಮಾನಸಪುತ್ರ ಎಂದೇ ಖ್ಯಾತರಾಗಿದ್ದ ಗದುಗಿನ ನಾರಾಯಣಪ್ಪ ಅಂದರೆ ಕುಮಾರವ್ಯಾಸರು ಗದುಗಿನ ಭಾರತ ಕಾವ್ಯ ರಚಿಸಿದ ವೀರನಾರಾಯಣ ದೇವಸ್ಥಾನವಿದೆ. ಇನ್ನು ವೀರೇಶ್ವರ ಪುಣ್ಯಾಶ್ರಮ (ಗವಾಯಿಗಳ ಮಠ) ತೋಂಟದಾರ್ಯ ಮಠವಿದೆ. ಗದಗದಿಂದ 10 ಕಿಲೋ ಮೀಟರ್​ ಹಂತರದಲ್ಲಿ ಲಕ್ಕುಂಡಿ ಗ್ರಾಮವಿದ್ದು, ಇದು ಅತ್ತಿಮಬ್ಬೆ ಹುಟ್ಟೂರು ಆಗಿದೆ. ಇಲ್ಲಿ 101 ಬಾವಿ 101 ದೇವಸ್ಥಾನಗಳ ಗ್ರಾಮ ಎನ್ನುವ ಐಹಿತ್ಯವಿದ್ದು ಇತಿಹಾಸ ಪ್ರಸಿದ್ಧ ಸ್ಥಳವಾಗಿದೆ.

Related Posts

Don't Miss it !