ಕರ್ನಾಟಕದಲ್ಲಿ ನೈಟ್​ ಕರ್ಫ್ಯೂ, ಹೋಟೆಲ್​, ಬಾರ್​, ಪಬ್​ಗೆ ​​ಮಿತಿ..! ವಿರೋಧ..

ಪ್ರಧಾನಿ ನರೇಂದ್ರ ಮೋದಿ ಓಮೈಕ್ರಾನ್​ ಸೋಂಕು ಹೆಚ್ಚಳ ಆಗ್ತಿರೋ ಬಗ್ಗೆ ನಿನ್ನೆ ರಾತ್ರಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಇದಾದ ಬಳಿಕ ಇಂದು ಅಧಿಕಾರಿಗಳು ಹಾಗೂ ತಜ್ಞರ ಜೊತೆಗೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾದ್ಯಂತ ನೈಟ್​ ಕರ್ಫ್ಯೂ ಜಾರಿ ಮಾಡುವ ನಿರ್ಧಾರ ಘೋಷಣೆ ಮಾಡಿದ್ದಾರೆ. ಅದರ ಜೊತೆಗೆ ಕೆಲವೊಂದು ಚಟುವಟಿಗಳನ್ನು ನಿರ್ಬಂಧಿಸಿದ್ದಾರೆ. ಇನ್ನೂ ಕೆಲವು ವಿಚಾರಗಳಿಗೆ ಕೆಲವು ಮಿತಿಗಳನ್ನು ಹೇರಿಕೆ ಮಾಡಿದ್ದಾರೆ. ಈ ವಿಚಾರ ಇದೀಗ ಹಲವಾರು ಜನರ ಕಣ್ಣು ಕೆಂಪಾಗುವಂತೆ ಮಾಡಿದೆ.

ನೂತನ ಮಾರ್ಗಸೂಚಿಯಲ್ಲಿ ಏನೆಲ್ಲಾ ನಿಯಮ ಜಾರಿ..?

ಸಿಎಂ ಸಭೆ ಬಳಿಕ ರಾಜ್ಯ ಸರ್ಕಾರದಿಂದ ಅಧಿಕೃತ ಮಾರ್ಗಸೂಚಿ ಪ್ರಕಟವಾಗಿದ್ದು, ಡಿಸೆಂಬರ್​ 28 ರಿಂದ ಜನವರಿ 7 ಬೆಳಗ್ಗೆ 5 ರ ತನಕ ನೈಟ್ ಕರ್ಪ್ಯೂ ಜಾರಿ ಮಾಡಲಾಗಿದೆ. ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ತನಕ ನೈಟ್ ‌ಕರ್ಪ್ಯೂ ಜಾರಿಯಲ್ಲಿರಲಿದೆ. ಇನ್ನೂ ಡಿಸೆಂಬರ್​ 28 ರಿಂದ ಜನವರಿ 2 ವರೆಗೆ ಟಫ್ ರೂಲ್ಸ್‌ ಜಾರಿ ಮಾಡಿದ್ದು, ಈ ನಾಲ್ಕು ದಿನಗಳ ಕಾಲ ಶೇಕಡ 50 ರಷ್ಟು ಆಸನ ಸಾಮರ್ಥ್ಯಕ್ಕೆ ಮಾತ್ರ ಅವಕಾಶ ಎಂದು ಸೂಚಿಸಲಾಗಿದೆ. ಬಾರ್, ಪಬ್, ಹೋಟೆಲ್, ರೆಸ್ಟೋರೆಂಟ್​ಗೆ ಈ ಆದೇಶ ಅನ್ವಯ ಆಗಲಿದೆ. ಡಿಸೆಂಬರ್ 28 ರಿಂದ ಸಭೆ, ಸಮಾರಂಭಕ್ಕೂ ಕಡಿವಾಣ ಹಾಕಿದ್ದು ಸಭೆ, ಸಮ್ಮೇಳನ, ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಕೇವಲ 300 ಜನರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

Read This;

ನೈಟ್ ಕರ್ಪ್ಯೂ ಸಮಯದಲ್ಲಿ ಎನಿರುತ್ತೆ..? ಏನೇನು ಇರಲ್ಲ…?

ನೈಟ್ ಕರ್ಪ್ಯೂ ಜಾರಿಯಲ್ಲಿ ರೋಗಿಗಳು ಮತ್ತು ಅವರ ಸಹಾಯಕರು ಓಡಾಡಲು ಅವಕಾಶ ನೀಡಲಾಗಿದೆ. ತುರ್ತು ಸೇವೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಕಂಪನಿ ನೌಕರರು,‌ ಕಾರ್ಖಾನೆ ಕಾರ್ಮಿಕರು ತಮ್ಮ ಕಂಪನಿ ಅಥವಾ ಕಾರ್ಖಾನೆ ಐಡಿ ಕಾರ್ಡ್ ತೋರಿಸಿ ಓಡಾಡಬಹುದು. ಗೂಡ್ಸ್ ಸೇವೆ ಯಥಾಸ್ಥಿತಿ ಇರಲಿದೆ. ಬಸ್ ಸಂಚಾರ, ರೈಲು ಸಂಚಾರ, ವಿಮಾನ ಸೇವೆಗೆ ನಿರ್ಬಂಧವಿಲ್ಲ. ಬಸ್ ಟಿಕೆಟ್ ತೋರಿಸಿ ಜನರು ಓಡಾಡಬಹುದು. ಇದನ್ನು ಮೀರಿ ಓಡಾಟ ನಡೆಸಿದ್ರೆ ಪೊಲೀಸರು ದಂಡ ವಿಧಿಸಲಿದ್ದಾರೆ.

‘ಓಮೈಕ್ರಾನ್​’ ಅಬ್ಬರಕ್ಕೆ ರಾಜ್ಯ ಸರ್ಕಾರದ ಸಿದ್ಧತೆ..!

ಕೊರೊನಾ ರೂಪಾಂತರ ಓಮೈಕ್ರಾನ್​ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಕೂಡ ಮುನ್ನೆಚ್ಚರಿಕೆ ಕ್ರಮ ವಹಿಸಿದೆ. ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ಡಾ ಸುಧಾಕರ್, 4 ಸಾವಿರ ಐಸಿಯು ಬೆಡ್​ ತಯಾರಿದೆ. 7051 ಬೆಡ್​ಗಳನ್ನು ಐಸಿಯು ಬೆಡ್​ಗಳಾಗಿ ಪರಿವರ್ತನೆ ಮಾಡಲಾಗ್ತಿದೆ. 3091 ಹಾಸಿಗೆಗಳು ಕೊರೊನಾ ಸೋಂಕಿತರಿಗೆ ಹೆಚ್ಚುವರಿಯಾಗಿ ಮೀಸಲು ಇಡಲಾಗಿದೆ. 15 ರಿಂದ18 ದ ಮಕ್ಕಳಿಗೆ ಜ‌ನವರಿ 3 ರಂದು ಲಸಿಕೆ ನೀಡಲು ಚಾಲನೆ ಕೊಡಲಾಗುವುದು. ಮೊದಲಿಗೆ 43 ಲಕ್ಷ ಮಕ್ಕಳಿಗೆ ಲಸಿಕೆ ಸಿಗಲಿದೆ ಎಂದಿದ್ದಾರೆ. ಇನ್ನೂ ಹೇಗೆ ಓಮೈಕ್ರಾನ್ ಸೋಂಕು ಹೊರರಾಜ್ಯ ಹಾಗೂ ಹೊರ ದೇಶದಲ್ಲಿ ಹೇಗೆ ಹರಡುತ್ತಿದೆ. ನಮ್ಮ ರಾಜ್ಯದಲ್ಲಿ ಏನೆನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಚರ್ಚೆ ನಡೆದಿದೆ. ನೈಟ್ ಕರ್ಪ್ಯೂ ಮಾಡಲು ಸಿಎಂ ಸಭೆಯಲ್ಲಿ ತಿಳಿಸಿದ್ದಾರೆ ಎಂದಿದ್ದಾರೆ.

ಸದ್ಯಕ್ಕೆ ಚಿತ್ರಮಂದಿರಕ್ಕೆ ಶೇ.50ರ ಮಿತಿ ಇಲ್ಲ..!

ನೈಟ್​ ಕರ್ಫ್ಯೂ ಜೊತೆಗೆ ಬಾರ್, ಹೋಟೆಲ್, ಕ್ಲಬ್, ಪಬ್​ನಲ್ಲಿ ಶೇಕಡ 50 ರ ಮಿತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಥಿಯೇಟರ್ಸ್​​ಗೆ ಶೇಕಡ 50ರ ಮಿತಿ ಅನ್ವಯ ಆಗಲ್ಲ. ಆದರೆ ನೈಟ್ ಕರ್ಪ್ಯೂ ವೇಳೆ ಸಿನಿಮಾ ಪ್ರದರ್ಶನ ಇರಲ್ಲ. ಆ ಬಳಿಕ ಪರಿಸ್ಥಿತಿ ‌ನೋಡಿಕೊಂಡು ಸಿಎಂ ತೀರ್ಮಾನ ಮಾಡ್ತಾರೆ ಎನ್ನಲಾಗಿದೆ. ಈ ವಿಚಾರವಾಗಿ ಹೋಟೆಲ್​ ಮಾಲೀಕರು ಗರಂ ಆಗಿದ್ದಾರೆ. ಅಗತ್ಯವಸ್ತು ಪೂರೈಕೆ ಅಡಿಯಲ್ಲಿ ಬರುವ ಹೋಟೆಲ್ ಉದ್ಯಮಕ್ಕೆ ಶೇಕಡ 50ರಷ್ಟು ನಿಗದಿ ಸರಿಯಲ್ಲ. ನೈಟ್ ಕರ್ಫ್ಯೂ ಹೇರಿರುವುದಕ್ಕೂ ವಿರೋಧವಿದೆ. ಹೊಸವರುಷಕ್ಕೆ ಹೊರಗಡೆ ಬರುವ ಒಂದಷ್ಟು ಜನರಿಗೂ ಕಡಿವಾಣ ಹಾಕಿದಂತಾಗಿದೆ. ಇದು ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ. ಸಾರಿಗೆ, ಮಾಲ್, ಮಾರುಕಟ್ಟೆಗೆ ಇಲ್ಲದ ನಿಯಮ ನಮಗ್ಯಾಕೆ ಎಂದು ಪ್ರಶ್ನಿಸಿದ್ದಾರೆ. ಕಳೆದೆರಡು ವರುಷದಿಂದ ಆರ್ಥಿಕ ಸಂಕಷ್ಟದಲ್ಲಿ ಹೋಟೆಲ್ ಉದ್ಯಮ ಸಿಲುಕಿದೆ. ಇದೀಗ ಮತ್ತೆ ಬರೆ ಎಳೆದಂತಾಗುತ್ತದೆ ಪರಿಶೀಲನೆ ನಡೆಸಬೇಕು ಎಂದು ಹೋಟೆಲ್​ ಮಾಲೀಕರು ಆಗ್ರಹಿಸುತ್ತಿದ್ದಾರೆ.

Related Posts

Don't Miss it !