ಹಿಜಬ್​ ವಿಚಾರದಲ್ಲಿ ಸರ್ಕಾರದ ಮಹಾ ಎಡವಟ್ಟು..!! ಮುಂದಿದೆ ಮಾರಿಹಬ್ಬ..

ಹಿಜಬ್​ ಒಂದು ವಸ್ತ್ರ. ಹೆಣ್ಣು ಮಕ್ಕಳು ತಲೆ ಮೇಲೆ ಹಾಕಿಕೊಳ್ಳಲು ಬಳಸುವ ಸಾಮಾನ್ಯ ವಸ್ತ್ರ ಎಂದು ಹೈಕೋರ್ಟ್​ನಲ್ಲಿ ವಾದ ಮಂಡಿಸಲಾಗ್ತಿದೆ. ಇದಕ್ಕೆ ಧಾರ್ಮಿಕ ಬಣ್ಣ ಬಳಿದು ರಾಜಕೀಯಕ್ಕೆ ಬಳಸಿಕೊಳ್ಳಲಾಗ್ತಿದೆ ಎನ್ನುವುದು ಸಾಕಷ್ಟು ಜನರ ಆರೋಪ. ಸರ್ಕಾರ ಸಮವಸ್ತ್ರ ನಿಯಮ ರೂಪಿಸಿದ್ದು, ಅದಕ್ಕೆ ಎಲ್ಲರೂ ಬದ್ಧರಾಗಿ ಇರಬೇಕು ಎನ್ನುವ ನಿಲುವು ಹೊಂದಿದೆ. ಇನ್ನೂ ಕಾಲೇಜು ಅಭಿವೃದ್ಧಿ ಸಮಿತಿ ಎಲ್ಲಾ ಮಕ್ಕಳಂತೆ ಮುಸಲ್ಮಾನ ಹೆಣ್ಣು ಮಕ್ಕಳು ತರಗತಿಗೆ ಹಾಜರಾಗಲಿ ಎನ್ನುವ ಆಗ್ರಹ ಮಾಡುತ್ತಿದ್ದಾರೆ. ಮುಸಲ್ಮಾನ ಸಮುದಾಯದ ಹೆಣ್ಣು ಮಕ್ಕಳು ಹಿಜಬ್​ ಹಾಕಿಕೊಂಡು ಬರುವ ನಿರ್ಧಾರಕ್ಕೆ ಬಂದ ಬಳಿಕ ಹಿಂದೂ ಸಮುದಾಯದ ಮಕ್ಕಳು ಕೇಸರಿ ಶಲ್ಯ ಕೊರಳಿಗೆ ಹಾಕಿ ನಿಂತರು. ಜೊತೆಯಲ್ಲೇ ಆಟವಾಡುತ್ತಿದ್ದ ಮಕ್ಕಳು ಎದುರಾಳಿಗಳಾಗಿ ನಿಂತರು. ಎರಡೂ ಕಡೆಯ ಬಟ್ಟೆಗೂ ಧರ್ಮದ ಲೇಪನ ಮಾಡಲಾಯ್ತು.

ಹೈಕೋರ್ಟ್​ ಆದೇಶ ಕೊಟ್ಟರೂ ಪಾಲಿಸದ ಸರ್ಕಾರ..!

ಸಾಮಾನ್ಯ ವಸ್ತ್ರಕ್ಕೆ ಧರ್ಮದ ಲೇಪನ ಮಾಡಿದ ಬಳಿಕ ವಿಚಾರ ಹೈಕೋರ್ಟ್​ ಅಂಗಳಕ್ಕೆ ತಲುಪಿತ್ತು. ಸರ್ಕಾರ ಕಾನೂನು ಸುವ್ಯವಸ್ಥೆ ಸರಿಯಾಗಿ ಪಾಲನೆ ಮಾಡಿದ್ದರೆ ಇಷ್ಟೆಲ್ಲಾ ರಂಪಾಟ ಆಗುತ್ತಲೇ ಇರಲಿಲ್ಲ. ಆದರೆ ಸರ್ಕಾರಕ್ಕೆ ಗಲಾಟೆ ಆಗುವುದೇ ಬೇಕಿತ್ತೇನೋ ಎನ್ನುವಂತೆ ವರ್ತಿಸಿದ ಸರ್ಕಾರ ಸಾಕಷ್ಟು ಕಡೆಗಳಲ್ಲಿ ಹಿಂಸಾಚಾರ ಆಗುವುದಕ್ಕೆ ತಾನೇ ಸಾಕ್ಷಿಯಾಗಿ ಬಿಟ್ಟಿತ್ತು. ಆ ಬಳಿಕ ಹೈಕೋರ್ಟ್​ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯುವಾಗ ಮೂರು ದಿನಗಳ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿತ್ತು. ಆ ಬಳಿಕ ಹೈಕೋರ್ಟ್​ನ ತ್ರಿಸದಸ್ಯ ಪೀಠಕ್ಕೆ ಅರ್ಜಿ ವರ್ಗಾವಣೆ ಆಗಿ ಗುರುವಾರ ವಿಚಾರಣೆ ನಡೆದಾಗ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳು ತರಗತಿ ಬಂದ್​ ಆಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ಧರು. ಶೈಕ್ಷಣಿಕ ವರ್ಷದ ಅಂತಿಮ ಘಟ್ಟದಲ್ಲಿ ತರಗತಿ ಮುಖ್ಯ ಎನ್ನುವ ಕಾರಣಕ್ಕೆ ಮಧ್ಯಂತರ ಆದೇಶವನ್ನೂ ಹೊರಡಿಸಿದರು. ಆದರೆ ಸರ್ಕಾರ ಮಾತ್ರ ಪಾಲನೆ ಮಾಡದೆ ಆದೇಶವನ್ನೇ ಧಿಕ್ಕರಿಸಿತು.

ಇದನ್ನೂ ಓದಿ: ಡಾಕ್ಟರ್​ ಎಡವಟ್ಟು, ಸೆಲ್ಫಿ ವಿಡಿಯೋ ಮಾಡಿ ಮಹಿಳೆ ಆತ್ಮಹತ್ಯೆ..! ಪೊಲೀಸರೇ ಕೊಲೆಗಾರರು..

ಮುಸಲ್ಮಾನ ಹೆಣ್ಣು ಮಕ್ಕಳು ಸಂಕಷ್ಟದಿಂದ ಪಾರು..!

ಹೈಕೋರ್ಟ್​ ಶಾಲಾ ಕಾಲೇಜುಗಳನ್ನು ಆದಷ್ಟು ಬೇಗ ತೆರೆಯಬೇಕು. ಆದರೆ ಯಾವುದೇ ಧರ್ಮಸೂಚಕ ವಸ್ತ್ರಗಳನ್ನು ಹಾಕಿಕೊಂಡು ಬರುವಂತಿಲ್ಲ. ಯಾವುದೇ ಧಾರ್ಮಿಕ ಮುಖಂಡರು ಶಾಲಾ ಕಾಲೇಜಿಗೆ ತೆರಳುವ ಮಕ್ಕಳನ್ನು ಪ್ರಚೋದನೆ ಮಾಡಬಾರದು. ಸರ್ಕಾರ ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಬೇಕು. ರಾಜ್ಯದಲ್ಲಿ ಶಾಂತಿ ನೆಲಸಬೇಕು ಎಂದಿತ್ತು. ಆದರೆ ಮುಸಲ್ಮಾನ ಹೆಣ್ಣು ಮಕ್ಕಳು ಹೈಕೋರ್ಟ್​ನ ಮಧ್ಯಂತರ ಆದೇಶವನ್ನು ಪಾಲಿಸಿ ಕಾಲೇಜಿಗೆ ಬರುತ್ತಾರೋ ಅಥವಾ ಹೈಕೋರ್ಟ್​ ಆದೇಶವನ್ನು ಧಿಕ್ಕರಿಸಿ ಹಿಜಬ್​ ಧರಿಸಿಯೇ ಬಂದು ಮತ್ತೆ ಗಲಾಟೆಗೆ ಕಾರಣರಾಗುತ್ತಾರೋ ಎನ್ನುವುದನ್ನು ನೋಡುವ ಅವಕಾಶ ಸರ್ಕಾರದ ಮುಂದಿತ್ತು. ಒಂದು ವೇಳೆ ಹೈಕೋರ್ಟ್​ ಆದೇಶವನ್ನೇ ಉಲ್ಲಂಘಿಸಿದ್ದರೆ, ಅದನ್ನು ಕೋರ್ಟ್​ ಗಮನಕ್ಕೆ ತರುವ ಅವಕಾಶ ಸರ್ವಿಕಾರಕ್ಕಿತ್ತು. ಆದರೆ ಸರ್ಕಾರ ಮುಂದಿನ ಬುಧವಾರದ ತನಕ ರಜೆ ನೀಡಿ ಆದೇಶ ಹೊರಡಿಸಿದೆ. ಅಲ್ಲಿಗೆ ಮುಸಲ್ಮಾನ ಹೆಣ್ಣು ಮಕ್ಕಳಿಗೆ ಸರ್ಕಾರವೇ ಅನುಕೂಲ ಮಾಡಿಕೊಟ್ಟಂತಾಗಿದೆ.

ಇದನ್ನು ಓದಿ I ಹೈಕೋರ್ಟ್​ ಮಾತಿಗೆ ಸೊಪ್ಪು ಹಾಕದ ಕರ್ನಾಟಕ ಸರ್ಕಾರ..! ಕಾಲೇಜು ಓಪನ್​ ಸದ್ಯಕ್ಕಿಲ್ಲ..!!

ಕೋರ್ಟ್​ನಲ್ಲಿ ಛೀಮಾರಿ ಹಾಕಿಸಿಕೊಳ್ಳುವುದು ಶತಸಿದ್ಧ..!

ಅರ್ಜಿದಾರರ ಪರವಾಗಿ ವಾದ ಮಂಡಿಸುತ್ತಿದ್ದ ವಕೀಲರ ವಿರೋಧದ ನಡುವೆಯೂ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳು ಮಧ್ಯಂತರ ಆದೇಶ ಹೊರಡಿಸಿದ್ದರು. ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವಕೇಟ್​ ಜನರಲ್​ ಕೂಡ ಮಧ್ಯಂತರ ಆದೇಶಕ್ಕೆ ಒತ್ತಾಯ ಮಾಡಿದ್ದರು. ಶಾಲಾ ಕಾಲೇಜನ್ನು ಮುಚ್ಚುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಮಧ್ಯಂತರ ಆದೇಶ ಹೊರಡಿಸಿದ್ದರೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಾಗದೆ ರಜೆ ಘೋಷಣೆ ಮಾಡಿರುವುದು ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳನ್ನು ಕೆರಳಿಸುವ ಎಲ್ಲಾ ಸಾಧ್ಯತೆಗಳಿವೆ. ಇದೇ ಕಾರಣಕ್ಕೆ ನ್ಯಾಯಾಂಗ ನಿಂದನೆ ಎಂದು ಭಾವಿಸುವ ಬಗ್ಗೆಯೂ ಪ್ರಶ್ನೆ ಉದ್ಭವ ಆಗುವುದನ್ನು ಅಲ್ಲಗಳೆಯುವಂತಿಲ್ಲ. ಇನ್ನೂ ಕೊರೊನಾ ಸಂಕಷ್ಟ, ಲಾಕ್​ಡೌನ್​, ಸೆಮಿಲಾಕ್​ ನಡುವೆ ಪಠ್ಯಗಳು ಪೂರ್ಣವಾಗಿಲ್ಲ. ಆದರೂ ಸರ್ಕಾರ ಮಾತ್ರ ರಜೆ ಮೇಲೆ ರಜೆ ನೀಡುತ್ತಿರುವುದು ವಿದ್ಯಾರ್ಥಿಗಳ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

Related Posts

Don't Miss it !