ಸರ್ಕಾರ ವೀಕೆಂಡ್​ ಕರ್ಫ್ಯೂ ವಾಪಸ್​ ಪಡೆದ ಹಿಂದಿನ ಪ್ರಮುಖ ಉದ್ದೇಶ ಏನು..?

ರಾಜ್ಯ ಸರ್ಕಾರ ಕೊರೊನಾ ಸೋಂಕು ಹೆಚ್ಚಳ ಆಗುವುದನ್ನು ತಡೆಯುವ ಉದ್ದೇಶದಿಂದ ನೈಟ್​ ಕರ್ಫ್ಯೂ ಹಾಗೂ ವೀಕೆಂಡ್​ ಕರ್ಫ್ಯೂ ಜಾರಿ ಮಾಡಿತ್ತು. ಸರ್ಕಾರದ ಈ ನಿರ್ಧಾರದಿಂದ ವ್ಯಾಪಾರಸ್ಥರು ಸೇರಿದಂತೆ ಸಾಕಷ್ಟು ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿತ್ತು. ಅದರಲ್ಲೂ ಬೀದಿ ಬದಿ ವ್ಯಾಪಾರಿಗಳು ಸರ್ಕಾರವನ್ನು ಖಂಡಾತುಂಡಾವಾಗಿ ಖಂಡಿಸಿದ್ದರು. ಸರ್ಕಾರ ನಮ್ಮನ್ನು ಕೊರೊನಾಗಿಂತಲೂ ಕೆಟ್ಟದಾಗಿ ಕಾಡುತ್ತಿದೆ. ಪ್ರತಿದಿನ ದುಡಿದು ತಿನ್ನುವ ಮಂದಿ ನಾವು, ಅದರಲ್ಲೂ ವಾರಾಂತ್ಯದಲ್ಲಿ ನಮಗೆ ಹೆಚ್ಚು ಆದಾಯ ಬರುವ ನಿರೀಕ್ಷೆ ಇರುತ್ತದೆ ಎಂದು ಕಿಡಿಕಾರಿದ್ದರು. ಹೋಟೆಲ್​, ಬಾರ್​ ಅಂಡ್​ ರೆಸ್ಟೋರೆಂಟ್​ ಮಾಲೀಕರು ಸಹ ಸರ್ಕಾರದ ವಿರುದ್ಧ ಕೆಂಡ ಕಾರಿದ್ದರು. ವೀಕೆಂಡ್​ನಲ್ಲಿ ಜನರು ಪ್ರವಾಸ ಹೋಗುವುದು ಸೇರಿದಂತೆ ಮನೆಯಿಂದ ಹೊರಕ್ಕೆ ಬಂದು ಹಣ ಖರ್ಚು ಮಾಡ್ತಾರೆ. ಆ ದಿನವೇ ಬಂದ್​ ಮಾಡಿಕೊಂಡು ಕುಳಿತರೆ ನಾವು ಉದ್ಯಮ ನಡೆಸುವುದು ಕಷ್ಟವಾಗಲಿದೆ ಎಂದು ಒತ್ತಡ ಹೇರಿದ್ದರು. ಹೋಂ ಸ್ಟೇ ಸೇರಿದಂತೆ ರೆಸಾರ್ಟ್​ ಮಾಲೀಕರು, ಪ್ರವಾಸಿ ತಾಣಗಳಿಂದಲೂ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗಿತ್ತು.

ವೀಕೆಂಡ್​ ಕರ್ಫ್ಯೂ ಜಾರಿ ಆದರೂ ನೋ ಯೂಸ್​..!

ಜನವರಿ 8, 9 ಹಾಗೂ 16,16 ರಂದು ವೀಕೆಂಡ್​ ಕರ್ಫ್ಯೂ ಮಾಡಲಾಗಿತ್ತು. ಆದರೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ ಎನ್ನುವುದು ಅಂಕಿ ಅಂಶಗಳಿಂದಲೇ ಸಾಕ್ಷಿಯಾಗಿವೆ. ಜನವರಿ 20 ರಂದು ರಾಜ್ಯದಲ್ಲಿ 47,754 ಸೋಂಕಿತರು, ಜನವರಿ 21ರಂದು 48,049 ಪತ್ತೆಯಾಗಿದ್ದು, 3ನೇ ಅಲೆಯಲ್ಲಿ ಕಾಣೀಸಿಕೊಂಡ ಅತ್ಯಧಿಕ ಸೋಂಕು ಎನ್ನುವ ಹಣೆಪಟ್ಟಿ ಪಡೆದುಕೊಂಡಿವೆ. ರಾಜ್ಯದಲ್ಲಿ ಗುರುವಾರ 29 ಜನರು ಸಾವನ್ನಪ್ಪಿದ್ರೆ, ಶುಕ್ರವಾರ 22 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರು ಒಂದರಲ್ಲೇ ಗುರುವಾರ 30,540 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಶುಕ್ರವಾರ 29,068 ಜನರಲ್ಲಿ ಸೋಂಕು ಕಂಡು ಬಂದಿದೆ. ಅಂದರೆ ಕಳೆದ 15 ದಿನಗಳ ಹಿಂದಯೇ ವೀಕೆಂಡ್​ ಕರ್ಫ್ಯೂ ಜಾರಿ ಮಾಡಿದ್ದರೂ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿಲ್ಲ ಎನ್ನುವುದು ಖಚಿತವಾಗಿದೆ. ಇನ್ನೂ ವೀಕೆಂಡ್​ ಕರ್ಫ್ಯೂ ಜಾರಿ ಮಾಡದೆ ಇದ್ದಿದ್ದರೆ ಮತ್ತಷ್ಟು ಸೋಂಕು ಉಲ್ಭಣ ಆಗುತ್ತಿತ್ತು ಎನ್ನುವ ಮಾತು ಕೂಡ ಸತ್ಯವೇ ಆಗಿದೆ. ಆದರೆ ಆಸ್ಪತ್ರೆಗೆ ಸೇರುವ ಸೋಂಕಿತರ ಸಂಖ್ಯೆ ಶೇಕಡ 5ಕ್ಕಿಂತಲೂ ಕಡಿಮೆ ಇದೆ ಎನ್ನಲಾಗಿದೆ. ಲಾಕ್​ಡೌನ್​, ವೀಕೆಂಡ್​ ಲಾಕ್​ಡೌನ್​, ನೈಟ್​ ಕರ್ಫ್ಯೂ ಯಾವುದೂ ಸೋಂಕನ್ನು ತಡೆಯಲು ಪ್ರಯೋಜನಕ್ಕೆ ಬರುವುದಿಲ್ಲ ಎನ್ನುವುದನ್ನು ಮೊದಲ ಅಲೆಯಲ್ಲೇ ಹೇಳಿದ್ದರೂ ಜನರಿಗೆ ಅರಿವು ಬರಲಿ ಎನ್ನುವ ಕಾರಣಕ್ಕಷ್ಟೇ ಮತ್ತೆ ಮತ್ತೆ ಜಾರಿ ಮಾಡಲಾಗ್ತಿದೆ.

ಇದನ್ನೂ ಓದಿ; ಏರ್​ಪೋರ್ಟ್​ ಕೋವಿಡ್​ ಟೆಸ್ಟ್​ ದಂಧೆ..! ರೊಚ್ಚಿಗೆದ್ದ ಯುವತಿ, ತನಿಖೆಗೆ ತಂಡ..!

ಸೋಲಿನ ಭೀತಿಯಲ್ಲಿ ಹಿಂಜರಿದ ರಾಜ್ಯ ಸರ್ಕಾರ..!

ನೈಟ್​ ಕರ್ಫ್ಯೂ, ವೀಕೆಂಡ್​ ಕರ್ಫ್ಯೂ ಜಾರಿಯಿಂದ ಸರ್ಕಾರಕ್ಕೆ ಲಾಭ ಆಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಕೊರೊನಾ ಹೆಸರಲ್ಲಿ ಸರ್ಕಾರ ಲೂಟಿ ಮಾಡುತ್ತೆ ಎನ್ನುವ ಜನಾಭಿಪ್ರಾಯ ಈಗಾಗಲೇ ಅವ್ಯಕ್ತವಾಗಿದೆ. ಹೀಗಾಗಿ ಕೊರೊನಾ ಹೆಸರಲ್ಲಿ ಸರ್ಕಾರ ನೈಟ್​ ಕರ್ಫ್ಯೂ, ವೀಕೆಂಡ್​ ಕರ್ಫ್ಯೂ ಅಂತೇಳಿ ಜನರನ್ನು ಸಂಕಷ್ಟಕ್ಕೆ ದೂಡುವುದು, ತಮಗೆ ಬೇಕಾದ ಕಾರ್ಯಕ್ರಮಗಳಿಗೆ ಅನುಮತಿ ಕೊಡುತ್ತಾ ಕೇವಲ ಜನಸಾಮಾನ್ಯರನ್ನು ಹಿಂಸಿಸುತ್ತಿದೆ ಎಂದು ಜನಾಕ್ರೋಶ ವ್ಯಕ್ತವಾಗಿತ್ತು. ಅದರಲ್ಲೂ ಬಿಜೆಪಿ ಶಾಸಕರು ಸಂಸದರು ಕ್ಷೇತ್ರಗಳಲ್ಲಿ ಜನರು ತಮ್ಮ ಜನಪ್ರತಿನಿಧಿಯನ್ನು ಪ್ರಶ್ನೆ ಮಾಡುವ ಮೂಲಕ ಮುಜುಗರ ಉಂಟು ಮಾಡುತ್ತಿದ್ದರು. ಮುಂದಿನ ವರ್ಷ ಚುನಾವಣೆ ಬಂದಾಗ ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಮತದಾರ ನಿರ್ಧಾರ ಮಾಡಲಿದ್ದಾನೆ ಎನ್ನುವ ವಿಚಾರ ತಿಳಿಯುತ್ತಿದ್ದ ಹಾಗೆ ತಮ್ಮದೇ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಸಿಡಿದೆದ್ದಿದ್ದರು. ಆ ಬಳಿಕ ಸರ್ಕಾರ ತನ್ನ ನಿಲುವಿನಿಂದ ಹಿಂದಕ್ಕೆ ಸರಿಯುವ ನಿರ್ಧಾರ ಮಾಡಿದೆ.

ಇದನ್ನೂ ಓದಿ: ಪಿಯುಸಿಯಲ್ಲಿ ಶುರುವಾದ ಪ್ರೇಮ.. ಎರಡು ಮಕ್ಕಳಾದರೂ ನಿಲ್ಲಲಿಲ್ಲ..!!

ಸರ್ಕಾರದ ನೂತನ ಆದೇಶದಲ್ಲಿ ಏನೇನು ಹೊಸದಿದೆ..?

ರಾಜ್ಯದಲ್ಲಿ ಪ್ರಮುಖವಾಗಿ ಶನಿವಾರ, ಭಾನುವಾರದ ವೀಕೆಂಡ್​ ಕರ್ಫ್ಯೂ ರದ್ದು ಮಾಡಿರುವ ಸರ್ಕಾರ, ನೈಟ್​ ಕರ್ಫ್ಯೂ ಮುಂದುವರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ವಾರದ ಪ್ರತಿದಿನವೂ ನೈಟ್‌ ಕರ್ಫ್ಯೂ ಇರಲಿದ್ದು, ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೂ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಆದರೆ ವೀಕೆಂಡ್​ ಕರ್ಫ್ಯೂ ತೆಗೆದರೂ ರಾಜ್ಯದಲ್ಲಿ ಶೇಕಡ 50:50 ರೂಲ್ಸ್ ಜಾರಿಯಲ್ಲಿರಲಿ ಎಂದು ಸರ್ಕಾರ ತಿಳಿಸಿದೆ. ಚುನಾವಣಾ ಸಭೆ, ಸಮಾರಂಭ, ಪ್ರತಿಭಟನೆ, ಜಾತ್ರೆ, ಉತ್ಸವಗಳಿಗೆ ನಿರ್ಬಂಧ​ ಉಳಿದುಕೊಂಡಿದೆ. ಜನವರಿ 29ರ ತನಕ ಬೆಂಗಳೂರಲ್ಲಿ ಶಾಲೆಗಳು ಬಂದ್ ಆಗಿರಲಿದೆ. ಆದರೆ ಇತರೆ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ನೋಡಿಕೊಂಡು ಶಾಲೆ ಬಂದ್​ ಮಾಡುವ ನಿರ್ಧಾರವನ್ನು ಜಿಲ್ಲಾಧಿಕಾರಿಗಳು ಕೈಗೊಳ್ಳಲಿದ್ದಾರೆ. ಸೋಂಕಿತರ ಪ್ರಮಾಣ ನೋಡಿಕೊಂಡು 3 ದಿನ ಅಥವಾ 7 ದಿನಗಳ ಕಾಲ ಶಾಲೆ ಬಂದ್​ ಮಾಡಲಾಗುತ್ತದೆ. ವಿಶೇಷ ಎಂದರೆ ಕೊರೊನಾ ಸೋಂಕು ಬಂದ ಶಾಲೆಯನ್ನು ಮಾತ್ರ ಬಂದ್​ ಮಾಡಲಾಗುತ್ತದೆ. ಇಡೀ ಜಿಲ್ಲೆ ಅಥವಾ ಇಡೀ ತಾಲೂಕಿನ ಶಾಲೆಗಳನ್ನು ಬಂದ್​ ಮಾಡುವ ನಿರ್ಧಾರ ಇರಲ್ಲ. ಯಾವ ಶಾಲೆಯಲ್ಲಿ ಸೋಂಕು ಬಂದಿರುತ್ತದೆಯೋ ಆ ಶಾಲೆ ಮಾತ್ರ ಬಂದ್​ ಆಗಲಿದೆ.

Related Posts

Don't Miss it !