ಸಂವಿಧಾನ ಶಿಲ್ಪಿ ಅಂಬೇಡ್ಕರ್​ಗೆ ಸರ್ಕಾರದಿಂದಲೇ ಅಗೌರವ, ಪ್ರತಿಭಟನೆ..!

ಭಾರತ 73ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದು ಸರಿಯಷ್ಟೆ. ದೆಹಲಿಯ ರಾಜಪಥ್​ನಲ್ಲಿ ರಾಷ್ಟ್ರಪತಿ ಹಾಗೂ ಬೆಂಗಳೂರಿನ ಮಾಣೆಕ್​ ಷಾ ಪರೇಡ್​ ಮೈದಾನದಲ್ಲಿ ರಾಜ್ಯಪಾಲರು ಧ್ವಜಾರೋಹಣ ಮಾಡಿದ್ದಾರೆ. ಆದರೆ ಸಂವಿಧಾನವನ್ನು ಭಾರತ ಒಪ್ಪಿಕೊಂಡ ದಿನದಂದು ಸಂವಿಧಾನ ಶಿಲ್ಪಿ ಎಂದು ಕರೆಯಲ್ಪಡುವ ಡಾ ಬಾಬಾ ಸಾಹೇಬ್​ ಅಂಬೇಡ್ಕರ್​​ಗೆ ಅವಮಾನ ಮಾಡುವುದು ತರವೇ..? ಎನ್ನುವ ಪ್ರಶ್ನೆ ಎದ್ದಿದೆ. ಡಾ. ಬಿ.ಆರ್​ ಅಂಬೇಡ್ಕರ್​ ಅವರನ್ನು ವೈಯಕ್ತಿಯವಾಗಿ ಸೈದ್ದಾಂತಿಕವಾಗಿ ಒಪ್ಪುವುದು ಬಿಡುವುದು ಬೇರೇ ವಿಚಾರ. ಆದರೆ ಸಂವಿಧಾನ ರಚನಾ ಕರಡು ಸಮಿತಿ ಅಧ್ಯಕ್ಷರಾಗಿ ಇದ್ದವರು, ವಿಶ್ವದ ಅತ್ಯಂತ ದೊಡ್ಡ ಬರಹ ಸಂವಿಧಾನವನ್ನು ಭಾರತಕ್ಕೆ ಕೊಡಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ ಬಿ.ಆರ್​ ಅಂಬೇಡ್ಕರ್​​ ಅವರನ್ನು ನೆನೆಯಬೇಕಾದದ್ದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯ. ಆದರೆ ರಾಜ್ಯ ಸರ್ಕಾರವೇ ನಿರ್ಲಕ್ಷ್ಯ ವಹಿಸಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಅಂಬೇಡ್ಕರ್​ಗೆ ಮಾಲಾರ್ಪಣೆ ಮಾಡುವುದನ್ನು ಮರೆತ ಸಿಎಂ..!!

ವಿಧಾನಸೌಧದ ಅಂಗಳದಲ್ಲಿ ಡಾ ಬಿ.ಆರ್​ ಅಂಬೇಡ್ಕರ್​ ಅವರ ಪ್ರತಿಮೆ ಇದೆ. ಅಂಬೇಡ್ಕರ್​ ಹುಟ್ಟುಹಬ್ಬ ಸೇರಿದಂತೆ ರಾಷ್ಟ್ರೀಯ ಹಬ್ಬಗಳ ದಿನದಂದು ಅಂಬೇಡ್ಕರ್​ ಪ್ರತಿಮೆಗೆ ಮಾಲಾರ್ಪಣೆ ಮಾಡುವುದು ನಡೆದುಕೊಂಡು ಬಂದಿರುವ ಪ್ರತೀತಿ. ಆದರೆ ಈ ಬಾರಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಎದುರಿನ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಂಗೊಳ್ಳಿ ರಾಯಣ್ಣ ಅವರ 191ನೇ ಸ್ಮರಣೋತ್ಸವ ಅಂಗವಾಗಿ ಮಾಲಾರ್ಪಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ನಡುವೆ ಅಂಬೇಡ್ಕರ್​ ಮರೆತ ಸಿಎಂ ಬಸವರಾಜ ಬೊಮ್ಮಾಯಿ ಪಕ್ಷದ ಕೆಲಸಗಳಲ್ಲಿ ನಿರತರಾದರು. ಆದರೆ ಸಂಜೆ ಬಳಿಕ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಲಾಯ್ತು. ಸರ್ಕಾರ ಸಂವಿಧಾನ ಶಿಲ್ಪಿಯನ್ನು ಅವಮಾನ ಮಾಡಿದೆ, ನಾವು ಅಂಬೇಡ್ಕರ್​​ಗೆ ಮಾಲಾರ್ಪಣೆ ಮಾಡಲು ಅವಕಾಶ ಕೊಡುವಂತೆ ಪಟ್ಟು ಹಿಡಿದು ಕುಳಿತರು.

Read This: ಆಡಳಿತ ಪಕ್ಷ BJP ಎದುರು ಕಾಂಗ್ರೆಸ್​​ ಕಾಲು ಜಾರಿ ಬಿದ್ದಿದ್ದು ಯಾಕೆ..?

ಡೆಮಾಕ್ರಟಿಕ್ ಸ್ಟೂಡೆಂಡ್ ಫೆಡರೇಶನ್ ಪ್ರತಿಭಟನೆ..!

ರಾಜ್ಯ ಸರ್ಕಾರ ಡಾ ಬಿ.ಆರ್​ ಅಂಬೇಡ್ಕರ್​ಗೆ ಅವಮಾನ ಮಾಡಿದೆ ಎಂದು ಆರೋಪಿಸಿದ ಡೆಮಾಕ್ರಟಿಕ್ ಸ್ಟೂಡೆಂಡ್ ಫೆಡರೇಶನ್ ಸಂಘಟನೆ ಕಾರ್ಯಕರ್ತರು, ಸರ್ಕಾರಕ್ಕೆ ಧಿಕ್ಕಾರ ಕೂಗಿದ್ರು. ವಿಧಾನಸೌಧದ ಎದುರಿನ ರಸ್ತೆ ಮಧ್ಯೆದಲ್ಲೇ ಕುಳಿತು ಸರ್ಕಾರದ ವಿರುದ್ಧ ಕಿಡಿಕಾರಿದ್ರು. ಸರ್ಕಾರ ಮಾಡಬೇಕಿದ್ದ ಕೆಲಸ ನಾವು ಮಾಡೋಣ ಎಂದರೂ ನಮಗೂ ಅವಕಾಶ ಕೊಡ್ತಿಲ್ಲ ಎಂದು ಫೆಡರೇಶನ್ ಅಧ್ಯಕ್ಷ ವೇಣುಗೋಪಾಲ ಮೌರ್ಯ ಟೀಕಿಸಿದ್ರು. ಬಳಿಕ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿಸುವುದಾಗಿ ಹೇಳಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯ್ತು.

ಸರ್ಕಾರದಿಂದ ಜೊತೆಗೆ ಶಾಲೆಯಲ್ಲೂ ಅಂಬೇಡ್ಕರ್​ಗೆ ಅವಮಾನ..!

ಬೆಂಗಳೂರಿನಲ್ಲಿ ಸರ್ಕಾರದ ಮಟ್ಟದಲ್ಲೇ ಡಾ ಬಿ.ಆರ್​ ಅಂಬೇಡ್ಕರ್​​ಗೆ ಅವಮಾನ ಆಯ್ತು ಎನ್ನುವ ಜೊತೆಗೆ ರಾಯಚೂರಿನ ದೇವದುರ್ಗದ ವಾಗ್ದೇವಿ ವಿದ್ಯಾ ಮಂದಿರ ಶಾಲೆಯಲ್ಲಿ ಕಳೆದ 10 ವರ್ಷದಿಂದ ಅಂಬೇಡ್ಕರ್​ ಭಾವಚಿತ್ರವನ್ನೇ ತರಿಸಿಲ್ಲ, ಈ ಬಾರಿ ಕೂಡ ಭಾರತಾಂಬೆ ಫೋಟೋ ಇಟ್ಟು ಗಣರಾಜ್ಯೋತ್ಸವ ಮಾಡಿದ್ದಾರೆ ಎನ್ನುವ ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಯ್ತು. ಕೆಲವು ಸಂಘಟನೆಯ ಮುಖಂಡರು ಶಾಲೆಗೆ ಭೇಟಿ ನೀಡಿ ಪ್ರಶ್ನಿಸಿದಾಗ, ಕಳೆದ 10 ವರ್ಷದಿಂದಲೂ ನಾವು ಇದೇ ರೀತಿ ಆಚರಣೆ ಮಾಡುತ್ತಿರೋದಾಗಿ ಉತ್ತರಿಸಿದ್ದಾರೆ. ಶಾಲೆಗೆ ದೇವದುರ್ಗ ತಹಶಿಲ್ದಾರ್​ ಶ್ರೀನಿವಾಸ್, ಬಿಇಓ ಇಂದಿರಾ ಹಾಗೂ ದೇವದುರ್ಗ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟ ಶಾಲೆಯ ಮುಖ್ಯೋಪಾಧ್ಯಾಯ ಸಚಿನ್ ದೋಟಿಹಾಳ್ ವಿರುದ್ಧ ಕ್ರಮ ಜರುಗಿಸುವಂತೆ ದೇವದುರ್ಗ ಪೊಲೀಸರಿಗೆ ತಹಶಿಲ್ದಾರ್​ ಶ್ರೀನಿವಾಸ್ ಪತ್ರ ಬರೆದಿದ್ದಾರೆ.

Also Read; ಮಂಡ್ಯದಲ್ಲಿ ಕಾಮುಕ LIC ಏಜೆಂಟ್​ ಅವಂತಾರ..! ಸತ್ತ ಅಪ್ಪ, ಮಗನೇ ಮೂರ್ಖರು..!

ಅಂಬೇಡ್ಕರ್​​ ಮಾತ್ರವಲ್ಲ ಯಾವುದೇ ಪಕ್ಷದ ಯಾವುದೇ ಪಂಗಡದ ಗಣ್ಯವ್ಯಕ್ತಿಗಳನ್ನು ಕೀಳಾಗಿ ಕಾಣಬಾರದು. ದೇಶಕ್ಕಾಗಿ ಕಿಂಚಿತ್ತಾದರೂ ಸೇವೆ ಮಾಡದ ಜನನಾಯಕರನ್ನು ಗೌರವಿಸುವ ನಾವು ದೇಶಕ್ಕಾಗಿ ಸಾಕಷ್ಟು ಕೆಲಸ ಮಾಡಿದ ಗಣ್ಯರನ್ನು ಗೌರವಿಸಬೇಕಿದೆ. ಇಲ್ಲದಿದ್ದರೆ ಮುಂದಿನ ತಲೆ ಮಾರಿನ ಜನತೆಗೆ ತಪ್ಪು ಸಂದೇಶವನ್ನು ನಾವು ಬಳುವಳಿಯಾಗಿ ಕೊಟ್ಟಂತೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ರಾಯಚೂರಿನಲ್ಲಿ ನ್ಯಾಯಾಧೀಶರೇ ಅವಮಾನ ಮಾಡಿದ್ದಾರೆ ಎನ್ನುವು ಕಾರಣಕ್ಕೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿರುವ ಘಟನೆ ಸಮಾಜ ಹೋಗುತ್ತಿರುವ ದಿಕ್ಕಿನ ಮುನ್ಸೂಚನೆ ಎನ್ನಬಹುದು.

ಕಮೆಂಟ್ ಮಾಡಿ ನಿಮ್ಮ ಅನಿಸಿಕೆ, ಅಭಿಪ್ರಾಯ ತಿಳಿಸಿ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಓದುಗರಾದ ನೀವೇ ನಮ್ಮ ಮಾರ್ಗದರ್ಶಕರು

Related Posts

Don't Miss it !