‘‘ಶಕ್ತಿ ಇಲ್ಲದ ಸರ್ಕಾರ’’ ಇಂದು ಸಾಬೀತು..! ಪತನದ ಹಾದಿಗೆ ‘ಸಂಗಮ’..

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ‘ವಾಕ್​​ ಫಾರ್ ವಾಟರ್’ ಕಾರ್ಯಕ್ರಮ ಶುರುವಾಗಿದೆ. ಕನಕಪುರದ ಮೇಕೆದಾಟು ಬಳಿಯ ಸಂಗಮದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಕೊರೊನಾ ಮಾರ್ಗಸೂಚಿ ಹಾಗು ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದರು, ರ್ಕಾಯಕ್ರಮ ನಿಲ್ಲಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕಳಸ ಹೊತ್ತ ನೂರಾರು ಮಹಿಳೆಯರು ಕಾಂಗ್ರೆಸ್ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದ ರಾಮನಗರ ಎಸ್​ಪಿ ಗಿರೀಶ್​ ಪರಿಶೀಲಿಸಿದ್ದಾರೆ. ಕಣ್ಣೆದುರೇ ಕಾನೂನು ಉಲ್ಲಂಘನೆ ಆಗುತ್ತಿದ್ದರೂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಸಹಾಯಕರಾಗಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇತ್ತ ಸಿಎಂ ಬಸವರಾಜ ಬೊಮ್ಮಾಯಿ ಕೂಡ ದಿಕ್ಕು ತೋಚದಂತಾಗಿದ್ದಾರೆ.

ರೇಸ್​ಕೋರ್ಸ್​ ನಿವಾಸದಲ್ಲಿ ಸಿಎಂ ತುರ್ತು ಸಭೆ..!

ಕಾಂಗ್ರೆಸ್​​ ಹಠ ಬಿಡದೆ ಮೇಕೆದಾಟು ಪಾದಯಾತ್ರೆ ಆರಂಭ ಮಾಡುತ್ತಿದ್ದಂತೆ ಸಿಎಂ ಕಂಗಾಲಾಗಿದ್ದಾರೆ. ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ನಿರ್ಧಾರ ಮಾಡುವ ಉದ್ದೇಶದಿಂದ ಮಹತ್ವದ ಸಭೆ ಕರೆದಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಆರೋಗ್ಯ ಸಚಿವ ಡಾ ಸುಧಾಕರ್​, ಅಶ್ವತ್ಥ ನಾರಾಯಣ, ಭೈರತಿ ಬಸವರಾಜ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದಾರೆ. ಕಾಂಗ್ರೆಸ್​ ಪಾದಯಾತ್ರೆ ತಡೆಯುವುದು ಹೇಗೆ..? ಪೊಲೀಸ್​ ಫೋರ್ಸ್​ ಬಳಸಿ ಕಾಂಗ್ರೆಸ್​ ನಾಯಕರನ್ನು ವಶಕ್ಕೆ ಪಡೆದುಕೊಂಡರೆ ಮುಂದೆ ಆಗುವ ಪರಿಣಾಮವೇನು..? ಜನ ಸಮುದಾಯದಲ್ಲಿ ಕಾಂಗ್ರೆಸ್​​ ನಡೆಯ ಬಗ್ಗೆ ವಿರೋಧ ಮೂಡುವಂತೆ ಮಾಡುವುದು ಹೇಗೆ ಎನ್ನುವ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗುತ್ತಿದೆ. ಮಾರ್ಗದರ್ಶಕರಿಂದ ಸಿಎಂ ಬಸವರಾಜ ಬೊಮ್ಮಾಯಿ ಕೆಲವು sಲಹೆ ಸೂಚನೆಗಳನ್ನೂ ಪಡೆಯಲಿದ್ದಾರೆ ಎನ್ನಲಾಗಿದೆ.

Read This;

ರಾಜ್ಯ ಸರ್ಕಾರ ಸೋತಿದ್ದು ಎಲ್ಲಿ..? ಮತ್ತು ಯಾಕೆ..?

ರಾಮನಗರದ ಸಂಗಮದಲ್ಲಿ ಕಾಂಗ್ರೆಸ್​ ‘ವಾಕ್​ ಫಾರ್​ ವಾಟರ್​’ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವ ಮುನ್ನ ಯಾವುದೇ ಅನುಮತಿ ಪಡೆದಿಲ್ಲ ಎಂದು ರಾಮನಗರ ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ ಮಾಧ್ಯಮಗಳ ಎದುರು ಹೇಳಿಕೊಂಡಿದ್ದರು. ಯಾವುದೇ ಒಂದು ಕಾರ್ಯಕ್ರಮ ಅನುಮತಿ ಇಲ್ಲದೆ ನಡೆಯುತ್ತಿದ್ದರೆ ಕಾನೂನು ಕ್ರಮ ಕೈಗೊಳ್ಳುವುದು ಸಹಜ. ಆದರೂ ಕಾಂಗ್ರೆಸ್​ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಾಗಲೂ ಸರ್ಕಾರ ಕಣ್ಮುಚ್ಚಿ ಕುಳಿತಿತ್ತು. ವೀಕೆಂಡ್​ ಕರ್ಫ್ಯೂ ಇದ್ದರೂ ಗಣೇಶ ಹೋಮ ಸೇರಿದಂತೆ ಬೃಹತ್​ ಸಮಾವೇಶ ನಡೆಸುತ್ತಿದೆ. ಈ ರೀತಿಯ ಕಾರ್ಯಕ್ರಮಗಳಲ್ಲಿ ಇಂತಿಷ್ಟೇ ಜನರ ಭಾಗಿ ಬಗ್ಗೆ ಸರ್ಕಾರ ಮಿತಿ ಹೇರಿಕೆ ಮಾಡಿದೆ. ಆದರೆ ಸಾವಿರಾರು ಜನರು ಭಾಗಿಯಾಗಿದ್ದರೂ ಸರ್ಕಾರ ಕಾನೂನು ಕ್ರಮಕ್ಕೆ ಮೀನಾಮೇಷ ಎಣಿಸುತ್ತಿದೆ. ಒಂದು ವೇಳೆ ಕಾಂಗ್ರೆಸ್​ ತಡೆಯುವ ಯತ್ನ ಮಾಡಿದಾಗ ನಡೆಯುವ ಹೈಡ್ರಾಮಾದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತೆ ಎನ್ನುವ ಕಾರಣದಿಂದಲೇ ಹಿಂಜರಿದಿದೆ. ಯುದ್ಧ ಕಾಲೇ ಶಸ್ತ್ರಾಭ್ಯಾಸ ಸರ್ಕಾರಕ್ಕೆ ಮುಜುಗರ ತಂದೊಡ್ಡಿದೆ.

ಮೀಸೆ ಮೇಲೆ ಕೈ ಇಟ್ಟ ಕಾಂಗ್ರೆಸ್​ ನಾಯಕರು..!

ಸರ್ಕಾರವನ್ನು ಅಸಹಾಯಕ ಸ್ಥಿತಿಗೆ ತಂದಿಟ್ಟು ಕಾರ್ಯಕ್ರಮ ನಡೆಸುತ್ತಿರುವ ಕಾಂಗ್ರೆಸ್​ ನಾಯಕರು ಮೀಸೆ ಮೇಲೆ ಕೈ ಇಟ್ಟಿದ್ದಾರೆ. ಕಾನೂನು ಕ್ರಮ ಕೈಗೊಳ್ಳುವುದೇ ಪರಿಹಾರವಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ರೆ, ಪ್ರಮುಖರ ಸಭೆ ಬಳಿಕ ನಿರ್ಧಾರ ಮಾಡ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇನ್ನೂ 2 ಸಾವಿರ ಪೊಲೀಸರ ನಿಯೋಜನೆ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ, ಸರ್ಕಾರ ನಮ್ಮ ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಿದೆ ಎಂದು ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ. ಸಿಎಂ ಸಭೆಗೂ ಮುನ್ನ ಮಾತನಾಡಿದ್ದ ಸಚಿವ ಡಾ ಸುಧಾಕರ್​, ಸರ್ಕಾರ ಸತ್ತಿದ್ಯಾ..? ಬದುಕಿದ್ಯಾ..? ಎಂಬುದನ್ನು ಈಗ ತೋರುಸ್ತೀವಿ ಎಂದಿದ್ದಾರೆ. ಆದರೆ ಕಾಂಗ್ರೆಸ್​ ಮಾಡಿದ ತಂತ್ರಗಾರಿಕೆ ನಡುವೆ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ ಎನ್ನುವುದು ಸತ್ಯ.

Also Read;

ಆಡಳಿತ ನಡೆಸಲು ಅಸಮರ್ಥವಾದ ಸರ್ಕಾರ..!

ಆರ್​ಎಸ್​ಎಸ್​ ನಾಯಕರು ಹಾಗೂ ಹೈಕಮಾಂಡ್​ ನಾಯಕರ ಸಲಹೆ ಸೂಚನೆ ಪಡೆದ ಬಳಿಕ ಸರ್ಕಾರ ಕಾಂಗ್ರೆಸ್​​ ಪಾದಯಾತ್ರೆಗೆ ಅಡ್ಡಿ ಮಾಡದಿರಲು ನಿರ್ಧಾರ ಮಾಡಿದೆ. ಕಾಂಗ್ರೆಸ್​​ ಪಾದಯಾತ್ರೆ ಬಳಿಕ ಕೊರೊನಾ ಸೋಂಕು ಹೆಚ್ಚಳ ಆಗಲಿದ್ದು, ಇದಕ್ಕೆಲ್ಲಾ ಕಾರಣ ಎಂದು ಬಿಂಬಿಸುವ ಮೂಲಕ ಕಾಂಗ್ರೆಸ್​ ಪಕ್ಷವನ್ನು ಕಳನಾಯಕನ ಸ್ಥಾನದಲ್ಲಿ ನಿಲ್ಲಿಸುವ ನಿರ್ಧಾರ ಮಾಡಲಾಗಿದೆ. ಆದರೂ ಸರ್ಕಾರ ಸ್ವತಂತ್ರ್ಯವಾಗಿ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಯ್ತು ಎನ್ನುವುದು ಮಾತ್ರ ಸತ್ಯ. ಒಬ್ಬ ರಾಜ್ಯ ನಿರ್ಧಾರ ಕೈಗೊಳ್ಳಲು ವಿಫಲನಾದ ಎಂದರೆ ರಾಜ್ಯವನ್ನು ಕಳೆದುಕೊಳ್ಳುವ ಸೂಚನೆ ಎಂದೇ ಅರ್ಥ ಅಲ್ಲವೇ..? ಒಂದು ಪಕ್ಷವಾಗಿ ಕಾಂಗ್ರೆಸ್​ ಹಾಕಿದ ಸವಾಲನ್ನು ಎದುರಿಸಲು ಸರ್ಕಾರ ವಿಫಲವಾಗಿದೆ. ಪ್ರಜೆಗಳು ಸರ್ಕಾರದ ವಿರುದ್ಧ ದಂಗೆ ಎದ್ದರೂ ಸರ್ಕಾರ ನಿಯಂತ್ರಿಸುತ್ತಾ..? ಎನ್ನುವ ಅನುಮಾನದ ಸಂದೇಶ ಹೊರಹೊಮ್ಮಿದೆ.

Related Posts

Don't Miss it !