ಕೋವಿಡ್​ 3ನೇ ಅಲೆ ಮುಕ್ತಾಯ.. ಶುಕ್ರವಾರ ಜನತೆಗೆ ಶುಭಸುದ್ದಿ..!! ಸರ್ಕಾರದ ಘೋಷಣೆ..

ದೇಶದಲ್ಲಿ ಕೊರೊನಾ ಸೋಂಕು ಅಬ್ಬರ ನಡೆಯುತ್ತಿದೆ. ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಳ ಆಗುತ್ತಿದೆ. ಸೋಮವಾರ ರಾಜ್ಯದಲ್ಲಿ 27,156 ಬೆಂಗಳೂರಿನಲ್ಲಿ 15,947 ಸೋಂಕಿತರು ಪತ್ತೆಯಾಗಿದ್ದು, ಒಟ್ಟು 14 ಮಂದಿ ಸಾವನ್ನಪ್ಪಿದ್ದಾರೆ. ಸೋಂಕು ಇಳಿಕೆಯಾಗುವ ಸಂಭವ ಕಂಡುಬರುತ್ತಿದ್ದು, ಇದೀಗ ರಾಜ್ಯ ಸರ್ಕಾರ ಜನತೆಗೆ ಸಿಹಿ ಸುದ್ದಿ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ತಜ್ಞರ ಜೊತೆಗೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್​.ಅಶೋಕ್​, ಶುಕ್ರವಾರ ಶುಭ ಸುದ್ದಿ ನೀಡ್ತೇವೆ ಎಂದಿದ್ದಾರೆ. ಇನ್ನೂ ಕೊರೊನಾ ಸೋಂಕು ಹೆಚ್ಚಾಗಿದ್ದರೂ ವ್ಯಾಕ್ಸಿನೇಶನ್ ಆಗದ ಜಿಲ್ಲೆಗಳಿಗೆ ಆದ್ಯತೆ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ತಜ್ಞರ ಸಮಿತಿ ನೀಡಿರುವ ಮಾಹಿತಿ ಪ್ರಕಾರ ಜನವರಿ 25 ಅಥವಾ ಜನವರಿ 26ಕ್ಕೆ ಕೋವಿಡ್​ ಸೋಂಕು ಪೀಕ್​ ಹಂತಕ್ಕೆ ತಲುಪಲಿದ್ದು, ಅಂತಿಮವಾಗಿ ಈ ತಿಂಗಳಾಂತ್ಯದೊಳಗೆ 3ನೇ ಅಲೆಯ ಅಂತ್ಯ ಶುರುವಾಗಲಿದೆ ಎಂದಿದ್ದಾರೆ. ಒಮ್ಮೆ ಸೋಂಕು ಅತ್ಯುನ್ನತ ಹಂತಕ್ಕೆ ತಲುಪಿದ ಬಳಿಕ ನಿಧಾನವಾಗಿ ಇಳಿಮುಖ ಆಗಲಿದೆ ಎಂದಿದ್ದಾರೆ ತಜ್ಞರು.

ವೀಕೆಂಡ್​ ಕರ್ಫ್ಯೂ ತೆರವು ಮಾಡುವ ಸಾಧ್ಯತೆ..!

ರಾಜ್ಯದಲ್ಲಿ ನೈಟ್​ ಕರ್ಫ್ಯೂ ಹಾಗೂ ವೀಕೆಂಡ್​ ಕರ್ಫ್ಯೂ ಕೂಡ ಜಾರಿಯಲ್ಲಿದೆ. ಸರ್ಕಾರದ ಈ ನಿರ್ಧಾರ ಹೋಟೆಲ್​ ಮಾಲೀಕರು ಸೇರಿದಂತೆ ಬಾರ್​ ಅಂಡ್​ ರೆಸ್ಟೋರೆಂಟ್​ ಮಾಲೀಕರ ಕಣ್ಣು ಕೆಂಪಾಗುವಂತೆ ಮಾಡಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಆರ್​ ಅಶೋಕ್​, ಶುಕ್ರವಾರದವರೆಗೂ ಯಾವುದೇ ತೀರ್ಮಾನ ಇಲ್ಲ, ಶುಕ್ರವಾರ ಮಂತ್ರಿಗಳ ಸಭೆ ಸೇರಿ ಮುಂದಿನ ನಿರ್ಧಾರ ಮಾಡುತ್ತೇವೆ. ನಿಯಮಗಳ ಸಡಿಲಿಕೆ ಬಗ್ಗೆ ಶುಕ್ರವಾರ ನಿರ್ಧಾರ ಮಾಡುತ್ತೇವೆ. ಮಂದೆ ಯಾವುದೇ ಕಠಿಣ ನಿರ್ಬಂಧಗಳಿಲ್ಲ. ಈಗಿರುವ ನಿರ್ಬಂಧಗಳಲ್ಲಿ ಕೆಲವು ರಿಲ್ಯಾಕ್ಸ್ ಸಿಗಲಿದೆ ಎನ್ನುವ ಸುಳಿವು ನೀಡಿದ್ದಾರೆ. ಹೊಟೇಲ್​ನವರು ಹೇಳಿದ್ದಾರೆ ಎನ್ನುವ ಕಾರಣಕ್ಕೆ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ವೀಕೆಂಡ್​ ಕರ್ಫ್ಯೂ ತೆರವು ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ

Read This:

ಸೋಂಕಿನ ಲಕ್ಷಣ ಇದ್ದಾಕ್ಷಣಕ್ಕೆ ಆಸ್ಪತ್ರೆ ಬೇಕಿಲ್ಲ..!

ಶಾಲೆಗಳ ಬಂದ್ ನಿರ್ಧಾರ ಈ ವಾರವೂ ಇರಲಿದೆ ಎಂದಿರುವ ಆರ್​ ಅಶೋಕ್​, WHO ಹಾಗೂ ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ. ಇನ್ನೂ ಆರೋಗ್ಯ ಸಚಿವ ಡಾ. ಸುಧಾಕರ್​ ಮಾತನಾಡಿ, ಸೋಂಕಿನ ಲಕ್ಷಣ ಇದ್ದ ಮಾತ್ರಕ್ಕೆ ಆಸ್ಪತ್ರೆಗೆ ಹೋಗಬೇಡಿ ಎಂದಿದ್ದಾರೆ. ಇನ್ನೂ ಲಸಿಕೆ ಹೆಚ್ಚಿಸುವ ಬಗ್ಗೆಯೂ ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ. 15 ರಿಂದ 17 ವರ್ಷದ ಎಲ್ಲಾ ಮಕ್ಕಳಿಗೂ ಶೀಘ್ರ ಲಸಿಕೆ ನೀಡಬೇಕಿದೆ. ಹೋಂ ಐಸೊಲೇಷನ್ ಇರುವವರಿಗೆ ಔಷಧಿ ಕಿಟ್​​ ವಿತರಣೆ ಮಾಡ್ತೇವೆ. ಸೋಂಕಿತರ ಮನೆಗಳಿಗೇ ಔಷಧಿ ಕಿಟ್ ಒದಗಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ. ಆರೋಗ್ಯ ಇಲಾಖೆಯಲ್ಲಿನ ಸಿದ್ಧತೆಗಳ ಬಗ್ಗೆಯೂ ಚರ್ಚೆ ನಡೆಸಲಾಯ್ತು. ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡದಂತೆ ನಿಗಾ ವಹಿಸಲು ನಿರ್ಧಾರ ಮಾಡಿದ್ದು, ಕಡ್ಡಾಯ ಮಾಸ್ಕ್ ಧರಿಸುವುದನ್ನ ಪ್ರೇರೇಪಿಸಲು ಜನರಲ್ಲಿ ಅರಿವು ಮೂಡಿಸಲು ಕ್ರಮಕೈಗೊಳ್ಳಲಾಗುವುದು. ICMR ಸೂಚನೆಯಂತೆ ಟೆಸ್ಟ್ ಮುಂದುವರಿಸಲಾಗುವುದು ಎಂದಿದ್ದಾರೆ.

Also Read:

ಇಡೀ ದೇಶದಲ್ಲಿ ನಮ್ಮಲ್ಲೇ ಕೊರೊನಾ ಟೆಸ್ಟ್​ ಹೆಚ್ಚು..!

ಭಾರತದಲ್ಲಿ ಕೊರೊನಾ ಹೆಚ್ಚಿರುವ ಇತರೆ ನಗರಗಳಾದ ದೆಹಲಿ, ಮುಂಬೈಗಿಂತಲೂ ಬೆಂಗಳೂರಲ್ಲೇ ಹೆಚ್ಚು ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. 17 ವರ್ಷದೊಳಗಿನ ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಲಾಗುವುದು. ಮಕ್ಕಳಲ್ಲಿ ಸೋಂಕು ಇದ್ದರೂ ತೀವ್ರತೆ ಕಾಣಿಸಿಲ್ಲ. ಶುಕ್ರವಾರದವರೆಗೂ ಹೆಚ್ಚು ನಿಗಾ ವಹಿಸಲು ನಿರ್ಧಾರ ಮಾಡಲಾಗಿದೆ. ಶುಕ್ರವಾರ ಮತ್ತೊಮ್ಮೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ ಎಂದಿದ್ದಾರೆ. ಒಟ್ಟಾರೆ ಜನವರಿ 31ರ ತನಕ 144 ಸೆಕ್ಷನ್​ ಜಾರಿ ಮಾಡಲಾಗಿದೆ. ಆದರೆ ಹೋಟೆಲ್​ ಹಾಗೂ ಬಾರ್​ ಅಂಡ್​ ರೆಸ್ಟೋರೆಂಟ್​ ಸೇರಿದಂತೆ ಹಲವಾರು ವಿಭಾಗಗಳಿಂದ ತೀವ್ರ ವಿರೋಧ ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಣಿದಿರುವುಂತೆ ಕಂಡು ಬರುತ್ತಿದೆ. ಇದೇ ಕಾರಣದಿಂದ ಶುಕ್ರವಾರ ಶುಭಸುದ್ಧಿ ನೀಡುವ ಸುಳಿವು ನೀಡಿದ್ದಾರೆ. ವಾರಾಂತ್ಯದಲ್ಲಿ ಜಾರಿ ಮಾಡಿರುವ ಕರ್ಫ್ಯೂ ಆದೇಶವನ್ನು ವಾಪಸ್​ ಪಡೆದುಕೊಳ್ಳುವ ಸಾಧ್ಯತೆ ಇದೆ. ​

Related Posts

Don't Miss it !