ಬಿಜೆಪಿ ಸರ್ಕಾರದಲ್ಲಿ ದೇವಸ್ಥಾನದ ಗಂಟೆಗೂ ಅಪಸ್ವರ..!? ಇದರ ಹಿಂದೆ ಗುಮಾನಿ..!?

ಹಿಂದೂ ಮತಬ್ಯಾಂಕ್​ ಆಧಾರದಲ್ಲೇ ಆಡಳಿತ ನಡೆಸುವ ಬಿಜೆಪಿ ಹಿಜಬ್​ ವಿರುದ್ಧ ನಿಲುವು ತೆಗೆದುಕೊಳ್ಳುವ ಕೆಲಸ ಮಾಡುತ್ತಿದೆ ಎನ್ನುವುದು ಆರೋಪ. ಇದೀಗ ಹಿಂದೂಗಳೂ ಕೂಡ ಬಿಜೆಪಿ ಸರ್ಕಾರ ವಿರುದ್ಧ ತಿರುಗಿ ಬೀಳುವ ಎಲ್ಲಾ ಲಕ್ಷಗಳು ಕಾಣಿಸುತ್ತಿವೆ. ಯಾಕೆಂದರೆ ಹಿಂದುತ್ವ ಅಜೆಂಡಾ ಹೊಂದಿರುವ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿ ಇರುವ ಕರ್ನಾಟದಲ್ಲಿ ದೇವಸ್ಥಾನದ ಗಂಟೆ ಶಬ್ಧವನ್ನು ಕಡಿಮೆ ಮಾಡಬೇಕು ಎಂದು ಆದೇಶವೊಂದು ಹೊರಬಿದ್ದಿದೆ. ಮಹಾ ಮಂಗಳಾರತಿ ಸಮಯದಲ್ಲಿ ಬಾರಿಸುವ ಢಮರುಗ ಸೇರಿದಂತೆ ಹಲವಾರು ವಾದ್ಯಗಳ ಶಬ್ದಕ್ಕೆ ಮಿತಿ ಹೇರುವಂತೆ ಸೂಚನೆ ಬಂದಿದೆ.

ದೊಡ್ಡ ಗಣಪತಿ ದೇಗುಲಕ್ಕೆ ಸರ್ಕಾರದ ನೋಟಿಸ್​​..!

ಬೆಂಗಳೂರಿನ ಬಸವನಗುಡಿಯಲ್ಲಿರುವ ದೊಡ್ಡ ಗಣಪತಿ ದೇಗುಲ ಲಕ್ಷಾಂತರ ಜನರ ಮೆಚ್ಚಿನ ತಾಣ, ಉದ್ಬವ ಗಣೇಶನಿಗೆ ಹರಸಿಕೊಂಡರೆ ಬೇಡಿಕೊಂಡಿದ್ದು ಕೈಗೂಡುತ್ತದೆ ಎನ್ನುವ ನಂಬಿಕೆ ಇದೆ. ಇಲ್ಲಿ ಹಲವಾರು ಪೂಜಾ ಕೈಂಕರ್ಯಗಳನ್ನು ಮಾಡುವಾಗ ಗಂಟೆ ಬಾರಿಸುವುದು ಮಾಮೂಲು. ಭಕ್ತರೂ ಸೇರಿದಂತೆ ಅರ್ಚಕರು ಗಂಟೆ ಹಾಗೂ ವಾದ್ಯಗಳ ಘೋಷ ಮೊಳಗುತ್ತದೆ. ಆದರೆ ಇನ್ಮುಂದೆ ಅದರ ಶಬ್ದ ಕಡಿಮೆ ಇರಬೇಕು ಎಂದು ಅಂತ ಬಸವನಗುಡಿ ಪೊಲೀಸರ ನೋಟಿಸ್​ ಆಧರಿಸಿ ಮುಜರಾಯಿ ಇಲಾಖೆ ದೇವಸ್ಥಾನಕ್ಕೆ ನೋಟಿಸ್​​ಹೊರಡಿಸಿದೆ. ಶಬ್ದ ಮಾಲಿನ್ಯ ಆಗುತ್ತಿದೆ ಎಂದು ಪೊಲೀಸ್​ ಠಾಣೆಗೆ ಬಂದಿದ್ದ ದೂರನ್ನು ಆಧರಿಸಿ ಈ ಕ್ರಮ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ಇಂದು ಕಾಲೇಜು ಆರಂಭ.. ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ..!? ಮಕ್ಕಳು ಸೇಫಾ..?

ದೂರು ಕೊಟ್ಟಿದ್ದು ಯಾರು..? ಕ್ರಮ ತೆಗೆದುಕೊಂಡಿದ್ದು ಯಾಕೆ..?

ಬೆಂಗಳೂರಿನ ಇತಿಹಾಸ ಪ್ರಸಿದ್ಧ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಬಾರಿಸುವ ಗಂಟೆ, ತಮಗೆ ಕಿರಿಕಿಡಿ ಉಂಟು ಮಾಡುತ್ತಿದೆ ಎಂದು ಫೆಬ್ರವರಿ 2ರಂದುದೂರು ದಾಖಲಾಗಿದೆ. ಆ ದೂರನ್ನು ಆಧರಿಸಿ ಮುಜರಾಯಿ ಇಲಾಖೆಗೆ ಬಸವನಗುಡಿ ಪೊಲೀಸರು ನೋಟಿಸ್ ನೀಡಿದ್ದರು. ಆ ನೋಟಿಸ್​ ಅನ್ವಯ ಫೆಬ್ರವರಿ 10ರಂದು ದೇವಸ್ಥಾನಕ್ಕೆ ಮುಜರಾಯಿ ಇಲಾಖೆ ನೋಟಿಸ್​ ಕೊಟ್ಟಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ​​ ಮಾಲಿನ್ಯ ನಿಯಂತ್ರಣ ಮಂಡಳಿ ಪತ್ರದಂತೆ ಹೆಚ್ಚಿನ ಶಬ್ದ ಮಾಡುತ್ತಿರುವುದು ಕಂಡು ಬಂದರೆ, ಶಬ್ದ ಮಾಲಿನ ತಡೆ ಕಾಯ್ದೆ 2010ರ ಪ್ರಕಾರ ಪ್ರಕರಣ ದಾಖಲಿಸಲಾಗುವುದು ಎಂದು ದೊಡ್ಡ ಗಣಪತಿ ಮತ್ತು ಸಮೂಹ ದೇವಾಲಯಗಳ ಕಾರ್ಯ ನಿರ್ವಾಹಕ ಅಧಿಕಾರಿ ಎಚ್ಚರಿಕೆ ಪತ್ರ ನೀಡಿದ್ದಾರೆ.

ಇದನ್ನೂ ಓದಿ: ಮಗಳು ಗರ್ಭಿಣಿ ಆದರೂ ಕರಗದ ಕೋಪ.. ಆಕ್ಸಿಡೆಂಟ್ ಹೆಸರಲ್ಲಿ ಅಳಿಯನ ಮರ್ಡರ್..!!

ಹಿಂದೂ ಭಕ್ತರ ಭಾವನೆಗೆ ಧಕ್ಕೆ ತರುವ ಧೈರ್ಯ ಸತ್ಯವೇ..?

ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ಆಡಳಿತ ನಡೆಯುತ್ತಿದ್ದು, ಹಿಂದೂಗಳ ಭಾವನೆಗೆ ಧಕ್ಕೆ ತರುವ ಧೈರ್ಯವನ್ನು ಪೊಲೀಸ್​ ಇನ್ಸ್​ಪೆಕ್ಟರ್​ ಒಬ್ಬರು ಮಾಡಲು ಸಾಧ್ಯವಿದೆಯೇ..? ಎನ್ನುವ ಪ್ರಶ್ನೆ ಸಾಮಾನ್ಯರಲ್ಲಿ ಮೂಡುತ್ತಿದೆ. ಅಷ್ಟು ಮಾತ್ರವಲ್ಲದೆ ಬಸವನಗುಡಿ ಪೊಲೀಸ್​ ಠಾಣೆಗೆ ಗಂಟೆ ಶಬ್ದದ ಬಗ್ಗೆ ದೂರು ನೀಡಿದ ವ್ಯಕ್ತಿ ಯಾರೆಂಬುದು ಇಲ್ಲೀವರೆಗೂ ಬಹಿರಂಗವಾಗಿಲ್ಲ. ಇನ್ನೂ ಪೊಲೀಸರಿಗೆ ದೂರು ಬರುತ್ತಿದ್ದ ಹಾಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್​ ಕೊಟ್ಟಿದ್ದು, ಪೊಲೀಸರ ನೋಟಿಸ್​​ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಧಾರ್ಮಿಕ ದತ್ತಿ ಇಲಾಖೆಯನ್ನು ಎಚ್ಚರಿಸಿರುವ ವೇಗ ಕೂಡ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಸಾಮಾನ್ಯವಾಗಿ ಪೊಲೀಸ್​ ಠಾಣೆಯಲ್ಲಿ ಪ್ರಮುಖ ಪ್ರಕರಣಗಳು ದಾಖಲಾದರೂ ಕ್ರಮಕ್ಕೆ ಮುಂದಾಗಬೇಕಿದ್ದರೆ ನಾಲ್ಕೈದು ದಿನಗಳು ಬೇಕು. ಆದರೆ ಈ ಕೇಸ್​ನಲ್ಲಿ 8 ದಿನಗಳಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿರುವ ವೇಗ ಅಚ್ಚರಿ ಮೂಡಿಸುತ್ತಿದೆ. ಜೊತೆ ಜೊತೆಗೆ ಹಿಜಬ್​ ಬಳಿಕ ಮಸೀದಿಯ ಆಜಾನ್​ ಶಬ್ದ ಎಳೆದು ತರುವ ಪ್ರಯತ್ನ ಇದರ ಹಿಂದಿದ್ಯಾ ಎನ್ನುವ ಅನುಮಾನಗಳೂ ಸೃಷ್ಟಿಯಾಗುತ್ತಿವೆ.

Related Posts

Don't Miss it !