ಪುರುಷರಿಗೆ ಹೈಕೋರ್ಟ್ ಶಾಕ್ ಟ್ರೀಟ್ಮೆಂಟ್..! ಹೊಸ ಕಾನೂನಿಗೆ ಸರ್ಕಾರಕ್ಕೆ ಸೂಚನೆ..

ಆಧುನಿಕ ಭರಾಟೆಯಲ್ಲಿ ಓಡುತ್ತಿರುವ ಬದುಕು ಕಾನೂನು ಕಟ್ಟಳೆಗಳಲ್ಲಿ ಸಿಲುಕಿ ಪರದಾಡುವ ಪರಿಸ್ಥಿತಿಗೆ ಬಂದು ನಿಂತಿದೆ. ಇದೀಗ ಹೈಕೋರ್ಟ್ ಏಕಸದಸ್ಯ ಪೀಠ ನೀಡಿರುವ ಸಲಹೆ ಸೂಚನೆಗಳು ಮತ್ತಷ್ಟು ಕಠಿಣ ಆಗಲಿದ್ದು, ಮನಸುಗಳ ಬಿರುಕು ಹಾಗೂ ಮುರಿದ ಮನಸುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಕರ್ನಾಟಕ ಹೈಕೋರ್ಟ್ ಹೇಳಿರುವುದು ಏನು..?

ಪತ್ನಿ ಮೇಲೆ ಗಂಡನ ವಿರುದ್ಧವೂ ಅತ್ಯಾಚಾರ ಪ್ರಕರಣವನ್ನು ಪರಿಗಣಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಗಂಡನ ಕೃತ್ಯದಿಂದ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಆಗುತ್ತದೆ. ಜೊತೆಗೆ ಪತ್ನಿಯ ಮನಸಿನ ಮೇಲೆ ಅಳಿಸಲಾಗದ ಕಲೆಗಳು ಆಗುತ್ತದೆ ಎನ್ನಲಾಗಿದೆ. ಅತ್ಯಾಚಾರ ವಿಚಾರದಲ್ಲಿ ಪತಿಗೆ ಇರುವ ವಿನಾಯ್ತಿ ರದ್ದು ಮಾಡುವುದು ಸೂಕ್ತ ಈ ಬಗ್ಗೆ ಶಾಸಕಾಂಗ ಚಿಂತನೆ ನಡೆಸಬೇಕು ಎಂದು ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯ ತಿಳಿಸಿದೆ. ವಿದೇಶಗಳ ಕಾನೂನು ಬಗ್ಗೆ ಬೆಳಕು ಚೆಲ್ಲಿರುವ ನ್ಯಾಯಾಧೀಶರು, ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್​ನಲ್ಲಿ ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಸಂಭೋಗಿಸಿದರೆ ಗಂಡನದ್ದೂ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇಂಗ್ಲೆಂಡ್​ನಲ್ಲಿ ಗಂಡನಿಗೆ ಇರುವ ವಿನಾಯ್ತಿ ತೆಗೆಯಲಾಗಿದೆ. ಅತ್ಯಾಚಾರ ವಿಚಾರದಲ್ಲಿ ಮಹಿಳೆ ಹಾಗೂ ಪತ್ನಿ ನಡುವೆ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಹೈಕೋರ್ಟ್​ ಅಭಿಪ್ರಾಯ ವ್ಯಕ್ತಪಡಿಸಿದೆ.

ಏನಿದು ಪ್ರಕರಣ..? ಹೈಕೋರ್ಟ್ ಸೂಚನೆಗೆ ಕಾರಣ..?

ಬೆಂಗಳೂರಿನಲ್ಲಿ ವಾಸವಾಗಿರುವ ಒಡಿಶಾ ಮೂಲಕ ದಂಪತಿ ಜೀವನದಲ್ಲಿ ಕಲಹ ಸೃಷ್ಟಿಯಾಗಿತ್ತು. ಬೆಂಗಳೂರಿನ ಪೂರ್ವ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ತನ್ನ ಗಂಡ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ದೌರ್ಜನ್ಯ ಮಾಡ್ತಿದ್ದಾನೆ ಎಂದು ದೂರಲಾಗಿತ್ತು. ಆದರೆ ಪತಿ – ಪತ್ನಿ ನಡುವೆ ಅತ್ಯಾಚಾರ ಪ್ರಕರಣ ದಾಖಲಿಸುವುದರಿಂದ ವಿನಾಯ್ತಿ ಇದೆ ಎಂದು ವಾದಿಸಲಾಗಿತ್ತು. ಮೊದಲಿಗೆ ವಿಚಾರಣಾ ನ್ಯಾಯಾಲಯ ಕೂಡ ಅತ್ಯಾಚಾರ ಪ್ರಕರಣ ಕೈಬಿಡಲು ನಿರಾಕರಿಸಿತ್ತು. ಇದೀಗ ಹೈಕೋರ್ಟ್​ ಏಕಸದಸ್ಯ ಪೀಠವೂ ಅದೇ ಅಭಿಪ್ರಾಯ ತಿಳಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಪೀಠ ಅಭಿಪ್ರಾಯ ತಿಳಿಸಿದ್ದು, ಪತ್ನಿಯ ಅತ್ಯಾಚಾರ ಪ್ರಕರಣದಲ್ಲಿ ಪತಿಗೆ ವಿನಾಯಿತಿ ಇದೆ ಎಂದಿದ್ದ ಅರ್ಜಿಯನ್ನು ವಜಾ ಮಾಡಲಾಗಿದೆ.

ಮದುವೆ ಎನ್ನುವುದು ದೌರ್ಜನ್ಯಕ್ಕೆ ಕೊಟ್ಟ ಅನುಮತಿ ಅಲ್ಲ..!

ಮದುಯಾದ ಗಂಡು ಹೆಣ್ಣು ಸುಖ ಸಂಸಾರ ನಡೆಸಲು ಮಾತ್ರ ಅನುಮತಿ ಇದೆಯೇ ಹೊರತು, ಮಹಿಳೆ ಮೇಲೆ ಪುರುಷ ದೌರ್ಜನ್ಯ ಮಾಡುವುದಕ್ಕೆ ಅನುಮತಿ ಕೊಟ್ಟಂತೆ ಅಲ್ಲ ಎನ್ನುವ ಅಭಿಪ್ರಾಯವನ್ನು ಕೋರ್ಟ್ ಹೇಳಿದೆ. ಇದೇ ಕಾರಣದಿಂದ ಪತಿ ಮೇಲೆ ಪತ್ನಿ ದಾಖಲು ಮಾಡಿದ್ದ ಅತ್ಯಾಚಾರ ಕೇಸ್​​ ಕೈಬಿಡಲು ಕೋರ್ಟ್ ನಿರಾಕರಿಸಿದೆ. ಗಂಡ ತನ್ನ ಹೆಂಡತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರೆ ಇನ್ಮುಂದೆ ಅತ್ಯಾಚಾರ ಆರೋಪ ಎದುರಿಸಬೇಕಾಗುತ್ತದೆ.

Related Posts

Don't Miss it !