ಪಠ್ಯ ಪುಸ್ತಕ ವಿಚಾರದಲ್ಲಿ ಒಕ್ಕಲಿಗರಿಗೆ ಹಿನ್ನಡೆ.. ಲಿಂಗಾಯತರ ಎದುರು ಮಂಡಿಯೂರಿದ ಸರ್ಕಾರ..!!

ರಾಜ್ಯ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದು ಸಾಕಷ್ಟು ವಿರೋಧಕ್ಕೆ ಕಾರಣವಾಯಿತು. ಮೊದಲಿಗೆ ಟಿಪ್ಪು ಪುಸ್ತಕ ಕೈಬಿಟ್ಟ ಬಗ್ಗೆ ಭಾರೀ ಚರ್ಚೆ ಆಗಿತ್ತು. ಆದರೆ ಸರ್ಕಾರ ಸೇರಿದಂತೆ ಟಿಪ್ಪು ಸುಲ್ತಾನ್ ಓರ್ವ ನರಹಂತಕ, ಆತ ಯಾವುದೇ ಸಾಧನೆ ಮಾಡಿಲ್ಲ ಎಂದು ಮೊಂಡುವಾದ ಮಾಡಿಕೊಂಡು ಸುಮ್ಮನಾಯ್ತು. ಆ ಬಳಿಕ ಕೆಂಪೇಗೌಡ ಹಾಗೂ ಕುವೆಂಪು ಬಗ್ಗೆ ಅವಹೇಳನ ಮಾಡಲಾಗಿದೆ. ಕುವೆಂಪು ಬೇರೆಯವರ ಸಹಕಾರದಿಂದ ಮೇಲೆ ಬಂದರು, ಅವರನ್ನು ರಾಷ್ಟ್ರಕವಿ ಎಂದು ಕರೆಯುತ್ತಾರೆ ಎಂದು ತುಚ್ಛವಾಗಿ ಬರೆದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಆದರೂ ಸಮರ್ಥನೆಗೆ ಇಳಿದಿದ್ದ ಸರ್ಕಾರ, ಎಲ್ಲವೂ ಸರಿಯಿದೆ ಎಂದು ವಾದಿಸಿತ್ತು. ಆ ಬಳಿಕ ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದ ಶ್ರೀಗಳು ಪತ್ರ ಬರೆದ ಬಳಿಕ ಸರ್ಕಾರ ಕೊಂಚ ತೊಳಲಾಡಿದರೂ ಸ್ವಾಮೀಜಿಯ ಮನ ತಣಿಸುವಲ್ಲಿ ಯಶಸ್ವಿಯಾಗಿದೆ.

ಸ್ವಾಮೀಜಿ ಭೇಟಿ ಮಾಡಿ ಸಮರ್ಥನೆ ಮಾಡಿದ್ದ ಶಿಕ್ಷಣ ಸಚಿವರು..!

ನಿರ್ಮಲಾನಂದ ಶ್ರೀಗಳು ಕುವೆಂಪು ಹಾಗೂ ಕೆಂಪೇಗೌಡರ ಬಗ್ಗೆ ಪಠ್ಯದಲ್ಲಿ ಅಕ್ಷೇಪಾರ್ಹ ಅಂಶಗಳು ಇವೆ ಎನ್ನುವ ಬಗ್ಗೆ ಪತ್ರ ಬರೆದಿದ್ದರು. ಆ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆಯಂತೆ ಶಿಕ್ಷಣ ಸಚಿವ ನಾಗೇಶ್, ಆದಿಚುಂಚನಗಿರಿ ಶ್ರೀಗಳನ್ನು ಭೇಟಿಯಾಗಿ ಮಾಹಿತಿ ನೀಡಿದ್ದರು. ಆ ಬಳಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೂ ಸಹ ಭೇಟಿಯಾಗಿ ಮಾಹಿತಿ ನೀಡಿದ್ದರು. ಇದರ ಬಗ್ಗೆ ನಿರ್ಮಲಾನಂದ ಶ್ರೀಗಳು ಎಲ್ಲಿಯೂ ಬಹಿರಂಗ ಹೇಳಿಕೆ ನೀಡಿರಲಿಲ್ಲ. ಆದರೆ ಬಸವಣ್ಣನ ವಿಚಾರದಲ್ಲಿ ಸರ್ಕಾರ ಮಾಡಿದ್ದ ಎಡವಟ್ಟು ಇದೀಗ ಲಿಂಗಾಯತ ಮಠಾಧೀಶರ ಎದುರು ಮಂಡಿಯೂರುವಂತೆ ಮಾಡಿದೆ. ಬಸವಣ್ಣ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿ ಶೈವರಿಂದ ದೀಕ್ಷೆ ಪಡೆದರು ಎನ್ನುವ ಆಕ್ಷೇಪಾರ್ಹ ಸಾಲುಗಳಿಗಳಿಗೆ ಲಿಂಗಾಯತ ಸಮುದಾಯ ಆಕ್ರೋಶ ಹೊರಹಾಕಿತ್ತು. ಸರ್ಕಾರ ಸಮರ್ಥನೆ ಮಾಡಿಕೊಂಡಿತ್ತು. ಇದೀಗ ತಪ್ಪನ್ನು ತಿದ್ದಲು ನಿರ್ಧಾರ ಮಾಡಿದೆ.

ಸ್ವಾಮೀಜಿಗ‌ಳ ಹೋರಾಟದ ಕರೆಗೆ ಥಂಡಾ ಹೊಡೆದ ಸಿಎಂ..!!

ಕೆಂಪೇಗೌಡ, ಕುವೆಂಪು ಸೇರಿದಂತೆ ಸಾಕಷ್ಟು ವಿಚಾರಗಳಲ್ಲಿ ಸರ್ಕಾರ ಸಮರ್ಥನೆ ಮಾಡಿಕೊಂಡಿತ್ತು. ಒಕ್ಕಲಿಗ ಸಮುದಾಯ ಕೂಡ ಒಗ್ಗಟ್ಟು ಪ್ರದರ್ಶನ ಮಾಡುವಲ್ಲಿ ಎಡವಿತ್ತು. ಆದರೆ ಬಸವಣ್ಣನವರ ವಿಚಾರದಲ್ಲಿ ಆಕ್ಷೇಪಾರ್ಹ ಮಾಹಿತಿಗೆ ಲಿಂಗಾಯತ ಸಮುದಾಯ ಸೆಟೆದು ನಿಂತಿತ್ತು. ಸುಮಾರು 50 ಕ್ಕೂ ಹೆಚ್ಚು ಲಿಂಗಾಯತ ಸಮುದಾಯದ ಮಠಾಧೀಶರು ಪ್ರತಿಭಟನೆಗೆ ಮುಂದಾಗಿದ್ದರು. ಇದೀಗ ಬಸವಣ್ಣನವರ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ಆ ತಪ್ಪನ್ನು ಸರಿಪಡಿಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಲಾಗಿದೆ. ಜೊತೆಗೆ ಪಠ್ಯ ಪರಿಷ್ಕರಣ ಸಮಿತಿ ಕೆಲಸ ಮುಗಿದಿರುವ ಕಾರಣಕ್ಕೆ ವಿವಾದಿತ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹಾಗೂ ಇಡೀ ತಂಡವನ್ನು ವಿಸರ್ಜನೆ ಮಾಡಲಾಗಿದೆ. ಬಸವಣ್ಣನವರ ಬಗ್ಗೆ ಯಾವುದೇ ತಪ್ಪು‌ಮಾಡಿಲ್ಲ ಎನ್ನುವುದಾದರೆ ಈಗ ಮರು ಪರಿಷ್ಕರಣೆ ಮಾಡುವುದು ಏನನ್ನಾ..? ಎನ್ನುವುದನ್ನು ಸರ್ಕಾರವೇ ಹೇಳಬೇಕಿದೆ.

ಬ್ರಾಹ್ಮಣರು ಬರೆದ ಪುಸ್ತಕ ಓದುವುದರಲ್ಲಿ ತಪ್ಪೇನಿದೆ..?

ಕರ್ನಾಟಕದ ನಾಡಗೀತೆಗೆ ಅವಮಾನ ಮಾಡಿದ್ದ ರೋಹಿತ್ ಚಕ್ರತೀರ್ಥ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷನಾಗಿದ್ದು ಆಕ್ರೋಶ ಹೆಚ್ಚುವಂತೆ ಮಾಡಿತ್ತು. ಇದೀಗ ಸಮಿತಿಯನ್ನು ವಿಸರ್ಜನೆ ಮಾಡುವ ಮೂಲಕ ಕೊಂಚ ಕೋಪ ಕಡಿಮೆ ಮಾಡುವ ಪ್ರಯತ್ನ ಮಾಡಲಾಗಿದೆ. ಇನ್ನೂ ಚಕ್ರವರ್ತಿ ಸೂಲಿಬೆಲೆ ಅವರ ‘ತಾಯಿ ಭಾರತಿ‌’ ಹಾಗೂ RSS ಸಂಸ್ಥಾಪಕ ಹೆಡ್ಗೆವಾರ್ ಅವರ ಭಾಷಣ ಸೇರ್ಪಡೆಗೂ ವಿವಾದ ಸೃಷ್ಟಿಯಾಗಿತ್ತು. ಆದರೆ ಬಲಪಂಥೀಯ ಲೇಖಕರು, ಸಾಹಿತಿಗಳ ಬಗ್ಗೆ ಓದಬಾರದು ಎನ್ನುವುದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಆದರೆ ಉಳಿದವರನ್ನು ತುಚ್ಛವಾಗಿ ಕಾಣುವ ಮನಸ್ಥಿತಿ ಇರಬಾರದು ಎನ್ನುತ್ತಾರೆ ವಿರೋಧಿ ಲೇಖಕರು. ಇದೀಗ ಬಸವಣ್ಣನವರ ಬಗ್ಗೆ ಪುನರ್ ಪರಿಷ್ಕರಣೆ ಬಗ್ಗೆ ಸರ್ಕಾರ ಹೇಳಿದೆ, ಆದರೆ ಈ ಸಾಲಿನಲ್ಲೇ ಬದಲಾವಣೆ ಮಾಡಲಾಗುತ್ತಾ..? ಈ ಬಗ್ಗೆ ಸ್ಪಷ್ಟತೆ ಇಲ್ಲ.

Related Posts

Don't Miss it !