ಪೊಲೀಸ್​​ ಇಲಾಖೆಯಲ್ಲಿ ಮಹತ್ವದ ಬದಲಾವಣೆ..! ನೇಮಕಾತಿ ಗುಡ್​ನ್ಯೂಸ್​..

ರಾಜ್ಯ ಪೊಲೀಸ್​ ಇಲಾಖೆಗೆ ನೂತನ ಗೃಹ ಮಂತ್ರಿ ಆಗಿ ತೀರ್ಥಹಳ್ಳಿಯ ಶಾಸಕ ಅರಗ ಜ್ಞಾನೇಂದ್ರ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರಿ ವಹಿಸಿಕೊಂಡ ಬಳಿಕ ಎರಡು ಪ್ರಮುಖ ಬದಲಾವಣೆ ಮಾಡಿರುವ ಸಚಿವ ಅರಗ ಜ್ಞಾನೇಂದ್ರ, ಸಾಕಷ್ಟು ವರ್ಷಗಳ ಕಾಲ ಕಾಯುತ್ತಿದ್ದ ಆಕಾಂಕ್ಷಿತರಿಗೆ ಗುಡ್​ ನ್ಯೂಸ್​ ಕೊಟ್ಟಿದ್ದಾರೆ. ಮೊದಲನೆಯದಾಗಿ ಕ್ರೀಡಾಪಟುಗಳ ಕಾಯುವಿಕೆಗೆ ಅಂತ್ಯ ಮಾಡುವ ಕೆಲಸ ಮಾಡಲಾಗಿದೆದೆ. ಇನ್ನೂ ಸಿವಿಲ್​ ಪೊಲೀಸ್​ ಆಗಬೇಕು ಎನ್ನುವ ಕನಸು ಕಟ್ಟಿಕೊಂಡಿದ್ದ ಬೇರೆ ವಿಭಾಗದ ಪೊಲೀಸರಿಗೂ ಸಖತ್​ ಗುಡ್​ ನ್ಯೂಸ್​ ಸಿಕ್ಕಿದೆ. ಈ ಬಗ್ಗೆ ಪೊಲೀಸ್​ ಮಹಾ ನಿರ್ದೇಶಕರು ಅಧಿಸೂಚನೆ ಹೊರಡಿಸಲಾಗುವುದು ಎಂದಿದ್ದಾರೆ.

ಕ್ರೀಡಾಪಟುಗಳಿಗೆ ಒಂದೊಳ್ಳೆ ಅವಕಾಶ..!

ಪೊಲೀಸ್​ ಇಲಾಖೆಗೆ ಸ್ಪೋರ್ಟ್ಸ್ ಕೋಟಾದಲ್ಲಿ ಪೊಲೀಸ್ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ಪೊಲೀಸ್​ ಇಲಾಖೆ ನಿರ್ಧಾರ ಮಾಡಿದೆ. ಹತ್ತು ವರ್ಷಗಳ ಬಳಿಕ ಪುನಃ ಸ್ಪೋರ್ಟ್ಸ್ ಕೋಟಾದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುವುದು ಖಚಿತವಾಗಿದೆ. ಮುಂದಿನ ತಿಂಗಳು ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ. ಇಷ್ಟು ದಿನಗಳ ಕಾಲ ಕ್ರೀಡಾಪಟುವಾಗಿ ಇದ್ದರೂ ಕೆಲಸ ಸಿಕ್ಕಿಲ್ಲ. ಉದ್ಯೋಗವಿಲ್ಲದೆ ಅಲೆದಾಡುವ ಪರಿಸ್ಥಿತಿ ಇದೆ ಎಂದು ಅಲಳು ತೋಡಿಕೊಳ್ಳುತ್ತಿದ್ದ ಆಟಗಾರರಿಗೆ ಅತ್ಯುತ್ತಮ ಅವಕಾಶ ಸಿಕ್ಕಂತಾಗಿದೆ.

ಇದನ್ನೂ ಓದಿ

ಸಿವಿಲ್​ ಪೊಲೀಸ್​ ಆಗಲು ಸಿಕ್ಕಿದೆ ಚಾನ್ಸ್​..!

ಕೆಎಸ್ಆರ್​​ಪಿ ಪೊಲೀಸರಿಗೆ ಸಿಹಿ ಸುದ್ದಿ ಕೊಟ್ಟಿರುವ ಪೊಲೀಸ್​ ಮಹಾ ನಿರ್ದೇಶಕ ಪ್ರವೀಣ್ ಸೂದ್, ಕೆಎಸ್ಆರ್​ಪಿ ಪೊಲೀಸರು ಸಿವಿಲ್ ಪೊಲೀಸರಾಗಲು ಅವಕಾಶ ಕಲ್ಪಿಸಿದ್ದಾರೆ. ಇದೇ ಮೊದಲ ಬಾರಿಗೆ ಕೆಎಸ್ಆರ್​ಪಿ ಸಿಬ್ಬಂದಿ ಸಿವಿಲ್ ಪೊಲೀಸರಾಗಲು ಅವಕಾಶ ಕಲ್ಪಿಸಲಾಗಿದೆ. ಕೆಎಸ್ಆರ್​ಪಿ ಸಿಬ್ಬಂದಿ ಯಾವ ವಿಭಾಗದಲ್ಲಿ ಆಸಕ್ತಿ ಹೊಂದಿದ್ದಾರೊ ಅಲ್ಲಿಗೆ ವರ್ಗಾವಣೆ ಆಗಲು ಅವಕಾಶ ಕಲ್ಪಿಸಲಾಗಿದೆ ಎನ್ನುವುದು ಡಿಜಿ, ಐಜಿಪಿ ಆಗಿರುವ ಪ್ರವೀಣ್ ಸೂದ್ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಈ ಬಗ್ಗೆ ಗೃಹ ಇಲಾಖೆ ಜೊತೆ ಚರ್ಚೆ ನಡೆಸಿ ಅಗತ್ಯ ಕ್ರಮದ ಭರವಸೆ ನೀಡಿದ್ದಾರೆ.

ಯಾರು ಯಾರಿಗೆ ಈ ವರ್ಗಾವಣೆ ಭಾಗ್ಯ..?

ಪೊಲೀಸ್ ಇಲಾಖೆಗೆ ಉನ್ನತ ಮಟ್ಟದ ವಿದ್ಯಾವಂತರ ಆಗಮನ ಆಗುತ್ತಿದೆ ಎಂದಿರುವ ಡಿಜಿ, ಐಜಿಪಿ ಪ್ರವೀಣ್ ಸೂದ್, ಕೆಎಸ್ಆರ್​ಪಿಯಿಂದ ಸಿವಿಲ್ ವಿಭಾಗಕ್ಕೆ ಅವಕಾಶ ಕೊಡಲಾಗುವುದು. ಐದು ವರ್ಷ KSRPಯಲ್ಲಿ ಕೆಲಸ ಮಾಡಿದ ಸಿಬ್ಬಂದಿ ಸಿವಿಲ್ ಪೊಲೀಸರಾಗಬಹುದು. ಇದೇ ನಿಯಮ KSRP, CAR, DAR ಸಿಬ್ಬಂದಿಗೂ ಅನ್ವಯ ಆಗಲಿದೆ. ಸಿವಿಲ್ ಪೊಲೀಸ್, ವೈರ್ ಲೆಸ್, ಫಿಂಗರ್ ಪ್ರಿಂಟ್ ಸೇರಿದಂತೆ ಯಾವ ವಿಭಾಗದಲ್ಲಿ ಆಸಕ್ತಿ ಇದೆಯೋ ಅಲ್ಲಿಗೆ ನೇಮಕಾತಿ ಮಾಡಲಾಗುವುದು ಎಂದಿದ್ದಾರೆ.

ಇದನ್ನೂ ಓದಿ

ಪೊಲೀಸರಿಗೆ ಹೇಗೆ ನಡೆಯುತ್ತದೆ ನೇಮಕಾತಿ..?

ಈಗಾಗಲೇ ಪೊಲೀಸ್​ ಆಗಿರುವ ಎಲ್ಲರೂ ಪರೀಕ್ಷೆ ಮೂಲಕವೇ ಆಯ್ಕೆ ಮಾಡಲಾಗಿದೆ. ಆದರೆ ಸಿವಿಲ್​, ವೈರ್​ಲೆಸ್​ ಹಾಗೂ ಫಿಂಗರ್​ ಫ್ರಿಂಟ್​ ವಿಭಾಗಕ್ಕೆ ಮತ್ತೊಮ್ಮೆ ಪರೀಕ್ಷೆ ಮೂಲಕವೇ ನೇಮಕಾತಿ ಮಾಡಲಾಗುವುದು ಎಂದಿದ್ದಾರೆ. ಬಹುದಿನಗಳ ಬೇಡಿಕೆ ಇದಾಗಿತ್ತು ಹಾಗಾಗಿ ಪೊಲೀಸರಿಗೆ ಪೊಲೀಸ್​ ಇಲಾಖೆಯಲ್ಲಿ ಮತ್ತೊಮ್ಮೆ ನೇಮಕಾತಿ ಅವಕಾಶ ಕೊಡಲಾಗುವುದು ಎಂದಿದ್ದಾರೆ. ಸ್ಪೋರ್ಟ್ಸ್ ಕೋಟಾದಲ್ಲಿ ನೇಮಕಾತಿ ನಡೆಸಲು ನಿರ್ಧಾರ ಮಾಡಿದ್ದು ಮುಂದಿನ ವಾರವೇ ಅಧಿಸೂಚನೆ ಹೊರಡಿಸಲಾಗುತ್ತೆ. ಪೊಲೀಸ್​ ಇಲಾಖೆಯಲ್ಲಿ ಶೇಕಡಾ 2ರಷ್ಟು ಸ್ಪೋರ್ಟ್ಸ್ ಕೋಟಾ ನೇಮಕಾತಿ ಮಾಡಲಾಗುತ್ತೆ ಎನ್ನುವ ಮಾಹಿತಿ ಕೊಡಲಾಗಿದೆ.

Related Posts

Don't Miss it !