Rain effect: ಸಿಎಂ ಸಾರ್ ಕೂಗಿ ಕರೆದರೂ ಯಾರೂ ರಕ್ಷಣೆಗೆ ಬರಲಿಲ್ಲ, ನಾವು ಮತಕ್ಕೆ ಮಾತ್ರ ಸೀಮಿತವೇ..?

ಭಟ್ಕಳ : ದಿನಾಂಕ 02/08/2022 ರಂದು ಸುರಿದ ಅತಿವೃಷ್ಠಿಯಿಂದಾಗಿ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಟದಹಿತ್ಲು ಎಂಬ ಊರಿನಲ್ಲಿ ನೆರೆಹಾವಳಿ ಸಂಭವಿಸಿರುತ್ತದೆ.

ಕಂಟದಹಿತ್ತಲಿನ ಎಲ್ಲಾ ಮನೆಗಳಿಗೂ ನೀರು ನುಗ್ಗಿ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿದ್ದು, ಎರಡು ಮನೆಗಳ ಗೋಡೆಗಳು ಕುಸಿದಿದೆ. ಎರಡು ಲಗೇಜ್ ರಿಕ್ಷಾ, ಒಂದು ಕಾರು, ಒಂದು ಆಟೋ ರಿಕ್ಷಾ, ಒಂದು 807 ಟೆಂಪೋ, ಹಾಗೂ ಎಂಟು ಬೈಕುಗಳು ನೀರು ಪಾಲಾಗಿದ್ದು, ಬೈಂದೂರಿನ ಸಂತೆಗೆ ತೆರಳಲು ಸಿದ್ಧವಾಗಿದ್ದ ನಾಗರಾಜ ದೇವಡಿಗರ ಹಾರ್ಡ್‌ವೇರ್ ವಸ್ತುಗಳನ್ನು ತುಂಬಿದ್ದ ಲಗೇಜ್ ರಿಕ್ಷಾ ನೆರೆಹಾವಳಿಯಿಂದ ನದಿಪಾಲಾಗಿ, ಸುಮಾರು 17 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ನೀರು ಪಾಲಾಗಿದೆ. ಊರಿನ ಜನರನ್ನು ಆಯಕಟ್ಟಿನ ಸ್ಥಳಗಳಿಗೆ ಕರೆದೊಯ್ಯಲು ಯಾವ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಬರಲಿಲ್ಲ ಎನ್ನುವುದು ನಮ್ಮ ದುರಾದೃಷ್ಟ.

ಶಾಸಕರಿಗೂ ಕರೆ ಮಾಡಿದ್ದೆವು, ಡಿಸಿಗೂ ಕರೆ ಮಾಡಿದೆವು..!!

ನಮ್ಮ ಕಂಟದಹಿತ್ಲು ಗ್ರಾಮದಲ್ಲಿ ನೆರೆಹಾವಳಿ ಸಂಭವಿಸಿದ ತಕ್ಷಣ ನಮ್ಮ ಪಕ್ಕದ ಊರಿನಲ್ಲಿರುವ ಮಾನ್ಯ ಶಾಸಕರಾದ ಸುನಿಲ್ ನಾಯ್ಕ್ ಅವರಿಗೆ ಕರೆ ಮಾಡಿ ತಿಳಿಸಿದ್ದೇವೆ. ಅವರು ಕೂಡ ಏನೂ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ನಿಮ್ಮ ಮನೆ, ವಸ್ತುಗಿಂತ ನೀವು ಜೀವ ರಕ್ಷಣೆ ಮಾಡಿಕ್ಕೊಳ್ಳಿ ಎಂದು ಹೇಳಿದರು. ದೋಣಿ ವ್ಯವಸ್ಥೆಯ ಬಗ್ಗೆ ಮಾತನಾಡಿದರೂ ಆ ವ್ಯವಸ್ಥೆ ಮಾಡಲಿಲ್ಲ. ಕೊನೆಗೆ ನಾವು ಜಿಲ್ಲಾಧಿಕಾರಿವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದೇವೆ. ಅವರು ಮಾತನಾಡಿದರೂ ವಿನಃ ಯಾವುದೇ ಸಹಾಯ ಹಸ್ತನೀಡಲಿಲ್ಲ. ಭಟ್ಕಳದ ಸಹಾಯಕ ವಿಭಾಗಾಧಿಕಾರಿಗಳಿಗೆ ಕರೆ ಮಾಡಿದರೂ ಸಹಾಯಕ್ಕೆ ಬರಲಿಲ್ಲ. ತಹಶೀಲ್ದಾರ್ ಅವರಿಗೆ ಕರೆ ಮಾಡಿದ್ದೆವು, ಎನ್ ಡಿ ಆರ್ ಎಫ್ ಕಳುಹಿಸುತ್ತೇವೆ ಎಂಬ ಭರವಸೆ ನೀಡಿದರು. ಗ್ರಾಮೀಣ ಪೋಲೀಸ್ ಸ್ಟೇಷನ್ ಗೆ ಕರೆ ಮಾಡಿ ತಿಳಿಸಿದೆವು. ಅವರಿಂದಲೂ ಯಾವುದೇ ಸಹಕಾರ ಸಿಗಲಿಲ್ಲ. ಶಿರಾಲಿ ಗ್ರಾಮಪಂಚಾಯತ್ ಪಿ. ಡಿ. ಒ ಅವರಿಗೆ ಕರೆ ಮಾಡಿ ಮಾತನಾಡಿದ್ದೇವೆ ಅವರು ಕೂಡ ಭರವಸೆ ನೀಡಿದರು ಸಹಾಯಕ್ಕೆ ಬರಲಿಲ್ಲ.

ನೆರೆ ಇಳಿದಾಗಲೂ ನಮ್ಮ ಕಷ್ಟ ಕೇಳಲಿಲ್ಲ ಅನ್ನೋದು ದುರ್ದೈವ..!!

ನೆರೆಹಾವಳಿಯ ಸಂದರ್ಭದಲ್ಲಿ ಭೇಟಿ ನೀಡದ ಅಧಿಕಾರಿಗಳ ಬಗ್ಗೆ ನಮಗೆ ಯಾವುದೇ ವಿಷಾದವಿಲ್ಲ. ಏಕೆಂದರೆ ಅರಬ್ಬಿ ಸಮುದ್ರಕ್ಕೆ ಹೊಂದಿಕೊಂಡ ಪಳ್ಳಿಹೊಳೆ ದಂಡೆ ಮೇಲಿರುವ ಊರು ಕಂಟದಹಿತ್ಲು. ಹೆಲಿಕಾಪ್ಟರ್‌ ಮೂಲಕ ಜನರನ್ನು ಲಿಫ್ಟ್ ಮಾಡುವ ವ್ಯವಸ್ಥೆ ಬಿಟ್ಟು ಬೇರೆ ಯಾವುದೇ ಎನ್. ಡಿ. ಆರ್ ಎಫ್ ಟೀಂ ಅಥವಾ ದೋಣಿಗಳಿಂದ ಜನರನ್ನು ರಕ್ಷಿಸುವುದು ಸುಲಭದ ಮಾತಲ್ಲ ಅದು ಅಸಾಧ್ಯ ಎಂದೇ ಹೇಳಬಹುದು. ಆದರೆ ನೆರೆ ನೀರು ಇಳಿದು ಹೋದ ನಂತರ ಶಿಷ್ಟಾಚಾರಕ್ಕಾದರೂ ಭೇಟಿ ನೀಡಿ, ನಮ್ಮ ಗ್ರಾಮದಲ್ಲಿ ಆಗಿರುವ ಹಾನಿ, ಗ್ರಾಮಸ್ಥರು ಎದುರಿಸಿದ ನಷ್ಟವನ್ನಾದರೂ ರಾಜಕಾರಣಿಗಳು ಹಾಗೂ ಕಾರ್ಯಾಂಗದ ಅಧಿಕಾರಿಕಾರಿಗಳು ಕೇಳಬೇಕಿತ್ತು ಎನ್ನುವುದು ನಮ್ಮ ಊರಿನ ಗ್ರಾಮಸ್ಥರ ಆಗ್ರಹ. ನಮ್ಮ ಕಷ್ಟಕ್ಕಂತೂ ಸಹಾಯಹಸ್ತ ಚಾಚುವುದಕ್ಕೆ ಸಾಧ್ಯವಾಗಲಿಲ್ಲ, ಕೊನೆಗೆ ಕನಿಷ್ಟ ಸೌಜನ್ಯಕ್ಕೂ ಭೇಟಿ ನೀಡಲಿಲ್ಲ. ಆದರೆ ಮುಂದಿನ ಚುನಾವಣೆಗೆ ತಪ್ಪದೆ ಮತ ಕೇಳಲು ಬನ್ನಿ ಎಂದು ಊರಿನ ನಾಗರಿಕರು ಕಟುವಾಗಿ ಖಂಡಿಸಿದ್ದಾರೆ.

ಲೇಖಕರು

✍️ ಆನಂದ ದೇವಡಿಗ, ಗ್ರಾಮಸ್ಥರು

Related Posts

Don't Miss it !