ಸಮಾಧಿಯಾಗಿದ್ದ ರಹಸ್ಯ ಬಯಲು ಮಾಡಿದ ಡಿ.ಕೆ ಶಿವಕುಮಾರ್..!

ರಾಜೀವ್​ ಗಾಂಧಿ ಹಾಗೂ ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ರಾಜಕೀಯ ಆರಂಭದಲ್ಲಿ ನಡೆದಿದ್ದ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಆ ನೆನಪಿನ ಸುರಳಿಯಲ್ಲಿ ಸಮಾಧಿಯಾಗಿದ್ದ ರಹಸ್ಯವೊಂದು ಇಡೀ ಕರ್ನಾಟಕದ ಜನರ ಎದುರು ಬಹಿರಂಗವಾಗಿದೆ. ಅಷ್ಟೇ ಅಲ್ಲದೆ ಸಭೆಯಲ್ಲಿ ಭಾಗಿಯಾಗಿದ್ದ ಹಲವರಿಗೆ ಛಾಟಿ ಏಟು ಕೊಟ್ಟಂತಾಗಿದೆ. ಡಿ.ಕೆ ಶಿವಕುಮಾರ್ ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದಾಗ ಪ್ರಧಾನಿ ಆಗಿದ್ದ ರಾಜೀವ್​ ಗಾಂಧಿ, ಯುವಕರ ಪಡೆಯನ್ನು ಕೊರಿಯಾಗೆ ಕಳುಹಿಸುವ ನಿರ್ಧಾರ ಮಾಡಿದ್ದರಂತೆ. ಈ ವೇಳೆ ಡಿ.ಕೆ ಶಿವಕುಮಾರ್​ ವಿರುದ್ಧ ಐವರು ಕಾಂಗ್ರೆಸ್​ ಸಂಸದರು ರಾಜೀವ್​ ಗಾಂಧಿಗೆ ದೂರು ನೀಡಿದ್ದರಂತೆ..

ಚಾಕು ಚೂರಿ ಹಿಡಿಯುವನಿಗೆ ಪ್ರಾಶಸ್ತ್ಯ ಬೇಡ..!

ಬಿ.ಕೆ ಹರಿಪ್ರಸಾದ್​ ಯೂತ್​ ಕಾಂಗ್ರೆಸ್​ ಅಧ್ಯಕ್ಷರಾಗಿದ್ದಾಗ ಕೊರಿಯಾ ಪ್ರವಾಸಕ್ಕೆ ಸರ್ವ ಪಕ್ಷಗಳ ನಿಯೋಗಕ್ಕೆ ಆಯ್ಕೆಯಾಗಿದ್ದೆವು. 22 ದಿನದ ಪ್ರವಾಸ ಅದು. ಆದ್ರೆ ರಾಜ್ಯದ ಐವರು ಸಂಸದರು ನನ್ನ ವಿರುದ್ಧ ರಾಜೀವ್​ ಗಾಂಧಿ ಅವರಿಗೆ ದೂರು ನೀಡಿದ್ದರು ಎಂದು ಡಿ.ಕೆ ಶಿವಕುಮಾರ್​ ನೆನಪು ಮಾಡಿಕೊಂಡರು. ಚಂದ್ರಶೇಖರ್​ ಮೂರ್ತಿ, ಬೆಳಗಾವಿ ಎಂಪಿ ಸಿದ್ನಾಳ್​, ಬಿಕೆ ನಾಯ್ಕರ್​ ಸೇರಿ ದೂರು ನೀಡಿದ್ರು. ಯಾಕೆ ದೂರು ಕೊಟ್ಟಿದ್ರು ಎನ್ನುವುದು ಗೊತ್ತಿಲ್ಲ. ರಾಜ್ಯದಿಂದ ಸಾವಿರಾರು ಜನರು ಬೀಳ್ಕೊಟ್ಟಿದ್ರು. ನಾವು ಹೊರಡು ಮುನ್ನ ಔತಣ ಕೂಟ ಏರ್ಪಡಿಸಿದ್ದರು. ಅದಕ್ಕೂ ಮುನ್ನ ವಿನ್ಸಂಟ್​ ಜಾರ್ಜ್​ ಅವರನ್ನು ಕರೆದು ದೂರಿನ ಬಗ್ಗೆ ಪರಿಶೀಲನೆಗೆ ತಿಳಿಸಿದ್ರು. ಆ ಬಳಿಕ ವೆಂಕಟಸುಬ್ಬಯ್ಯ ಅವರಿಗೆ ಕರೆ ಮಾಡಿದ ನಿನ್ಸಂಟ್​ ಜಾರ್ಜ್​ ನನ್ನ ಬಗ್ಗೆ ಮಾಹಿತಿ ಕೇಳಿದ್ರು. ನಾನು ಎಂಪಿ ರಂಗನಾಥ್​ ಅವರ ಮನೆಯಲ್ಲಿ ಉಳಿದುಕೊಂಡಿದೆ. ಸಂಜೆ ಔತಣಕೂಟಕ್ಕೆ ಬಂದಾಗ ಐವರ ಎದುರು ರಾಜೀವ್​ ಗಾಂದಿ ಹೀಗೆ ಹೇಳಿದ್ರು. ಓನ್ಲಿ ಕಾಂಟ್ರವರ್ಶಿಯಲ್​ ಬಾಯ್ಸ್​ ಆರ್​ ಬೆನಿಫಿಷಿಯರ್​, ಓನ್ಲಿ ಕಾಂಟ್ರವರ್ಶಿಯಲ್​ ಬಾಯ್ಸ್​ ಆರ್​ ಸಕ್ಸಸ್​ ಫುಲ್​ ಎಂದು ತಿಳಿಸಿದ್ರು. ಕೊರಿಯಾ ಪ್ರವಾಸಕ್ಕೂ ಕಳುಹಿಸಿಕೊಟ್ರು ಎಂದಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ;

ಕಾಂಗ್ರೆಸ್​ ಮೀಸಲಾತಿ ಕೊಟ್ಟಿದ್ದನ್ನು ಬಿಜೆಪಿ ವಿರೋಧಿಸಿತ್ತು..!

ಕಾಂಗ್ರೆಸ್​ ಪಕ್ಷಕ್ಕೆ ನಾನು ಇತ್ತೀಚಿಗೆ ಅಂದರೆ 2006ರಲ್ಲಿ ಸೇರ್ಪಡೆ ಆಗಿದ್ದೇನೆ. ರಾಜೀವ್​ ಗಾಂಧಿ ಹಾಗು ದೇವರಾಜ ಅರಸು ಇಬ್ಬರ ಜೊತೆಗೂ ಕೆಲಸ ಮಾಡಿಲ್ಲ. ಆದರೂ ನಾನೂ ಇವರಿಬ್ಬರೂ ನಾಯಕರನ್ನು ಮೆಚ್ಚಿಕೊಳ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್​ ಪಕ್ಷ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ನೀಡಿದೆ. ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದಲ್ಲೂ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡಿದ್ದು ಕಾಂಗ್ರೆಸ್​ ಪಕ್ಷ. ಆದರೆ ರಾಜ್ಯಸಭಾ ಸದಸ್ಯರಾಗಿದ್ದ ರಾಮಜೋಯಿಷ್ ಅವರು ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದರು. ಕಾಂಗ್ರೆಸ್​ ಸರ್ಕಾರ ಹಿಂದುಳಿದ ವರ್ಗಕ್ಕೆ ನೀಡಿದ್ದ ಮೀಸಲಾತಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದರು. ಆದರೆ ಹಿಂದುಳಿದ ವರ್ಗದ ಜನರನ್ನೂ ಸೇರಿದಂತೆ ಬಿಜೆಪಿ ಸುಳ್ಳುಗಳನ್ನು ಹೇಳಿ ನಂಬಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿಯನ್ನು ಟೀಕಿಸಿದ್ರು. 1931 ರಿಂದ ಇಲ್ಲೀವರೆಗೂ ಜಾತಿ ಗಣತಿ ಆಗಿಲ್ಲ. ಇದೇ ಕಾರಣಕ್ಕೆ 162 ಕೋಟಿ ರೂಪಾಯಿ ವೆಚ್ಚ ಮಾಡಿ ಜಾತಿಗಣತಿ ಮಾಡಿಸಿದ್ದೆ. ಆದರೆ ಸಮ್ಮಿಶ್ರ ಸರ್ಕಾರವೂ ವರದಿಯನ್ನು ಪಡೆಯಲಿಲ್ಲ. ಈಗಿನ ಸರ್ಕಾರವೂ ವರದಿಯನ್ನು ಮೂಲೆಗುಂಪು ಮಾಡಿದೆ. ಜಾತಿ ಗಣತಿಯೇ ಆಗದಿದ್ದರೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಹೇಗೆ ಮಾಡುವುದು ಎಂದು ಪ್ರಶ್ನಿಸಿದ್ರು.

ಇದನ್ನೂ ಓದಿ;

ಚಾಕು ಚೂರಿ ಕಥೆ ಹೇಳಿದ ಡಿಕೆಶಿ, ಚುಚ್ಚಿದ್ದು ಯಾರಿಗೆ..?

ಸುಮಾರು 30 ವರ್ಷಗಳ ಹಿಂದ ನಡೆದಿದ್ದ ಘಟನೆಯ ಬಗ್ಗೆ ಯಾರಿಗೂ ಅರಿವು ಇರಲಿಲ್ಲ. ಕೆಲವೊಂದಿಷ್ಟು ನಾಯಕರನ್ನು ಹೊರತುಪಡಿಸಿ ಬೇರೆ ಯಾರಿಗೂ ತಿಳಿದಿರಲಿಲ್ಲ. ಆದರೆ ಸಮಾಧಿಯಲ್ಲಿ ಮಲಗಿದ್ದ ಸತ್ಯವನ್ನು ಎಬ್ಬಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಕೆಲವೊಬ್ಬರಿಗೆ ಇರಿದಿದ್ದಾರೆ. ಇತ್ತೀಚಿಗೆ ರಾಜ್ಯ ಯುವ ಕಾಂಗ್ರೆಸ್​ ಅಧ್ಯಕ್ಷ ಚುನಾವಣೆ ನಡೆದಿತ್ತು. ಈ ವೇಳೆ ಮಹ್ಮದ್​ ನಲಪಾಡ್​ ಭಾರೀ ಅಂತರದಲ್ಲಿ ಗೆಲುವನ್ನು ಸಾಧಿಸಿದ್ರು. ಇನ್ನೇನು ಚುನಾವಣಾ ಫಲಿತಾಂಶ ಘೋಷಣೆ ಆಗಬೇಕು ಎನ್ನುವ ಸಮಯದಲ್ಲಿ ನಲಪಾಡ್​ ವಿರುದ್ಧ ಹೈಕಮಾಂಡ್​ಗೆ ದೂರು ನೀಡಲಾಯ್ತು. ರೌಡಿ ಹಿನ್ನೆಲೆ ಹೊಂದಿರುವ ಯುವಕ, ಈಗಾಗಲೇ ಹಲವಾರು ಗಲಾಟೆಗಳನ್ನು ಮಾಡಿಕೊಂಡು ಜೈಲು ಸೇರಿದ್ದ. ಇತ್ತೀಚಿಗಷ್ಟೇ ಬೇಲ್​ ಮೇಲೆ ಹೊರಬಂದಿದ್ದಾನೆ ಎಂದೆಲ್ಲಾ ದೂರು ನೀಡಲಾಗಿತ್ತು. ಹಾಗಾಗಿ ಎರಡನೇ ಸ್ಥಾನ ಪಡೆದಿದ್ದ ರಕ್ಷಾ ರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಗಿತ್ತು. ಆ ನಂತರ ಹಲವಾರು ರೀತಿಯ ಚರ್ಚೆಗಳು ನಡೆದು ಅಧಿಕಾರ ಹಂಚಿಕೆ ಸೂತ್ರ ಹೊರಬಿದ್ದಿತ್ತು.

ಇದನ್ನೂ ಓದಿ;

ಯುವಕರಿಗೆ ಸೂತ್ರ ತೆರೆದಿಟ್ಟ ಡಿ.ಕೆ ಶಿವಕುಮಾರ್​..!

ಯುವಕರು ಕೆಲಸ ಮಾಡುವಾಗ ಸಾಕಷ್ಟು ಪಕ್ಷಗಳ ವಿರುದ್ಧ ಮಾತನಾಡಬೇಕಾಗುತ್ತದೆ. ಅದರಿಂದ ಕೆಟ್ಟವಾರಾಗುತ್ತೇವೆ ಎನ್ನುವ ಭಯ ಬೇಡ. ಭಯ ಬಿಟ್ಟು ಕೆಲಸ ಮಾಡಿದಾಗಲೇ ಪಕ್ಷ ಸಂಘಟನೆ ಮಾಡಲು ಸಾಧ್ಯ. ನಾವು ಕೆಟ್ಟವರಾಗ್ತೇವೆ ಎನ್ನುವ ಭಯದಲ್ಲಿ ಒಳ್ಳೆಯವರಾಗಲು ಯತ್ನಿಸಿದ್ರೆ ಪಕ್ಷದ ಬಾವುಟ ಕಟ್ಟುವುದಕ್ಕೂ ಆಗಲ್ಲ ಎಂದು ತಿಳಿಸಿದ್ರು. ಮೋರ್​ ಪವರ್​ ಫುಲ್​ ಮೋರ್​ ಎನಿಮಿಸ್, ಲೆಸ್​ ಪವರ್​ ಫುಲ್​ ಲೆಸ್​ ಎನಿಮಿಸ್​, ನೋ ಪವರ್​ ಫುಲ್​ ನೋ ಎನಿಮಿಸ್ ಎಂದ ಡಿಕೆ ಶಿವಕುಮಾರ್​ ಮೋರ್​ ವರ್ಕ್​ ಮೋರ್​ ಮಿಸ್ಟೇಕ್ಸ್​​, ಲೆಸ್​ ವರ್ಕ್​ ಲೆಸ್​ ಮಿಸ್ಟೇಕ್ಸ್​, ನೋ ವರ್ಕ್​ ನೋ ಮಿಸ್ಟೇಕ್ಸ್​ ಎನ್ನುವ ಮೂಲಕ ಕೆಲಸ ಮಾಡಿ ತಪ್ಪಾದರೂ ಪರವಾಗಿಲ್ಲ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ರು.

Related Posts

Don't Miss it !