KPSC ಹುದ್ದೆ ಪಡೆಯುವ ಆಕಾಂಕ್ಷಿಗಳು ಮಾಡುವುದು ಇದೇ ಎಡವಟ್ಟು..!

ಕರ್ನಾಟಕ ರಾಜ್ಯದಲ್ಲಿ ಬಹುತೇಕ ಹುದ್ದೆಗಳಿಗೆ ನೇಮಕಾತಿ ಮಾಡುವ ಸಂಸ್ಥೆ ಕರ್ನಾಟಕ ಸ್ಟೇಟ್​ ಪಬ್ಲಿಕ್​ ಸರ್ವಿಸ್ (KPSC). ಈ ಸಂಸ್ಥೆ ಮೂಲಕ ಆಯ್ಕೆಯಾದ ಅಭ್ಯರ್ಥಿಗಳು ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಾರೆ. ಅದರಂತೆ KPSC ಮೂಲಕ ಪರೀಕ್ಷೆ ಬರೆದು ಆಯ್ಕೆಯಾಗುವ ಉದ್ದೇಶದಿಂದ ಸಾವಿರಾರು ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಚಾತಕ ಪಕ್ಷಿಯ ರೀತಿ ಕಾಯುತ್ತಿರುತ್ತಾರೆ. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ಉದ್ದೇಶದಿಂದ ತರಬೇತಿ ಕೇಂದ್ರಗಳಲ್ಲಿ ವರ್ಷಾನುಗಟ್ಟಲೆ ಓದಿರುತ್ತಾರೆ. ಆದರೆ ಯಾರೋ ಒಬ್ಬ ನೀಚ ಮಾಡುವ ಕೆಲಸದಲ್ಲಿ ಸಿಕ್ಕಿ ಬೀಳುತ್ತಾರೆ.

ಕೋಟಿ ಕಮಾಯಿ..! ರಾಜ್ಯಪಾಲರೇ ನೇಮಿಸಿದ್ರಂತೆ..!

ದಾವಣಗೆರೆ ಮೂಲದ ಅರುಣ್ ಕುಮಾರ್ ಎಂಬಾತನ ಕೆಪಿಎಸ್​ಸಿ ಹೆಸರಲ್ಲಿ ಕೋಟಿಗೂ ಹೆಚ್ಚು ಹಣ ಕಲೆಕ್ಟ್​ ಮಾಡಿದ್ದಾನೆ. ತಾನು ಕೆಪಿಎಸ್​ಸಿ ಮೆಂಬರ್​ ಎಂದು ಹೇಳಿಕೊಂಡು ಉದ್ಯೋಗ ಆಕಾಂಕ್ಷಿಗಳ ಬಳಿಕ ಹಣ ವಸೂಲಿ ಮಾಡಿದ್ದಾನೆ. ನಿಮ್ಮ ಮನೆ ಬಾಗಿಲಿಗೆ ನೇಮಕಾತಿ ಪತ್ರ ಕಳುಹಿಸುವ ವ್ಯವಸ್ಥೆ ನಾನು ಮಾಡುತ್ತೇನೆ ಎಂದು ಅಬಕಾರಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಹಾಕಿದ್ದ ಯುವಕರನ್ನು ಸೆಳೆದಿದ್ದಾನೆ. ಹುದ್ದೆ ಕೊಡಿಸಲು ಸಾಕಷ್ಟು ಹಣ ಖರ್ಚಾಗಲಿದೆ ಎಂದು ಹೇಳಿದ್ದ ಅರುಣ್​ ಕುಮಾರ್​, 35 ಲಕ್ಷದಂತೆ ಎರಡು ಹಂತದಲ್ಲಿ 70 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ. ಈತ ಕೆಲಸ ಕೊಡಿಸುತ್ತಾನೆ ಎಂದು ನಂಬಿದ್ದ ಮತ್ತಷ್ಟು ಅಭ್ಯರ್ಥಿಗಳೂ ಕೂಡ ಈತನಿಗೆ ಮತ್ತಷ್ಟು ಹಣ ಕೊಟ್ಟಿದ್ದಾರೆ.

ಐಡಿ ಕಾರ್ಡ್​ ನಕಲಿ, ಆಫರ್​ ಲೆಟರ್​ ನಕಲಿ..!

ನನ್ನನ್ನು ರಾಜ್ಯಪಾಲರೇ ನೇಮಿಸಿದ್ದು, ನಾನು ಕೆಪಿಎಸ್​ಸ್ಸಿ ಸದಸ್ಯ ಎಂದು ಐಡಿ ಕಾರ್ಡ್​ ಕೂಡ ತೋರಿಸಿದ್ದಾನೆ. ಎಲ್ಲರೂ ನಂಬಿಕೊಂಡು ಅರುಣ್​ ಕುಮಾರ್​ಗೆ ಒಟ್ಟು 1 ಕೋಟಿ 60 ಲಕ್ಷ ರೂಪಾಯಿ ಹಣವನ್ನು ನೀಡಿದ್ದಾರೆ. ಆ ಬಳಿಕ ಎಲ್ಲರಿಗೂ ನಕಲಿ ಆಫರ್​ ಲೆಟರ್​ ಕೊಟ್ಟಿದ್ದಾನೆ. ಉದ್ಯೋಗ ಆಕಾಂಕ್ಷಿಗಳಿಗೆ ಇದು ನಕಲಿ ಆಫರ್​ ಲೆಟರ್​ ಎನ್ನುವುದು ತಿಳಿದ ಬಳಿಕ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎಂಎಸ್​ ಬಿಲ್ಡಿಂಗ್​ ಪಾರ್ಕಿಂಗ್​ನಲ್ಲೇ ಎಲ್ಲಾ ವ್ಯವಹಾರ ಮಾಡಿ ಕೋಟಿಗೂ ಮೀರಿದ ಹಣ ವಂಚನೆ ಮಾಡಿರುವ ಅರುಣ್​ ಕುಮಾರ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಐಡಿ ಕಾರ್ಡ್​ ಕೂಡ ನಕಲಿ ಎನ್ನುವುದು ಗೊತ್ತಾಗಿದೆ. ಹಲವಾರು ಮಂದಿಗೆ ವಂಚನೆ ಮಾಡಿರುವ ಬಗ್ಗೆ ವಿಚಾರಣೆ ವೇಳೆ ಬಯಲಾಗಿದೆ.

ಅಭ್ಯರ್ಥಿಗಳು ಮಾಡುವ ತಪ್ಪೇನು..?

ಸರ್ಕಾರಿ ಉದ್ಯೋಗಕ್ಕೆಂದು ಕಷ್ಟಪಟ್ಟು ಓದಿದ ಅಭ್ಯರ್ಥಿಗಳು ಯಾರಿಗೂ ಹಣ ಕೊಡಬೇಕಾದ ಅವಶ್ಯಕತೆ ಇಲ್ಲ. ಚೆನ್ನಾಗಿ ಓದಿದ ಮೇಲೆ ಹಣ ಕೊಟ್ಟು ಸರ್ಕಾರಿ ಕೆಲಸಕ್ಕೆ ಸೇರಬೇಕಾದ ಅವಶ್ಯಕತೆ ಏನಿದೆ ಎಂಬುದನ್ನು ಅಭ್ಯರ್ಥಿಗಳು ತಿಳಿದುಕೊಳ್ಳಬೇಕಿದೆ. ಒಂದು ವೇಳೆ ತಾವು ಬುದ್ಧಿವಂತರಾಗಿದ್ದರೆ ಲಕ್ಷ ಲಕ್ಷ ಲಂಚ ಕೊಡುವ ಹಣದಿಂದಲೇ ಉತ್ತಮ ವ್ಯವಹಾರ ಆರಂಭಿಸಬಹುದು. ಅದನ್ನು ಬಿಟ್ಟು ಲಂಚ ಕೊಟ್ಟು ಜೀವನ ಪೂರ್ತಿ ಲಂಚ ತೆಗೆದುಕೊಳ್ಳುವುದು, ಸಿಕ್ಕಿಬಿದ್ರೆ ಜೈಲಿಗೆ ಹೋಗುವುದು. ಇಷ್ಟು ಸಾಧನೆ ಮಾಡಲು ಕಷ್ಟಪಟ್ಟು ಓದುವ ಅವಶ್ಯಕತೆ ಇಲ್ಲ ಎನಿಸುತ್ತದೆ. ಭಾರತದ ಸಂವಿಧಾನದ ಪ್ರಕಾರ ಲಂಚ ಕೊಟ್ಟವನು ಹಾಗೂ ಲಂಚ ಪಡೆದವರು ಇಬ್ಬರೂ ಅಪರಾಧಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ಇದೀಗ ಅರುಣ್​ ಕುಮಾರ್​ಗೆ 1.60 ಕೋಟಿ ಹಣ ಕೊಟ್ಟವರನ್ನೂ ಪತ್ತೆ ಮಾಡಿ ಕೇಸ್​ ಬುಕ್​ ಮಾಡಬೇಕಿದೆ.

Related Posts

Don't Miss it !