ಕೊಲೆಗಡುಕ ಲೈನ್​ಮ್ಯಾನ್​​ & 26 ಹುಡುಗಿಯರು, ತಾಳಿ ಗಾಳ..!

ಸಮಾಜದಲ್ಲಿ ಗಂಡು ಹೆಣ್ಣಿನ ಅನುಪಾತ ಹೆಚ್ಚು ಕಡಿಮೆ ಆಗಿರುವ ಕಾರಣ ಗಂಡು ಮಕ್ಕಳಿಗೆ ಹೆಣ್ಣು ಸಿಗದಂತಾಗಿದೆ. ಅದರಲ್ಲೂ ಹೆಣ್ಣು ಮಕ್ಕಳ ಪೋಷಕರು ಹಳ್ಳಿಗಾಡಿನ ಹುಡುಗರಿಗೆ ಹೆಣ್ಣು ಕೊಡಲು ನಿರಾಕರಣೆ ಮಾಡುವ ಕಾರಣ ಅದೆಷ್ಟೋ ರೈತ ಯುವಕರಿಗೆ ಮದುವೆ ಆಗದೆ ಸಂಕಷ್ಟ ಎದುರಾಗಿದೆ. ಆದರೆ ಕಲರ್​​ ಫುಲ್​ ಪ್ಯಾಂಟ್​, ಶರ್ಟ್​ ಹಾಕಿಕೊಂಡು ಸಾಮಾಜಿಕ ತಾಣದಲ್ಲಿ ಮಿಂಚುವ ಹುಡುಗರಿಗೆ ಈ ಸಮಸ್ಯೆ ಇಲ್ಲ. ಸಾವಿರ ಸುಳ್ಳು ಹೇಳಿ ಒಂದು ಮದ್ವೆ ಮಾಡು ಎನ್ನುವ ಗಾಧೆಯಂತೆ ಕೆಲಸ ಇರಲಿ, ಇಲ್ಲದೇ ಇರಲಿ ಅಂದ ಚಂದ ನೋಡಿ ಮದ್ವೆ ಆಗುವ ಕಾಲವೂ ಬಂದಾಗಿದೆ. ಇನ್ನೂ ಓದಿರುವ ಬುದ್ಧಿವಂತ ಹುಡುಗಿಯರು ಮ್ಯಾಟ್ರಿಮೋನಿಯಲ್​ ವೆಬ್​​ಸೈಟ್​ಗಳಿಗೆ ಬಯೋಡೇಟಾ ಹಾಕುವ ಕೆಟ್ಟ ಚಾಳಿಯನ್ನು ಬೆಳೆಸಿಕೊಂಡು ಜೀವನ ಹಾಳು ಮಾಡಿಕೊಳ್ಳುವ ಸಂಸ್ಕೃತಿಯೂ ಮತ್ತೊಂದು ಕಡೆ ಬೆಳೆದು ನಿಂತಿದೆ. ಇದೇ ರೀತಿ ಮ್ಯಾಟ್ರಿಮೋನಿಯಲ್​ ಸಹವಾಸ ಮಾಡಿದ ಸುರಸುಂದರಾಂಗ ಮಾಡಿದ್ದೇನು ನೋಡಿ.

ಯುವತಿಯರಿಗೆ ಗಾಳ ಹಾಕುವುದೇ ಲೈನ್​ಮ್ಯಾನ್​ ಕೆಲಸ..!

ಮ್ಯಾಟ್ರಿಮೋನಿಯಲ್ ವೆಬ್ ಸೈಟ್​ಗಳಲ್ಲಿ ಯುವಕ ಯುವತಿಯರು ತಮ್ಮ ಬಯೋಡೇಟಾ ಹಾಕಿರುತ್ತಾರೆ. ಅದರಲ್ಲಿ ತಮಗೆ ಇಷ್ಟವಾದ ಬಯೋಡೇಟಾದಲ್ಲಿ ಇರುವ ಯುವಕ ಯುವತಿಯರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರುತ್ತದೆ ಎನ್ನುವುದು ಇದರಲ್ಲಿರುವ ಸೆಳೆತ. ಇದೇ ರೀತಿ ಮ್ಯಾಟ್ರಿಮೋನಿಯಲ್ಲಿ ಬಯೋಡೇಟಾವನ್ನು ಹಾಕಿಕೊಂಡು ಸಿಕ್ಕ ಸಿಕ್ಕ ಯುವತಿಯರಿಗೆ ಗಾಳ ಹಾಕುತ್ತಿದ್ದ ವ್ಯಕ್ತಿಯನ್ನು ಅರೆಸ್ಟ್​ ಮಾಡಲಾಗಿದೆ. ಮದುವೆಯಾಗುತ್ತೇನೆ ಎಂದು ನಂಬಿಸುವುದು ಜೊತೆಗೆ ಹೆಸ್ಕಾಂನಲ್ಲಿ ಕೆಲಸ ಕೊಡಿಸ್ತೀನಿ ಎಂದು ನಂಬಿಸಿ ವಂಚನೆ ಮಾಡುತ್ತಿದ್ದ ಎನ್ನುವುದು ತನಿಖೆಯಲ್ಲಿ ಬಯಲಾಗಿದೆ. ಹುಡುಗಿಯರು ಈತನ ಬಲೆಯಲ್ಲಿ ಬೀಳುವುದಕ್ಕೆ ಇನ್ನೊಂದು ಮಹತ್ವದ ಕಾರಣ ಎಂದರೆ ಈತನ ಬಯೋಡೇಟಾದಲ್ಲಿ ಇದ್ದಂತಹ ಮಾಹಿತಿ. ದೂರದ ಬೆಟ್ಟ ನುಣ್ಣಗೆ ಎನ್ನುವಂತೆ ಫೋನ್​​ ಕಾಲ್​ನಲ್ಲೇ ಎಲ್ಲಾ ವ್ಯವಹಾರ ಮಾತನಾಡಿ, ಆನ್​​​ಲೈನ್ ಮುಖಾಂತರ ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡ್ತಿದ್ದ ಎನ್ನುವುದು ಗೊತ್ತಾಗಿದೆ.

Read This;

ಲೈನ್​ಮ್ಯಾನ್​ ರಾಜು​ ಅಲ್ಲ ಹೆಸ್ಕಾಂ ಸೆಕ್ಷನ್​​ ಆಫೀಸರ್​..!

ವಿಜಯಪುರ ಮೂಲದ ಆರೋಪಿ ರಾಜು ವಿ ಪದಕೋಟಿ ಅವರ ತಂದೆ ಹೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದರು. ಸೇವಾವಧಿಯಲ್ಲೇ ನಿಧನರಾದ ಕಾರಣ ಅನುಕಂಪದ ಆಧಾರದ ಮೇಲೆ ಲೈನ್​ಮ್ಯಾನ್​ ಆಗಿ ಕೆಲಸ ಕೊಡಲಾಗಿತ್ತು. ಲೈನ್​ಮ್ಯಾನ್​ ಆಗಿ 8 ತಿಂಗಳ ಕಾಲ ಕೆಲಸ ಮಾಡುತ್ತಿದ್ದಾಗಲೇ 2013ರಲ್ಲಿ ಮುದ್ದೇಬಿಹಾಳ ಮೂಲದ 23 ವರ್ಷದ ಯುವತಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಜೈಲು ಶಿಕ್ಷೆಯಾಗಿತ್ತು. ಜೈಲು ಶಿಕ್ಷೆ ಮುಗಿಸಿ ಹೊರಕ್ಕೆ ಬಂದಿದ್ದ ರಾಜು ವಿ ಪದಕೋಟಿ ಹಣ ಮಾಡುವ ಚಿಂತನೆಯಲ್ಲಿದ್ದ. ಕೊಲೆ ಆರೋಪದಲ್ಲಿ ಜೈಲು ಸೇರಿದ ಬಳಿಕ ಹಣದ ವ್ಯಾಮೋಹಕ್ಕೆ ಒಳಗಾಗಿದ್ದ ರಾಜು, ಮ್ಯಾಟ್ರಿಮೋನಿಯಲ್​ ವೆಬ್​​ಸೈಟ್​ಗಳ ಮೊರೆ ಹೋಗಿದ್ದ. ಅದಕ್ಕಾಗಿ ಆತ ಮಾಡಿಕೊಂಡಿದ್ದ ಮಾರ್ಗ ಎಂದರೆ ಲೈನ್​ಮ್ಯಾನ್​ ಆಗಿದ್ದವನು ಹೆಸ್ಕಾಂನಲ್ಲಿ ಸೆಕ್ಷನ್​ ಆಫೀಸರ್​ ಪಟ್ಟಕ್ಕೆ ಹೋಗಿದ್ದು. ಅಲ್ಲಿಂತ ಈತನಿಗೆ ಜಾಕ್​ಪಾಟ್​ ಹೊಡೆದಿತ್ತು.

Also Read;

26 ಹುಡುಗಿಯರು ಕಲೆಕ್ಷನ್​ ಮಾಡಿದ್ದು 22 ಲಕ್ಷ ರೂಪಾಯಿ..!!

ಜೈಲಿನಿಂದ ಹೊರಕ್ಕೆ ಬರುವಾಗಲೇ ಹಣದ ವ್ಯಾಮೋಹ ಹೊತ್ತುಬಂದಿದ್ದ ರಾಜು ವಿ ಪದಕೋಟಿ, ಮ್ಯಾಟ್ರಿಮೋನಿಯಲ್​​ ವೆಬ್​​ಸೈಟ್​ಗಳಿಗೆ ಬಯೋಡೇಟಾ ಅಪ್​ಲೋಡ್​ ಮಾಡಿದ್ದ. ಆದರೆ ಲೈನ್​ಮ್ಯಾನ್​ ಎಂದು ಬರೆಯುವ ಬದಲಿಗೆ ಹೆಸ್ಕಾಂನಲ್ಲಿ ಸೆಕ್ಷನ್​ ಆಫೀಸರ್​ ಎಂದು ತಾನೇ ಹುದ್ದೆ ಸೃಷ್ಟಿಸಿಕೊಂಡಿದ್ದ. ಇನ್ನೊಂದು ವಿಶೇಷ ಅಂದ್ರೆ ಒಂದು ಜಾತಿಯ ಹೆಸರಲ್ಲಿ ಮಾತ್ರ ಅಪ್​ಲೋಡ್​ ಮಾಡಿರಲಿಲ್ಲ. ಬದಲಿಗೆ ಎಲ್ಲಾ ಜಾತಿಯ ಮ್ಯಾಟ್ರಿಮೋನಿಯಲ್​ನಲ್ಲೂ ಬೇರೆ ಬೇರೆ ಜಾತಿ ಸಮುದಾಯದ ಹೆಸರಲ್ಲಿ ಬಯೋಡೇಟಾ ಹಾಕಿದ್ದನು. ವಿದ್ಯಾರ್ಹತೆ ಬಿಇ ಎಲೆಕ್ಟ್ರೀಷಿಯನ್​ ಎಂದು ಹಾಕಿದ್ದರಿಂದ ಅದರಲ್ಲಿ 26 ಹುಡುಗಿಯರು ಈತನ ಬಲೆಗೆ ಬಿದ್ದಿದ್ದರು. ಅವರಿಂದ ಬರೋಬ್ಬರಿ 21.30 ಲಕ್ಷ ರೂಪಾಯಿ ಹಣ ಸಂಗ್ರಹ ಮಾಡಿದ್ದ. ಗೋವಾ, ಪಾಂಡಿಚೇರಿ ಅಂತಾ ಸುತ್ತಾಡಿ ಮೋಜು ಮಸ್ತಿ ಮಾಡಿದ್ದ. ಈತನ ಆಟಾಟೋಪಗಳ ಬಗ್ಗೆ ಸೈಬರ್​ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ರು ಆರೋಪಿಯನ್ನು ಬಂಧಿಸಿದ್ದಾರೆ. ಮmಸ್ತಿ ಮಾಡಿ ಕೊನೆಯಲ್ಲಿ ಉಳಿದಿದ್ದ 1 ಲಕ್ಷದ 66 ಸಾವಿರದ 695 ರೂಪಾಯಿ ಜಪ್ತಿ ಮಾಡಲಾಗಿದೆ. ಹೆಣ್ಣು ಮಕ್ಕಳಿಗೆ ಟೋಪಿ ಹಾಕ್ತಿದ್ದ ಕಿಲಾಡಿ ಕೈಗೆ ಕೋಳ ಹಾಕಿದ್ದಾರೆ. ರೈತರ ಮಕ್ಕಳು ಎಂದು ತಿರಸ್ಕರಿಸಿ, ಅಂದ ಚಂದಕ್ಕೆ ಮಾರು ಹೋಗುವ ಮುನ್ನ ಹುಷಾರ್.

Related Posts

Don't Miss it !