ಪ್ರೀತಿಸಿ ಮದುವೆ ಆದವನು ನಾಲ್ಕೇ ತಿಂಗಳಿಗೆ ಕ್ರೂರಿಯಾದ..! ಸಿಗರೇಟ್​​ನಿಂದ ಸುಟ್ಟು ವಿಕೃತಿ..

ಯೌವ್ವನದಲ್ಲಿ ಎಲ್ಲರೂ ಒಂದಲ್ಲೂ ಒಂದು ರೀತಿಯಲ್ಲಿ ಪ್ರೀತಿ ಪ್ರೇಮಕ್ಕೆ ಬೀಳುವುದು ಸಾಮಾನ್ಯ. ಇದೇ ರೀತಿ ಉಡುಪಿಯಲ್ಲಿ ಪ್ರೀತಿ ಪ್ರೇಮ ಅಂತಾ ಮರ ಸುತ್ತಿದ್ದ ಜೋಡಿಯೊಂದು ಕಳೆದ ನಾಲ್ಕು ತಿಂಗಳ ಹಿಂದೆ ಮದುವೆ ಎಂದ ಬಂಧನಕ್ಕೆ ಒಳಗಾಗಿತ್ತು. ಮಗಳು ಹುಡುಗನನ್ನು ಇಷ್ಟಪಟ್ಟಿದ್ದಾಳೆ ಎನ್ನುವ ಕಾರಣಕ್ಕೆ ಕುಟುಂಬಸ್ಥರು ಯಾವುದೇ ವಿರೋಧ ಮಾಡದೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಕೇವಲ ನಾಲ್ಕು ತಿಂಗಳಲ್ಲಿ ಅಳಿಯ ತನ್ನ ವಿಕೃತಿ ಪರಾಕ್ರಮವನ್ನು ತೆರೆದಿಟ್ಟಿದ್ದಾನೆ. ತಾನೇ ಪ್ರೀತಿಸಿ, ಮುದ್ದಿಸಿ ತಾಳಿ ಕಟ್ಟಿದವನು ಕೊಡಬಾರದ ಕಷ್ಟ ಕೊಟ್ಟಿದ್ದಾನೆ.

ತನ್ನ ಪತ್ನಿಯ ಮೈಗೆಲ್ಲಾ ಸಿಗರೇಟ್​ನಿಂದ ಸುಟ್ಟಿದ್ದಾನೆ. ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ, ಆದರೆ ಕೇವಲ ನಾಲ್ಕು ತಿಂಗಳಲ್ಲಿ ವರದಕ್ಷಿಣೆಗಾಗಿ ಕಿರುಕುಳ ಶುರು ಮಾಡಿದ್ದಾನೆ. ಪ್ರೀತಿಸಿ ಮದುವೆಯಾದವಳನ್ನೇ ಸಿಗರೇಟಿನಿಂದ ಸುಟ್ಟು ಹಿಂಸಿಸಿದ್ದಾನೆ. ಸಿಗರೇಟಿನಿಂದ ಸುಡುವುದನ್ನ ಸ್ವತಃ ತಾನೇ ವಿಡಿಯೋ ಮಾಡಿರುವುದು ಆತನ ವಿಕೃತಿಯನ್ನು ಬಹಿರಂಗ ಮಾಡಿದೆ. ಆರೋಪಿಯನ್ನು ವಶಕ್ಕೆ ಪಡೆದು ಕುಂದಾಪುರ ಪೊಲೀಸರು ವಿಚಾರಣೆ ಮಾಡಿದ್ದಾರೆ. ಗಂಡನ ನಿರಂತರ ಕಿರುಕುಳ ತಾಳಲಾರದೆ ದೂರು ದಾಖಲಿಸಿದ್ದಾಳೆ ಪತ್ನಿ ಪ್ರಿಯಾಂಕಾ.

ಸಿಗರೇಟ್​​ನಿಂದ ಸುಡುವ ಚಿತ್ರೆ

ಉಡುಪಿ ಜಿಲ್ಲೆ ಕುಂದಾಪುರದ ಕೋಟೇಶ್ವರ ನಿವಾಸಿ ಪ್ರದೀಪ ತನ್ನ ಹೀನಾಯ ಕೃತ್ಯ ಎಸಗಿದ್ದಾನೆ. ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಪ್ರಿಯಾಂಕಾ ಹಾಗೂ ಪ್ರದೀಪ್​​ ಮದುವೆಯಾಗಿದ್ದರು. ನಾಲ್ಕೇ ತಿಂಗಳಲ್ಲಿ ಪ್ರದೀಪನ ಅಸಲಿ ಮುಖ ಬಯಲಾಗಿದೆ. ವರದಕ್ಷಿಣೆ ತರುವಂತೆ ಪೀಡಿಸುತ್ತ, ಗರ್ಭಿಣಿ ಆಗಿರುವ ಪ್ರಿಯಾಂಕಾಳನ್ನು ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದಾನೆ. ಎರಡು ಲಕ್ಷ ರೂಪಾಯಿ ಹಣ ಮತ್ತು 40 ಗ್ರಾಂ ಚಿನ್ನಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಪ್ರೀತಿಸಿ ಮದುವೆಯಾಗುವಾಗ ರನ್ನ ಚಿನ್ನ ಎಂದವನು ಚಿನ್ನಕ್ಕಾಗಿ ಚಿನ್ನದಂತಹ ಸಂಸಾರವನ್ನು ಹಾಳು ಮಾಡಿಕೊಂಡಿದ್ದಾನೆ.

Related Posts

Don't Miss it !